Tag: ಜ್ಯೂನಿಯರ್ ಚಿರು

  • ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

    ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಾದ ಮಗನ ಹೆಸರು ಇಂದು ಬಹಿರಂಗಗೊಂಡಿದೆ.

    junior chiru

    ಇಷ್ಟು ದಿನ ಜ್ಯೂನಿಯರ್ ಚಿರು ಎಂದೇ ಫೇಮಸ್ ಆಗಿದ್ದ ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ ಎಂಬ ಅರ್ಥವಿದೆ. ಇದನ್ನೂ ಓದಿ: ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

    junior chiru

    ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಚಿರು ಪುತ್ರನನ್ನು ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಇದನ್ನೂ ಓದಿ: ಚಿರು ಯಾವಾಗಲೂ ನೀನೇ ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

    junior chiru

    ಅದರಂತೆ ಇದೀಗ ಚಿರಂಜೀವಿ ಸರ್ಜಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

     

    View this post on Instagram

     

    A post shared by Meghana Raj Sarja (@megsraj)

  • ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

    ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಹೆಸರು ನಾಳೆ ರಿವೀಲ್ ಆಗಲಿದೆ.

    ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಈ ಕುರಿತಂತೆ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ವೀಡಿಯೋ ಆಗಿದ್ದು, ಇದರ ಜೊತೆಗೆ ಜ್ಯೂನಿಯರ್ ಚಿರುವಿನ ಹಲವಾರು ಹೆಸರುಗಳನ್ನು ಬಹಿರಂಗ ಪಡಿಸಿ. ಕೊನೆಗೆ ಸೆಪ್ಟೆಂಬರ್ 3 ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ನಟ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ವಿಧಿವಶರಾಗಿದ್ದರು. ಬಳಿಕ 5 ತಿಂಗಳಿಗೆ ಅರ್ಥಾತ್ 22 ಅಕ್ಟೋಬರ್ ನಲ್ಲಿ ಮೇಘನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

  • ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಕೃಷ್ಣನ ವೇಷದಲ್ಲಿ ಜ್ಯೂನಿಯರ್ ಚಿರು – ನನ್ನ ಬೆಣ್ಣೆ, ಮುದ್ದು, ಬಂಗಾರ ಅಂದ ಮೇಘನಾ

    ಬೆಂಗಳೂರು: ದೇಶಾದ್ಯಂತ ಇಂದು ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಕೃಷ್ಣನ ವೇಷದಲ್ಲಿ ಮಿಂಚಿದ್ದಾನೆ. ಸದ್ಯ ಈ ಫೋಟೋವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಫೋಟೋ ಹಿಡಿಸುತ್ತಾರೆ. ಜೊತೆಗೆ ಮನೆಯ ತುಂಬಾ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡಿಸಿ ಸಂಭ್ರಮಿಸುತ್ತಾರೆ. ಈ ವಿಶೇಷ ದಿನದಂದು ಜ್ಯೂನಿಯರ್ ಚಿರು ಕೂಡ ಕೃಷ್ಣನ ವೇಷ ಧರಿಸಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಜ್ಯೂನಿಯರ್ ಚಿರುಗೆ ನಟ ಪನ್ನಗಭರಣ ಮಗ ವೇದ ಭರಣ ಕೂಡ ಸಾಥ್ ನೀಡಿದ್ದು, ಇಬ್ಬರು ಸೋಫಾ ಮೇಲೆ ಕುಳಿತು ನವಿಲು ಗರಿ ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಚಿರು ಯಾವಾಗಲೂ ನೀನೇ ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

    Junior Chiru

    ಇದೀಗ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನನ್ನ ಬೆಣ್ಣೆ, ಮುದ್ದು, ಬಂಗಾರ ಎನ್ನುತ್ತಾ, ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ 10 ತಿಂಗಳು ತುಂಬಿದ್ದು, ಅದೇ ಖುಷಿಯಲ್ಲಿ ಮೇಘನಾ ರಾಜ್ ಮಗ ಜೊತೆ ಒಂದೇ ರೀತಿಯ ಮ್ಯಾಚಿಂಗ್ ಡ್ರೆಸ್ ಧರಿಸಿ ಅಮ್ಮ ಮಗ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

  • ಮಗನ ಜೊತೆಗಿನ ಕ್ಯೂಟ್ ಸೆಲ್ಫಿ ಶೇರ್ ಮಾಡಿದ ನಟಿ ಮೇಘನಾ

    ಮಗನ ಜೊತೆಗಿನ ಕ್ಯೂಟ್ ಸೆಲ್ಫಿ ಶೇರ್ ಮಾಡಿದ ನಟಿ ಮೇಘನಾ

    ಬೆಂಗಳೂರು: ನಟಿ ಮೇಘನಾ ರಾಜ್ ಅವರು ಮಗ ಜೂನಿಯರ್ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಹೌದು. ಮಂಡೇ ಮಾರ್ನಿಂಗ್ಸ್ ಎಂದು ಬರೆದುಕೊಂಡು ಮೇಘನಾ ಮಗನ ಜೊತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಇನ್ ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗನ ಜೊತೆಗಿನ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಂತೆಯೇ ಚಿರು ಹಾಗೂ ಮೇಘನಾ ಅಭಿಮಾನಿಗಳು ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಹಲವಾರು ಮಂದಿ ಕ್ಯೂಟ್ ಪಿಕ್ ಎಂದು ಕಾಮೆಂಟ್ ಮಾಡಿದ್ದಾರೆ.

    ಫೋಟೋದಲ್ಲಿ ಮೇಘನಾ ಅವರು ಆಗಷ್ಟೇ ಎದ್ದಿರುವ ತಮ್ಮ ಮಗನನ್ನು ಖುಷಿಯಿಂದ ಅಪ್ಪಿಕೊಂಡಿರುವುದನ್ನು ಕಾಣಬಹುದಾಗಿದೆ. ಇತ್ತ ಜ್ಯೂನಿಯರ್ ಚಿರು ಕೂಡ ಅಮ್ಮನ ಆಲಿಂಗನದಿಂದ ಸಂತಸ ವ್ಯಕ್ತಪಡಿಸಿರುವುದನ್ನು ನೋಡಬಹುದು.

     

    View this post on Instagram

     

    A post shared by Meghana Raj Sarja (@megsraj)

    ನಿನ್ನೆಯಷ್ಟೇ ಮೇಘನಾ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದರು. ನಿನ್ನೆ ಫ್ರೆಂಡ್ ಶಿಪ್ ಡೇ ಆಗಿದ್ದರಿಂದ ಮೇಘನಾ ಅವರು ತಮ್ಮ ಪತಿಯೇ ನನ್ನ ಮೊದಲ ಗೆಳೆಯ.. ಹಿಂದೆಯೂ, ಮುಂದೆಯೂ ಹಾಗೂ ಎಂದೆಂದಿಗೂ ನೀನೇ ನನ್ನ ಅಚ್ಚುಮೆಚ್ಚಿನ ಗೆಳೆಯ. ಎಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಮೇಘನಾ ಫೋಟೋ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಭಾವುಕರಾಗಿ ಕಾಮೆಂಟ್ ಗಳನ್ನು ಮಾಡಿದ್ದರು.

    ಚಿರು ಇಹಲೋಕ ತ್ಯಜಿಸಿದ್ದರೂ ಮೇಘನಾ ರಾಜ್ ಅವರು ಒಂದಲ್ಲಾ ಒಂದು ರೀತಿಯಲ್ಲಿ ಪತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮೇಘನಾ ಕೆಲವು ದಿನಗಳ ಹಿಂದೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದರು. ವರ್ಷಗಳ ನಂತರ ಕ್ಯಾಮೆರಾ ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

  • ಜ್ಯೂನಿಯರ್ ಚಿರುವಿನ ಹೊಸ ಫೋಟೋಗಳು ವೈರಲ್

    ಜ್ಯೂನಿಯರ್ ಚಿರುವಿನ ಹೊಸ ಫೋಟೋಗಳು ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರುಗೆ ಸದ್ಯ 8 ತಿಂಗಳು ತುಂಬಿದೆ. ಈ ಮಧ್ಯೆ ಜ್ಯೂನಿಯರ್ ಚಿರುವಿನ ಎಂದೂ ಕಾಣದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮೇಘನಾ ರಾಜ್‍ರವರ ತಮ್ಮ ಪ್ರೀತಿಯ ಪುತ್ರನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮೇಘನಾ ರಾಜ್‍ರವರು ತಮ್ಮ ಸ್ನೇಹಿತೆಯನ್ನು ಭೇಟಿ ಮಾಡಿದ್ದು, ಈ ವೇಳೆ ಜ್ಯೂನಿಯರ್ ಜೊತೆಗೆ ಮೇಘನಾ ರಾಜ್‍ರ ಸ್ನೇಹಿತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

     

    View this post on Instagram

     

    A post shared by Meghana chiru (@mc_fans_mandya)

    ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೋದಲ್ಲಿ ಜ್ಯೂನಿಯರ್ ಚಿರುವನ್ನು ಮೇಘನಾರವರ ಸ್ನೇಹಿತರು ಎತ್ತಿಕೊಂಡಿರುವುದನ್ನು ನೋಡ ಬಹುದಾಗಿದೆ. ಜೊತೆಗೆ ಈ ವೇಳೆ ಆಟ ಆಡಿಸಲು ಬಂದ ಸಣ್ಣ ಬಾಲಕನನ್ನು ಕಂಡು ಜ್ಯೂನಿಯರ್ ಅಳುತ್ತಿರುವಂತೆ ಕಾಣಿಸುತ್ತದೆ.

    ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದರು. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಇದನ್ನೂ ಓದಿ:ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

  • ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

    ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

    ಚೆನ್ನೈ: ನಟಿ ಮೆಘನಾ ರಾಜ್ ಹಾಗೂ ಅವರ 8 ತಿಂಗಳ ಮಗ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಅವರು ನಟ ಅರ್ಜುನ್ ಸರ್ಜಾ ಅವರ ಆಂಜನೇಯನ ದೇವಸ್ಥಾನದ ಉದ್ಘಾಟನೆಗೂ ತೆರಳಿಲ್ಲ. ಹೀಗಾಗಿ ಅರ್ಜುನ್ ಸರ್ಜಾ ಅವರು ತಾಯಿ- ಮಗನಿಗೆ ವೀಡಿಯೋ ಕಾಲ್ ನಲ್ಲೇ ದೇವರ ದರ್ಶನ ಮಾಡಿಸಿದ್ದಾರೆ.

    ಹೌದು. ಬುಧವಾರ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಫೋಟೋದಲ್ಲಿ, ಜೂ. ಚಿರು ನೇರವಾಗಿ ಕ್ಯಾಮೆರಾವನ್ನೇ ನೋಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಕೋವಿಡ್-19 ಕಾರಣದಿಂದಾಗಿ ಕುಂಬಾಭಿಷೇಕಕ್ಕೆ ಬರಲು ಸಾಧ್ಯವಾಗದ ಕಾರಣ ಚಿರು ಮಗನಿಗೆ ದೇವಾಲಯವನ್ನು ತೋರಿಸಿರುವುದಾಗಿ ಫೋಟೋ ಮೇಲೆ ಬರೆದುಕೊಂಡಿದ್ದಾರೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು, ನಟಿ ಐಶ್ವರ್ಯಾ ಅರ್ಜುನ್ ಕೂಡ ತಮ್ಮ ಇನ್‍ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

     

    View this post on Instagram

     

    A post shared by Arjun Sarja (@arjunsarjaa)

    ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರು ಚೆನ್ನೈನ ಹನುಮಾನ್ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಹಾಜರಾಗಿದ್ದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೇಘನಾ ಮತ್ತು ಜೂನಿಯರ್ ಚಿರು ಅವರಿಗೆ ಸಾಧ್ಯವಾಗಲಿಲ್ಲ.

     

    View this post on Instagram

     

    A post shared by Arjun Sarja (@arjunsarjaa)

    ಆಕ್ಷನ್ ಕಿಂಗ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಚೆನ್ನೈನ ಹೊರವಲಯದಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ್ದಾರೆ. ಹನುಮನ ಕಟ್ಟಾ ಭಕ್ತನಾಗಿರುವುದರಿಂದ ದೇವಾಲಯವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಈ ಕನಸು ಇದೀಗ ನನಸಾಗಿದ್ದು, ಜುಲೈ 1 ಮತ್ತು 2 ರಂದು ಕುಂಬಾಭಿಷೇಕದೊಂದಿಗೆ ದೇವಾಲಯವನ್ನು ಉದ್ಘಾಟಿಸಲಾಯಿತು.

  • ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

    ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

    ಬೆಂಗಳೂರು: ನನ್ನ ಮಗ ಪ್ರತಿದಿನ ಚಿರು ಸರ್ಜಾ ಫೋಟೋ ನೋಡಿ ಗುರುತಿಸುತ್ತಿದ್ದಾನೆ. ಈ ಸಂದರ್ಭವನ್ನು ನೋಡಲು ನನಗೆ ತುಂಬಾಹೆಮ್ಮೆಯಾಗುತ್ತಿದೆ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.

    ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕುಟ್ಟಿಮಾ, ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ನಾನು ಜೂನಿಯರ್ ಚಿರುವನ್ನು ಎತ್ತಿಕೊಂಡು ಹೋಗಿ ಚಿರು ಫೋಟೋ ತೋರಿಸುತ್ತಿದ್ದೇನೆ. ಈ ವೇಳೆ ಆತ ತನ್ನ ತಂದೆಯನ್ನು ಗುರುತಿಸುತ್ತಾನೆ. ಅಲ್ಲದೆ ಚಿರು ಫೋಟೋದಲ್ಲಿದ್ದಾರೆ ಎಂಬುದನ್ನು ಅರಿಯದ ಮುಗ್ಧ ಕಂದಮ್ಮ ಅವರೊಂದಿಗೆ ಆಟವಾಡಲು ಪ್ರಯತ್ನಿಸುತ್ತಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

    ಪ್ರತಿ ದಿನ ಮಗ ಎದ್ದ ತಕ್ಷಣ ಚಿರು ಫೋಟೋ ಬಳಿ ಎತ್ತಿಕೊಂಡು ಹೋಗಿ ಅಪ್ಪ ನೋಡು ಎಂದು ಹೇಳುತ್ತೇನೆ. ಆಗ ಅವನು ಚಿರುವನ್ನು ನೋಡಿ ತುಂಬಾ ಖುಷಿ ಪಡುತ್ತಾನೆ. ಅಲ್ಲದೆ ಫೋಟೋವನ್ನು ಎಳೆದುಕೊಂಡು ಎತ್ತಿಕೊಳ್ಳುವಂತೆ ಅವನದ್ದೇ ಭಾಷೆಯಲ್ಲಿ ಹೇಳುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪನ ಫೋಟೋ ಜೊತೆ ಆಟ ಆಡಿದ ಜ್ಯೂನಿಯರ್ ಚಿರು!

    ಮತ್ತೆ ಮಾತು ಮುಂದುವರಿಸಿದ ಮೇಘನಾ, ಚಿರು ಫೋಟೋ ಮುಂದೆ ಮಗ ಜೋರಾಗಿ ಕಿರುಚುತ್ತಾನೆ. ನನಗೆ ತುಂಬಾ ಹೆಮ್ಮೆಯ ವಿಷಯವೆಂದರೆ ಕೇವಲ 6 ತಿಂಗಳಲ್ಲೇ ಮಗ ಅಪ್ಪನನ್ನು ಗುರುತಿಸುತ್ತಾನೆ. ಇವನೇ ನನ್ನ ಅಪ್ಪ ಎಂದು ಅರ್ಥಮಾಡಿಕೊಂಡಿದ್ದಾನೆ. ಇದು ನನಗೆ ತುಂಬಾ ಖುಷಿ ನೀಡಿದೆ ಎಂದು ಗದ್ಗದಿತರಾದರು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    2021ರ ಮೇ 2ರಂದು ಮೇಘನಾ ಅವರು ತಮ್ಮ ಮಗನ ವೀಡಿಯೋವೊಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಜ್ಯೂನಿಯರ್ ಚಿರು ತನ್ನ ತಂದೆಯನ್ನು ಗುರುತು ಹಿಡಿಯುತ್ತಿರುವುದನ್ನು ಕಾಣಬಹುದಾಗಿದೆ. ಮೇಘನಾ ವೀಡಿಯೋ ಅಪ್ಲೋಡ್ ಮಾಡುತ್ತಿದ್ದಂತೆಯೇ ಚಿರು ಅಭಿಮಾನಿಗಳು ಶೇರ್ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ಅಭಿಮಾನ ಮೆರೆದಿದ್ದರು. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

    ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ 2020ರ ಜೂನ್ 7ರಂದು ನಿಧನರಾಗಿದ್ದಾರೆ. ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಕುಟುಂಬ ಮಾತ್ರವಲ್ಲದೇ ಅವರ ಅಭಿಮಾನಿ ಬಳಗವೇ ಕಣ್ಣೀರು ಹಾಕಿತ್ತು. ಇಂದು ಮೊದಲ ವರ್ಷದ ಪುಣ್ಯತಿಥಿಯಾಗಿದ್ದು, ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಇತ್ತ ಅಭಿಮಾನಿಗಳು, ಚಿರು ಅಣ್ಣ ಪ್ರೀತಿಯಲ್ಲಿ ಗುಣವಂತ, ನಗುವಿನಲ್ಲಿ ಶ್ರೀಮಂತ ಅಭಿಮಾನಿಗಳ ಮನಸ್ಸಲ್ಲಿ ಎಂದಿಗೂ ಜೀವಂತ ಮಿಸ್ ಯು ಚಿರು ಅಣ್ಣ ಎಂದೆಲ್ಲಾ ಮೇಘನಾ ಶೇರ್ ಮಾಡಿರುವ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

     

    View this post on Instagram

     

    A post shared by Meghana Raj Sarja (@megsraj)

  • ಸೂರಜ್ ಸರ್ಜಾರಿಂದ ಜ್ಯೂನಿಯರ್ ಚಿರು ಕ್ಯೂಟ್ ಫೋಟೋ ಶೇರ್

    ಸೂರಜ್ ಸರ್ಜಾರಿಂದ ಜ್ಯೂನಿಯರ್ ಚಿರು ಕ್ಯೂಟ್ ಫೋಟೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾರವರ ಸೋದರ ಸಂಬಂಧಿ ಮತ್ತು ಮ್ಯೂಸಿಕ್ ಕಂಪೋಸರ್ ಸೂರಜ್ ಸರ್ಜಾ ಜ್ಯೂನಿಯರ್ ಚಿರು ಮುದ್ದಾದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ನಟ ಚಿರಂಜೀವಿ ಸರ್ಜಾ ನಿಧನದ ಬಳಿಕ ಕತ್ತಲೆ ಮೂಡಿದ್ದ ಸರ್ಜಾ ಕುಟುಂಬದಲ್ಲಿ ಜ್ಯೂನಿಯರ್ ಚಿರು ಜನಿಸಿ ಪ್ರೀತಿ ಮತ್ತು ಸಂತಸ ನೀಡುತ್ತಿದ್ದಾನೆ. ಇಷ್ಟು ದಿನ ನಟಿ ಮೇಘನಾ ರಾಜ್ ಪ್ರೀತಿಯ ಪುತ್ರನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಚಿರು ಸೋದರ ಸಂಬಂಧಿ ಜ್ಯೂನಿಯರ್ ಚಿರು ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ಸೂರಜ್ ಸರ್ಜಾ, ಜೂನಿಯರ್ ಚಿರು ಸರ್ಜಾರನ್ನು ತಮ್ಮ ಮಡಿಲ ಮೇಲೆ ಮಲಗಿಸಿಕೊಂಡು ಎರಡು ಕೈಗಳಿಂದು ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ನನ್ನ ಜೀವನದಲ್ಲಿ ನಾನು ಎಂದಿಗೂ ಮಗುವನ್ನು ಹೊತ್ತುಕೊಂಡಿರಲಿಲ್ಲ. ಬಹುಶಃ ಮೊದಲ ಬಾರಿಗೆ ನಾನು ಹೆಚ್ಚಿನ ಸಂಪರ್ಕ ಹೊಂದಿದ್ದು, ಅದು ನನ್ನದೇ ಎಂಬ ಭಾವನೆ ಇತ್ತು ಎಂದು ಕ್ಯಾಪ್ಷನ್ ಹಾಕಿದ್ದರು.

     

    View this post on Instagram

     

    A post shared by Suraj Sarja (@surajssarja)

    ಈ ಫೋಟೋಗೆ ಮೇಘನಾ ಸರ್ಜಾರವರು ಅವನು ನಿಮ್ಮ ಸ್ವಂತ ಸೂರಜ್.. ಈ ಫೋಟೋವನ್ನು ಬಹಳ ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ನಂತರ ಅವರ ಚಿಕ್ಕಪ್ಪ ಕಿಶೋರ್ ಸರ್ಜಾರವರ ಪುತ್ರ ಸೂರಜ್ ಸರ್ಜಾರವರ ಧ್ರುವ ಸರ್ಜಾರೊಟ್ಟಿಗೆ ಕೋಲಾಜ್ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿದ್ದು, ಇದು ಕೊನೆಯ ಪೋಸ್ಟ್ ಎಂಬುವುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂಬುದಕ್ಕೆ ಪದಗಳಲ್ಲಿ ಬಣ್ಣಿಸಲು ಆಗುತ್ತಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

     

    View this post on Instagram

     

    A post shared by Suraj Sarja (@surajssarja)

  • ಅಪ್ಪನ ಸಿನಿಮಾದ ಟ್ರೈಲರ್ ಲಾಂಚ್ ಮಾಡಲಿದ್ದಾನೆ ಜ್ಯೂನಿಯರ್ ಚಿರು

    ಅಪ್ಪನ ಸಿನಿಮಾದ ಟ್ರೈಲರ್ ಲಾಂಚ್ ಮಾಡಲಿದ್ದಾನೆ ಜ್ಯೂನಿಯರ್ ಚಿರು

    ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‍ ನನ್ನು ಅವರ ಮಗ ಬಿಡುಗಡೆಗೊಳಿಸಲಿದ್ದಾನೆ.

    ಚಿರು ಸಹೋದರ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇದೇ ಶುಕ್ರವಾರ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹೊತ್ತಿನಲ್ಲಿಯೇ ನಟ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾ ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಚಿರು ಪುತ್ರ ಜ್ಯೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡಲಿದ್ದಾನೆ ಎಂದು ಚಿತ್ರತಂಡ ತಿಳಿಸಿದೆ.

    ರಾಜಾಮಾರ್ತಂಡ ಸಿನಿಮಾಕ್ಕೆ ಚಿರು ಸಹೋದರ ಧ್ರುವ ಸರ್ಜಾ ಕಂಠದಾನ ಮಾಡಿದ್ದು, ನಿರ್ದೇಶಕ ರಾಮ್ ನಾರಾಯಣ್ ಸಿನಿಮಾ ನಿರ್ದೇಶಿಸಿದ್ದಾರೆ ಹಾಗೂ ಅರ್ಜುನ್ ಜನ್ಯ ಸಂಗೀತಾ ಸಂಯೋಜಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ಗಣೇಶ್ ಅವರ ಛಾಯಾಗ್ರಹಣವಿದೆ.

  • ಮಗು ತುಂಬಾ ಮುದ್ದಾಗಿದೆ, ಆದ್ರೆ ನಿರಾಸೆಗೊಳಿಸಿದ್ದಕ್ಕೆ ಕ್ಷಮೆಯಿರಲಿ: ಮೇಘನಾ

    ಮಗು ತುಂಬಾ ಮುದ್ದಾಗಿದೆ, ಆದ್ರೆ ನಿರಾಸೆಗೊಳಿಸಿದ್ದಕ್ಕೆ ಕ್ಷಮೆಯಿರಲಿ: ಮೇಘನಾ

    ಬೆಂಗಳೂರು: ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ನಟಿ ಮೇಘನಾ ರಾಜ್ ಹಾಗೂ ಪುತ್ರ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಈ ಮಧ್ಯೆ ಚಿರು ಪುತ್ರನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೀಗಾಗಿ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

    ಹೌದು. ತಮ್ಮ ಇನ್ಸ್ ಸ್ಟಾ ಸ್ಟೋರಿಯಲ್ಲಿ ವೈರಲ್ ಆಗಿರುವ ಪುಟ್ಟ ಮಗುವೊಂದರ ಫೋಟೋವನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ಫೋಟೋದಲ್ಲಿರುವ ಪುಟ್ಟ ಕಂದಮ್ಮ ತುಂಬಾನೇ ಮುದ್ದಾಗಿದೆ. ಆದರೆ ಈ ಫೋಟೋದಲ್ಲಿರುವವನು ಜ್ಯೂನಿಯರ್ ಚಿರು ಅಲ್ಲ ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಹಾಕಿದ್ದಾರೆ.

    ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಇದೇ ಬೇಸರದಲ್ಲಿದ್ದ ಕುಟುಂಬಕ್ಕೆ ಇದೀಗ ಪುಟ್ಟ ಮಗುವಿನ ಆಗಮನದಿಂದ ಸಂತಸ ತಂದಿದೆ. ಮೇಘನಾ ಅವರು ಗಂಡು ಮಗುವಿನ ಜನ್ಮ ನೀಡಿದ ಬಳಿಕ ತಾಯಿ-ಮಗನ ಅನೇಕ ಫೋಟೋಗಳು ವೈರಲಾಗ ತೊಡಗಿದವು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಗೆ ಸ್ವತಃ ತಾವೇ ಸ್ಪಷ್ಟನೆ ಕೊಡುವ ಮೂಲಕ ಫುಲ್ ಸ್ಟಾಪ್ ಹಾಕಿದ್ದಾರೆ.

    ಮೇಘನಾ ಅವರು ಅಕ್ಟೋಬರ್ 22 ರಂದು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿನೆ ಜನ್ಮ ನೀಡಿದ್ದಾರೆ. ಈಗಾಗಲೇ ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ಚಿರುಗೆ ಗಂಡು ಮಗುವಾಗುತ್ತಿದ್ದಂತೆಯೇ ಸಂತಸ ಮುಗಿಲುಮುಟ್ಟಿತ್ತು. ಅಲ್ಲದೆ ಅದಾಗಲೇ ಜ್ಯೂನಿಯರ್ ಚಿರು ಅಂತಾನೇ ಹೆಸರಿಟ್ಟಿದ್ದಾರೆ.

    ಆ ಬಳಿಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಮೇಘನಾ ಮಗು ಅಂತ ಬೇರೆ ಮಕ್ಕಳ ಫೋಟೋಗಳು ವೈರಲ್ ಆಗತೊಡಗಿದವು. ದಿನಕ್ಕೊಂದು ಫೋಟೋಗಳು ವೈರಲ್ ಆಗುತ್ತಿರುವುದನ್ನು ಗಮನಿಸುತ್ತಿದ್ದ ಮೇಘನಾ ಅವರು ಇದಕ್ಕೆ ಅಂತ್ಯ ಹಾಡಬೇಕು ಎಂದು ಕೊನೆಗೂ ಸ್ಪಷ್ಟನೆ ನೀಡಿ ಅಭಿಮಾನಿಗಳಲ್ಲಿ ಕ್ಷಮೆ ಕೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

    ಮೇಘನಾ ಹಾಗೂ ಅವರ ಕುಟುಂಬಸ್ಥರು ಜ್ಯೂನಿಯರ್ ಚಿರುವಿನ ನಾಮಕರಣವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಯೋಜನೆ ಹಾಕಿದ್ದರು. ಈ ನಡುವೆ ಸುಂದರ್ ರಾಜ್ ದಂಪತಿ, ಮೇಘನಾ ಹಾಗೂ ಪುತ್ರನಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ ಶೀಘ್ರವೇ ನಾಮಕರಣ ಕಾರ್ಯಕ್ರಮವನ್ನು ಅನೌನ್ಸ್ ಮಾಡಲಿದ್ದು, ಅಭಿಮಾನಿಗಳು ಆ ದಿನಕ್ಕೋಸ್ಕರ ಕಾಯುತ್ತಿದ್ದಾರೆ.