Tag: ಜ್ಯೂ. ರವಿಚಂದ್ರನ್

  • ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ತುಮಕೂರು: ಸ್ಯಾಂಡಲ್‍ವುಡ್‍ನ ಕ್ರೇಜಿಸ್ಟಾರ್ ರವಿಚಂದ್ರನ್‍ರನ್ನೇ ಹೋಲುವ ಜ್ಯೂ. ರವಿಚಂದ್ರನ್(35) ಎಂದೇ ಖ್ಯಾತಿ ಪಡೆದಿದ್ದ ಲಕ್ಷ್ಮಿ ನಾರಾಯಣ್ ಸಾವನ್ನಪ್ಪಿದ್ದಾರೆ.

    ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದ ಜ್ಯೂ. ರವಿಚಂದ್ರನ್, ವಿದ್ಯುತ್ ಶಾಕ್‍ಗೆ ಬಲಿ ಆಗಿದ್ದಾರೆ. ಗ್ರಾಮದ ತಮ್ಮ ಮನೆಯಲ್ಲಿ ಸಂಪ್‍ನಿಂದ ನೀರಿನ ಟ್ಯಾಂಕ್‍ಗೆ ನೀರು ಹಾಯಿಸಲು ಮೋಟಾರ್ ಆನ್ ಮಾಡಿದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಹೆಸರಾಂತ ನಟ ದಿ.ಎಂ.ಪಿ.ಶಂಕರ್ ಪತ್ನಿ ಮಂಜುಳ ವಿಧಿವಶ

    ಕಳೆದು ಹಲವು ವರ್ಷಗಳಿಂದ ಜ್ಯೂ. ರವಿಚಂದ್ರನ್ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಅಭಿಮಾನಿಗಳ ಮನಸ್ಸು ಗೆದ್ದಿದ್ದರು.