Tag: ಜ್ಯೂ.ಎನ್ ಟಿಆರ್

  • ‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್

    ನ್ನಡದ ಪ್ರತಿಭಾನ್ವಿತ ನಟ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಸಿನಿಮಾ ಮಾಡಿದ ಡಿವೈನ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಕಾಂತಾರ ಪಾರ್ಟ್ 1ಗಾಗಿ (Kantara 1) ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದೀಗ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದನ್ನೂ ಓದಿ:ಸತತ ಸಿನಿಮಾಗಳ ಸೋಲು, ತಮಿಳು ನಿರ್ದೇಶಕನ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

     

    View this post on Instagram

     

    A post shared by Hombale Films (@hombalefilms)

    ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

     

    View this post on Instagram

     

    A post shared by Jr NTR (@jrntr)

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರಿಚೇಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ‍್ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾಗೆ ಹೀರೋಯಿನ್‌ ಫಿಕ್ಸ್‌

    ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾಗೆ ಹೀರೋಯಿನ್‌ ಫಿಕ್ಸ್‌

    ‘ಆರ್‌ಆರ್‌ಆರ್’ (RRR) ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್, ಕೊರಟಾಲ ಶಿವ (Kortala Shiva) ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಶಾಂತ್ ನೀಲ್ (Prashanth Neel) ಜೊತೆಗಿನ ತಾರಕ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಜ್ಯೂ.ಎನ್‌ಟಿಆರ್ (Jr.ntr) ಮಂದಿನ 31ನೇ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದಾರೆ. ಬಾಲಿವುಡ್ ಬ್ಯೂಟಿ ಜೊತೆ ತಾರಕ್ ರೊಮ್ಯಾನ್ಸ್ ಮಾಡಲಿದ್ದಾರೆ.

    ಕೊರಟಾಲ ಶಿವ ನಿರ್ದೇಶನದ ಎನ್‌ಟಿಆರ್ 30 ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಕನ್ನಡದ ನಟಿ ಚೈತ್ರಾ ರೈ ಸೇರಿದಂತೆ ಹಲವರು ಶೂಟಿಂಗ್ ಭಾಗಿಯಾಗಿದ್ದಾರೆ.

    ಕೆಜಿಎಫ್ 2 (KGF2) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್, ಸಲಾರ್‌ನಲ್ಲಿ (Salaar) ಬ್ಯುಸಿಯಾಗಿದ್ದಾರೆ. ಎನ್‌ಟಿಆರ್ 30 ಬಳಿಕ ತಾರಕ್, ಪ್ರಶಾಂತ್ ನೀಲ್ ಜೊತೆ ಕೈಜೋಡಿಸಲಿದ್ದಾರೆ. ಸಲಾರ್ ಬಳಿಕ ಜ್ಯೂ.ಎನ್‌ಟಿರ್ 31ನೇ ಚಿತ್ರಕ್ಕೆ ನೀಲ್ ನಿರ್ದೇಶನ ಮಾಡಲಿದ್ದಾರೆ. ತಾರಕ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shradha Kapoor) ಫೈನಲ್ ಆಗಿದ್ದಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಮೊದಲ ಬಾರಿಗೆ ಜ್ಯೂ.ಎನ್‌ಟಿಆರ್- ಶ್ರದ್ಧಾ ಕಪೂರ್ ಜೊತೆಯಾಗಿ ನಟಿಸಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶದ ಭಿನ್ನ ಕಥೆಯಲ್ಲಿ ಶ್ರದ್ಧಾ- ತಾರಕ್ ಕಮಾಲ್ ಮಾಡಲಿದ್ದಾರೆ. ಈ ಜೋಡಿಯನ್ನ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ 39ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹುಟ್ಟುಹಬ್ಬದ ಸಂಭ್ರಮದ ನಡುವೆ ತಮ್ಮ ಅಭಿಮಾನಿಗಳಿಗೆ ಜ್ಯೂ.ಎನ್‌ಟಿಆರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಮತ್ತು ತಾರಕ್ ಕಾಂಬಿನೇಷನ್‌ನ ಹೊಸ ಸಿನಿಮಾ `ಎನ್‌ಟಿಆರ್ 31′ ಫಸ್ಟ್ ಲುಕ್ ಮೂಲಕ ಅನೌನ್ಸ್‌ ಮಾಡಿದ್ದಾರೆ.

     

    View this post on Instagram

     

    A post shared by Jr NTR (@jrntr)

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ತಮ್ಮ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಿನ್ನೇಯಷ್ಟೇ ಕೊರಟಾಲ ಶಿವ ನಿರ್ದೇಶನದ `ಎನ್‌ಟಿಆರ್ 30′ ಚಿತ್ರ ಅನೌನ್ಸ್ ಆಗಿತ್ತು. ಇಂದು ತಾರಕ್ ಹುಟ್ಟುಹಬ್ಬದಂದು ಕೆಜಿಎಫ್ ಮಾಸ್ಟರ್ ಮೈಂಡ್ ನಿರ್ದೇಶನದ ಹೊಸ ಸಿನಿಮಾದಲ್ಲಿನ ಜ್ಯೂ.ಎನ್‌ಟಿಆರ್ ಲುಕ್ ರಿವೀಲ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಇದನ್ನೂ ಓದಿ: `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಫಸ್ಟ್ ಲುಕ್ಕಿನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿರುವ ಜ್ಯೂ.ಎನ್‌ಟಿಆರ್ ಕಣ್ಣಿನಲ್ಲೇ ಅಬ್ಬರಿಸಿದ್ದಾರೆ. ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ. ಅವನ ಮಣ್ಣು, ಅವನ ಆಳ್ವಿಕೆ, ಆದರೆ ರಕ್ತ ಮಾತ್ರ ಅವನದ್ದಲ್ಲ ಎಂದು ಪವರ್‌ಫುಲ್ ಸಾಲುಗಳನ್ನ ನೀಡಿ, ಮೈತ್ರಿ ಮೂವಿ ಮೇಕರ್ಸ್ ಪೇಜ್‌ನಲ್ಲಿ ಚಿತ್ರದ ಪೋಸ್ಟರ್‌ ಜತೆ ಟ್ವೀಟ್‌ ಮಾಡಿದ್ದಾರೆ. ಸದ್ಯ ಜ್ಯೂ.ಎನ್‌ಟಿಆರ್ ಚಿತ್ರದ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್

    ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಪ್ರವಾಹವಾಗುತ್ತಿದ್ದು, ಅದಕ್ಕೆ ಟಾಲಿವುಡ್ ಸ್ಟಾರ್ ಗಳು ಸಂತ್ರಸ್ತರಿಗಾಗಿ ಮಿಡಿದಿದ್ದಾರೆ.

    ಆಂಧ್ರ ಪ್ರವಾಹದಿಂದ ತತ್ತರಿಸುತ್ತಿರುವ ಜನರಿಗಾಗಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

    ಟ್ವೀಟ್ ಮಾಡಿದ ಅವರು, ಆಂಧ್ರಪ್ರದೇಶದಲ್ಲಿ ವಿನಾಶಕಾರಿ ಪ್ರವಾಹವಾಗುತ್ತಿದೆ. ನಾನು ಸಿಎಂಆಎರ್‍ಎಫ್ ನಿಧಿಗೆ 25 ಲಕ್ಷ ರೂ. ನೀಡಲು ಬಯಸುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ಎಪಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಲು ವಿನಂತಿಸಿಕೊಳ್ಳುತ್ತೇನೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ಮಹೇಶ್ ಬಾಬು ಮಾತ್ರವಲ್ಲ ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ಜ್ಯೂ.ಎನ್ ಟಿಆರ್ ಸಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದು, ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದ ಜನರು ದುಃಸ್ಥಿತಿಯಲ್ಲಿ ಇದ್ದಾರೆ. ಅದಕ್ಕೆ ನಾನು ಅವರ ಚೇತರಿಕೆಗೆ ಒಂದು ಸಣ್ಣ ಹೆಜ್ಜೆಯನ್ನು ಇಡುತ್ತಿದ್ದು, ಸಿಎಂ ಪರಿಹಾರ ನಿಧಿಗೆ 25 ಲಕ್ಷವನ್ನು ನೀಡುತ್ತಿದ್ದೇನೆ ಎಂದು ಬರೆದು ಅಭಿಮಾನಿಗಳಲ್ಲಿ ನೀವು ಸಹ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಆಂಧ್ರಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಕಷ್ಟ ಪಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ಗಳು ಆಂಧ್ರ ಸಿಎಂ ಪರಿಹಾರ ನಿಧಿಗೆ ತಲಾ 25 ಲಕ್ಷ ದೇಣಿಗೆ ನೀಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ:  ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಆಂಧ್ರ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಸಂತ್ರಸ್ತರ ಕಷ್ಟವನ್ನು ತಿಳಿದುಕೊಳ್ಳಲು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.