ಕಲಬುರಗಿ: ಬಹುಮನಿ ಕೋಟೆಯಲ್ಲಿರುವ ಸೋಮೇಶ್ವರ ದೇವಸ್ಥಾನವನ್ನ (Someshwara Temple) ಪುನರ್ ನಿರ್ಮಾಣ ಮಾಡುವಂತೆ ಹಿಂದೂ ಸಂಘಟನೆಗಳು (Hindu Organisations) ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ.
ಜ್ಞಾನವಾಪಿ ಮಸೀದಿಯ (Gnanavapi Masjid) ನಂತರ ಕಾಲಗರ್ಭದಲ್ಲಿ ಅಡಗಿ ಹೋಗಿದ್ದ ಮತ್ತೊಂದು ದೇವಸ್ಥಾನದ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಕಲಬುರಗಿಯ ಬಹುಮನಿ ಕೋಟೆಯಲ್ಲಿರುವ (Bahumani Fort) ಸೋಮೇಶ್ವರ ದೇವಸ್ಥಾನವನ್ನ ಪುನರ್ ನಿರ್ಮಾಣ ಮಾಡುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ. ಇದನ್ನು ಓದಿ: ದೆಹಲಿಯಲ್ಲಿ ಅನುದಾನ ಕದನ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದಿಂದ ಪ್ರತಿಭಟನೆ
ಬಹುಮನಿ ಸುಲ್ತಾನರ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನವಿದ್ದು, ಅದು ಸಂಪೂರ್ಣವಾಗಿ ನಶಿಸಿ ಹೋಗಿದೆ. ಬಹುಮನಿ ಸುಲ್ತಾನರ ಆಳ್ವಿಕೆ ಸಂದರ್ಭದಲ್ಲಿ ಕೋಟೆಯಲ್ಲಿದ್ದ ಸೋಮೇಶ್ವರ ದೇವಸ್ಥಾನವನ್ನು ಕೆಡವಿ ಬಿಟ್ಟಿದ್ದಾರೆ. ಆದರೆ ಅಲ್ಲಿ ದೇವಸ್ಥಾನ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ. ಹಾಗಾಗಿ ಶಿವರಾತ್ರಿ ಹಬ್ಬಕ್ಕೂ ಮೊದಲೇ ಅ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಪೂಜೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ ಕೇಳಿಬಂದಿದೆ. ಇದನ್ನು ಓದಿ:ಪ್ರೀತಿಸಿ ಮದ್ವೆಯಾಗಿ ತಿಂಗಳೊಳಗೆ ತಾಳಿ ಬಿಚ್ಚಿಟ್ಟು ಹೋದ ಪತ್ನಿ – ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ
ಈ ಕುರಿತು ಹಿಂದೂ ಜಾಗೃತಿ ಸೇನೆಯ ಲಕ್ಷ್ಮಿಕಾಂತ್ ಸ್ವಾಧಿ ಮಾತನಾಡಿ, ಇನ್ನೂ ಬಹುಮನಿ ಕೋಟೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಹಿಂದೂ ಜಾಗೃತಿ ಸೇನೆ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿದೆ. ಆದರೆ ಇದೀಗ ಅದಕ್ಕೆ ಮತ್ತೆ ಕೂಗು ಹೆಚ್ಚಾಗಿದೆ. ಕೋಟೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವಂತೆ ಮತ್ತೊಂದು ಬಾರಿ ಜಿಲ್ಲಾಡಳಿತದ ಜೊತೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತವೇ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡಲಿ. ಇಲ್ಲದೆ ಇದ್ದರೇ ನಾವೇ ದೇವಸ್ಥಾನ ಸ್ವಚ್ಛಗೊಳಿಸಿ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ: ಕಾಸ್ಮೆಟಿಕ್ ಸರ್ಜರಿಗೆ ಬಂದವಳಿಂದ ಲೂಟಿ – ವೈದ್ಯನಿಗೆ 6 ಕೋಟಿ ಪಂಗನಾಮ
ನವದೆಹಲಿ: ಜ್ಞಾನವ್ಯಾಪಿ ಮಸೀದಿ (Gyanvapi Mosque) ಆವರಣದಲ್ಲಿ ಸೀಲ್ ಆಗಿರುವ ವಜುಖಾನ (Wazu Khana) ಪ್ರದೇಶವನ್ನು ಡಿ-ಸೀಲ್ ಮಾಡುವಂತೆ ಹಿಂದೂ ಪರ ವಕೀಲರು ಸುಪ್ರೀಂಕೋರ್ಟಿಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಮಸೀದಿ ಸ್ಥಳದಲ್ಲಿ 17ನೇ ಶತಮಾನಕ್ಕೂ ಮುನ್ನ ಮಂದಿರ ಇತ್ತು ಎಂದು ಪುರಾತತ್ವ ಇಲಾಖೆ ವರದಿ ನೀಡಿದ ಬೆನ್ನಲ್ಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಪುರಾತತ್ವ ಇಲಾಖೆಯ ಸರ್ವೆ (Archaeological Survey of India) ಪ್ರಕಾರ, 17ನೇ ಶತಮಾನದಲ್ಲಿ ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು, ಈಗಿನ ವಜುಖಾನದಲ್ಲಿ ಇರುವುದು ಶಿವಲಿಂಗ ಎನ್ನುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್ ಈ ಹಿಂದೆ ಅದನ್ನು ಸೀಲ್ ಮಾಡಿದೆ. ಪುರಾತತ್ವ ವರದಿ ಆಧಾರದ ಮೇಲೆ ಡಿ-ಸೀಲ್ ಮಾಡಬೇಕು ಮತ್ತು ಅಲ್ಲಿ ಸೇವಾ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್-10 ಟಿಪ್ಸ್!
ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು ಎನ್ನುವುದು ಪುರಾತತ್ವ ಇಲಾಖೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಮಸೀದಿಯನ್ನು ಹಿಂದೂ ದೇವಾಲಯ ಎಂದು ಘೋಷಿಸಿ ಅದನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ವಿಹೆಚ್‍ಪಿ ಆಗ್ರಹಿಸಿದೆ. ಎಎಸ್‍ಐ (ASI) ಒದಗಿಸಿದ ಮಾಹಿತಿಗಳ ಪ್ರಕಾರ, 1947 ರ ಆಗಸ್ಟ್ 15 ರಂದು ಈ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಅಸ್ತಿತ್ವದಲ್ಲಿದೆ ಮತ್ತು ಪ್ರಸ್ತುತ ಹಿಂದೂ ದೇವಾಲಯವಾಗಿದೆ ಎಂದು ಸಾಬೀತುಪಡಿಸುತ್ತದೆ ಎಂದು ವಿಎಚ್‍ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ಆದ್ದರಿಂದ 1991ರ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 4ರ ಪ್ರಕಾರ, ಈ ರಚನೆಯನ್ನು ಹಿಂದೂ ದೇವಾಲಯವೆಂದು ಘೋಷಿಸಬೇಕು, ಜ್ಞಾನವಾಪಿ ಮಸೀದಿಯನ್ನು ಮತ್ತೊಂದು ಸೂಕ್ತ ಸ್ಥಳಕ್ಕೆ “ಗೌರವಯುತವಾಗಿ” ಸ್ಥಳಾಂತರಿಸಲು ಮತ್ತು ಕಾಶಿ ವಿಶ್ವನಾಥನ ಮೂಲ ಸ್ಥಳವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಲು ಒಪ್ಪಿಕೊಳ್ಳುವಂತೆ ಮಸೀದಿಯನ್ನು ನಿರ್ವಹಿಸುವ ಇಂತೇಜಾಮಿಯಾ ಸಮಿತಿಗೆ ವಿಹೆಚ್‍ಪಿ (Vishwa Hindu Parishad) ಒತ್ತಾಯಿಸಿದೆ.
ಲಕ್ನೋ: ವಾರಣಾಸಿ ಜ್ಞಾನವಾಪಿ ಮಸೀದಿಯ (Gyanvapi Masjid) ಒಳಗಡೆ ಪೂಜೆ ಮಾಡುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು (5 Hindu Women) ಸಲ್ಲಿಸಿದ್ದ ಸಿವಿಲ್ ಅರ್ಜಿಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾಗೊಳಿಸಿದೆ.
ರಾಖಿಸಿಂಗ್ ಸೇರಿ ಐವರು ಮಹಿಳೆಯರು ಮಸೀದಿ ಆವರಣದಲ್ಲಿ ಇದೆ ಎನ್ನಲಾಗುತ್ತಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯ 2022ರ ಸೆಪ್ಟೆಂಬರ್‌ನಲ್ಲಿ ಈ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು (Verdict) ಪ್ರಕಟಿಸಿತ್ತು.
ಈ ಆದೇಶವನ್ನು ಅಂಜುಮಾನ್ ಇಂತಾಜಾಮಿಯಾ ಮಸೀದಿ ಸಮಿತಿ (Anjuman Intezamia Masjid Committee) ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ವಾದ ಪ್ರತಿವಾದವನ್ನು ಅಲಿಸಿದ್ದ ಜೆಜೆ ಮುನೀರ್ ಅವರಿದ್ದ ಪೀಠ ಕಳೆದ ಡಿಸೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
ಹಿಂದೂ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ಹರಿಶಂಕರ್ ಜೈನ್ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿ, ಇದೊಂದು ದೊಡ್ಡ ಗೆಲುವು ಮತ್ತು ಮೈಲಿಗಲ್ಲು. ಪ್ರಸ್ತುತ ಇರುವ ರಚನೆಯನ್ನು ತೆಗೆದು ನಾವು ಅಲ್ಲಿ ಭವ್ಯವಾದ ಶಿವ ದೇವಾಲಯವನ್ನು ನಿರ್ಮಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!
ಈ ಹಿಂದೆ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲ್ಲೇ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.
ಏನಿದು ಪ್ರಕರಣ?
ಈ ಹಿಂದೆ ಕೆಳ ಹಂತದ ಕೋರ್ಟ್ ಮಸೀದಿಯಲ್ಲಿ ಉತ್ಖನನಕ್ಕೆ ಅನುಮತಿ ನೀಡಿತ್ತು. ಉತ್ಖನನ ವೇಳೆ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಮತ್ತು ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಬಳಿಕ ಹಿಂದೂ ಧಾರ್ಮಿಕ ಕುರುಹುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅನುಮತಿ ಕೋರಿ ಸೀತಾ ಸಾಹು ಸೇರಿ, ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಐವರ ಅರ್ಜಿಗಳು ವಿಚಾರಣೆಗೆ ಯೋಗ್ಯವೇ ಎಂಬುದನ್ನು ಮೊದಲು ನಿರ್ಧರಿಸಿ ಎಂದು ವಾರಣಾಸಿ ಕೋರ್ಟ್‍ಗೆ ನಿರ್ದೇಶನ ನೀಡಿತ್ತು.
ಮುಸ್ಲಿಮ್ ಸಮಿತಿಯ ವಾದ ಏನಿತ್ತು?
ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ. 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ಕಾಯ್ದೆಯ ಅನ್ವಯ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿ 16-17 ಶತಮಾನದ ಪುರಾತನ ಧಾರ್ಮಿಕ ಪ್ರದೇಶವಾಗಿರುವ ಈ ಹಿನ್ನಲೆ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ಪೂಜೆಗೆ ಅವಕಾಶ ನೀಡಿದ್ದಲ್ಲಿ ದೇಶದಲ್ಲಿ ಇಂತಹ ಹತ್ತಾರು ವಿವಾದಾತ್ಮಕ ಪ್ರದೇಶಗಳಲ್ಲೂ ಪೂಜೆ ಅವಕಾಶ ಕೇಳುವ ಸಾಧ್ಯತೆಗಳಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಝುಖಾನದಲ್ಲಿ ಪತ್ತೆಯಾಗಿರುವುದು ನೀರಿನ ಕಾರಂಜಿ ಮತ್ತು ಅಲ್ಲಿ ಯಾವುದೇ ಶೃಂಗಾರ ಗೌರಿ ಮೂರ್ತಿಗಳಿಲ್ಲ, ಅದು ಹಳೆಯ ವಾಸ್ತು ಶಿಲ್ಪ ಶೈಲಿಯಾಗಿದೆ ಎಂದು ವಾದ ಮಂಡಿಸಿದ್ದರು.
ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದ್ದೇನು?
ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ.
ಅರ್ಜಿದಾರರು ಇಲ್ಲಿ ಪೂಜೆ ಮಾಡಲು ಮಾತ್ರ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಈ ವಿವಾದಿತ ಜಾಗದ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಬೇಕೆಂದು ಕೇಳಿಲ್ಲ. ಹೀಗಾಗಿ ಇದು ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಪೂಜೆಗೆ ಮಾತ್ರ ಸೀಮಿತವಾಗಿ ಅರ್ಜಿ ಸಲ್ಲಿಸಿದರಿಂದ ಇದು ಮೂಲಭೂತ ಹಕ್ಕು ಜೊತೆಗೆ ಇದು ಸಾಂಪ್ರದಾಯಿಕ ಧಾರ್ಮಿಕ ಹಕ್ಕು ಆಗಿದೆ.
ಸುಪ್ರೀಂನಲ್ಲಿದೆ ಅರ್ಜಿ
ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ.
ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನದ ಜಾಗಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ ಈ ಕಾಯ್ದೆ ರೂಪಿಸುವಾಗ ಕೇಂದ್ರ ಸರ್ಕಾರ ಆಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಲಕ್ನೋ: ಜ್ಞಾನವ್ಯಾಪಿ ಮಸೀದಿ ಸಮೀಕ್ಷೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಅರ್ಹವಾಗಿದೆ ಎಂದು ಮಥುರಾ ಜಿಲ್ಲಾ ನ್ಯಾಯಾಲಯ ಹೇಳಿದೆ.
ಮಥುರಾ ಶ್ರೀಕೃಷ್ಣನ ಜನ್ಮ ಸ್ಥಳವಾಗಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್ ವಿಚಾರಣೆಗೆ ಸುಪ್ರೀಂ ತಡೆ
ವಕೀಲರಾದ ರಂಜನಾ ಅಗ್ನಿಹೋತ್ರಿ ಸೇರಿ ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಇವರು ಅಷ್ಟೇ ಅಲ್ಲದೇ ಇನ್ನು ಅನೇಕ ಮಂದಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಏನಿದೆ?
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀ ಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ನವದೆಹಲಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೆ ನಡೆಸಲು ತಡೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠದಲ್ಲಿ ನಡೆಯಿತು.
ಈ ಪ್ರಶ್ನೆಗೆ ಉತ್ತರ ನೀಡಿದ ಉತ್ತರಪ್ರದೇಶ ಸರ್ಕಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ನೋಡಿಲ್ಲ ಎಂದು ಉತ್ತರಿಸಿದರು. ವರದಿಯನ್ನು ನೋಡಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ವಿಚಾರಣೆ ನಡೆಸಿದ ಕೋರ್ಟ್, ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು. ನಮಾಜ್ ಮಾಡಲು ಆಗಮಿಸುವ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿತು. ಕೋರ್ಟ್ ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿದೆ.
ಸೋಮವಾರ ಏನಾಗಿತ್ತು?
ವಾರಣಾಸಿ ಕೋರ್ಟ್ ಸೂಚನೆ ಮೇರೆಗೆ ಕೋರ್ಟ್ ಕಮೀಷನರ್ ನೇತೃತ್ವದಲ್ಲಿ ಮೂರು ದಿನ ನಡೆದ ಜ್ಞಾನವ್ಯಾಪಿ ಮಸೀದಿ ವಿಡಿಯೋ ಸರ್ವೇ ಸೋಮವಾರಕ್ಕೆ ಮುಕ್ತಾಯವಾಗಿತ್ತು. ಮಸೀದಿಯ ಕೊಳದಲ್ಲಿ 12 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿತ್ತು. ಇದು ತಿಳಿಯುತ್ತಲೇ ಶಿವಲಿಂಗಕ್ಕೆ ರಕ್ಷಣೆ ಕಲ್ಪಿಸಬೇಕೆಂದು ಕೋರಿ ವಕೀಲರೊಬ್ಬರು ಕಾಶಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಈ ಕೂಡಲೇ ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ, ಶಿವಲಿಂಗ ಪತ್ತೆಯಾದ ಪ್ರದೇಶಕ್ಕೆ ಯಾರು ಹೋಗದಂತೆ ನಿಷೇಧ ವಿಧಿಸುವಂತೆಯೂ ಆದೇಶ ನೀಡಿದೆ. ಅಗತ್ಯ ಭದ್ರತೆ ಒದಗಿಸುವಂತೆಯೂ ಸೂಚನೆ ನೀಡಿತ್ತು.
ಆದೇಶದ ಬೆನ್ನಲ್ಲೇ 30*30 ಅಳತೆಯ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಆ ಪ್ರದೇಶದ ಮೂರು ದ್ವಾರಗಳನ್ನು ಬಂದ್ ಮಾಡಲಾಗಿದೆ. ಈ ಕೊಳದ ನೀರನ್ನು ಮುಸ್ಲಿಮರು ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಕೈಕಾಲು ತೊಳೆಯಲು ಬಳಸ್ತಿದ್ದರು. ಪ್ರಾರ್ಥನೆಗೆ ಬರುವವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಉಡುಪಿ: ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಸಮಾಜದ ಮೇಲೆ ಎಷ್ಟೋ ಆಕ್ರಮಣಗಳಾಗಿದೆ. ಈಗಲೂ ಆಕ್ರಮಣ ಮುಂದುವರಿಯುತ್ತಿದೆ. ಆಕ್ರಮಣ ಮಾಡಿ ದೇಗುಲ ಕೆಡವಿ ಮಸೀದಿಗಳನ್ನು ಕಟ್ಟಿದ ಜಾಗ ಎಷ್ಟು ಸ್ವಚ್ಛ ಆಗಬೇಕೋ ಅಷ್ಟೂ ಸ್ವಚ್ಛ ಆಗಬೇಕು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಜ್ಞಾನವ್ಯಾಪಿ ಮಸೀದಿ ಮತ್ತು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಕ್ರಮಣಗಳ ಸ್ವಚ್ಛತೆ ಭಾರತ ದೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಆಗಬೇಕು ಎಂದು ಬಯಸುತ್ತೇನೆ. ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಬಗ್ಗೆ ನನಗೆ ಹೆಚ್ಚಿನ ಮಾಹಿತಿಗಳಿಲ್ಲ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಆದರೆ, ಈ ವಿಚಾರ ಕೋರ್ಟ್‍ನಲ್ಲಿ ತೀರ್ಮಾನ ಆಗಬೇಕು. ಅದು ದೇವಸ್ಥಾನ ಹೌದು ಅಂತ ಕೋರ್ಟ್ ತೀರ್ಮಾನ ಮಾಡಿದರೆ ಅದು ಹೌದು. ಅದು ದೇವಸ್ಥಾನ ಅಲ್ಲ ಎಂದು ಕೋರ್ಟ್ ತೀರ್ಮಾನಿಸಿದರೆ ಅದು ಅಲ್ಲ ಎಂದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ
ಪ್ರಸಕ್ತ ಬೆಳವಣಿಗೆಗಳಲ್ಲಿ ಸಾಮರಸ್ಯ ಕದಡುವ ಪ್ರಶ್ನೆಯೇ ಇಲ್ಲ. ಕೋರ್ಟ್ ತೀರ್ಮಾನಕ್ಕೆ ಯಾರೂ ವಿರೋಧಗಳನ್ನು ವ್ಯಕ್ತಪಡಿಸಬಾರದು. ಸಮಾಜದಲ್ಲಿ ಸೌಹಾರ್ದ ಬೆಳೆಯಬೇಕು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಹೊಣೆಯಾಗಬೇಕಾಗಿಲ್ಲ. ಯಾರೇ ಆಗಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಧಾರ್ಮಿಕ ಕೇಂದ್ರ ಬಿಟ್ಟುಕೊಡಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನೇಪಾಳ ಪ್ರವಾಸ – ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ, ಬುದ್ಧನಿಗೆ ಭಕ್ತಿಭಾವದ ನಮನ
ಲಕ್ನೋ: ವಾರಣಾಸಿ ನ್ಯಾಯಾಲಯವು ಇತ್ತೀಚಿಗೆ ಜ್ಞಾನವ್ಯಾಪಿ ಮಸೀದಿ ಸಂಕೀರ್ಣ ವೀಡಿಯೋ ಗ್ರಾಫಿಕ್ ಸಮೀಕ್ಷೆಗೆ ಆದೇಶ ನೀಡಿದೆ. ಇದು ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ವಾಕ್ಸಮರ ಕಾರಣವಾಗಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಂಗೀತ್ ಸೋಮ್ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಾರಾಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯನ್ನು ಬಾಬ್ರಿ ಮಸೀದಿಯಂತೆ ಕೆಡವಲಾಗುವುದು. ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ. ಎಲ್ಲವನ್ನೂ ಕೆಡವುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!
ಮೀರತ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಂಗೀತ್ ಸೋಮ್, 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈಗ ಜ್ಞಾನವ್ಯಾಪಿ ಮಸೀದಿಯ ಸರದಿ. 2022ರಲ್ಲಿ ನಾವು ಈ ಮಸೀದಿಯನ್ನು ಕೆಡವುತ್ತೇವೆ ಎಂದಿದ್ದಾರೆ.
ಮುಸ್ಲಿಂ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನು ಹಿಂಪಡೆಯುವ ಸಮಯ ಈಗ ಬಂದಿದೆ. ಬಾಬರಿ ಮಸೀದಿ ಕೆಡವಿದ ದಿನವೇ ಮುಸ್ಲಿಮರಿಗೆ ಇದು ಗೊತ್ತಿರಬೇಕಿತ್ತು. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕಿತ್ತು. ನಾವು ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು
ಇದು 1992ರ ಯುಗವಲ್ಲ, 2022ರ ಯುಗ ದೇಶದ ಯುವಶಕ್ತಿ ಅಂದಿಗಿಂತಲೂ 2 ಪಟ್ಟು ಹೆಚ್ಚಾಗಿದೆ. ಜೊತೆಗೆ ಇದು ಮತ್ತೊಂದು ನಿರ್ಧಾರ ಕೈಗೊಳ್ಳಲು ಉತ್ತಮ ನಿರ್ಧಾರ ಎಂದು ಕರೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್, ಸಮಾಜದಲ್ಲಿ ಅಶಾಂತಿ ಮತ್ತು ವಿಭಜನೆಯನ್ನು ಸೃಷ್ಟಿಸಲು ಇದು ಬಿಜೆಪಿಯ ನಿಖರವಾದ ಗೇಮ್‌ಪ್ಲಾನ್. ಅದಕ್ಕಾಗಿಯೇ ಜ್ಞಾನವ್ಯಾಪಿ ಹಾಗೂ ತಾಜ್‌ಮಹಲ್ ವಿಷಯವನ್ನು ಎತ್ತಲಾಗಿದೆ. ಇಂತಹ ಹೇಳಿಕೆಗಳಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ನಾವು ಈಗಾಗಲೇ ತುಂಬಾ ಅಪಾಯಕಾರಿ ಸನ್ನಿವೇಶಕ್ಕೆ ಹೋಗುತ್ತಿದ್ದೇವೆ ಎಂಬುದನ್ನು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.