Tag: ಜ್ಯಾಕ್ ಮಾ

  • ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

    ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

    ಬೀಜಿಂಗ್: ಚೀನಾದ ಶ್ರೀಮಂತ ಉದ್ಯಮಿ, ಆಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಉದ್ಯೋಗಿಗಳಿಗೆ ಸೆಕ್ಸ್ ಪಾಠ ಮಾಡಿ ಈಗ ಸುದ್ದಿಯಾಗಿದ್ದಾರೆ.

    ಈ ಹಿಂದೆ ಉದ್ಯೋಗಿಗಳಿಗೆ ‘996’ (ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ, 6 ದಿನ) ಕೆಲಸದ ಅವಧಿಯ ಬಗ್ಗೆ ಪಾಠ ಹೇಳಿದ್ದ ಜ್ಯಾಕ್ ಮಾ ಈಗ ಉತ್ತಮ ಜೀವನಕ್ಕೆ ‘669’ (6 ದಿನ, 6 ಬಾರಿ ಎಷ್ಟು ಹೊತ್ತು ಎಂಬುದನ್ನು ನಿರ್ಧರಿಸಿ ಲೈಂಗಿಕ ಕ್ರಿಯೆ) ಸೂತ್ರವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

    54 ವರ್ಷದ ಜ್ಯಾಕ್ ಮಾ ಕಂಪನಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲಸದ ಯಶಸ್ಸಿಗೆ 996 ಸೂತ್ರ ಅಳವಡಿಸಿಕೊಳ್ಳಬೇಕು, ಸಾಂಸಾರಿಕ ಜೀವನದಲ್ಲಿ ಯಶಸ್ಸು ಗಳಿಸಲು 669 ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಜ್ಯಾಕ್ ಮಾ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದ್ದು, 996 ಸೂತ್ರದ ಪ್ರಕಾರ ಕೆಲಸ ಮಾಡಿ ಸುಸ್ತಾದ ಬಳಿಕ ಮನೆಯಲ್ಲಿ 669 ಸೂತ್ರ ಪಾಲಿಸಲು ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿ ಜನ ಟ್ರೋಲ್ ಮಾಡುತ್ತಿದ್ದಾರೆ.