Tag: ಜ್ಯೋತಿಕಾ

  • ಪೂಜಾ ಹೆಗ್ಡೆ ಜೊತೆ ‘ರೆಟ್ರೋ’ ಕಥೆ ಹೇಳಲು ಹೊರಟ ಸೂರ್ಯ

    ಪೂಜಾ ಹೆಗ್ಡೆ ಜೊತೆ ‘ರೆಟ್ರೋ’ ಕಥೆ ಹೇಳಲು ಹೊರಟ ಸೂರ್ಯ

    ‘ಕಂಗುವ’ (Kanguva) ಸಿನಿಮಾ ಬೆನ್ನಲ್ಲೇ ಸೂರ್ಯ ರೆಟ್ರೋ ಸಿನಿಮಾದ ಕಥೆ ಹೇಳಲು ರೆಡಿಯಾಗಿದ್ದಾರೆ. ಗ್ಯಾಂಗ್‌ಸ್ಟರ್ ಆಗಿ ಮತ್ತೆ ಪ್ರೀತಿಗಾಗಿ ಬದಲಾಗೋ ನವಿರಾದ ಪ್ರೇಮಕಥೆಯನ್ನು ಪೂಜಾ ಹೆಗ್ಡೆ (Pooja Hegde) ಜೊತೆ ಹೇಳಲು ಸಿದ್ಧರಾಗಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

    ‘ಸೂರ್ಯ 44’ ಸಿನಿಮಾಗೆ ‘ರೆಟ್ರೋ’ (Retro)  ಎಂದು ಟೈಟಲ್ ಇಡಲಾಗಿದೆ. ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸೋ ಸೂರ್ಯ ಅದು ಹೇಗೆ ತಮ್ಮನ್ನು ತಾವು ಬದಲಾಗಿಸಿಕೊಳ್ತಾರೆ ಎಂಬುದನ್ನು ಟೀಸರ್‌ನಲ್ಲಿ ಸುಳಿವು ನೀಡಲಾಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಸೂರ್ಯ (Suriya)  ಮತ್ತು ಪೂಜಾ ಕೆಮಿಸ್ಟ್ರಿ ಮಸ್ತ್ ಆಗಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

    ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದ್ದು, ಕಾರ್ತಿಕ್ ಸುಬ್ಬರಾಜ್ (Karthik Subbaraj) ನಿರ್ದೇಶನ ಮಾಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ (Jyothika) ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ನಲ್ಲಿ ‘ರೆಟ್ರೋ’ (Retro)  ಮೂಲಕ ವಿಭಿನ್ನವಾಗಿರೋ ಕಥೆಯನ್ನೇ ಹೇಳಲು ಹೊರಟಿದ್ದಾರೆ.

  • ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸೂರ್ಯ, ಜ್ಯೋತಿಕಾ ದಂಪತಿ

    ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸೂರ್ಯ, ಜ್ಯೋತಿಕಾ ದಂಪತಿ

    ಕೊಲ್ಲೂರು ಮೂಕಾಂಬಿಕೆ (Kollur Mookambika Temple) ಸನ್ನಿಧಿಗೆ ಕಾಲಿವುಡ್ (Kollywood) ಕ್ಯೂಟ್ ಜೋಡಿ ಸೂರ್ಯ (Suriya) ಹಾಗೂ ಜ್ಯೋತಿಕಾ (Jyothika) ಆಗಮಿಸಿದ್ದಾರೆ. ತಮಿಳು ಸಿನಿಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರೋ ಸೂರ್ಯ ಹಾಗೂ ಜ್ಯೋತಿಕಾ ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

    ದೇಗುಲದಲ್ಲಿ ನಡೆಸುವ ವಿಶೇಷ ಚಂಡಿಕಾಯಾಗದಲ್ಲಿ ಭಾಗಿಯಾಗಿ, ದೇವರ ದರ್ಶನ ಪಡೆದರು. ಶಕ್ತಿ ದೇವತೆ ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಕೆ ಮಾಡಿ ತೆರಳಿದ್ದಾರೆ. ಈ ವೇಳೆ, ನೆಚ್ಚಿನ ಜೋಡಿ ಸೂರ್ಯ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಅಂದಹಾಗೆ, ಸೂರ್ಯ ನಟನೆಯ ‘ಕಂಗುವ’ (Kanguva) ಸಿನಿಮಾ ನ.14ರಂದು ರಿಲೀಸ್ ಆಗಿತ್ತು. ಸೂರ್ಯ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ಜ್ಯೋತಿಕಾ- ಟ್ರೋಲ್‌ ಆದ ಸೂರ್ಯ ಪತ್ನಿ

    ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ಜ್ಯೋತಿಕಾ- ಟ್ರೋಲ್‌ ಆದ ಸೂರ್ಯ ಪತ್ನಿ

    ಮಿಳಿನ ನಟಿ ಜ್ಯೋತಿಕಾ (Jyothika) ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್‌ಕುಮಾರ್ ರಾವ್ ನಿರ್ದೇಶನದ ಹಿಂದಿ ‘ಶ್ರೀಕಾಂತ್’ (Srikanth) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಪತ್ನಿ ಜ್ಯೋತಿಕಾ ಫುಲ್ ಟ್ರೋಲ್ ಆಗಿದ್ದಾರೆ.

    ಸಂದರ್ಶಕರು, ಈ ಬಾರಿ ಏಕೆ ವೋಟ್ ಮಾಡಲು ಬರಲಿಲ್ಲ? ಎಂದು ಜ್ಯೋತಿಕಾಗೆ ಕೇಳಿದ್ದರು. ಆಗ ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ ಎಂದಿದ್ದಾರೆ. ನಂತರ ಮತದಾನ (Vote) ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು. ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾದ ಮುಹೂರ್ತ ಸಂಭ್ರಮದಲ್ಲಿ ಜಾನ್ವಿ ಕಪೂರ್

    ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದು, ನಮಗೆ ಅನಾರೋಗ್ಯ ಆಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿ ಬಂದಿರುತ್ತೇವೆ, ಆನ್‌ಲೈನ್‌ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಶ್ ಆಗಬೇಕೆಂದಿಲ್ಲ. ಜೀವನಕ್ಕೆ ಒಂದು ಖಾಸಗಿ ಭಾಗವಿದೆ ಮತ್ತು ಅದನ್ನು ನಾವು ಗೌರವಿಸಬೇಕು ಎಂದಿದ್ದಾರೆ ಜ್ಯೋತಿಕಾ. ಇದೀಗ ಆನ್‌ಲೈನ್ ವೋಟ್ ಮಾಡಿರಬಹುದು ಎಂದು ಹೇಳಿದ ಮಾತೇ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

    ಆನ್‌ಲೈನ್‌ನಲ್ಲಿ ಮತದಾನ ಮಾಡುವ ಅವಕಾಶವಿದ್ದರೆ ನಮಗೂ ಹೇಳಿ. ನಾವು ಮಾಡುತ್ತೇವೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಜ್ಯೋತಿಕಾ ಅವರೇ ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷ ನಡೆಯಲ್ಲ, 5 ವರ್ಷಕೊಮ್ಮೆ ಎಂದು. ಭಾರತದಲ್ಲಿ ಇದುವರೆಗೂ ನಾವು ಆನ್‌ಲೈನ್ ವೋಟಿಂಗ್ ಬಗ್ಗೆ ನಾವು ಕೇಳಿಲ್ಲ ಎಂದು ಜ್ಯೋತಿಕಾಗೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ವೋಟ್‌ ಮಾಡಿಲ್ಲ ಎಂದು ನೇರವಾಗಿಯೇ ಒಪ್ಪಿಕೊಳ್ಳಬಹುದಲ್ಲ. ಅದನ್ನು ಹೀಗೆ ಯಾಕೆ ಹೇಳಬೇಕು ಎಂದೆಲ್ಲಾ ನಟಿಗೆ ನೆಟ್ಟಿಗರು ಕಿವಿಹಿಂಡಿದ್ದಾರೆ.

  • ಒಟಿಟಿಗೆ ಬಂತು ಜ್ಯೋತಿಕಾ ನಟನೆಯ ಶೈತಾನ್ ಸಿನಿಮಾ

    ಒಟಿಟಿಗೆ ಬಂತು ಜ್ಯೋತಿಕಾ ನಟನೆಯ ಶೈತಾನ್ ಸಿನಿಮಾ

    ಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ನಟನೆಯ ಶೈತಾನ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ನಾಳೆಯಿಂದ ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಿರಲಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಜ್ಯೋತಿಕಾ ಈ ಸಿನಿಮಾದ ಮೂಲಕ ಮರಳಿದ್ದಾರೆ. ಶೈತಾನ್ (Shaitan) ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರೆ.

    ಹಾರರ್ ಕಥಾನಕ ಹೊಂದಿರುವ ಸಿನಿಮಾದ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ವಶೀಕರಣದ ವಿಷಯವನ್ನೂ ಸಿನಿಮಾ ಒಳಗೊಂಡಿದೆ. ಜ್ಯೋತಿಕಾ ಹಿಂದೆ ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಶೈತಾನ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

     

    ಅಜಯ್ ದೇವಗನ್ (Ajay Devgn) ಕೂಡ ಸಿನಿಮಾದಲ್ಲಿ ನಟಿಸಿದ್ದು, ಜ್ಯೋತಿಕಾ ಇವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • 18 ವರ್ಷಗಳ ನಂತರ ಒಂದಾದ ಸೂರ್ಯ, ಜ್ಯೋತಿಕಾ

    18 ವರ್ಷಗಳ ನಂತರ ಒಂದಾದ ಸೂರ್ಯ, ಜ್ಯೋತಿಕಾ

    ಮಿಳಿನ ಸ್ಟಾರ್ ಜೋಡಿ ಸೂರ್ಯ (Actor Suriya)  ಮತ್ತು ಜ್ಯೋತಿಕಾ (Actress Jyothika) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 18 ವರ್ಷಗಳ ನಂತರ ಮತ್ತೆ ಜೊತೆಯಾಗಿ ನಟಿಸಲು ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

    ಸೂರ್ಯ ಮತ್ತು ಜ್ಯೋತಿಕಾ ಕಾಂಬಿನೇಷನ್‌ನಲ್ಲಿ ಸಾಕಷ್ಟು ಪ್ರೇಮ ಕಥೆಯ ಸಿನಿಮಾಗಳು ಈಗಾಗಲೇ ಬಂದಿದ್ದು, 7 ಸಿನಿಮಾಗಳು ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಈ ಜೋಡಿಯನ್ನು ಮತ್ತೆ ಸಿನಿಮಾಗಳಲ್ಲಿ ತೋರಿಸಬೇಕು ಅಂತ ಸ್ಟಾರ್ ಡೈರೆಕ್ಟರ್‌ ‌ಒಬ್ಬರು ಪ್ಲ್ಯಾನ್ ಮಾಡಿದ್ದಾರೆ.

    ಅದಕ್ಕಾಗಿ ಸೂರ್ಯ ದಂಪತಿಯನ್ನು ಭೇಟಿಯಾಗಿ ಕಥೆ ಕೂಡ ಹೇಳಿದ್ದಾರೆ ಎನ್ನಲಾಗಿದೆ. ವಿಭಿನ್ನ ಕಥೆ ಎನಿಸಿ ಸಿನಿಮಾ ಮಾಡಲು ಗ್ರೀನ್ ಸಿನ್ನಲ್ ನೀಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಚಿತ್ರತಂಡವಾಗಲಿ, ಈ ಜೋಡಿಯಾಗಲಿ ಯಾವುದೇ ಅಧಕೃತ ಮಾಹಿತಿ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಈ ಹಿಂದೆ ಪೂವೆಲ್ಲಂ ಕೆಟ್ಟುಪ್ಪರ್, ಉಯಿರಿಲೆ ಕಲಂಥಾತು, ಕಾಖಾ ಕಾಖಾ, ಪೆರಳಗನ್, ಮಾಯಾವಿ, ಜೂನ್ ಆರ್ ಮತ್ತು ಸಿಲ್ಲುನ್ನು ಒರು ಕಾದಲ್ ಸಿನಿಮಾಗಳಲ್ಲಿ ಸೂರ್ಯ ಮತ್ತು ಜ್ಯೋತಿಕಾ ಜೊತೆಯಾಗಿ ನಟಿಸಿದ್ದಾರೆ. ಈ ಸ್ಟಾರ್‌ ಜೋಡಿಯ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಪತ್ನಿ ಜೊತೆ  ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ಪತ್ನಿ ಜೊತೆ ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ತ್ನಿ ಜ್ಯೋತಿಕಾ (Jyotika) ಜೊತೆ ಜೀಮ್ (Gym) ನಲ್ಲಿ ವರ್ಕೌಟ್ ಮಾಡುತ್ತಿರುವ ಸೂರ್ಯ (Surya) ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೂರ್ಯ ಮತ್ತು ಜ್ಯೋತಿಕಾ ಈ ವಯಸ್ಸಲ್ಲೂ ಯಾಕಿಷ್ಟೊಂದು ಯಂಗ್ ಆಗಿ ಕಾಣುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಜೀಮ್ ನಲ್ಲಿ ಬೆವರು ಹರಿಸುತ್ತಲೇ ಹೊಸ ಹೊಸ ಸಿನಿಮಾಗಳನ್ನೂ ಸೂರ್ಯ ಘೋಷಣೆ ಮಾಡುತ್ತಿದ್ದಾರೆ.

    ಸೂರ್ಯ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಇದು ಇವರ 44ನೇ ಚಿತ್ರವಾಗಿದ್ದು, ಹೆಸರಾಂತ ನಟರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಸ್ಟಾರ್ ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು (Karthik Subbaraju) ಈ ಸಿನಿಮಾದ ನಿರ್ದೇಶಕರು. ಸೂರ್ಯ ಅವರ ಕಂಗುವ ಸಿನಿಮಾ ರಿಲೀಸ್ ಮುನ್ನವೇ ಈ ಹೊಸ ಚಿತ್ರವನ್ನು ಸೂರ್ಯ ಸೋಷಿಯಲ್ ಮೀಡಿಯಾ ಮೂಲಕ ಘೋಷಣೆ ಮಾಡಿದ್ದಾರೆ.

    ಕಂಗುವ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ‘ಕಂಗುವ’ (Kanguva) ಸಿನಿಮಾದ ಟೀಸರ್ (Teaser) ಬಿಡುಗಡೆ ಆಗಿದ್ದು ಅದ್ಧೂರಿ ತನದ ಮೇಕಿಂಗ್, ಕಲಾವಿದ ಆರ್ಭಟ. ದೃಶ್ಯ ವೈಭವ ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಟೀಸರ್ ಮತ್ತೊಮ್ಮೆ ನೋಡಬೇಕು ಅನಿಸುತ್ತಿದೆ. ಹೊಡೆದಾಟ, ರಕ್ತದೋಕುಳಿ, ಹೊಸ ಬಗೆಯ ಆಯುಧ, ರಾಕ್ಷಸರು ಹೀಗೆ ನಾನಾ ರೀತಿಯ ದೃಶ್ಯಗಳನ್ನು ಜೋಡಿಸಿಕೊಂಡು ಈ ಟೀಸರ್ ಕಟ್ಟಲಾಗಿದೆ. ಟೀಸರ್ ಕುರಿತಂತೆ ಅಕ್ಷರಗಳಲ್ಲಿ ಓದುವುದಕ್ಕಿಂತ ನೋಡುವುದೇ ಒಂದು ಅನುಭವ.

     

    ಇತ್ತೀಚೆಗಷ್ಟೇ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸೂರ್ಯ ಸಖತ್ ಮಿಂಚಿದ್ದರು. ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.  ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಸಿನಮಾ ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

  • ಬೆಚ್ಚಿ ಬೀಳಿಸುವ ಜ್ಯೋತಿಕಾ ನಟನೆಯ ‘ಶೈತಾನ್’ ಚಿತ್ರದ ಟ್ರೈಲರ್

    ಬೆಚ್ಚಿ ಬೀಳಿಸುವ ಜ್ಯೋತಿಕಾ ನಟನೆಯ ‘ಶೈತಾನ್’ ಚಿತ್ರದ ಟ್ರೈಲರ್

    ಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿದ್ದಾರೆ. ಶೈತಾನ್ (Shaitan) ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹಾರರ್ ಕಥಾನಕ ಹೊಂದಿರುವ ಈ ಸಿನಿಮಾದ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ವಶೀಕರಣದ ವಿಷಯವನ್ನೂ ಈ ಸಿನಿಮಾ ಒಳಗೊಂಡಿದೆ.

    ಜ್ಯೋತಿಕಾ ಈ ಹಿಂದೆ ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಶೈತಾನ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ.

    ಅಜಯ್ ದೇವಗನ್ (Ajay Devgn) ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಜ್ಯೋತಿಕಾ ಇವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

    ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ಕುತೂಹಲವನ್ನಂತೂ ಮೂಡಿಸಿದೆ.

  • ನಟ ಸೂರ್ಯ ಡಿವೋರ್ಸ್ ವಿಚಾರ: ಪತ್ನಿ ಜ್ಯೋತಿಕಾ ಸ್ಪಷ್ಟನೆ

    ನಟ ಸೂರ್ಯ ಡಿವೋರ್ಸ್ ವಿಚಾರ: ಪತ್ನಿ ಜ್ಯೋತಿಕಾ ಸ್ಪಷ್ಟನೆ

    ಮಿಳಿನ ಹೆಸರಾಂತ ಜೋಡಿ ನಟ ಸೂರ್ಯ (Surya) ಮತ್ತು ನಟಿ ಜ್ಯೋತಿಕಾ (Jyotika) ಡಿವೋರ್ಸ್ (Divorce) ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಪ್ರೀತಿ ಮದುವೆಯಾದ ಜೋಡಿಯಿದೆ. ಅತ್ಯುತ್ತಮ ಸಿನಿಮಾಗಳನ್ನು ಜೊತೆಯಾಗಿ ನೀಡಿದ್ದಾರೆ. ಸೂರ್ಯ ಅವರ ಚಿತ್ರಗಳಿಗೆ ಜ್ಯೋತಿಕಾ ನಿರ್ಮಾಣ ಮಾಡಿದ್ದಾರೆ. ಆದರೂ, ಈ ಜೋಡಿ ಬೇರೆ ಆಗುತ್ತಿದೆ ಎನ್ನುವ ಸುದ್ದಿ ಆಗಿತ್ತು.

    ಈ ಸುದ್ದಿಗೆ ಪೂರಕ ಎನ್ನುವಂತೆ ಜ್ಯೋತಿಕಾ ಅವರು ಮುಂಬೈನಲ್ಲಿ ವಾಸವಿದ್ದಾರೆ. ಅಲ್ಲಿಯೇ ಮನೆಯೊಂದನ್ನು ಖರೀದಿಸಿ, ಮಕ್ಕಳೊಂದಿಗೆ ಬದುಕುತ್ತಿದ್ದಾರೆ ಎನ್ನುವ ಮಾಹಿತಿಯೂ ಇತ್ತು. ಈ ಮಾಹಿತಿ ನಿಜವೂ ಆಗಿತ್ತು. ಸೂರ್ಯ ಚೆನ್ನೈನಲ್ಲಿದ್ದರೆ, ಜ್ಯೋತಿಕಾ ಮುಂಬೈನಲ್ಲಿದ್ದಾರೆ. ಹಾಗಾಗಿ ಸುದ್ದಿ ನಿಜ ಎಂದು ಹೇಳಲಾಗಿತ್ತು.

    ಈ ಎಲ್ಲ ಸುದ್ದಿಗಳಿಗೆ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ. ತಾವು ಮುಂಬೈನಲ್ಲಿ ಇರುವುದು ನಿಜ. ಆದರೆ, ಅದು ಡಿವೋರ್ಸ್ ಕಾರಣಕ್ಕೆ ಅಲ್ಲ. ಮುಂಬೈನಲ್ಲಿ ಕೆಲವು ಪ್ರಾಜೆಕ್ಟ್ ಮಾಡುತ್ತಿದ್ದಾರಂತೆ. ಓಡಾಟ ಕಷ್ಟ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಮನೆ ಮಾಡಿರುವುದಾಗಿ ಹೇಳಿದ್ದಾರೆ.

     

    ಜ್ಯೋತಿಕಾ ಮತ್ತು ಸೂರ್ಯ ಮಾದರಿಯ ದಂಪತಿಗಳು. ಒಟ್ಟೊಟ್ಟಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆಯುವಂತಹ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಜೋಡಿ ಸುಖವಾಗಿ ಇರಲಿ ಎನ್ನೋದು ಅಭಿಮಾನಿಗಳ ಹಾರೈಕೆ.

  • ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

    ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

    ಮಿಳಿನ ಸೂಪರ್ ಹಿಟ್ ಜೋಡಿ ವಿಜಯ್- ಜ್ಯೋತಿಕಾ (Jyothika) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬರೋಬ್ಬರಿ 20 ವರ್ಷಗಳ ನಂತರ ವಿಜಯ್- ಜ್ಯೋತಿಕಾ ತೆರೆಯ ಮೇಲೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಆ‌ಗಸ್ಟ್‌ 16ರಂದು ಸ್ಪಂದನಾ ಉತ್ತರ ಕ್ರಿಯೆಗೆ ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

    ವಿಜಯ್ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಎಂಬ ಸುದ್ದಿಯ ನಡುವೆ ಹೊಸ ಸಿನಿಮಾದ ಅಪ್‌ಡೇಟ್ ವಿಷ್ಯವಾಗಿ ಮತ್ತೆ ನ್ಯೂಸ್‌ನಲ್ಲಿದ್ದಾರೆ. ದಳಪತಿ ವಿಜಯ್ (Thalapathy Vijay) ಅವರು ಈಗ ‘ಲಿಯೋ’ (Leo) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಅವರ ಹೊಸ ಸಿನಿಮಾದ ಬಗ್ಗೆಯೂ ಗಾಸಿಪ್ ಹಬ್ಬಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿರುವ ವಿಜಯ್ ಅವರ ಹೊಸ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದು, ಆ ಚಿತ್ರದಲ್ಲಿ ಜ್ಯೋತಿಕಾ (Jyotika) ಕೂಡ ನಟಿಸುತ್ತಾರೆ ಎಂದು ಎನ್ನಲಾಗಿದೆ.

    ಬಹುಭಾಷೆಯ ಸಿನಿಮಾಗಳಲ್ಲಿ ಜ್ಯೋತಿಕಾ ಮಿಂಚಿದ್ದಾರೆ. ತಮಿಳಿನ ಖುಷಿ, ತಿರುಮಲೈ ಸಿನಿಮಾಗಳಲ್ಲಿ ಜ್ಯೋತಿಕಾ ಮತ್ತು ದಳಪತಿ ವಿಜಯ್ ಅವರು ಜೊತೆಯಾಗಿ ನಟಿಸಿದ್ದರು. ಈಗ ಅವರು 2 ದಶಕದ ಬಳಿಕ ತೆರೆಹಂಚಿಕೊಳ್ಳಲಿದ್ದಾರೆ ಎಂಬ ವಿಷಯ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸುದ್ದಿ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಈ ಸಿನಿಮಾದಲ್ಲಿ ಜ್ಯೋತಿಕಾ ಅವರು ನಾಯಕಿ ಪಾತ್ರ ಮಾಡುತ್ತಾರೋ ಅಥವಾ ಬೇರೆ ಯಾವುದಾದರೂ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಒಟ್ನಲ್ಲಿ ತಮಿಳಿನ ಹಿಟ್ ಜೋಡಿ ವಿಜಯ್- ಜ್ಯೋತಿಕಾ ಒಟ್ಟಿಗೆ ತೆರೆ ಹಂಚಿಕೊಳ್ತಾರೆ ಎಂದಾಕ್ಷಣ ಫ್ಯಾನ್ಸ್‌ಗೆ ನಿರೀಕ್ಷೆ ಡಬಲ್ ಆಗಿದೆ. ತೆರೆಯ ಮೇಲೆ ಕಾತರದಿಂದ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಾರಿನ್‌ನಲ್ಲಿ ಮಗನ ಬರ್ತ್‌ಡೇ ಆಚರಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಫಾರಿನ್‌ನಲ್ಲಿ ಮಗನ ಬರ್ತ್‌ಡೇ ಆಚರಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಮಿಳಿನ ಸ್ಟಾರ್ ಜೋಡಿ ಸೂರ್ಯ ದಂಪತಿ (Suriya)ಇದೀಗ ವಿದೇಶಕ್ಕೆ ಹಾರಿದ್ದಾರೆ. ಪುತ್ರನ ಹುಟ್ಟುಹಬ್ಬದ ವಿಶೇಷವಾಗಿ ದೂರ ದೇಶದಲ್ಲಿ ಸೆಲೆಬ್ರೇಟ್ ಮಾಡ್ತಿದ್ದಾರೆ. ಟ್ರಿಪ್‌ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ರಣಬೀರ್- ರಶ್ಮಿಕಾ ನಟನೆಯ ‘ಅನಿಮಲ್’ ಸಿನಿಮಾದ ನ್ಯೂ ರಿಲೀಸ್ ಡೇಟ್ ಅನೌನ್ಸ್

    ಕಾಲಿವುಡ್‌ನ ಬೆಸ್ಟ್ ಕಪಲ್ ಎಂದರೆ ಮೊದಲು ಕೇಳಿ ಬರುವ ಹೆಸರೇ ನಟ ಸೂರ್ಯ- ಜ್ಯೋತಿಕಾ (Actress Jyothika) ಜೋಡಿ. ಇಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇಂದಿಗೂ ಖುಷಿ-ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಒಬ್ಬ ಮಗ- ಮಗಳಿದ್ದಾರೆ. ಸದ್ಯ ಇಡೀ ಕುಟುಂಬ ವಿದೇಶಕ್ಕೆ ಹಾರಿದ್ದಾರೆ.

    ಫರೋ ಐಲ್ಯಾಂಡ್‌ನಲ್ಲಿ ಮಗ ದೇವ್ (Dev) ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಹೊಸ ಜಾಗಗಳಿಗೆ ಭೇಟಿ ಕೊಡುತ್ತಾ ವೆಕೇಷನ್ ಏಂಜಾಯ್ ಮಾಡ್ತಿದ್ದಾರೆ. ಸದ್ಯ ಸೂರ್ಯ ಫ್ಯಾಮಿಲಿ ಮೋಜು- ಮಸ್ತಿ ಮಾಡ್ತಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

    ಸೂರ್ಯ ನಟನೆಯ ‘ಕಂಗುವ’ ಚಿತ್ರ ಬಹುಭಾಷೆಗಳಲ್ಲಿ ಬರಲಿದೆ. ಈ ಸಿನಿಮಾಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಡಬಲ್ ರೋಲ್‌ನಲ್ಲಿ ಸೂರ್ಯ ಬಣ್ಣ ಹಚ್ಚಲಿದ್ದಾರೆ. ಜ್ಯೋತಿಕಾ ಕೂಡ ಮಲಯಾಳಂ, ತಮಿಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]