Tag: ಜ್ಯೂನಿಯರ್ ವಿಷ್ಣುವರ್ಧನ್

  • ಪ್ರತಿದಿನವೂ ಪರಿಸರ ದಿನ ಆಚರಿಸಿ: ಜ್ಯೂನಿಯರ್ ವಿಷ್ಣುವರ್ಧನ್, ಶಂಕರ್ ನಾಗ್ ಕರೆ

    ಪ್ರತಿದಿನವೂ ಪರಿಸರ ದಿನ ಆಚರಿಸಿ: ಜ್ಯೂನಿಯರ್ ವಿಷ್ಣುವರ್ಧನ್, ಶಂಕರ್ ನಾಗ್ ಕರೆ

    ನೆಲಮಂಗಲ: ಕಾಡು ವಿಥ್ ನಾಡು ಪರಿಕಲ್ಪನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಧನ್ವಂತರಿ ಒಡೆಯರ್ ಸೇರಿ ಪರಿಸರ ಸ್ನೇಹಿ ಕಾಳಜಿಗಾಗಿ, ಚಲನಚಿತ್ರ ಕಲಾವಿದರು ಹಾಗೂ ರಂಗಭೂಮಿ ಕಲಾವಿದರಾದ ಜ್ಯೂನಿಯರ್ ವಿಷ್ಣುವರ್ಧನ್, ಜ್ಯೂನಿಯರ್ ಶಂಕರ್ ನಾಗ್ ಜೊತೆಗೆ ಗಿಡ ನೆಟ್ಟು ಜನರಲ್ಲಿ ಪರಿಸರ ಜಾಗೃತಿಗೆ ಮುಂದಾಗಿದ್ದಾರೆ.

    ಸಮೀಪದ ತೋಟದ ಗುಡ್ಡದಹಳ್ಳಿ ಬಳಿ ಚಾಲಕರು ಹಾಗೂ ಜ್ಯೂನಿಯರ್ ಕಲಾವಿದರ ಜೊತೆ ಸೇರಿ ಪರಿಸರ ಉಳಿಸಿ ನಾಡು ಬೆಳೆಸಿ ಮುಂದಿನ ಪೀಳಿಗೆಗೆ ಇದೇ ದಾರಿ ದೀಪ ಎಂದು ಜಾಗೃತಿ ಸಾರಿದ್ದಾರೆ. ನಂತರ ಮಾತನಾಡಿದ ನೆಲಮಂಗಲ ಆರ್.ಟಿ.ಓ ಕಚೇರಿಯ ಹಿರಿಯ ಮೋಟಾರು ನಿರೀಕ್ಷಕ ಡಾ.ಧನ್ವಂತರಿ ಒಡೆಯರ್, ವಿಶ್ವ ಪರಿಸರ ದಿನವನ್ನು ಪ್ರತಿದಿನವು ಆಚರಿಸಬೇಕು, ಮನೆಗೊಂದು ಗಿಡವನ್ನು ನೆಡಬೇಕೆಂದು ಕರೆ ನೀಡಿದ್ದಾರೆ.

    ಇದು ಪ್ರತಿಯೊಬ್ಬರ ಕರ್ತವ್ಯ, ಉತ್ತಮ ಪರಿಸರದಿಂದ ನಾಡಿನಲ್ಲಿ ಮಳೆ, ಬೆಳೆ, ಪರಿಸರ, ತಂಪಾದ ಹಾಗೂ ಉತ್ತಮ ಗಾಳಿಯಿಂದ ಜೀವ ಸಂಕುಲಗಳು ಉಳಿಯುವ ಕೆಲಸವನ್ನು ಪ್ರತಿಯೊಬ್ಬರೂ ಕೈಜೋಡಿಸಿ ಪರಿಸರ ಕಾಳಜಿಯನ್ನ ಮೆರೆಯಬೇಕು ಎಂದು ತಿಳಿಸಿದರು. ಅದರ ಜೊತೆಗೆ ಚಾಲಕರು ಸಮಯ ಪ್ರಜ್ಞೆ, ಕಾಳಜಿ, ಹಾಗೂ ಸಾರಿಗೆ ನಿಯಮಗಳನ್ನ ಪಾಲಿಸಿ ವಾಹನಗಳ ಸಂಚಾರ ಮಾಡಬೇಕು ಎಂದು ಜಾಗೃತಿ ಮೂಡಿಸಿದ್ದಾರೆ.

    ಜ್ಯೂನಿಯರ್ ವಿಷ್ಣುವರ್ಧನ್(ಅಲಿ) ಜ್ಯೂನಿಯರ್ ಶಂಕರ್ ನಾಗ್ ವೃತ್ತಿಯಲ್ಲಿ ಚಲನಚಿತ್ರ ಕಲಾವಿದರು ರಂಗಭೂಮಿ ಕಲಾವಿದರಾಗಿದ್ದು, ಪರಿಸರ ರಕ್ಷಣೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಂದೇಶ ನೀಡಿದರು. ನಾಡು ವಿಥ್ ಕಾಡು ಎಂಬ ಕಲ್ಪನೆ ಯಲ್ಲಿ 30 ಸಸಿಗಳನ್ನು ಜೈ ಮಾರುತಿ ಟ್ರಾವೆಲ್ಸ್ ಆವರಣದಲ್ಲಿ ನೆಡಲಾಯಿತು. ಇದನ್ನೂ ಓದಿ:  ಇಂದು ಆಷಾಢ ಅಮಾವಾಸ್ಯೆ, ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನಕ್ಕಿಲ್ಲ ಅವಕಾಶ

  • ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ಜ್ಯೂನಿಯರ್ ವಿಷ್ಣುವರ್ಧನ್

    ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ಜ್ಯೂನಿಯರ್ ವಿಷ್ಣುವರ್ಧನ್

    ಹುಬ್ಬಳ್ಳಿ: ಜ್ಯೂನಿಯರ್ ವಿಷ್ಣುವರ್ಧನ್ ಎಂ.ಡಿ ಅಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಡಿ ಅಲಿ, ಸುಮಾರು 35 ವರ್ಷಗಳಿಂದ ಖ್ಯಾತ ನಟರಾದ ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ರಜನಿಕಾಂತ್ ಸೇರಿದಂತೆ ಹಲವು ನಾಯಕ ನಟರೊಂದಿಗೆ ನಟಿಸಿದ್ದೇನೆ. ನಾನು 10ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ನಟಿಸಿದ್ದೇನೆ. ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು ಇತರೇ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದೇನೆ ಎಂದು ತಿಳಿಸಿದರು.

    ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಚಿಕಿತ್ಸೆಗೆ ಬೇಕಾಗುವಷ್ಟು ಹಣವಿಲ್ಲದೆ ಪರದಾಡುವಂತಾಗಿದೆ. ಆದರಿಂದ ಹುಬ್ಬಳ್ಳಿಯಲ್ಲಿ ಫೆಬ್ರವರಿ 26 ರಂದು ನಾನು ಕೆಲ ಜ್ಯೂನಿಯರ್ ನಟರೊಂದಿಗೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದೆನೆ. ಆ ಕಾರ್ಯಕ್ರಮದಿಂದ ಬಂದ ಹಣದಿಂದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ ಎಂದು ತಮ್ಮ ಪರಿಸ್ಥತಿಯನ್ನು ಹೇಳಿಕೊಂಡಿದ್ದಾರೆ.

    ಎಂ.ಡಿ ಅಲಿ ಅವರೊಂದಿಗೆ ವೇದಿಕೆ ಮೇಲಿದ್ದವರು ಅವರಿಗೆ ಸಹಾಯಹಸ್ತ ನೀಡಿದ್ದಾರೆ. ಬಳಿಕ ನಮ್ಮ ಕೈಲಾದ ಮಟ್ಟಿಗೆ ಅವರಿಗೆ ಸಹಾಯ ಮಾಡಲು ನಾವು ಸಿದ್ಧ. ಯಾಕೆಂದರೆ ನಾವು ಕಲಾವಿದರನ್ನು ಗೌರವಿಸುತ್ತೇವೆ. ಅವರ ಕಲೆಗೆ ಬೆಲೆ ನೀಡುತ್ತೇವೆ. ಅಂದುಕೊಂಡ ಮಟ್ಟಿಗೆ ಅಲಿ ಅವರಿಗೆ ಸಹಾಯ ಮಾಡಲು ಆಗಲಿಲ್ಲ ಆದರೂ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv