Tag: ಜ್ಞಾನವಾಪಿ ಮಸೀದಿ

  • ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ಲಕ್ನೋ: ಕಾಶಿ (Kashi) ಜ್ಞಾನವ್ಯಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳು ನಡೆಸಿದ್ದ ಕಾನೂನು ಹೋರಾಟಕ್ಕೆ ಮಹತ್ವದ ಜಯ ಸಿಕ್ಕಿದೆ.

    ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ (Varanasi Gyanvapi Mosque) ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾದ ಬೆನ್ನಲ್ಲೇ ಹಿಂದೂಗಳಿಗೆ ಈಗ ಪೂಜಾಧಿಕಾರ ದಕ್ಕಿದೆ. ಈ ಪ್ರಾರ್ಥನಾ ಮಂದಿರದಲ್ಲಿ ಸೀಲ್ ಮಾಡಿರುವ ಬೇಸ್‌ಮೆಂಟ್‌ನಲ್ಲಿ ಇರುವ ಹಿಂದೂ ವಿಗ್ರಹಗಳಿಗೆ ಪೂಜೆ ಮಾಡಲು ವಾರಣಾಸಿ ಕೋರ್ಟ್ (Varanasi Court) ಅನುಮತಿ ನೀಡಿದೆ.  ಇದನ್ನೂ ಓದಿ: ಮೈಸೂರಿಗೂ ಕಾಲಿಟ್ಟ ಧ್ವಜ ದಂಗಲ್- ಪ್ರತಾಪ್ ಸಿಂಹ ವಿರೋಧದ ಬೆನ್ನಲ್ಲೇ ಟಿಪ್ಪು ಬಾವುಟ ತೆರವು

     

    ಮುಂದಿನ ಒಂದು ವಾರದಲ್ಲಿ ಪೂಜೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಕಾಶಿ ವಿಶ್ವನಾಥ ಮಂದಿರಕ್ಕೆ ಸೇರಿದ ಅರ್ಚಕರನ್ನು ಗುರುವಾರ ನೇಮಿಸಬೇಕು. ಹಿಂದೂ ಅರ್ಚಕರು ಪೂಜೆ ಮಾಡಲು ಬ್ಯಾರಿಕೇಡ್ ತೆರವು ಮಾಡಬೇಕು ಎಂದು ಸ್ಥಳೀಯ ಆಡಳಿತಕ್ಕೆ ವಾರಣಾಸಿ ಕೋರ್ಟ್ ನಿರ್ದೇಶನ ನೀಡಿದೆ.

    ಈ ಐತಿಹಾಸಿಕ ತೀರ್ಪು ನೀಡಿದ ವಾರಾಣಸಿ ನ್ಯಾಯಾಲಯದ ನ್ಯಾಯಮೂರ್ತಿ ಎ.ಕೆ. ವಿಶ್ವೇಶ ಅವರು ಇವತ್ತೇ ನಿವೃತ್ತರಾಗಿದ್ದಾರೆ. ಇದನ್ನೂ ಓದಿ: ಭಾರೀ ಬಿಗಿ ಭದ್ರತೆಯಲ್ಲಿ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಕೋರ್ಟ್‍ಗೆ ಹಾಜರು

    ವಾರಣಾಸಿ ಕೋರ್ಟ್ ತೀರ್ಪು ಹಿಂದೂಗಳಲ್ಲಿ ಸಂತಸ ತಂದಿದೆ. ಈ ತೀರ್ಪನ್ನು, 1983ರಲ್ಲಿ ಅಯೋಧ್ಯೆ ರಾಮಮಂದಿರದ ಬೀಗ ತೆರೆಯಲು ಜಸ್ಟೀಸ್ ಕೃಷ್ಣಮೋಹನ್ ಪಾಂಡೆ ನೀಡಿದ್ದ ಆದೇಶಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಮುಂದೊಂದು ದಿನ ಈ ಮಸೀದಿ ಕೂಡ, ಅಯೋಧ್ಯೆ ರಾಮಮಂದಿರದ ರೀತಿಯಲ್ಲಿ ಹಿಂದೂಗಳಿಗೆ ದಕ್ಕಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

     

    ಇದು ಹಿಂದೂಗಳಿಗೆ ದಕ್ಕಿದ ದೊಡ್ಡ ಗೆಲುವು.ಒಂದು ವಾರದಲ್ಲಿ ಪೂಜೆ ಆರಂಭಿಸುತ್ತೇವೆ ಎಂದು ಕಾಶಿವಿಶ್ವನಾಥ ಮಂದಿರ ಟ್ರಸ್ಟ್ ತಿಳಿಸಿದೆ. ಆದರೆ ಈ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಹೋಗಲು ಮಸೀದಿ ಆಡಳಿತ ಮಂಡಳಿ ನಿರ್ಧರಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

    ಹಿಂದೂಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಪ್ರತಿಕ್ರಿಯಿಸಿ, ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳಿಗೆ ಸಿಕ್ಕಿದ ಮೊದಲ ದೊಡ್ಡ ಗೆಲುವು ಎಂದು ಬಣ್ಣಿಸಿದ ಅವರು ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ 31 ವರ್ಷದ ಬಳಿಕ ಪೂಜೆ ಮಾಡಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.

  • ಜ್ಞಾನವಾಪಿ ಮಸೀದಿ ಜಾಗದಲ್ಲಿ ಸಿಕ್ಕ ಶಾಸನಕ್ಕೂ, ಕೋಲಾರಮ್ಮ ದೇವಾಲಯದ ಶಾಸನಕ್ಕೂ ಇದೆ ಲಿಂಕ್!

    ಜ್ಞಾನವಾಪಿ ಮಸೀದಿ ಜಾಗದಲ್ಲಿ ಸಿಕ್ಕ ಶಾಸನಕ್ಕೂ, ಕೋಲಾರಮ್ಮ ದೇವಾಲಯದ ಶಾಸನಕ್ಕೂ ಇದೆ ಲಿಂಕ್!

    ಕೋಲಾರ: ಕಾಶಿಯ ಜ್ಞಾನವಾಪಿ (Gyanvapi Mosque) ಉತ್ಖನನದಲ್ಲಿ ಕನ್ನಡದ ಶಾಸನ ಸಿಕ್ಕಿದ್ದು, ಈ ಶಾಸನಕ್ಕೂ ಕೋಲಾರಕ್ಕೂ ಲಿಂಕ್ ಇದೆ ಎಂಬ ವಿಚಾರಗಳು ಕೇಳಿಬರುತ್ತಿದೆ. ಕಾಶಿಯ ಶಾಸನವನ್ನೇ ಹೋಲುವ ಹಲವು ಶಾಸನಗಳು ಕೊಲಾರಮ್ಮನ (Kolaramma Temple) ದೇವಾಲಯದಲ್ಲಿ ಇವೆ.

    ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಾಲಯಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕೋಲಾರ ನಗರದ ಕೋಟೆ ಬಡಾವಣೆಯಲ್ಲಿ ನೆಲೆಸಿರುವ ನಗರ ದೇವತೆ, ಶಕ್ತಿ ದೇವತೆ ಕೋಲಾರಮ್ಮನ ದೇವಾಲಯವನ್ನು ಗಂಗರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯದ ಗೋಡೆ ಮತ್ತು ಕಂಬಗಳ ಮೇಲೆ ಕನ್ನಡ ಹಾಗೂ ತಮಿಳು ಶಾಸನಗಳನ್ನ ಕೆತ್ತಲಾಗಿದೆ. ಅಲ್ಲದೇ ಶಾಸನಗಳಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದನ್ನೂ ಓದಿ: ಕಾರ್ಯಕ್ರಮದ ನಡುವೆ ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದನೆ – ವ್ಯಕ್ತಿ ಬಂಧನ

    ಇನ್ನೂ ಇಂದು ಕಾಶಿಯಲ್ಲಿ ಪತ್ತೆಯಾಗಿರುವ ಕನ್ನಡ ಶಾಸನಕ್ಕೂ ಕೋಲಾರಮ್ಮ ದೇವಾಲಯದಲ್ಲಿರುವ ಶಾಸನಗಳಿಗೂ ಒಂದಕ್ಕೊಂದು ಸಬಂಧ ಇದೆ ಅನ್ನೋದು ಪುರಾತತ್ವ ವರದಿಯಲ್ಲಿ ತಿಳಿಯಬಹುದಾಗಿದೆ. ಇನ್ನೂ ಈಗಾಗಲೇ ಕಾಶಿಯಲ್ಲಿ ಪತ್ತೆಯಾದ ಕನ್ನಡದ 2 ಪದಗಳನ್ನ ತಜ್ಞರು ನ್ಯಾಯಾಲಯಕ್ಕೆ ನೀಡಿದ್ದು, ಕೋಲಾರಮ್ಮ ದೇವಾಲಯದ ಶಾಸನದ ಕುರಿತು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್‌ ನಾರಾಯಣ್‌

  • ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ – ASI ವರದಿಯಲ್ಲಿದೆ ಕನ್ನಡ ಬರಹದ ಪ್ರೂಫ್‌

    ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ – ASI ವರದಿಯಲ್ಲಿದೆ ಕನ್ನಡ ಬರಹದ ಪ್ರೂಫ್‌

    ಪವಿತ್ರ ಕಡ್ತಲ

    – ಕನ್ನಡ ಬರಹದ ಬಗ್ಗೆ ಇತಿಹಾಸಕಾರರು ಹೇಳೋದೇನು?
    – ಕನ್ನಡ ಶಾಸನ ಸಿಕ್ಕಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದ ಇತಿಹಾಸತಜ್ಞ

    ಬೆಂಗಳೂರು: ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಜಾಗದಲ್ಲಿ ಪ್ರಾಚೀನ ಕಾಲದ ಶಾಸನಗಳು (Kannada Inscription ) ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ ಎಂಬ ವಿಚಾರ ಎಎಸ್‌ಐ (ASI) ವರದಿಯಿಂದ ಬಹಿರಂಗವಾಗಿದೆ. ಕನ್ನಡ ಬರಹವಿರುವ ಪ್ರೂಫ್‌ ಕೂಡ ಎಎಸ್‌ಐ ವರದಿಯಲ್ಲಿದೆ.

    ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಈಚೆಗೆ ಬಹಿರಂಗವಾಗಿದೆ. ಮಸೀದಿ ಇರುವ ಜಾಗದಲ್ಲಿ ಸಿಕ್ಕ ಪ್ರಾಚೀನ ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಕೂಡ ವರದಿಯಲ್ಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಇತಿಹಾಸಕಾರರು ಹೇಳೋದೇನು?
    ಇದು ವಿಜಯನಗರದ ಪಾಳಯಗಾರರ ಅಥವಾ ಅಧಿಕಾರಿಗಳ ಕಾಲದಲ್ಲಿ ನೀಡಿರುವ ಸೇವಾರ್ಥ ಇರಬಹುದು. ಸುಮಾರು 16ನೇ ಶತಮಾನದ್ದು. ಸಾಮಾನ್ಯವಾಗಿ ದೇವರಿಗೆ ಸೇವಾರ್ಥವನ್ನು ನೀಡುವ ಸಮಯದಲ್ಲಿ ಈ ರೀತಿ ಕಲ್ಲಿನಲ್ಲಿ ಸೇವಾರ್ಥಿಯ ಹೆಸರನ್ನು ಹಾಕಿರುತ್ತಾರೆ.

    ಕಾಶಿ ವಿಶ್ವನಾಥನಿಗೆ ಪ್ರತಿ ವರ್ಷವೂ ದತ್ತಿಯನ್ನು ನೀಡೋದು ಸಂಪ್ರದಾಯ. ದತ್ತಿ ಅಂದ್ರೆ ಒಂದೆರಡು ಹಳ್ಳಿ ಅಥವಾ ಗ್ರಾಮವನ್ನು ಸಂಪೂರ್ಣವಾಗಿ ದೇವರಿಗಾಗಿಯೇ ಮೀಸಲಿಟ್ಟು ಅಲ್ಲಿ ಬೆಳೆ ಬೆಳೆದು, ಬರುವ ದುಡ್ಡನ್ನು ವಾರ್ಷಿಕವಾಗಿ ಗ್ರಾಮದ ಬ್ರಾಹ್ಮಣರ ಮುಖಾಂತರ ಆಯಾಯ ಪಾಳೆಯಗಾರರು/ಅಧಿಕಾರಿಗಳ ಹೆಸರಿನಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಪೂಜೆ ಮಾಡಿಸುತ್ತಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ಸಾಮಾನ್ಯವಾಗಿ ಈ ದುಡ್ಡನ್ನು ದೇವಸ್ಥಾನಕ್ಕೆ ಬಳಸಿ ತದನಂತರ ಅಲ್ಲಿ ಕಟ್ಟಡಕ್ಕೆ ಬಳಸುತ್ತಾರೆ. ಈ ವೇಳೆ ಸೇವಾರ್ಥಿಗಳ ಹೆಸರನ್ನು ಹಾಕಲಾಗಿದೆ. ಕೋಲಾರ ಮೂಲದ ಪಾಳೆಯಗಾರರು ಅಥವಾ ಅಧಿಕಾರಿಗಳು ಇರಬಹುದು. ದಕ್ಷಿಣದ ರಾಜರಿಗೆ ಕಾಶಿ ವಿಶ್ವನಾಥನ ಮೇಲೆ ಅಪಾರ ನಂಬಿಕೆ. ಕೆಂಪೇಗೌಡರು ಕೂಡ ಕಾಶಿ ವಿಶ್ವನಾಥ ದೇವರ ಹೆಸರಿನಲ್ಲಿ ದತ್ತಿಯನ್ನು ನೀಡುತ್ತಿದ್ದರು. ಇದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಎಂದು ಕನ್ನಡದ ಶಾಸಕನದ ಕುರಿತು ಇತಿಹಾಸಕಾರರು ಮಾಹಿತಿ ನೀಡಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕನ್ನಡ ಶಾಸನ ಸಿಕ್ಕಿರೋ ಬಗ್ಗೆ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ. 16ನೇ ಶತಮಾನದ ಶಾಸನ ಇದು. ಈ ಹಿಂದೆ ಕನ್ನಡದ ರಾಜರು ಉತ್ತರದ ಪ್ರಸಿದ್ಧ ದೇವಾಲಯಗಳಿಗೆ ದತ್ತಿ ಕೊಡುತ್ತಿದ್ದರು. ಆ ರೀತಿ ದತ್ತಿ ಕೊಟ್ಟಿರುವವರೇ ದೊಡ್ಡರಸಯ್ಯ ಮತ್ತು ನರಸಿಂಹ. ಇವರು ಕರ್ನಾಟಕದ ಯಾವುದಾದರೂ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳೇ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಹಿಂದೆ ಅವರು ದತ್ತಿಕೊಟ್ಟ ಕಾರಣಕ್ಕೆ ಅವರ ಹೆಸರನ್ನ ಹಾಕಿದ್ದಾರೆ. ಈ ಶಾಸನ ಸರ್ವೇಗೆ ಪೂರಕವಾಗಲಿದೆ. ಮತ್ತಷ್ಟು ಕನ್ನಡದ ಶಾಸನಗಳು ಪತ್ತೆಯಾದರು ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

    839 ಪುಟಗಳ ಸರ್ವೆ ವರದಿ
    ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸಮುಚ್ಛಯದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ನಡೆಸಲಾಗಿದ್ದ ಸರ್ವೆ ವರದಿಯನ್ನು ಜ.25 ರಂದು ಬಹಿರಂಗಗೊಳಿಸಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ವೆ ನಡೆಸಿತ್ತು. 839 ಪುಟಗಳ ಸರ್ವೆ ವರದಿ ಈಗ ಬಹಿರಂಗವಾಗಿದೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ

    ಎಎಸ್‌ಐ ವರದಿಯಲ್ಲಿ, ಮಸೀದಿ ನಿರ್ಮಾಣಕ್ಕೂ ಮೊದಲು ವಿವಾದಿತ ಸ್ಥಳದಲ್ಲಿ ಬೃಹತ್‌ ರೂಪದ ಭವ್ಯ ಮಂದಿರ ಇತ್ತು. ದೇಗುಲ ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್‌ ಆದೇಶದಂತೆ ಎಎಸ್‌ಐ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸರ್ವೆ ನಡೆಸಿತ್ತು. ಮಸೀದಿಯನ್ನು ಹಿಂದೆ ಇದ್ದ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

  • ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

    ಲಕ್ನೋ: ಅಲಹಾಬಾದ್ ಕೋರ್ಟ್ (Allahabad Court) ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಸಲಾಗಿದ್ದ ವೈಜ್ಞಾನಿಕ ಸಮೀಕ್ಷಾ ವರದಿ ಬಹಿರಂಗಗೊಂಡಿದೆ.

    ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯ (Hindu Temple) ಇತ್ತು ಅಂತಾ ಪುರಾತತ್ವ ಸರ್ವೇಕ್ಷಣಾ ವರದಿ ಹೇಳಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕೋರ್ಟ್ ಆದೇಶದನ್ವಯ ವರದಿ ಪಡೆದಿರುವ ಅವರು ಸುದ್ದಿಗೋಷ್ಠಿ ನಡೆಸಿ ವರದಿಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    Gyanvapi mosque, 

    ಮಸೀದಿಗಿಂತ ಮುಂಚೆ ದೊಡ್ಡ ಹಿಂದೂ ದೇವಾಲಯದ ರಚನೆಯನ್ನು ಸರ್ವೆ ವರದಿ ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಮಸೀದಿಯಲ್ಲಿ ಲಭ್ಯವಾದ ಶಾಸನಗಳಲ್ಲಿ ಕಂಡುಬರುತ್ತವೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Padma Awards 2024: ಕರ್ನಾಟಕದ 9 ಮಂದಿ ಸೇರಿ 132 ಜನರಿಗೆ ‘ಪದ್ಮ’ ಪ್ರಶಸ್ತಿ – ಸಂಪೂರ್ಣ ಪಟ್ಟಿ ಇಲ್ಲಿದೆ..

    ವರದಿಯಲ್ಲಿ ಏನಿದೆ?
    ಜ್ಞಾನವಾಪಿ ಮಸೀದಿಗೂ ಮುನ್ನ ದೇವಸ್ಥಾನ ಇತ್ತು. ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. ಸರ್ವೆ ವೇಳೆ ಕಟ್ಟಡದ ರಚನೆಗೆ ಯಾವುದೇ ಹಾನಿ ಉಂಟಾಗಿಲ್ಲ, ಶೋಧಿಸಿದ ಎಲ್ಲಾ ವಸ್ತುಗಳನ್ನು ದಾಖಲಿಸಲಾಗಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ರಚನೆಯಲ್ಲಿ ಹಿಂದಿನ ರಚನೆಯ ಕಂಬಗಳ ಬಳಕೆಯಾಗಿದೆ. ಸ್ತಂಭಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ. ಇದನ್ನೂ ಓದಿ: ಕನ್ನಡಿಗ ಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್‌ಗೆ ‘ಶೌರ್ಯ ಚಕ್ರ’ ಪ್ರಶಸ್ತಿ ಘೋಷಣೆ

    ಹೊಸ ರಚನೆಯ ನಿರ್ಮಾಣದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ದೇವಾಲಯವು ದೊಡ್ಡ ಕೇಂದ್ರವನ್ನು ಮಸೀದಿಯ ಸಭಾಂಗಣವಾಗಿ ಬಳಸಲಾಗುತ್ತಿದೆ. ಈಗಿರುವ ಮಸೀದಿಯಲ್ಲಿ ಹಿಂದಿನ ರಚನೆಯ 34 ಶಾಸನಗಳನ್ನು ಬಳಸಲಾಗಿದೆ. ಮರು ಬಳಕೆ ವೇಳೆ ಕುರುಹು ನಾಶ ಮಾಡಲಾಗಿದೆ. ಈ ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ನಾಶಪಡಿಸಲಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?

    ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?

    ಲಕ್ನೋ: ಜ್ಞಾನವಾಪಿ ಮಸೀದಿ (Gyanvapi Mosque) ಆವರಣದ ವೈಜ್ಞಾನಿಕ ಸಮೀಕ್ಷೆ ವರದಿಯ ಗಡುವು ಮಂಗಳವಾರ ಕೊನೆಗೊಳ್ಳಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ (Varanasi Court) ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. 100 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ.

    ಸಮೀಕ್ಷೆಯು ಸುಮಾರು ಒಂದು ತಿಂಗಳ ಹಿಂದೆ ಮುಕ್ತಾಯಗೊಂಡಿತು. ಎಎಸ್ಐ ತನ್ನ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಸಮಯವನ್ನು ಕೋರಿತ್ತು. ಕೊನೆಯದಾಗಿ ನವೆಂಬರ್ 18 ರಂದು ಎಎಸ್ಐ ಇನ್ನೂ 15 ದಿನಗಳ ಕಾಲಾವಕಾಶವನ್ನು ಕೇಳಿದಾಗ ವಿಸ್ತರಣೆಯಾಗಿತ್ತು. ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿತ್ತು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ರೋಲ್‌ ಮೈನಿಂಗ್‌?

    ಮಸೀದಿ ಆವರಣದಲ್ಲಿ ಆಗಸ್ಟ್ 4 ರಿಂದ ಎಎಸ್‌ಐ ಸರ್ವೆ ನಡೆಸಿತ್ತು. ಇದು ವುಜುಖಾನಾ ಪ್ರದೇಶವನ್ನು ಬಿಟ್ಟಿದೆ. ಇದನ್ನು ಸುಪ್ರೀಂ ಕೋರ್ಟ್‌ನ ಆದೇಶಗಳಿಂದ ಮುಚ್ಚಲಾಗಿದೆ. ನವೆಂಬರ್ 2 ರಂದು ಎಎಸ್ಐ, ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಆದರೆ ಸಮೀಕ್ಷೆಯಲ್ಲಿ ಬಳಸಲಾದ ಸಲಕರಣೆಗಳ ವಿವರಗಳೊಂದಿಗೆ ವರದಿಯನ್ನು ಸಂಗ್ರಹಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ದಾಖಲೆ ಸಲ್ಲಿಸಲು ನ್ಯಾಯಾಲಯ ನವೆಂಬರ್ 17 ರ ವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿತ್ತು.

    ದೇವಾಲಯದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ನಾಲ್ವರು ಮಹಿಳೆಯರು ಸಲ್ಲಿಸಿದ ಅರ್ಜಿಯ ನಂತರ ಜುಲೈ 21 ರಂದು ವಾರಣಾಸಿ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ನ್ಯಾಯಾಲಯವು ಆ ಅರ್ಜಿಯನ್ನು ಆಧರಿಸಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿತು. ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯು ವುಝುಖಾನಾದಲ್ಲಿನ ರಚನೆಯನ್ನು ಬಹಿರಂಗಪಡಿಸಿತು. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಬಲಪಂಥೀಯ ಕಾರ್ಯಕರ್ತರು ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 17 ನೇ ಶತಮಾನದಲ್ಲಿ ಕೆಡವಲಾಯಿತು ಎಂದು ಹೇಳಿಕೊಳ್ಳುತ್ತಾರೆ. ಈ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ.

  • ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    ಲಕ್ನೋ: ಅಲಹಾಬಾದ್‌ ಹೈಕೋರ್ಟ್‌ನಿಂದ (Allahabad High Court) ಆದೇಶ ಹೊರಬಿದ್ದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ತಂಡವು ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಸರ್ವೆ ಕಾರ್ಯ ಆರಂಭಿಸಿದೆ.

    ಎಎಸ್‌ಐ ತಂಡ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಣಾಸಿಯ (Varanasi) ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿತು. ಬಿಗಿ ಭದ್ರತೆಯ ನಡುವೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ

    Gyanvapi mosque, 

    ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿ ಗುರುವಾರ ಆದೇಶ ಹೊರಡಿಸಿದೆ. ಈಗ ಮತ್ತೆ ಅಲಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

    ಎಎಸ್‌ಐ ಅಧಿಕಾರಿಗಳು ಸೇರಿದಂತೆ ಅನೇಕರು ಸ್ಥಳಕ್ಕೆ ತಲುಪಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದೆ. ನಾವೂ ಒಳಗೆ ಹೋಗುತ್ತಿದ್ದೇವೆ ಎಂದು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ ವಿಶೇಷ ಏರ್ ಶೋ ನಡೆಸಲು ಸಿಎಂ ಮನವಿ

    ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ನಿರ್ಧರಿಸುವ ಏಕೈಕ ಮಾರ್ಗ ಮಸೀದಿಯನ್ನು ಸರ್ವೆಗೆ ಒಳಪಡಿಸುವುದು ಎಂದು ನಾಲ್ವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಾರಣಾಸಿ ನ್ಯಾಯಾಲಯವು ಮಸೀದಿ ಸಮೀಕ್ಷೆ ನಡೆಸಲು ಅನುಮತಿಸಿ ಜು.21 ರಂದು ಆದೇಶ ಹೊರಡಿಸಿತ್ತು.

    ಜುಲೈ 24 ರಂದು ಸಮೀಕ್ಷೆ ಪ್ರಾರಂಭವಾಯಿತು. ಆದರೆ ಅದನ್ನು ವಿರೋಧಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸರ್ವೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ಮಸೀದಿ ಸರ್ವೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ

    ಜ್ಞಾನವಾಪಿ ಮಸೀದಿ ಸರ್ವೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ

    ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ವಾರಣಾಸಿಯ ಜ್ಞಾನವಾಪಿ ಮಸೀದಿ (Gyanvapi Mosque) ಸಮೀಕ್ಷೆ ನಡೆಸಲು ಅನುಮತಿ ನೀಡಿ ಅಲಹಾಬಾದ್‌ ಹೈಕೋರ್ಟ್‌ (Allahabad High Court) ಗುರುವಾರ ತೀರ್ಪು ನೀಡಿದೆ.

    ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರವಾಗಿ ವಾದ ಮಂಡಿಸಿದ್ದ ವಿಷ್ಣು ಶಂಕರ್ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? – ಯೋಗಿ ಆದಿತ್ಯನಾಥ್ ಪ್ರಶ್ನೆ

    Allahabad high court

    ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಸಂಕೀರ್ಣದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

    ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ನಿರ್ಧರಿಸುವ ಏಕೈಕ ಮಾರ್ಗ ಮಸೀದಿಯನ್ನು ಸರ್ವೆಗೆ ಒಳಪಡಿಸುವುದು ಎಂದು ನಾಲ್ವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಾರಣಾಸಿ ನ್ಯಾಯಾಲಯವು ಮಸೀದಿ ಸಮೀಕ್ಷೆ ನಡೆಸಲು ಅನುಮತಿಸಿ ಜು.21 ರಂದು ಆದೇಶ ಹೊರಡಿಸಿತ್ತು.

    ಜುಲೈ 24 ರಂದು ಸಮೀಕ್ಷೆ ಪ್ರಾರಂಭವಾಯಿತು. ಆದರೆ ಅದನ್ನು ವಿರೋಧಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸರ್ವೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಎಎಸ್‌ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? – ಯೋಗಿ ಆದಿತ್ಯನಾಥ್ ಪ್ರಶ್ನೆ

    ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? – ಯೋಗಿ ಆದಿತ್ಯನಾಥ್ ಪ್ರಶ್ನೆ

    ಲಕ್ನೋ: ಜ್ಞಾನವಾಪಿ (Gyanvapi) ಮಸೀದಿ ಮಸೀದಿಯಾಗಿದ್ದರೇ ಅದರ ಆವರಣದಲ್ಲಿ ತ್ರಿಶೂಲ ಏನು ಮಾಡುತ್ತಿದೆ ಎಂದು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) ಪ್ರಶ್ನಿಸಿದ್ದಾರೆ.

    ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಅರ್ಜಿದಾರರು ಒಂದು ನಿರ್ಣಯಕ್ಕೆ ಮುಂದಾಗಬೇಕು. ಸರ್ಕಾರವು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಎಎಸ್‌ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್

    ನಾವು ಅದನ್ನು ಮಸೀದಿ ಎಂದು ಕರೆದರೆ ಅದು ಸಮಸ್ಯೆಯಾಗುತ್ತದೆ. ಹಾಗಿದ್ದರೆ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? ತ್ರಿಶೂಲವನ್ನು ನಾವು ಇಟ್ಟಿಲ್ಲ. ಮಸೀದಿಯ ಪಕ್ಕದಲ್ಲಿ ಜ್ಯೋತಿರ್ಲಿಂಗವಿದೆ, ದೇವತೆಗಳಿದ್ದಾರೆ. ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಕಡೆಯಿಂದ ಪ್ರಸ್ತಾವನೆ ಬರಬೇಕು ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?

    ಜ್ಞಾನವಾಪಿ ಮಸೀದಿ ಸರ್ವೆಗೆ ವಾರಣಾಸಿ ಜಿಲ್ಲಾ ನ್ಯಾಯಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್ ಅಗಸ್ಟ್ 3ಕ್ಕೆ ಆದೇಶ ಕಾಯ್ದಿರಿಸಿದೆ. ಇದನ್ನೂ ಓದಿ: ಇಡಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿ ವಿಸ್ತರಣೆಗೆ ಸುಪ್ರೀಂ ಸಮ್ಮತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ಮಸೀದಿ ಎಎಸ್‌ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್

    ಜ್ಞಾನವಾಪಿ ಮಸೀದಿ ಎಎಸ್‌ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್

    ಲಕ್ನೋ: ಜ್ಞಾನವಾಪಿ ಮಸೀದಿಯ (Gyanvapi Mosque) ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಿದ ವಾರಣಾಸಿ ಜಿಲ್ಲಾ ನ್ಯಾಯಲಯದ ಆದೇಶ ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ (Allahabad High Court) ಆಗಸ್ಟ್ 3 ರವರೆಗೂ ತೀರ್ಪು ಕಾಯ್ದಿರಿಸಿದೆ.

    ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ನೇತೃತ್ವದ ಪೀಠವು ವಾದ-ಪ್ರತಿವಾದವನ್ನು ಆಲಿಸಿದ ನಂತರ ಈ ಆದೇಶವನ್ನು ನೀಡಿದ್ದು, ಅಂತಿಮ ಆದೇಶದವರೆಗೂ ಮಸೀದಿಯ ಸರ್ವೆ ನಡೆಸದಂತೆ ತಡೆ ನೀಡಿದೆ.

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಎಂದಿಗೂ ಮೊಕದ್ದಮೆಯಲ್ಲಿ ಭಾಗಿಯಾಗಿಲ್ಲ ಅಥವಾ ವಾರಣಾಸಿ ನ್ಯಾಯಾಲಯದ ಗಮನಕ್ಕೆ ಬಂದಿಲ್ಲ ಮತ್ತು ಇದರ ಹೊರತಾಗಿಯೂ, ಮಸೀದಿ ಆವರಣದ ಸಮೀಕ್ಷೆ ನಡೆಸಲು ಜಿಲ್ಲಾ ನ್ಯಾಯಲಯ ಅನುಮತಿ ನೀಡಿದೆ. ಇದನ್ನೂ ಓದಿ: ಹಿಂದಿನ ತಪ್ಪು ಮರೆಮಾಚಲು UPAಯಿಂದ INDIA ಅಂತ ಬದಲಾಯಿಸಿಕೊಂಡಿದ್ದಾರೆ: ಮೋದಿ ವಾಗ್ದಾಳಿ

    ವೈಜ್ಞಾನಿಕ ಸಮೀಕ್ಷೆ ವೇಳೆ ಮಸೀದಿಯ ಆವರಣವನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಪರ ವಕೀಲರು ವಾದಿಸಿದ್ದರು. ಮಸೀದಿಯಲ್ಲಿ ಹಿಂದೂ ದೇವರ ಕುರುಹುಗಳಿರುವ ಹಿನ್ನೆಲೆ ಅದರ ಸರ್ವೆ ಅಗತ್ಯ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದರು.

    ಇದಕ್ಕೂ ಮುನ್ನ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ವಾರಾಣಾಸಿ ಜಿಲ್ಲಾ ನ್ಯಾಯಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ ಸರ್ವೆ ಕಾರ್ಯ ಆರಂಭಿಸಿದೆ ಎಂದು ಆರೋಪಿಸಿತ್ತು. ಈ ಹಿನ್ನೆಲೆ ಮೇಲ್ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಇದನ್ನೂ ಓದಿ: ಮಣಿಪುರದಲ್ಲಿ ಹೊಸ ಸಂಘರ್ಷ – ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ಮಸೀದಿ ಸರ್ವೆ ಕೇಸ್‌ – ಅಲಹಾಬಾದ್ ಹೈಕೋಟ್‌ನಲ್ಲಿ ಇಂದು ವಿಚಾರಣೆ

    ಜ್ಞಾನವಾಪಿ ಮಸೀದಿ ಸರ್ವೆ ಕೇಸ್‌ – ಅಲಹಾಬಾದ್ ಹೈಕೋಟ್‌ನಲ್ಲಿ ಇಂದು ವಿಚಾರಣೆ

    ಲಕ್ನೋ: ಉತ್ತರ ಪ್ರದೇಶದ (UP) ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ (Gyanvapi Mosque) ಸರ್ವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ನಲ್ಲಿ (Allahabad HighCourt) ಗುರುವಾರ (ಇಂದು) ವಿಚಾರಣೆ ನಡೆಯಲಿದೆ. ಜುಲೈ 26ರಂದು ವಿಚಾರಣೆ ನಡೆಸಿದ್ದ ಕೋರ್ಟ್‌, ಜುಲೈ 27ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ ನಡೆಸಲಿದೆ.

    ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಕೈಗೊಳ್ಳಲು ವಾರಣಾಸಿ ಕೋರ್ಟ್‌ (Varanasi Court) ಅನುಮತಿ ನೀಡಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ವಿವಾದಿತ ಶಿವಲಿಂಗದ ರಚನೆಯನ್ನು ಹೊರತುಪಡಿಸಿ ಸಂಕೀರ್ಣದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವೈಜ್ಞಾನಿಕ ಸರ್ವೆ ಪ್ರಾರಂಭಿಸಿತ್ತು. ಇದೇ ತಿಂಗಳ ಜುಲೈ 24ರಂದು ಬೆಳಗ್ಗೆ 7 ಗಂಟೆಗೆ ಸರ್ವೆ ಆರಂಭಗೊಂಡಿತ್ತು. ಈ ನಡುವೆ ಮಸೀದಿ ಪರಿಶೀಲನೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

    ಆ ನಂತರ ಜ್ಞಾನವ್ಯಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸುತ್ತಿರುವ ಸರ್ವೆ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ವಾರಣಾಸಿ ಜಿಲ್ಲಾ ನ್ಯಾಯಲಯದ ಆದೇಶದ ವಿರುದ್ಧ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿತ್ತು. ಅಂಜುಮನ್ ಇಂಟೆಝಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ತಾತ್ಕಾಲಿಕ ತಡೆ ನೀಡಿತ್ತು. ಅಲ್ಲದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿತ್ತು. ಇದನ್ನೂ ಓದಿ: ಜ್ಞಾನವ್ಯಾಪಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

    ಕನಿಷ್ಠ ಒಂದು ವಾರದವರೆಗೆ ಸ್ಥಳದಲ್ಲಿ ಯಾವುದೇ ಉತ್ಖನನಗಳು ನಡೆಯುವುದಿಲ್ಲ. ಪ್ರಸ್ತುತ ಅಳತೆ ಪಡೆಯುವುದು, ಫೋಟೋ ತೆಗೆಯುವುದು ನಡೆಯುತ್ತಿದೆ. ಮುಂದಿನ ಸೋಮವಾರದವರೆಗೆ ಮಸೀದಿ ಜಾಗದಲ್ಲಿ ಯಾವುದೇ ಉತ್ಖನನವನ್ನು ನಡೆಸಲು ಯೋಜಿಸುವುದಿಲ್ಲ ಎಂಬ ಎಎಸ್‍ಐ ಹೇಳಿಕೆಯನ್ನು ನಾವು ದಾಖಲಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದನ್ನೂ ಓದಿ: ವ್ಯಕ್ತಿಯ ತಲೆ ಮೇಲೆ ಒದ್ದು, ಮೂತ್ರ ವಿಸರ್ಜನೆ ಮಾಡಿ ದರ್ಪ – ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ

    ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಅರ್ಜಿದಾರರಿಗೆ ಅವಕಾಶ ನೀಡುತ್ತೇವೆ. ಯಾವುದೇ ಆಕ್ರಮಣಶೀಲವಲ್ಲದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಅರ್ಜಿದಾರರ ವಿಚಾರಣೆಯ ನಂತರ ಹೈಕೋರ್ಟ್‍ನ ಮುಂದಿನ ನಿರ್ದೇಶನಗಳಿಗೆ ಈ ಆದೇಶ ಒಳಪಟ್ಟಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ ಆದೇಶಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]