Tag: ಜ್ಞಾನ ಭಾರತಿ ಪೊಲೀಸ್ ಠಾಣೆ

  • ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

    ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

    – ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಸ್ನೇಹಿತೆಯಿಂದ ಹಾಸ್ಟೆಲ್‌ನಲ್ಲಿ ವ್ಯವಸ್ಥೆ
    – ಬೆಂಗಳೂರಿನ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ಘಟನೆ

    ಬೆಂಗಳೂರು: ಯುವಕನೋರ್ವ ಸ್ನೇಹಿತೆಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಕಾಲೇಜು (Gnana Bhrathi College) ಆವರಣದಲ್ಲಿ ನಡೆದಿದೆ.

    ಜ್ಞಾನಭಾರತಿ ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದ. ಬುರ್ಖಾ ಧರಿಸಿದ ಯುವಕನನ್ನ ಮಾಲೂರು (Malur) ಮೂಲದವನು ಎನ್ನಲಾಗಿದೆ. ಯುವಕನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಎರಡನೇ ಬಾರಿ ಹೋಗಿ ರಾಜಣ್ಣ ಕೈಗೆ ಸಿಕ್ಕಿ ಬಿದ್ದ ಹನಿಟ್ರ್ಯಾಪ್‌ ಅಸಾಮಿಗಳು!

    ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು. ವಿದ್ಯಾರ್ಥಿನಿಯರಿರುವ ಹಾಸ್ಟೆಲ್‌ಗೆ ನುಗ್ಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಸ್ನೇಹಿತೆಯಿಂದಲೇ ಬಟ್ಟೆ ತೆಗೆದುಕೊಂಡು ಹಾಸ್ಟೆಲ್‌ಗೆ ನುಗ್ಗಿದ್ದ ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಆಕೆಯೇ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    ಮುಂಜಾಗ್ರತ ಕ್ರಮವಾಗಿ ಹುಡುಗಿಯರ ಹಾಸ್ಟೆಲ್‌ಗೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Gnana Bharathi Police Station) ಪ್ರಕರಣ ದಾಖಲಾಗಿದೆ.

  • ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಬೆಂಗಳೂರು: ಉಡುಪಿ ಮಠದ ಪೇಜಾವರಶ್ರೀ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಶನಿವಾರ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಅನ್ನೋ ಹೇಳಿಕೆ ವಿರುದ್ಧ ಈ ದೂರು ದಾಖಲಾಗಿದೆ.

    ಇದನ್ನೂ ಓದಿ: ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ದೇವಾಲಯ ಸರ್ಕಾರೀಕರಣ ಆಗುತ್ತೆ: ಕಾಂಗ್ರೆಸ್ ವಿರುದ್ಧ ವಿಎಚ್‍ಪಿ ವಾಗ್ದಾಳಿ

    ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಕಾನೂನು, ಬಹುಸಂಖ್ಯಾತರಿಗೆ ಒಂದು ಕಾನೂನಿದೆ ಅದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿದ್ರೆ ತಪ್ಪೇನಿಲ್ಲ ಅಂತಾ ಹೇಳಿಕೆ ನೀಡಿದ್ದರು.

    ಇದನ್ನೂ ಓದಿ: 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    ಈ ಹೇಳಿಕೆಯನ್ನು ಖಂಡಿಸಿ ಇದೀಗ ಬೆಂಗಳೂರು ಸ್ನಾತಕೋತ್ತರ ವಿವಿ ವಿದ್ಯಾರ್ಥಿಗಳು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    https://twitter.com/ShobhaBJP/status/934479849241980928

    https://twitter.com/ShobhaBJP/status/934302285286457345