Tag: ಜ್ಞಾನವಾಪಿ ಮಸೀದಿ

  • ಜ್ಞಾನವಾಪಿ ಮಸೀದಿ ಹಿಂಭಾಗದಲ್ಲಿ ಹಿಂದೂ ದೇವಾಲಯ ಇರಬಹುದು: ಶ್ರೀಶೈಲ ಶ್ರೀ

    ಜ್ಞಾನವಾಪಿ ಮಸೀದಿ ಹಿಂಭಾಗದಲ್ಲಿ ಹಿಂದೂ ದೇವಾಲಯ ಇರಬಹುದು: ಶ್ರೀಶೈಲ ಶ್ರೀ

    ಗದಗ: ಜ್ಞಾನವಾಪಿ ಮಸೀದಿ ಹಿಂಭಾಗ ನೋಡಿದಾಗ ಹಿಂದೂ ದೇವಾಲಯ ಇರಬಹುದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಅನುಮಾನ ವ್ಯಕ್ತಪಡಿಸಿದರು.

    ಇತ್ತೀಚೆಗೆ ಅಯೋಧ್ಯೆ ವಿವಾದದಷ್ಟೇ ಜ್ಞಾನವಾಪಿ ಮಸೀದಿ ವಿವಾದ ಎಲ್ಲಕಡೆ ಭಾರೀ ಸುದ್ದಿಯಾಗಿದೆ. ಈ ಕುರಿತು ಶ್ರೀಶೈಲ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದಾಗ ಜ್ಞಾನವಾಪಿ 4ನೇ ದ್ವಾರದ ಮೂಲಕ ಹೋಗಿದ್ದೆ. ಪ್ರತ್ಯಕ್ಷವಾಗಿ ನೋಡಿದಾಗ ದೇವಸ್ಥಾನದ ಶಿಲಾ ಕೆತ್ತನೆಗಳೇ ಅಲ್ಲಿ ಕಂಡುಬರುತ್ತೆ. ಒಳಗಡೆ ಹೋಗಲಿಕ್ಕೆ ಅವಕಾಶ ಇಲ್ಲ, ಒಳಗೆ ಏನಿದೆ ಅಂತ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತ ದರೋಡೆ ಪ್ರಕರಣಗಳು?

    ಹಿಂದೂ ದೇವಾಲಯ ಕೆತ್ತನೆ ಶೈಲಿ ಬೇರೆ, ಮುಸ್ಲಿಂ ಮಸೀದಿ ಕೆತ್ತನೆಗಳು ಬೇರೆ. ಆದರೆ ಜ್ಞಾನವಾಪಿ ಮಸೀದಿ ಹಿಂಭಾಗ ಹಿಂದೂ ದೇವಾಲಯ ಮಾದರಿಯಲ್ಲಿ ಕಾಣುತ್ತೆ. ಜ್ಞಾನವಾಪಿ ಮಸೀದಿ ಹಿಂಭಾಗ ನೋಡಿದಾಗ ಹಿಂದೂ ದೇವಾಲಯ ಇರಬಹುದು ಅನಿಸುತ್ತೆ. ಸರ್ವೇ ಮಾಡಿದ ನಂತರ ಏನಿದೆ ಅನ್ನೋದು ಗೋಚರ ಆಗುತ್ತೆ ಎಂದು ತಿಳಿಸಿದರು.

    ಭಾರತ ಹಲವಾರು ಧರ್ಮ ಸಂಪ್ರದಾಯ ಹೊಂದಿದ ದೇಶ. ಧರ್ಮ ಆಚರಣೆಗೆ ಸಂವಿಧಾನ ಬದ್ಧವಾದ ಅಧಿಕಾರ, ಹಕ್ಕು ಇದೆ. ಒಂದು ಧರ್ಮವನ್ನ ತುಳಿದು ಮತ್ತೊಂದು ಧರ್ಮ ಮೇಲೆ ಬರುವ ದಾಷ್ಟ್ಯ ಸೂಕ್ತವಲ್ಲ. ಅಂಥ ಘಟನೆಗಳು ಕಾಲ ಗರ್ಭದಲ್ಲಿ ನಡೆದಿದ್ದರೆ ಸರಿಪಡೆಸಬೇಕಾಗಿದ್ದು ಪ್ರಸ್ತುತ ಕಾಲದ ಕರೆ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ 

    ತನಿಖೆ ಮಾಡುವಾಗ ವಿರೋಧ ವ್ಯಕ್ತಪಡಿಸುವುದು ತಡೆ ಒಡ್ಡುವುದು ಸೂಕ್ತವಲ್ಲ. ನ್ಯಾಯಾಲಯದ ಆದೇಶ ಸ್ವಾಗತಿಸುತ್ತೇವೆ. ಪ್ರಾಮಾಣಿಕವಾಗಿ ಸರ್ವೇಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ತಿಳಿಸಿದರು.

    ಏನಿದು ಪ್ರಕರಣ?
    ಜ್ಞಾನವಾಪಿ ಮಸೀದಿ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನರೆವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್ 21ರಂದು ವಾರಣಾಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಇರುವ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

  • ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿ ಕಳೆದುಕೊಳ್ಳಲು ನಾನು ಬಯಸುವುದಿಲ್ಲ: ಓವೈಸಿ

    ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿ ಕಳೆದುಕೊಳ್ಳಲು ನಾನು ಬಯಸುವುದಿಲ್ಲ: ಓವೈಸಿ

    ಹೈದರಾಬಾದ್: ಈಗಾಗಲೇ ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ.

    ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ನಡೆಸುವುದಕ್ಕೆ ಕೋರ್ಟ್‌ ಅನುಮತಿ ನೀಡಿರುವ ಕುರಿತು ಮಾತನಾಡಿ, ನ್ಯಾಯಾಲಯದ ಆದೇಶವು ಪೂಜಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಥುರಾದ ಕೃಷ್ಣ ಜನ್ಮಭೂಮಿ, ಶಾಹಿ ಈದ್ಗಾ ಮಸೀದಿ ವಿವಾದ – 4 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಸೂಚನೆ

    ಇದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬಹುದು ಎಂದು ತಿಳಿಸಿದ್ದಾರೆ.

    1947, ಆಗಸ್ಟ್ 15ರ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುವ ಯಾವುದೇ ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು 1991ರ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಈ ಕಾಯ್ದೆಯಡಿ ಯೋಗಿ ಸರ್ಕಾರವು ಈ ಜನರ ವಿರುದ್ಧ ತಕ್ಷಣವೇ ಎಫ್ಐಆರ್ ಅನ್ನು ದಾಖಲಿಸಬೇಕು. ನ್ಯಾಯಾಲಯದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಓವೈಸಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ನೀವು ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ: ತಾಜ್ ಮಹಲ್ ಕುರಿತ ಅರ್ಜಿ ತಿರಸ್ಕರಿಸಿದ ಕೋರ್ಟ್

    ನ್ಯಾಯಾಲಯದ ಆದೇಶವು, ಪೂಜಾ ಸ್ಥಳಗಳ ಕಾಯ್ದೆ 1991ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಬಾಬರಿ ಮಸೀದಿ ಹಕ್ಕು ವಿವಾದದಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

    ಆಗಸ್ಟ್ 15 ಮತ್ತು ಜನವರಿ 26 ರಂದು ಎಲ್ಲಾ ಮದರಸಾಗಳು ದೇಶಪ್ರೇಮದ ಬಗ್ಗೆ ಮಾತನಾಡುತ್ತವೆ. ಮದರಸಾಗಳಲ್ಲಿ ದೇಶಪ್ರೇಮ ಕಲಿಸಲಾಗುತ್ತಿದೆ. ನೀವು ಅವರನ್ನು ಅನುಮಾನದಿಂದ ನೋಡುತ್ತೀರಿ, ಅದಕ್ಕಾಗಿಯೇ ನೀವು ಅಂತಹ ಕಾನೂನುಗಳನ್ನು ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್‌

    ಯೋಗಿ ಆದಿತ್ಯನಾಥ್, ಬಿಜೆಪಿಯವರು ನನಗೆ ದೇಶಭಕ್ತಿಯ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟ ನಡೆದಾಗ ಸಂಘಪರಿವಾರ ಇರಲಿಲ್ಲ. ಈ ಮದರಸಾಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದವು ಎಂದು ತಿರುಗೇಟು ನೀಡಿದ್ದಾರೆ.

  • ಕಾಶಿ ದೇವಸ್ಥಾನ, ಜ್ಞಾನವಾಪಿ ಮಸೀದಿ ಭೂ ವಿವಾದ – ಮಾ 29 ರಿಂದ ನಿತ್ಯ ವಿಚಾರಣೆ

    ಕಾಶಿ ದೇವಸ್ಥಾನ, ಜ್ಞಾನವಾಪಿ ಮಸೀದಿ ಭೂ ವಿವಾದ – ಮಾ 29 ರಿಂದ ನಿತ್ಯ ವಿಚಾರಣೆ

    ಲಕ್ನೋ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮಾರ್ಚ್ 29 ರಿಂದ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.

    ವಾರಣಾಸಿ ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ವಾರಣಾಸಿಯ ಅಂಜುಮನ್ ಇಂತಾಝಾಮಿಯಾ ಮಸಾಜಿದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರಕಾಶ್ ಪಾಡಿಯಾ ಅವರ ಪೀಠ ನಿರಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದನ್ನೂ ಓದಿ: ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

    ಜ್ಞಾನವಾಪಿ-ಕಾಶಿ ಭೂ ವಿವಾದ ಪ್ರಕರಣದಲ್ಲಿ ವಾರಣಾಸಿ ಕೆಳ ನ್ಯಾಯಾಲಯದ ಆದೇಶ ಸೇರಿದಂತೆ ಮೊಕದ್ದಮೆಗೆ ನ್ಯಾಯಾಲಯವು ಈಗಾಗಲೇ ತಡೆ ನೀಡಿದೆ. ಇದರಲ್ಲಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‍ಐ) ನಿರ್ದೇಶನ ನೀಡಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ತಾಯಿ, ಮಗ ಆತ್ಮಹತ್ಯೆ

    ಸ್ವಯಂ ಭೂ ಭಗವಂತ ವಿಶ್ವೇಶ್ವರನು ವಿವಾದಿತ ರಚನೆಯಲ್ಲಿ ನೆಲೆಸಿದ್ದಾನೆ. ಆದ್ದರಿಂದ ವಿವಾದಿತ ಭೂಮಿ ಸ್ವತಃ ವಿಶ್ವೇಶ್ವರನ ಅವಿಭಾಜ್ಯ ಅಂಗವಾಗಿದೆ ಎಂದು ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿವಾದ ಮಂಡಿಸಿದ ಮಜಿದ್ ಸಮಿತಿಯು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ನಿಬಂಧನೆಗಳ ಪ್ರಕಾರ ಅನ್ವಯವಾಗುವುದಿಲ್ಲ. ಹೀಗಾಗಿ ಅರ್ಜಿ ವಜಾ ಮಾಡುವಂತೆ ಮನವಿ ಮಾಡಿತ್ತು.