Tag: ಜ್ಯೋತಿ

  • ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

    ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

    – ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು
    – ಕರ್ನಾಟಕದಲ್ಲಿಯೂ ರಾಮಜ್ಯೋತಿ ಬೆಳಗಿಸಿದ ಭಕ್ತರು

    ಅಯೋಧ್ಯೆ: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪಟ್ಟಾಭಿಷೇಕ ನೆರವೇರಿದೆ. ಆರಾಧ್ಯ ದೈವ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನನ್ನ ಕಣ್ತುಂಬಿಕೊಂಡು ಕೋಟ್ಯಂತರ ಭಕ್ತರು ಧನ್ಯರಾಗಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

    ರಾಮಮಂದಿರ ಉದ್ಘಾಟನೆ ವಿಜಯದ ಇಡೀ ದೇಶಾದ್ಯಂತ ನೆಲೆಸಿರುವ ರಾಮಭಕ್ತರು, ಪ್ರತಿ ಮನೆ-ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಖ್ಯಾತ ನಟ-ನಟಿಯರು ರಾಮ ಜ್ಯೋತಿ (Ram Jyoti) ಬೆಳಗಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ದೀಪ ಬೆಳಗಿಸುವ ಮೂಲಕ ದೇಶದ ಜನರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್

    ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು:
    ಅಯೋಧ್ಯೆಯ ಸರಯೂ ನದಿ ತೀರದ ರಾಮ್​ ಕಿ ಪಾಡಿಯಲ್ಲಿ ಸರಿಸುಮಾರು 10 ಲಕ್ಷ ದೀಪ ಬೆಳಗುತ್ತಿದ್ದು, ಇದರ ನಡುವೆ ಲೇಸರ್​​ ಲೈಟ್​ ಶೋಗಳೂ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ. ಇದರೊಂದಿಗೆ ಕರ್ನಾಟಕದಲ್ಲಿಯೂ ಶ್ರೀರಾಮನ ಭಕ್ತರು ತಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ದೀಪೋತ್ಸವ ನೆರವೇರಿಸಿದ್ದಾರೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಪ್ರತಿ ಮನೆ ಮನೆಗಳಲ್ಲೂ ರಾಮ ಜ್ಯೋತಿ ಬೆಳಗಿಸುವಂತೆ ಕರೆ ನೀಡಿದ್ದರು. ಹೊಸ ಯುಗದ ಆಗಮನದ ಸಂಕೇತವಾಗಿ ಸಂಜೆ ನಿಮ್ಮ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸಿ ಶ್ರೀರಾಮನಲ್ಲಿ ಪ್ರಾರ್ಥಿಸಿ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ

    ಅಯೋಧ್ಯೆ ತುಂಬ ರಾಮ ನಾಮ ಸ್ಮರಣೆ: ದೇಶದೆಲ್ಲೆಡೆ ರಾಮಾಲಯ (ರಾಮಮಂದಿರ) ಆರಂಭೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ. ಅಯೋಧ್ಯೆಯ ತುಂಬಾ ರಾಮ ನಾಮ ಸ್ಮರಣೆ ಮಾರ್ದನಿಸಿದೆ. ಎಲ್ಲಿ ನೋಡಿದರೂ ರಾಮಧ್ವಜ, ರಾಮಜ್ಯೋತಿ, ಕೇಸರಿ ಶಾಲು ಧರಿಸಿದ ಭಕ್ತಗಣವೇ ಕಾಣುತ್ತಿದೆ.  ರಾಮಭಜನೆ, ಭಗವದ್ಗೀತೆ ಪಠಣ, ಪೂಜೆ ಪುನಸ್ಕಾರಗಳು ದೇಶದ ಮೂಲೆಮೂಲೆಯಲ್ಲಿ ನಡೆದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಮೆರಿಕ, ಪ್ಯಾರಿಸ್‌, ಮೆಕ್ಸಿಕೋ ಹಾಗೂ ರಷ್ಯಾ ದೇಶಗಳಲ್ಲಿಯೂ ಭಾರತೀಯ ಮೂಲದ ರಾಮಭಕ್ತರು ಈ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

  • ಪ್ರಥಮ್ ನಟನೆಯ ‘ಕರ್ನಾಟಕದ ಅಳಿಯ’ನ ಹಾಟ್ ಸಾಂಗ್ ರಿಲೀಸ್

    ಪ್ರಥಮ್ ನಟನೆಯ ‘ಕರ್ನಾಟಕದ ಅಳಿಯ’ನ ಹಾಟ್ ಸಾಂಗ್ ರಿಲೀಸ್

    ಮುದ್ದಿನ ಅಳಿಯ ಚಿತ್ರದ ನಾಯಕ ಶಶಿಕುಮಾರ್ ಅವರು ಬಿಗ ಬಾಸ್ ಖ್ಯಾತಿಯ ಪ್ರಥಮ್ (Pratham) ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕರ್ನಾಟಕದ ಅಳಿಯ’ (Karnatakada Aliya) ಚಿತ್ರದ ‘ಮನಸಿಗೆ ಹಿಡಿಸಿದನು ಇವನು’ ಹಾಡನ್ನು (Song)  ಬಿಡುಗಡೆ ಮಾಡಿದರು. ಕೆ.ರಾಮನಾರಾಯಣ್ ಈ ಹಾಡನ್ನು ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ‌. ಅದಿತಿ ಸಾಗರ್ ಹಾಡಿದ್ದಾರೆ.

    ನಮ್ಮಲ್ಲಿ ಮುದ್ದಿನ ಅಳಿಯ, ಗಡಿಬಿಡಿ ಅಳಿಯ ಹೀಗೆ ಸಾಕಷ್ಟು ಜನ ಅಳಿಯಂದರಿದ್ದೀವಿ. ಈಗ ಪ್ರಥಮ್ ‘ಕರ್ನಾಟಕದ ಅಳಿಯ’ ಆಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ಹಾಡು ಬಿಡುಗಡೆಗೆ ಬರುತ್ತಾರೆ ಅಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಅವರು ಬಂದಿಲ್ಲ. ಆದರೆ ವಿಡಿಯೋ ಮೂಲಕ ಹಾರೈಸಿದ್ದಾರೆ. ಅವರು ಹೇಳಿರುವ ಪ್ರೀತಿಯ ಮಾತುಗಳಿಗೆ ನಾನು ಆಭಾರಿ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ. ಇಂದು ಬಿಡುಗಡೆಯಾಗಿರುವ ಈ ಹಾಡು ಬಹಳ ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲಲಿ ಎಂದು ನಟ ಶಶಿಕುಮಾರ್ ಹಾರೈಸಿದರು. ಇದನ್ನೂ ಓದಿ:ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್

    ಕರ್ನಾಟಕದ ಅಳಿಯ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ಮಾತು ಆರಂಭಿಸಿದ ಪ್ರಥಮ್,  ಇಂದು ಹಾಡು ಬಿಡುಗಡೆಯಾಗಿದೆ. ವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಣಜಿ ನಾಗರಾಜ್ ಅವರ ಛಾಯಾಗ್ರಹಣ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರದ್ಯೋತನ್ ಸಂಗೀತ ನಿರ್ದೇಶನದಲ್ಲಿ ರಾಮನಾರಾಯಣ್ ಬರೆದಿರುವ ಈ ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೊಂದು ವಾಮಾಚಾರದ ಕುರಿತಾದ ಸಿನಿಮಾವಾಗಿದ್ದು, ಮೂವತ್ತು ವರ್ಷಗಳ ಹಿಂದೆ “ತುಳಸಿದಳ” ಎಂಬ ಸಿನಿಮಾ ಬಂದಿತ್ತು. ಆನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಇರಬಹುದು.  ನಾನು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದೇನೆ. ರಾಘವೇಂದ್ರ ರಾಜಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ‌. ಅಕ್ಷಿತ ಬೋಪಯ್ಯ, ಜ್ಯೋತಿ,  ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದರು.

    ನಾಯಕಿ ಜ್ಯೋತಿ,  ನಟ ಕೋಟೆ ಪ್ರಭಾಕರ್, ಹಾಡು ಬರೆದಿರುವ ರಾಮನಾರಾಯಣ್ ಹಾಗೂ ಛಾಯಾಗ್ರಾಹಕ ಅಣಜಿ ನಾಗರಾಜ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. ಅರುಣ್ ಸಾಗರ್ ಚಿತ್ರಕ್ಕೆ ಶುಭ ಹಾರೈಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲವ್ಲಿ ಸ್ಟಾರ್ ಪ್ರೇಮ್- ಜ್ಯೋತಿ ದಾಂಪತ್ಯಕ್ಕೆ 25ರ ಸಂಭ್ರಮ

    ಲವ್ಲಿ ಸ್ಟಾರ್ ಪ್ರೇಮ್- ಜ್ಯೋತಿ ದಾಂಪತ್ಯಕ್ಕೆ 25ರ ಸಂಭ್ರಮ

    ಸ್ಯಾಂಡಲ್‌ವುಡ್‌ನ (Sandalwood) ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ನಟ ಪ್ರೇಮ್- ಜ್ಯೋತಿ ಅವರ ದಾಂಪತ್ಯಕ್ಕೆ 25 ವರ್ಷಗಳು ಪೂರೈಸಿದೆ. ಇದೇ ಖುಷಿಯಲ್ಲಿ ಪ್ರೇಮ್ ದಂಪತಿ ಬಾಲಿಗೆ ಹಾರಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಪ್ರೇಮ್- ಜ್ಯೋತಿ (Jyothi) ಜೋಡಿ ಒಬ್ಬರನೊಬ್ಬರು ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. 2000ರಲ್ಲಿ ಪ್ರೇಮ್ (Lovely Star Prem), ಜ್ಯೋತಿ ಜೊತೆ ಸರಳವಾಗಿ ಮದುವೆಯಾದರು. ಸಾಕಷ್ಟು ಸಂಕಷ್ಟಗಳ ನಡುವೆ ನಟ ಪ್ರೇಮ್ ಚಿತ್ರರಂಗದಲ್ಲಿ ಗಟ್ಟಿ ನಟನಾಗಿ ಸ್ಥಾನ ಗಿಟ್ಟಿಸಿಕೊಂಡರು. ಪ್ರೇಮ್ ಶ್ರಮಕ್ಕೆ ಪತ್ನಿ ಜ್ಯೋತಿ ಅವರ ಕೊಡುಗೆ ಅಪಾರ. ಇದನ್ನೂ ಓದಿ:ಹಾಟ್ ಅವತಾರ ತಾಳಿದ ದಿಶಾ ಪಟಾನಿ

    ಪ್ರೀತಿಸಿ ಮದುವೆಯಾಗಿ 25 ವರ್ಷಗಳು ಕಳೆದರೂ ಇಬ್ಬರ ನಡುವೆ ಪ್ರೀತಿ ಮಾಸಿಲ್ಲ. ನವಜೋಡಿಗಳಿಗೆ ನಾಚುವಂತೆ ಇಂದಿಗೂ ಇಬ್ಬರು ಜೊತೆಯಾಗಿ ಪ್ರೇಮ್- ಜ್ಯೋತಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪತ್ನಿ ಜೊತೆಗಿನ ಬಾಲಿ ಫೋಟೋ ಹಂಚಿಕೊಂಡು ನಟ ಪ್ರೇಮ್ ವಿಶ್ ಮಾಡಿದ್ದಾರೆ. ಬಾಲಿಯಲ್ಲಿ 25ನೇ ವರ್ಷ ವಿವಾಹ ಮಹೋತ್ಸವ ಕಾರ್ಯಕ್ರಮವನ್ನ ರೊಮ್ಯಾಂಟಿಕ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

     

    View this post on Instagram

     

    A post shared by Prem Nenapirali (@premnenapirali)

    25ರ ನಮ್ಮ ಪ್ರೀತಿಗೆ ಅದರ ರೀತಿಗೆ ಶುಭಾಶಯಗಳು ಜೀವದ ಗೆಳತಿ ಎಂದು ಪ್ರೇಮ್ ಪತ್ನಿಗೆ ಶುಭಹಾರೈಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  • ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರದ ಅತಿಥಿಯಾಗಿ ತಮ್ಮ ಜೀವನ ಕಥೆಯನ್ನ ಬಿಚ್ಚಿದ್ದಾರೆ. ಪತ್ನಿ ಜ್ಯೋತಿ ತ್ಯಾಗದ ಬಗ್ಗೆ ನಟ ಸ್ಮರಿಸಿದ್ದಾರೆ. ಯಾವ ಫಿಲ್ಮಿಂ ಸ್ಟೋರಿಗೂ ಕಮ್ಮಿಯಿಲ್ಲ ಪ್ರೇಮ್ ಲವ್ ಲೈಫ್ ಸ್ಟೋರಿ. ಅಷ್ಟಕ್ಕೂ ಜ್ಯೋತಿ (Wife Jyothi) -ಪ್ರೇಮ್‌ಗೆ ಲವ್ (Love) ಆಗಿದ್ದು ಹೇಗೆ? ಇಲ್ಲಿದೆ ನೋಡಿ..

    ಬಡ ಕುಟುಂಬದಲ್ಲಿ ಹುಟ್ಟಿದ ಪ್ರೇಮ್, ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಮ್ಮೆ ಊಟಕ್ಕೆ ಹೋಗುವಾಗ ಪ್ರಾವಿಜನ್ ಸ್ಟೋರ್ ಬಳಿ ಒಬ್ಬ ಹುಡುಗಿಯೊಬ್ಬಾಕೆಯನ್ನು ಕಂಡಿದ್ದಾರೆ. ಬಹಳ ಮುದ್ದಾಗಿದ್ದ ಆ ಹುಡುಗಿಯನ್ನು ಕಂಡು ಈಕೆಯೇ ನನ್ನ ಹೆಂಡತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಮುಂದೆ ಹೋಗಿದ್ದಾರಷ್ಟೆ, ಅಷ್ಟರಲ್ಲಿ ಹುಡುಗನೊಬ್ಬ ಬಂದು ಅಕ್ಕ ನಿಮ್ಮ ಬಳಿ ಮಾತನಾಡಬೇಕಂತೆ ಎಂದಿದ್ದಾರೆ. ಪ್ರೇಮ್ ನಿಮಿಷದ ಹಿಂದೆ ನೋಡಿದ್ದ ಹುಡುಗಿಯೇ ಪ್ರೇಮ್ ಬಳಿ ಬಂದು ಟ್ಯೂಷನ್ ಕುರಿತಾಗಿ ಏನೋ ಮಾತನಾಡಿಸಿ ಹೆಸರು ಕೇಳಿ ಹೋಗಿದ್ದಾರೆ. ಆ ಹುಡುಗಿಯೇ ಜ್ಯೋತಿ.

    ಆದರೆ ಜ್ಯೋತಿ ಸಹ ಯಾವುದೋ ಮದುವೆಯಲ್ಲಿ (Wedding) ಪ್ರೇಮ್‌ರನ್ನು ನೋಡಿದ್ದರಂತೆ. ಆ ಹುಡುಗಿಯ ಸಂಬಂಧಿಯೊಬ್ಬರು ಮದುವೆಯಲ್ಲಿ ವಧು-ವರರ ಜೊತೆ ಪ್ರೇಮ್ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಈ ಹುಡುಗನನ್ನು ನಾನು ಮದುವೆಯಾಗುತ್ತೀನಿ ಎಂದಿದ್ದರಂತೆ ಜ್ಯೋತಿ ಬಳಿ, ಆ ಫೋಟೊ ನೋಡಿದ ಜ್ಯೋತಿ ಸಹ ಪ್ರೇಮ್‌ರನ್ನು ಇಷ್ಟಪಟ್ಟಿದ್ದಾರೆ. ಹೀಗೆ ಪ್ರಾವಿಜನ್ ಸ್ಟೋರ್ ಬಳಿ ಆದ ಪರಿಚಯ ಹೀಗೆ ಮುಂದುವರೆದಿದೆ. ಆಗೊಮ್ಮೆ ಪ್ರೇಮ್, ಜ್ಯೋತಿಗೆ ಪತ್ರವೊಂದನ್ನು ಬರೆದು ನನಗೆ ಜೀವನದಲ್ಲಿ ಬಹಳ ಜವಾಬ್ದಾರಿಗಳಿವೆ, ನಾನು ತಂಗಿಯರ ಮದುವೆ ಮಾಡಬೇಕು ನಾನು ಇನ್ನೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದೀನಿ ನನ್ನನ್ನು ಮರೆತುಬಿಡು ಎಂದೆಲ್ಲ ಪತ್ರದಲ್ಲಿ ಬರೆದಿದ್ದರಂತೆ. ಆದರೆ ಅದರಲ್ಲಿ ಬಹಳ ತಪ್ಪುಗಳಿದ್ದಿದ್ದನ್ನು ಕಂಡು ಆ ತಪ್ಪುಗಳನ್ನೆಲ್ಲ ರೌಂಡ್ ಹಾಕಿದ್ದರಂತೆ ಜ್ಯೋತಿ. ಅದಾದ ಬಳಿಕ ಇಬ್ಬರೂ ಭೇಟಿಯಾಗಿ ಈಗಲೇ ಪ್ರೀತಿ-ಗೀತಿ ಎಲ್ಲ ಬೇಡ ಇನ್ನೆರಡು ವರ್ಷ ಹೀಗೆ ಗೆಳೆಯರಾಗಿರೋಣ ಆ ನಂತರವೂ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದುಕೊಂಡಿದ್ದಾರೆ. ಆದರೆ ಆ ಪ್ರಾಮಿಸ್ ಅನ್ನು ಬಹಳ ಬೇಗ ಅವರೇ ಮುರಿಯುವ ಪರಿಸ್ಥಿತಿ ಎದುರಾಗುತ್ತದೆ.

    ಇಬ್ಬರ ಲವ್ ವಿಚಾರ ವಿಷಯ ಜ್ಯೋತಿಯವರ ಮನೆಯವರಿಗೆ ಗೊತ್ತಾಗಿ ಗಂಡು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಜ್ಯೋತಿ ಹಾಗೂ ಪ್ರೇಮ್ ಮನೆಯವರ ವಿರೋಧದ ನಡುವೆ ಮದುವೆ ಆಗಲು ನಿಶ್ಚಯಿಸಿ ಒಂದು ದಿನಾಂಕ ಗುರುತು ಮಾಡಿಕೊಂಡಿದ್ದಾರೆ. ಆದರೆ ಅದೇ ದಿನ ರಾಜ್‌ಕುಮಾರ್ ಅಪಹರಣ ಆದ ಕಾರಣ ಎಲ್ಲವೂ ಸ್ಥಬ್ಧವಾಗಿಬಿಟ್ಟಿದೆ. ಹಾಗಿದ್ದರೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದುಬಿಟ್ಟರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನು ಮದುವೆಯೂ ಆಗಿಬಿಟ್ಟಿದ್ದಾರೆ. ಅದಾದ ಬಳಿಕ ಎರಡು ಕುಟುಂಬದವರನ್ನು ಕರೆಸಿ ಅಂದೇ ರಾಜಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದ್ದಾರೆ. ಅಳಿಯನ ಕಷ್ಟ ಗಮನಿಸಿ ಜ್ಯೋತಿಯವರ ತಾಯಿ, ಮಗಳು-ಅಳಿಯನಿಗೆ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆಯ ಮನೆಯಲ್ಲಿಯೇ ಪ್ರೇಮ್ ವಾಸವಿದ್ದರು. ಇದನ್ನೂ ಓದಿ:ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

     

    View this post on Instagram

     

    A post shared by Jyothi Prem (@jyothiprem1008)

    ತನ್ನ ಉದ್ದಿಮೆಯಲ್ಲಿ ಬಹಳ ನಷ್ಟವಾಗಿ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಬಿಟ್ಟರಂತೆ ಪ್ರೇಮ್. ಆಗ ಜ್ಯೋತಿ ಕೆಲಸಕ್ಕೆ ಹೋಗುತ್ತಿದ್ದರಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ತಮಗೆ ಸಾಲ ಕೊಟ್ಟಿದ್ದ ಗೆಳೆಯ ಸಾಲವನ್ನು ತೀರಿಸುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಮ್ ಪತ್ನಿಯ ಕಚೇರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಜ್ಯೋತಿ ತಮ್ಮ ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರಂತೆ. ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್ ಕಣ್ಣೀರು ಹಾಕಿದರು. ನಾನು ಸತ್ತು ಹೋಗಬಾರದ ಎಂದು ಎನಿಸಿತು ನನಗೆ. ಆ ದಿನ ನನ್ನ ಜೀವನದಲ್ಲಿ ಮತ್ತೆಂದೂ ಬರಬಾರದು ಎಂದರು ಪ್ರೇಮ್. ಆದರೆ ಆ ಸಂಕಷ್ಟದ ಸಮಯದಲ್ಲಿ, ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ತಾಳಿ ನೀಡಿದ ಪತ್ನಿ ನನಗೆ ಎರಡನೇ ತಾಯಿಯಂತೆ ಎಂದರು. ಸಾಕಷ್ಟು ಎದುರಿಸಿದ ಬಳಿಕ ಪ್ರೇಮ್‌ಗೆ ನಟನೆ ಕೈಹಿಡಿಯಿತು. ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಿ ಮಿಂಚ್ತಿದ್ದಾರೆ.

  • ಪಾಕಿಸ್ತಾನದ ವಿರುದ್ಧ ಗೆಲುವಿಗೆ 50 ವರ್ಷ- ಕಾರವಾರಕ್ಕೆ ಬಂದ ಪ್ರಧಾನಿ ಬೆಳಗಿಸಿದ್ದ ವಿಜಯ ಜ್ಯೋತಿ

    ಪಾಕಿಸ್ತಾನದ ವಿರುದ್ಧ ಗೆಲುವಿಗೆ 50 ವರ್ಷ- ಕಾರವಾರಕ್ಕೆ ಬಂದ ಪ್ರಧಾನಿ ಬೆಳಗಿಸಿದ್ದ ವಿಜಯ ಜ್ಯೋತಿ

    ಕಾರವಾರ: 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸಶಸ್ತ್ರ ದಳವು ಗೆಲುವು ಸಾಧಿಸಿದ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಇಂದು ಕಾರವಾರದ ಕದಂಬಾ ನೌಕಾನೆಲೆಯಲ್ಲಿ ವಿಜಯ ದಿನವನ್ನು ಆಚರಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಬೆಳಗಿಸಿದ್ದ ವಿಜಯ ಜ್ಯೋತಿಯು ಇಂದು ಕಾರವಾರದ ಕದಂಬ ನೆಲೆಗೆ ಆಗಮಿಸಿದ್ದು ವಿಶೇಷವಾಗಿತ್ತು.

    ಕಾರವಾರಕ್ಕೆ ಬಂದ ವಿಜಯ್ ಜ್ಯೋತಿಯನ್ನು ನೌಕಾಪಡೆಯ ಅಧಿಕಾರಿಗಳ ಸಮ್ಮುಖದಲ್ಲಿ ಕದಂಬಾ ನೌಕಾ ನೆಲೆಯಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕದಲ್ಲಿ ನೌಕಾ ನೆಲೆಯ ಕಮಾಂಡಿಂಗ್ ಪ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್‍ರವರು ಜ್ಯೋತಿಯನ್ನು ಬರಮಾಡಿಕೊಂಡು ಗೌರವ ಸಲ್ಲಿಸಿದರು. ಇದನ್ನೂ ಓದಿ: ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

    ಸ್ವರ್ಣಿಮ್ ವಿಜಯ ವರ್ಷ:
    1971ರಲ್ಲಿ ಭಾರತೀಯ ಶಸ್ತ್ರ ಪಡೆಯು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಹಾಗೂ ಐತಿಹಾಸಿಕ ವಿಜಯವನ್ನು ಪಡೆದಿತ್ತು. ಇದು ಬಾಂಗ್ಲಾ ದೇಶದ ಸೃಷ್ಟಿಗೆ ಸಹ ಕಾರಣವಾಗಿತ್ತು. ಅದಲ್ಲದೆ ಎರಡನೇ ಮಹಾಯುದ್ಧದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಈ ಯುದ್ದ ಕಾರಣೀಭೂತವಾಗಿತ್ತು. 2020ರ ಡಿಸೆಂಬರ್ 16 ರಿಂದ ರಾಷ್ಟ್ರವು ಭಾರತ -ಪಾಕ್ ಯುದ್ಧದ ಗೆಲುವಿನ 50 ವರ್ಷದ ಸಂಭ್ರಮಾಚರಣೆಯನ್ನು ಈ ಬಾರಿ ಸ್ವರ್ಣಿಮ್ ವಿಜಯ ವರ್ಷ ಎಂಬ ಹೆಸರಿನಲ್ಲಿ ದೇಶದ್ಯಾಂತ ಆಚರಿಸಲಾಗುತ್ತಿದೆ.

    ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರನ್ನು ಗೌರವಿಸಲು ಮತ್ತು ವಿಜಯದ ಆಚರಣೆಯ ಸಾಂಕೇತಿಕವಾಗಿ ಭಾರತೀಯ ರಕ್ಷಣಾಪಡೆಗಳಿಂದ ಸ್ವರ್ಣಿಮ್ ವಿಜಯ ವರ್ಷ ವೆಂದು ಆಚರಿಸಲು ಪ್ರಧಾನಿ ಮೋದಿಯವರು ಕರೆ ನೀಡಿ, ಒಂದು ವರ್ಷದ ಕಾರ್ಯಕ್ರಮಗಳಿಗೆ ಡಿಸೆಂಬರ್ 16 ರಂದು ಮೋದಿಯವರು ವಿಜಯ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು. ಈ ವಿಜಯಜ್ಯೋತಿಯು ಭಾರತದಾದ್ಯಂತ ಸಂಚರಿಸುತಿದ್ದು, ಡಿಸೆಂಬರ್ 15 ರಂದು ಈ ಜ್ಯೋತಿ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಇಂದು ಬಂದ ಜ್ಯೋತಿಯು ಸೆಪ್ಟೆಂಬರ್ 24ರ ವರೆಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಇರಲಿದೆ. ಇದನ್ನೂ ಓದಿ: ವ್ಯಾಕ್ಸಿನ್‌ ಭಾರತ ಮಹಾನ್‌ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

  • ಯೋಧನ ಪ್ರಾಣ ರಕ್ಷಿಸಿ, ತನ್ನ ಕೈಕಳೆದುಕೊಂಡ ದಿಟ್ಟೆ ಕೇರಳ ಬಿಜೆಪಿ ಅಭ್ಯರ್ಥಿ!

    ಯೋಧನ ಪ್ರಾಣ ರಕ್ಷಿಸಿ, ತನ್ನ ಕೈಕಳೆದುಕೊಂಡ ದಿಟ್ಟೆ ಕೇರಳ ಬಿಜೆಪಿ ಅಭ್ಯರ್ಥಿ!

    – ಯೋಧನ ರಕ್ಷಿಸಿದ್ದು ಹೇಗೆ..?
    – ವಿಕಾಸ್‍, ಜ್ಯೋತಿಯ ಪ್ರೇಮ್ ಕಹಾನಿ ಇಲ್ಲಿದೆ

    ತಿರುವನಂತಪುರಂ: ತನ್ನ ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ ನಂತರ ಆತನನ್ನೇ ಮದುವೆಯಾದ ದಿಟ್ಟ ಮಹಿಳೆ ಇದೀಗ ಮತ್ತೊಂದು ಸಹಾಸಕ್ಕೆ ಕೈ ಹಾಕಿದ್ದು, ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಹೌದು. ಛತ್ತೀಸ್ ಗಢ ಮೂಲದ ಜ್ಯೋತಿ(30) ಪಾಲಕ್ಕಾಡ್ ಜಿಲ್ಲೆಯ ಕೊಲಂಗೋಡ್ ಬ್ಲಾಕ್ ಪಂಚಾಯತ್‍ನ ಪಾಲತ್ತಲ್ಲ್ ಡಿವಿಷನ್ ಬಿಜೆಪಿ ಅಭ್ಯರ್ಥಿ. ಇವರು ಕೇರಳ ಮೂಲದ ಸಿಐಎಸ್‍ಎಫ್ ಯೋಧರೊಬ್ಬರ ಜೀವ ಉಳಿಸಿದಲ್ಲದೇ ಅವರನ್ನೇ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದು, ಈಗಾಗಲೇ ಜನಮೆಚ್ಚುಗೆ ಪಡೆದಿದ್ದಾರೆ.

    ಯೋಧನ ಜೀವ ಉಳಿಸಿದ ದಿಟ್ಟೆ:
    2010 ಜನವರಿ 3ರಂದು ಜ್ಯೋತಿ ತನ್ನ ಕಾಲೇಜು ಹಾಸ್ಟೆಲಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್ಸಿನ ಮುಂದಿನ ಸೀಟಿನಲ್ಲಿ ಯೋಧ ವಿಕಾಸ್ ಕುಳಿತಿದ್ದು, ನಿದ್ದೆಗೆ ಜಾರಿದ್ದರು. ಅಲ್ಲದೆ ತಮ್ಮ ತಲೆಯನ್ನು ಕಿಟಿಕಿಯಿಂದ ಹೊರಗಡೆ ಹಾಕಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್ ಒಂದು ಎದುರಿನಿಂದ ಅಡಾದಿಡ್ಡಿಯಾಗಿ ಬರುತ್ತಿತ್ತು. ಇದನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜ್ಯೋತಿ ಗಮನಿಸಿದ್ದಾರೆ.

    ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿದ್ದ ಜ್ಯೋತಿ ಮುಂದೆ ಬಂದು ತನ್ನ ಬಲಗೈಯಿಂದ ವಿಕಾಸ್‍ರ ತಲೆಯನ್ನು ಕಿಟಿಕಿ ಒಳಕ್ಕೆ ತಳ್ಳಿ ಸ್ವತಃ ಕೈಯನ್ನು ಕಳೆದುಕೊಂದು ಸೈನಿಕನ ಜೀವ ರಕ್ಷಿಸಿದ್ದಾರೆ. ಇತ್ತ ನಿದ್ದೆಯಿಂದ ಎಚ್ಚರವಾಗಿ ವಿಕಾಸ್ ತನ್ನ ಜೀವ ರಕ್ಷಿಸಿದ ಜ್ಯೋತಿಯನ್ನು ತಕ್ಷಣ ಆಸ್ಪತ್ರೆಗೆ ಒಯ್ದರೂ ಕೈಯನ್ನು ಜೋಡಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ದುರಂತ ಘಟನೆಯಲ್ಲಿ ಆರಂಭವಾದ ಯೋಧನ ಪ್ರೇಮ್ ಕಹಾನಿ 2011ರಲ್ಲಿ ಮದುವೆಯವರೆಗೆ ತಲುಪಿ, ಇಂದು ಪಾಲಕ್ಕಾಡ್ ನಲ್ಲಿ 2 ಮಕ್ಕಳ ಜೊತೆ ಸುಖವಾದ ಜೀವನ ಸಾಗಿಸುತ್ತಿದ್ದಾರೆ. ಘಟನೆ ಸಂದರ್ಭದಲ್ಲಿ ಜ್ಯೋತಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು. ಆದರೆ ತನ್ನ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಸದ್ಯ ಕೇರಳದಲ್ಲಿರುವ ಜ್ಯೋತಿ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೊಡೆ ಬ್ಲಾಕ್ ಪಂಚಾಯ್ತಿಯ ಪಾಲತ್ತಲ್ಲ್ ಡಿವಿಷನ್ ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಈ ಸಂಬಂಧ ಮಾತನಾಡಿರುವ ಜ್ಯೋತಿ, ನಾನು ಪ್ರಧಾನಿ ಮೋದಿಯವರ ರಾಜಕಾರಣದಿಂದ ಆಕರ್ಷಿತಳಾಗಿದ್ದೇನೆ. ಅಭ್ಯರ್ಥಿಯಾಗುವಂತೆ ಪಕ್ಷವೇ ನನ್ನನ್ನು ಕೆಳಿದಾಗ ಇಲ್ಲ ಎನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮನೆಯವರಿಂದಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಆದರೆ ಜನ ನನಗೆ ಮತ ಹಾಕ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

  • ಬೆಂಗ್ಳೂರಲ್ಲಿ ಬಾಲಕಿಯರಿಬ್ಬರ ಅನುಮಾನಾಸ್ಪದ ಸಾವು!

    ಬೆಂಗ್ಳೂರಲ್ಲಿ ಬಾಲಕಿಯರಿಬ್ಬರ ಅನುಮಾನಾಸ್ಪದ ಸಾವು!

    ಬೆಂಗಳೂರು: ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 11 ವರ್ಷದ ಬಾಲಕಿಯ ಶವ ಪತ್ತೆಯಾದ ಬೆನ್ನಲ್ಲೇ ಇದೀಗ 15 ವರ್ಷದ ಮತ್ತೊಬ್ಬ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

    11 ವರ್ಷದ ಪೂಜಾಳ ಶವ ನಗರದ ಬಾಗಲಗುಂಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇತ್ತ ರಾಜಗೋಪಾಲ ನಗರದಲ್ಲಿ 15 ವರ್ಷದ ಜ್ಯೋತಿಯ ಶವ ದೊರೆತಿದೆ.

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಜ್ಯೋತಿಯ ಶವ ಪತ್ತೆಯಾಗಿದೆ. ಈಕೆ ರಾಯಚೂರು ಮೂಲದ ಪಾರ್ತತಮ್ಮ ಮತ್ತು ಬುಗ್ಗಪ್ಪ ದಂಪತಿಯ ಪುತ್ರಿಯಾಗಿದ್ದು, ರಾಜಗೋಪಾಲನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಅಲ್ಪನಾಥ್ ಎಂಬವರ ಮನೆಯಲ್ಲಿ ಜ್ಯೋತಿ ಕೆಲಸ ಮಾಡುತ್ತಿದ್ದು, ಇಂದು ಮನೆಯ ಸಂಪ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಬೆಳಗ್ಗೆ ಮನೆ ಕೆಲಸಕ್ಕೆ ಬಂದಿದ್ದ ವೇಳೆ ಸಂಪ್‍ಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಬಾಲಕಿ ಬಿದ್ದ ನಂತರ ಸಂಪ್ ಬಾಗಿಲು ಮುಚ್ಚಿ ಬೀಗ ಹಾಕಲಾಗಿದೆ. ಹೀಗಾಗಿ ಸಂಪ್ ಡೋರ್ ತೆಗೆಯಿರಿ ಎಂದರೂ ಮನೆಯ ಮಾಲೀಕ ತೆಗೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ನಂತರ ಸ್ಥಳೀಯರು ಮತ್ತು ಪೊಲೀಸರಿಂದ ಸಂಪ್ ಬಾಗಿಲು ತೆರೆದು ಪರಿಶೀಲನೆ ನಡೆಸಲಾಯಿತು. ಸಂಪ್ ನಿಂದ ಮಗುವಿನ ಮೃತದೇಹವನ್ನ ಮೇಲೆತ್ತಲು ಹೋದಾಗ ಪೊಲೀಸರು ಬಂದ ನಂತರ ಎತ್ತಿ ಎಂದು ಮನೆ ಮಾಲೀಕ ಹೇಳಿದ್ದಾನೆ. ಹೀಗಾಗಿ ಪೊಲೀಸರು ಬರೋದಕ್ಕೂ ಮೊದಲೇ ಎತ್ತಿದ್ರೆ ಮಗು ಬದುಕುತ್ತಿತ್ತು ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

    ಸದ್ಯ ಬಾಲಕಿಯ ಮೃತ ದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಂಪ್ ಬಾಗಿಲು ಮುಚ್ಚಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯಲ್ಲಿ ಪೂಜಾಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪೋಷಕರ ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು ಭಾರೀ ಚರ್ಚೆಗೆ ಒಳಗಾಗಿದೆ.

  • ಶಬರಿಮಲೆಯಲ್ಲಿ ಇಂದೇ ಮಕರ ಜ್ಯೋತಿ- ರಾಜ್ಯದಲ್ಲಿ ನಾಳೆ ಸಂಕ್ರಾಂತಿ ಹಬ್ಬ

    ಶಬರಿಮಲೆಯಲ್ಲಿ ಇಂದೇ ಮಕರ ಜ್ಯೋತಿ- ರಾಜ್ಯದಲ್ಲಿ ನಾಳೆ ಸಂಕ್ರಾಂತಿ ಹಬ್ಬ

    ತಿರುವನಂತಪುರಂ: ಸೂರ್ಯ ತನ್ನ ಪಥ ಬದಲಿಸುವ ದಿನ ಮಕರ ಸಂಕ್ರಾಂತಿಯಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಇರುತ್ತೆ. ಅದೇ ದಿನ ಶಬರಿಮಲೆಯಲ್ಲಿ ವೀರಮಣಿಕಂಠ ಜ್ಯೋತಿ ರೂಪದಲ್ಲಿ ದರ್ಶನ ಕೊಡ್ತಾನೆ.

    ಆದ್ರೆ ಈ ಸಲ ಕ್ಯಾಲೆಂಡರ್‍ನಲ್ಲಿ ಮಕರ ಸಂಕ್ರಾಂತಿ ಜನವರಿ 15 ಅಂದ್ರೆ ನಾಳೆ ಅಂತ ತೋರಿಸ್ತಿದೆ. ಹೀಗಾಗಿ ಭಕ್ತರಲ್ಲಿ, ಹಬ್ಬ ಆಚರಿಸುವವರಲ್ಲಿ ಗೊಂದಲ ಮನೆ ಮಾಡಿದೆ. ಆದ್ರೆ ಶಬರಿಮಲೆಯಲ್ಲಿ ಇವತ್ತೇ ಮಕರವಿಲಕ್ಕು ಅಂದ್ರೆ ಮಕರ ಜ್ಯೋತಿ ಇದ್ದು, ಅದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

    ಸಂಜೆ 6.30ಕ್ಕೆ ಅಯ್ಯಪ್ಪನ ಆಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ. ನಂತ್ರ 8 ಗಂಟೆಯ ಒಳಗಾಗಿ ದೇಗುಲದಿಂದ 8 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿಯ ದರ್ಶನವಾಗಲಿದೆ. ಇನ್ನು ಈ ವರ್ಷ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ, ಸುಮಾರು 800 ವರ್ಷದ ಸಂಪ್ರದಾಯಕ್ಕೆ ಧಕ್ಕೆ ಹಿನ್ನೆಲೆಯಲ್ಲಿ ಮಕರ ಜ್ಯೋತಿಯತ್ತ ದೇಶದ ಗಮನ ನೆಟ್ಟಿದೆ. ಇತ್ತ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲೂ ಸೂರ್ಯ ರಶ್ಮಿ ಸ್ಪರ್ಶ ನಾಳೆ ಅಂತ ಹೇಳಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv