Tag: ಜ್ಞಾನ ದೀವಿಗೆ

  • ಜ್ಞಾನದೀವಿಗೆ – ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನದೀವಿಗೆ – ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಹಾಸನ: ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮದ ವತಿಯಿಂದ ಹಾಸನದ ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

    ಹಾಸನದ ರಾಮಕೃಷ್ಣ ಚಿಕಿತ್ಸಾಲಯದ ವೈದ್ಯರಾಗಿರುವ ಗುರುರಾಜ್ ಹೆಬ್ಬಾರ್ ಅವರು 35 ಸಾವಿರ ರೂಪಾಯಿ ಧನಸಹಾಯ ಮಾಡಿ ಟ್ಯಾಬ್ ವಿತರಿಸುವಂತೆ ಮನವಿ ಮಾಡಿದ್ರು. ಅದರಂತೆ ಇಂದು 11 ಟ್ಯಾಬ್‍ಗಳನ್ನು ಡಾಕ್ಟರ್ ಗುರುರಾಜ್ ಹೆಬ್ಬಾರ್, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ನೇತೃತ್ವದಲ್ಲಿ ವಿತರಿಸಲಾಯ್ತು.

    ಕೋವಿಡ್ ಸಮಯದಲ್ಲಿ ಟ್ಯಾಬ್ ನೀಡಿ ಹೆಚ್ಚಿನ ಓದಿಗೆ ಸಹಾಯ ಮಾಡಿದ ಪಬ್ಲಿಕ್ ಟಿವಿಗೆ, ದಾನಿಗಳಾದ ಡಾಕ್ಟರ್ ಗುರುರಾಜ ಹೆಬ್ಬಾರ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ರು. ದೊಡ್ಡಗದ್ದವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರೂ ಟ್ಯಾಬ್‍ನ ಸದುಪಯೋಗ ಪಡೆಯಲಿದ್ದಾರೆ.

  • ಜ್ಞಾನ ದೀವಿಗೆ – ಕಂಪ್ಲಿಯ ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್

    ಜ್ಞಾನ ದೀವಿಗೆ – ಕಂಪ್ಲಿಯ ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್

    ಬಳ್ಳಾರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು.

    ಕಂಪ್ಲಿಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಒಟ್ಟು 155 ಮಕ್ಕಳಿಗೆ 78 ಟ್ಯಾಬ್ ಗಳನ್ನು ಹಾಗೂ ಚಿಕ್ಕಜಾಯಿಗನೂರು ಶಾಲೆಯ ಸರ್ಕಾರಿ ಪ್ರೌಢ ಶಾಲೆಯ ಒಟ್ಟು 38 ಮಕ್ಕಳಿಗೆ 19 ಟ್ಯಾಬ್ ಗಳನ್ನು ಹಾಗೂ ಬಾಲಕಿಯರ ಪ್ರೌಢ ಶಾಲೆ ಕಂಪ್ಲಿಯ ಶಾಲೆಯ ಒಟ್ಟು 208 ಮಕ್ಕಳಿಗೆ 104 ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ ಅವರು ಭಾಗವಹಿಸಿ, ಪಬ್ಲಿಕ್ ಟಿವಿ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯ ಹೊಸಪೇಟೆ ಹಾಗೂ ಕಂಪ್ಲಿ ತಾಲೂಕಿನ ಪ್ರತಿ ಮಕ್ಕಳಿಗೆ ಟ್ಯಾಬ್ ಗಳನ್ನು ಪಬ್ಲಿಕ್ ಟಿವಿ ನೀಡಿದೆ. ಅವರ ಈ ಕಾರ್ಯ ಮಕ್ಕಳ ಬಾಳಲ್ಲಿ ಒಂದು ಹೊಸ ಹುಮ್ಮಸ್ಸು ತರಿಸಿದೆ. ಪಬ್ಲಿಕ್ ಟಿವಿ ಅವರು ಮತ್ತಷ್ಟು ಇದೇ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವಂತೆ ಸುನಂದಾ ಹಾರೈಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಟ್ಯಾಬ್ ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದ್ದಿದ್ದು ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೇವೆ ಎಂದು ಮಕ್ಕಳ ಹೇಳಿದ್ದಾರೆ.

  • ಹೊಸಪೇಟೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಹೊಸಪೇಟೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಬಳ್ಳಾರಿ: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಹೊಸಪೇಟೆ ತಾಲೂಕಿನ, ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ 176 ಮಕ್ಕಳಿಗೆ 88 ಟ್ಯಾಬ್ ಗಳನ್ನು ಹಾಗೂ ಜವುಕು ಸರ್ಕಾರಿ ಪ್ರೌಢ ಶಾಲೆಯ 68 ಮಕ್ಕಳಿಗೆ 34 ಟ್ಯಾಬ್ ಗಳನ್ನು ಹಾಗೂ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 114 ಮಕ್ಕಳಿಗೆ ಒಟ್ಟು 57 ಟ್ಯಾಬ್ ಗಳನ್ನು ಉಚಿತವಾಗಿ ನೀಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಟ್ಯಾಬ್ ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಇನ್ನು ಈ ಟ್ಯಾಬ್ ಮೂಲಕ ಕಲಿತು ಉತ್ತಮ ಫಲಿತಾಂಶ ಪಡೆಯುತ್ತೇವೆ. ಟ್ಯಾಬ್ ಕೊಟ್ಟ ಪಬ್ಲಿಕ್ ಟಿವಿ ಹಾಗೂ ಸಚಿವರಿಗೆ ಕೀರ್ತಿ ತರುತ್ತವೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ಬಹಳ ಸಹಕಾರಿಯಾಗಲಿವೆ. ಟ್ಯಾಬ್ ನೀಡಿದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಆನಂದ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ವಿಜಯನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಇಂದು ವಿಜಯನಗರದಲ್ಲಿ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಇದನ್ನೂ ಓದಿ:  ಕೊರೊನಾದಿಂದ ಪತ್ನಿ ಸಾವು- ಮನನೊಂದ ಪತಿ ಮಕ್ಕಳ ಜೊತೆಗೆ ಆತ್ಮಹತ್ಯೆ

    ಹೊಸಪೇಟೆ ತಾಲೂಕಿನ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್‍ಗಳನ್ನು ವಿತರಣೆ ಮಾಡಲಾಯಿತು. ಹೊಸಪೇಟೆ ತಾಲೂಕಿನ, ಬುಕ್ಕಸಾಗರದ ಸರ್ಕಾರಿ ಪ್ರೌಢ ಶಾಲೆಯ 106 ಮಕ್ಕಳಿಗೆ 53 ಟ್ಯಾಬ್‍ಗಳನ್ನು ಹಾಗೂ ಶ್ರೀ ರಾಮರಂಗಾಪುರ ಸರ್ಕಾರಿ ಪ್ರೌಢ ಶಾಲೆಯ 29 ಮಕ್ಕಳಿಗೆ 14 ಟ್ಯಾಬ್‍ಗಳನ್ನು ಹಾಗೂ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 100 ಮಕ್ಕಳಿಗೆ ಒಟ್ಟು 50 ಟ್ಯಾಬ್‍ಗಳನ್ನು ಉಚಿತವಾಗಿ ನೀಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಇಂದು ಒಟ್ಟು 117 ಟ್ಯಾಬ್‍ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೆವೆ. ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ನಮ್ಮಗೆ ಬಹಳ ಸಹಕಾರಿಯಾಗಿದೆ. ನಮ್ಮಗೆ ಟ್ಯಾಬ್ ನೀಡಿದ ಪಬ್ಲಿಕ್ ಟಿವಿಗೆ ಹಾಗೂ ಟ್ಯಾಬ್ ದಾನಿಗಳಾದ ಆನಂದ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ಜ್ಞಾನ ದೀವಿಗೆ- ಕೊಡಗಿನ 471 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನ ದೀವಿಗೆ- ಕೊಡಗಿನ 471 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಮಡಿಕೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಜ್ಞಾನ ದೀವಿಗೆ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 471 ಉಚಿತ ಟ್ಯಾಬ್ ವಿತರಿಸಲಾಯಿತು.

    ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಬ್ಯಾಂಕ್ ನೋಟ್ ಪೇಪರ್ ಮೀಲ್ ವ್ಯವಸ್ಥಾಪಕ ಅನಂತ್ ಹೆಗ್ಡೆ, ಬ್ಯಾಂಕ್ ನೋಟ್ ಪೇಪರ್ ಮಿಲ್ ಕಂಪನಿ ಸೆಕ್ರೆಟರಿ ಲಕ್ಷ್ಮೀಶ್ ಬಾಬು, ರೋಟೆರಿಯನ್ ಗಣಪತಿ ಹಾಗೂ ಸುದೀಪ್ ಅವರು ಟ್ಯಾಬ್ ಗಳನ್ನು ವಿತರಿಸಿದರು. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗಿರುವುದರಿಂದ ಕೇವಲ 10 ಮಕ್ಕಳಿಗೆ ಸಾಕೇಂತಿಕವಾಗಿ ಟ್ಯಾಬ್ ವಿತರಿಸಲಾಯಿತು.

    ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಟ್ಯಾಬ್ ಕಂಡು ಖುಷಿ ಪಟ್ಟರು. ದಿನೇ ದಿನೇ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಶಾಲೆಗಳಿಗೆ ಹೋಗಲು ಭಯ ಪಡುವ ಪರಿಸ್ಥಿತಿ ಇದೆ. ಆನ್‍ಲೈನ್ ತರಗತಿಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ವರ್ಷದ ಪರೀಕ್ಷೆ ಹೇಗೆ ಬರೆಯುವುದು ಎಂಬ ಚಿಂತೆ ಕಾಡುತ್ತಿತ್ತು. ಈಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಆರ್ ಬಿಐ ಅವರ ಸಹಾಯದಿಂದ ಟ್ಯಾಬ್ ನೀಡಿರುವುದು ಸಹಾಯವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತಾನಾಡಿ, ಮಕ್ಕಳ ಭವಿಷ್ಯದ ಚಿಂತನೆ ಮಾಡಿದ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಮಾಧ್ಯಮ ಮನಸು ಮಾಡಿದರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಬಹುದು. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಅರ್.ರಂಗನಾಥ್ ಅವರು ಮಾಡುತ್ತಿರುವ ಸೇವೆ ಇತಿಹಾಸದ ಪುಟದಲ್ಲಿ ಸೇರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಜ್ಞಾನ ದೀವಿಗೆ- ಮೈಸೂರಿನ 1 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನ ದೀವಿಗೆ- ಮೈಸೂರಿನ 1 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯ ಬೆಳಕಾಗಿಸುವ ಜ್ಞಾನ ದೀವಿಗೆ ಕಾರ್ಯಕ್ರಮದ ಭಾಗವಾಗಿ ಇಂದು ಜಿಲ್ಲೆಯ ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಶಾಲೆಗಳ ಒಂದು ಸಾವಿರ ಮಕ್ಕಳಿಗೆ 500 ಟ್ಯಾಬ್ ವಿತರಿಸಲಾಯಿತು.

    ಬಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಞಾನ ದೀವಿಗೆ ಮಹಾ ಅಭಿಯಾನವನ್ನು ನಿಮ್ಮ ಪಬ್ಲಿಕ್ ಟಿವಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುತ್ತಿದೆ. ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಮೈಸೂರು, ಕೊಡಗು ಜಿಲ್ಲೆಯ ಮಕ್ಕಳಿಗೆ ಟ್ಯಾಬ್ ವಿತರಿಸಲು 35 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು.

    ಇಂದು ಹುಣಸೂರು ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಶಾಲೆಯ ಒಟ್ಟು 1 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 500 ಟ್ಯಾಬ್ ನೀಡಲಾಯಿತು. ಪಿರಿಯಾಪಟ್ಟಣದ 8 ಸರ್ಕಾರಿ ಶಾಲೆಯ 500 ಹಾಗೂ ಹುಣಸೂರಿನ 10 ಸರ್ಕಾರಿ ಶಾಲೆಯ 500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

    ಎರಡೂ ಕಡೆ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ.ಮಂಜುನಾಥ್, ಬ್ಯಾಂಕ್ ನೋಟ್ ಪೇಪರ್ ಮಿಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ವಿಶ್ವನಾಥ್, ವ್ಯವಸ್ಥಾಪಕರಾದ ಧರಣೀಕುಮಾರ್, ಅನಂತ್ ಹೆಗ್ಡೆ, ಹಿರಿಯ ರೋಟೆರಿಯನ್ ಎಚ್.ಆರ್.ಕೇಶವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇದೇ ಸಂಸ್ಥೆಯ ಇಚ್ಛೆಯಂತೆ ಏಪ್ರಿಲ್ ಎರಡನೇ ವಾರದಲ್ಲಿ ಇನ್ನೂ ಒಂದು ಸಾವಿರ ವಿದ್ಯಾರ್ಥಿಗಳಿಗೆ 500 ಟ್ಯಾಬ್ ಗಳನ್ನು ಕೊಡಗಿನಲ್ಲಿ ವಿತರಿಸಲಾಗುವುದು. ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಈ ಮಹಾ ಯಜ್ಞಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿ ಸಹಕರಿಸಿದ ಬ್ಯಾಂಕ್ ನೋಟ್ ಪೇಪರ್ ಮಿಲ್ ಗೆ ಹಾಗೂ ಈ ಯಜ್ಞ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಕಾರಣರಾದ ಎಲ್ಲಾ ಮಹಾ ದಾನಿಗಳಿಗೂ ನಾವು ಅಭಾರಿ.

  • ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಇತಿಹಾಸ ಸೃಷ್ಟಿಸಿದೆ: ಗೂಳಿಹಟ್ಟಿ ಶೇಖರ್

    ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಇತಿಹಾಸ ಸೃಷ್ಟಿಸಿದೆ: ಗೂಳಿಹಟ್ಟಿ ಶೇಖರ್

    ಚಿತ್ರದುರ್ಗ: ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಅಭಿಯಾನದ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಮೆಚ್ಚುಗೆ ಸೂಚಿಸಿದರು.

    ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಟ್ಯಾಬ್ ವಿತರಣೆ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನಡೆಯಿತು. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಶಿಕ್ಷಣ ಪ್ರೇಮಿಗಳ ನೇತೃತ್ವದಲ್ಲಿ ಗೂಳಿಹಟ್ಟಿ ಪ್ರೌಢಶಾಲೆ ಮತ್ತು ನಾಗತಿಹಳ್ಳಿ ಸರ್ಕಾರಿ ಶಾಲೆಯ 80 ಜನ ವಿದ್ಯಾರ್ಥಿಗಳಿಗೆ 40 ಟ್ಯಾಬ್ ಗಳನ್ನು ಇಂದು ವಿತರಿಸಲಾಯಿತು.

    ಟ್ಯಾಬ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್ ಅವರು, ಕೋವಿಡ್ ನಿಂದಾಗಿ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ತುಂಬಾ ಹಿನ್ನಡೆಯಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ರಾಜ್ಯದ ಇತಿಹಾಸದಲ್ಲಿ ಉಳಿಯುವಂತಹ ದೊಡ್ಡ ಅಭಿಯಾನ ಮಾಡಿದೆ. ಪಾಠ ಕೇಳಲಾಗದೇ ಗೊಂದಲಕ್ಕೀಡಾಗಿದ್ದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಯಶಸ್ವಿಯಾಗಿದೆ. ಅವರಿಗೆ ಹೊಸದುರ್ಗ ಕ್ಷೇತ್ರ ಹಾಗೂ ಗೂಳಿಹಟ್ಟಿ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ, ಮಾತನಾಡಿದ ದಾನಿಗಳಲ್ಲೊಬ್ಬರಾದ ಹೊಸದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯ್ಯಪ್ಪ ಸಹ, ಕೋವಿಡ್ ಮಹಾ ಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಮೂಲಕ ಪಬ್ಲಿಕ್ ಟಿವಿ ದೊಡ್ಡ ಕ್ರಾಂತಿ ಮಾಡ್ತಿದೆ. ಕರ್ನಾಟಕ ರಾಜ್ಯಾದ್ಯಂತ ಸಮರೋಪಾದಿಯಾಗಿ ನಡೆಯುತ್ತಿರುವ ಈ ಟ್ಯಾಬ್ ವಿತರಣೆ ಕಾರ್ಯ ಶ್ಲಾಘನೀಯ ಎಂದರು.

    ವಿದ್ಯಾರ್ಥಿಗಳು ಕೂಡ ಟ್ಯಾಬ್ ಪಡೆದು ಸಂತಸದಿಂದ ಪುಳಕಿತರಾಗಿದ್ದರು. ಈ ವೇಳೆ ಅವರ ಅನಿಸಿಕೆ ತಿಳಿಸಿದ ವಿದ್ಯಾರ್ಥಿಗಳಾದ ಅವಿನಾಶ್, ವಿನಯ್ ಮತ್ತು ಪೂಜಾ ಕೋವಿಡ್ ಸಂಕಷ್ಟದ ವೇಳೆ ನಾವು ಆನ್‍ಲೈನ್ ಪಾಠದಿಂದ ವಂಚಿತರಾಗಿದ್ದೇವು. ಶಾಲೆಯಲ್ಲಿ ಪಾಠ ಕೇಳಲಾಗದೇ ಆತಂಕಗೊಂಡಿದ್ದೇವು. ಅಲ್ಲದೇ ಆನ್‍ಲೈನ್ ಪಾಠ ಕೇಳಲು ಕರೆಂಟ್ ಸಮಸ್ಯೆ, ಕೇಬಲ್ ಸಮಸ್ಯೆ ಹಾಗು ನೆಟ್ ವರ್ಕ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ಪಾಠ ಕೇಳದೇ ಪರೀಕ್ಷೆ ಹೇಗೆ ಬರೆಯೋದೆಂಬ ಭಯ ನಮ್ಮಲ್ಲಿತ್ತು. ಇಂತಹ ಸಮಯದಲ್ಲಿ ಪಬ್ಲಿಕ್ ಟಿವಿ ನಮಗೆ ಟ್ಯಾಬ್ ವಿತರಿಸಿ ಉತ್ತಮಕಾರ್ಯ ಮಾಡಿದೆ. ಆದ್ದರಿಂದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಶಾಸಕ ಶೇಖರ್ ಅವರಿಗೆ ಧನ್ಯವಾದ ತಿಳಿಸಿದರು. ಜೊತೆಗೆ ನಾವುಗಳು ಈ ಟ್ಯಾಬ್ ಗಳ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತೇವೆ. ಶಾಲೆಗೆ, ಶಿಕ್ಷಕರಿಗೆ ಹಾಗೂ ನಮಗೆ ನೆರವಾದ ಎಲ್ಲರಿಗೂ ಒಳ್ಳೆಯ ಹೆಸರು ತರುತ್ತೇವೆಂದು ಪ್ರಮಾಣ ಮಾಡಿದರು.

    ಕಾರ್ಯಕ್ರಮದಲ್ಲಿ ಎಸ್.ಡಿ ಎಂಸಿ ಅಧ್ಯಕ್ಷ ಸಿದ್ದಪ್ಪ, ತಾಪಂ ಸದಸ್ಯ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರಾದ ಸೂರಜ್ ಕುಮಾರ್ ಹಾಗೂ ತಿಪ್ಪೇಸ್ವಾಮಿ, ಶಿಕ್ಷಕಿಯರಾದ ಹೇಮಲತ, ಮಮತ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಕಾರವಾರದಲ್ಲಿ 123 ಮಕ್ಕಳಿಗೆ ಟ್ಯಾಬ್ ವಿತರಣೆ- ಪ್ರತಿ ಶಾಲೆಗೊಂದು ವೃಕ್ಷ ಸಂಕಲ್ಪ

    ಕಾರವಾರದಲ್ಲಿ 123 ಮಕ್ಕಳಿಗೆ ಟ್ಯಾಬ್ ವಿತರಣೆ- ಪ್ರತಿ ಶಾಲೆಗೊಂದು ವೃಕ್ಷ ಸಂಕಲ್ಪ

    ಕಾರವಾರ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿ.ವಿ ಮತ್ತು ರೋಟರಿ ಸಹಯೋಗದೊಂದಿಗೆ ‘ಜ್ಞಾನ ದೀವಿಗೆ’ ಕಾರ್ಯಕ್ರಮದಡಿ ಕಾರವಾರ, ಅಂಕೋಲಾ, ಕುಮಟಾ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಅಲ್ಲದೆ ಶಾಲೆಗಳಿಗೆ ಸಸಿ ನೀಡುವ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು.

    ಜಿಲ್ಲಾ ರಂಗಮಂದಿರದಲ್ಲಿ ಇಂದು ಕಾರ್ಯಕ್ರಮ ನಡೆದಿದ್ದು, ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ.ಎಸ್.ನಾಯ್ಕ, ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ದೇಣಿಗೆ ನೀಡಿದ್ದು, ಒಟ್ಟು ಏಳು ಶಾಲೆಯ 123 ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದ ಉದ್ಘಾಟನೆ ಹಾಗೂ ಟ್ಯಾಬ್ ವಿತರಣೆಯನ್ನು ದಾನಿಗಳಾದ ಕಾರವಾರ- ಅಂಕೋಲ ಶಾಸಕಿ ರೂಪಾಲಿ.ಎಸ್.ನಾಯ್ಕ ಮಾಡಿದರು. ಟ್ಯಾಬ್ ದಾನಿಗಳಾದ ಶ್ರೀನಿವಾಸ್ ಹೆಬ್ಬಾರ್ ಅವರು ಕುಮಟಾ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

    ಕಾರ್ಯಕ್ರಮದಲ್ಲಿ ಉ.ಕ.ಸಹಕಾರ ಮೀನುಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪ ನಿರ್ದೇಶಕ ಹರೀಶ್ ಗಾಂವ್ಕರ್, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶ್ರೀಕಾಂತ್ ಹೆಗಡೆ, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ.ಎಂ ಉಪಸ್ಥಿತರಿದ್ದರು.

    ಶಾಲೆಗೊಂದು ವೃಕ್ಷ ಅಭಿಯಾನ
    ಪಬ್ಲಿಕ್ ಟಿವಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರತಿ ಶಾಲೆಗಳಿಗೊಂದು ವೃಕ್ಷ ಎನ್ನುವ ಉದ್ದೇಶದಿಂದ ಇಂದು ಆಯ್ಕೆಯಾದ ಶಾಲೆಗಳಿಗೆ ಸಸಿಗಳನ್ನು ವಿತರಿಸಲಾಯಿತು. ಜೊತೆಗೆ ಜಿಲ್ಲಾ ರಂಗಮಂದಿರ ಸುತ್ತಲೂ ಆರು ಸಸಿಗಳನ್ನು ನೆಡುವುದರ ಜೊತೆಗೆ ಇವುಗಳ ಪೋಷಣೆಯ ಹೊಣೆಯನ್ನು ಪಬ್ಲಿಕ್ ಟಿವಿ ಕಾರವಾರ ತಂಡ ಹೊತ್ತುಕೊಂಡಿದ್ದು, ಪ್ರತಿ ಶಾಲೆಯಲ್ಲಿ ತಲಾ ಎರಡು ಗಿಡದಂತೆ ಅವುಗಳ ಪೋಷಣೆಯ ಹೊಣೆಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ವಹಿಸಿಕೊಂಡರು. ಈ ಮೂಲಕ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

  • ಕೋಲಾರದಲ್ಲಿ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಕೋಲಾರದಲ್ಲಿ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಕೋಲಾರ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಜ್ಞಾನ ದೀವಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60 ವಿದ್ಯಾರ್ಥಿಗಳಿಗೆ 29 ಟ್ಯಾಬ್‍ಗಳನ್ನು ವಿತರಿಸಲಾಯಿತು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು 29 ಟ್ಯಾಬ್‍ಗಳನ್ನು ದಾನವಾಗಿ ನೀಡಿದ್ದು, ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಭಾಗವಹಿಸಿ 60 ಮಕ್ಕಳಿಗೆ 29 ಟ್ಯಾಬ್‍ಗಳನ್ನ ಗೋವಿಂದಗೌಡ ಸೇರಿದಂತೆ ಗಣ್ಯರು ವಿತರಿಸಿದರು. ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60 ಮಕ್ಕಳಿಗೆ ದಾನಿಗಳಾದ ಗೊವಿಂದಗೌಡ ಅವರ ಕೈಯಲ್ಲಿ 29 ಟ್ಯಾಬ್‍ಗಳನ್ನ ವಿತರಣೆ ಮಾಡಲಾಯಿತು. ಅಷ್ಟೇ ಉತ್ಸಾಹದಿಂದ ಮಕ್ಕಳು ಟ್ಯಾಬ್‍ಗಳನ್ನ ಪಡೆದು ಉತ್ತಮ ಅಭ್ಯಾಸ ಮಾಡಿ ಶಾಲೆಗೆ ಹಾಗೂ ಪೋಷಕರಿಗೆ ಉತ್ತಮ ಹೆಸರು ತರುವುದಾಗಿ ತಿಳಿಸಿದರು.

  • ಹೂಸೂರು ಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಹೂಸೂರು ಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಹುಬ್ಬಳ್ಳಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಜ್ಞಾನ ದೀವಿಗೆ ಅಭಿಯಾನ ನಿರಂತರವಾಗಿ ಸಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಂದು ಸಹ ನಗರದ ಹೊಸೂರು ಸರ್ಕಾರಿ ಶಾಲೆ ನಂ-16ರ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ದಾನಿಗಳು ಟ್ಯಾಬ್ ವಿತರಿಸಿದರು.

    ಹುಬ್ಬಳ್ಳಿಯ ಉದ್ಯಮಿ ಹಾಗೂ ಮಜೇಥೀಯಾ ಫೌಂಡೇಶನ್‌ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ ಹಾಗೂ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳನ್ನ ಹೂಸೂರು ಸರ್ಕಾರಿ ಶಾಲೆಯ 39 ಮಕ್ಕಳಿಗೆ ವಿತರಿಸಲಾಯಿತು.

    ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಜೇಥೀಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ, ಮಜೇಥೀಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ 19 ಟ್ಯಾಬ್ ಗಳನ್ನ ವಿತರಿಸಿದರು.

    ಟ್ಯಾಬ್ ವಿತರಿಸಿ ಮಾತನಾಡಿದ ದಾನಿಗಳಾದ ಜೀತೇಂದ್ರ ಮಂಜೇಂಥಿಯಾ, ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥರು ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಮಕ್ಕಳ ಜ್ಞಾನಾರ್ಜನೆ ಅಭಿಯಾನ ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ಹೀಗಾಗಿ ಪಬ್ಲಿಕ್ ಟಿವಿಯ ಅಭಿಯಾನಕ್ಕೆ ನಮ್ಮಿಂದ ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡಿಸಲು ಕೈ ಜೋಡಿಸಿದ್ದೇವೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಂದು ಸಮಾಜಿಕ ಕಳಕಳಿ ಹೊಂದಿರುವ ಪಬ್ಲಿಕ್ ಟಿವಿ ಮಾಡುತ್ತಿದೆ. ಪಬ್ಲಿಕ್ ಟಿವಿಯ ಈ ಅಭಿಯಾನದಿಂದ ಮಕ್ಕಳ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ಪಬ್ಲಿಕ್ ಟಿವಿ ಅಭಿಯಾನದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಕಷ್ಟು ನೆರವು ದೊರೆತಿದೆ ಎಂದರು.

    ಟ್ಯಾಬ್ ವಿತರಣೆ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹೂಸೂರು ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮಜೇಥೀಯಾ ಫೌಂಡೇಶನ್‌ ಪದಾಧಿಕಾರಿಗಳು ಭಾಗವಹಿಸಿದ್ದರು.