Tag: ಜ್ಯಾತ್ಯತೀತತೆ

  • 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಲು ಅರ್ಹರು: ಸುಪ್ರೀಂ ಕೋರ್ಟ್

    18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಲು ಅರ್ಹರು: ಸುಪ್ರೀಂ ಕೋರ್ಟ್

    ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ಪ್ರಕಟಿಸಿದೆ.

    ಮಾಟ,ಮಂತ್ರ ಮತ್ತು ಧಾರ್ಮಿಕ ಬಲತ್ಕಾರದ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್, ಬಿ ಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠವು ಅರ್ಜಿದಾರರಾದ ವಕೀಲ ಅಶ್ವಿನ್ ಉಪಾಧ್ಯಾಯ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣ ಅವರೊಂದಿಗೆ, ಸಂವಿಧಾನ ವಿಧಿ 32ರ ಅಡಿಯಲ್ಲಿ ಯಾವ ರೀತಿಯ ರಿಟ್ ಅರ್ಜಿಯನ್ನು ಹಾಕಿದ್ದೀರಿ, ನೀವು ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ನೀವು ಹೀಗೆ ಅರ್ಜಿ ಹಾಕಿ ವಾದ ಮಾಡುವುದಕ್ಕೆ ನೀವೇ ಹೊಣೆಗಾರರು ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದೆ.

    18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಶಕ್ತನಾಗಿದ್ದು, ಆತನ ಇಚ್ಚೆಯಂತೆ ಧರ್ಮವನ್ನು ಆಯ್ಕೆ ಮಾಡಲು ಬಿಡದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ.

    ಅರ್ಜಿದಾರರಾದ ವಕೀಲ ಅಶ್ವಿನ್ ಉಪಾಧ್ಯಾಯ್ ಧರ್ಮವನ್ನು ಮತಾಂತರ ಮಾಡುವುದು ಧರ್ಮಕ್ಕೆ ಮಾಡುವ ಆಪಾದನೆ ಎಂದು ಪರಿಗಣಿಸಿ ಧರ್ಮ ಪರಿವರ್ತನೆ ಕಾಯ್ದೆಯನ್ನು ಜಾರಿಗೊಳಿಸಿಸಲು ಸಮಿತಿ ರಚಿಸ ಬೇಕೆಂಬ ಕೋರಿಕೆಯನ್ನು ಇಟ್ಟಿದ್ದರು. ಇದನ್ನೆಲ್ಲ ಪರಿಗಣಿಸದ ಕೋರ್ಟ್ ಧಾರ್ಮಿಕ ಮತಾಂತರ ತಡೆ ಸಂವಿಧಾನದ ವಿಧಿ 14, 21 ಮತ್ತು 25ಕ್ಕೆ ಅಪರಾಧ ಮಾಡಿದಂತೆ ಆಗುತ್ತದೆ. ಇದು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ. ಜಾತ್ಯತೀತತೆ ಸಂವಿಧಾನ ಪ್ರಮುಖ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.