Tag: ಜ್ಞಾನವಾಪಿ

  • ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?  

    ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?  

    ಬಾಬ್ರಿ ಮಸೀದಿಯಿಂದ ಶುರುವಾದ ಮಂದಿರ-ಮಸೀದಿ ವಿವಾದ ಈಗ ಜ್ಞಾನವಾಪಿವರೆಗೆ ಮುಂದುವರಿದು, ಸಂಬಲ್, ಬದೌನ್ ವರೆಗೂ ಬಂದು ತಲುಪಿದೆ. ಹಲವೆಡೆ ಮುಸ್ಲಿಂ ದೊರೆಗಳು ತಮ್ಮ ಆಳ್ವಿಕೆಯಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಾಣಮಾಡಿದ್ದಾರೆ ಎಂಬ ವಾದ ಕೇಳಿ ಬಂದಿದೆ. ಅದಕ್ಕೆ ಕೆಲವು ಕಡೆ ಸಾಕ್ಷಿಗಳು ಸಿಕ್ಕಿವೆ. ಅವು ಯಾವ ಮಸೀದಿ ಹಾಗೂ ಗತ ಕಾಲದಲ್ಲಿ ನಡೆದ ಘಟನೆಗಳಿಂದ ಈಗ್ಯಾಕೆ ಇಷ್ಟೊಂದು ಕೋಲಾಹಲ ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.

    ಎಲ್ಲೆಲ್ಲಿ ಏನೇನು ವಿವಾದ?

    ಬದೌನ್ ಮಸೀದಿ: ಉತ್ತರ ಪ್ರದೇಶದ ಸಂಭಲ್ ಮಸೀದಿ ವಿವಾದದ ಬೆನ್ನಲ್ಲೇ ಬದೌನ್ ಜಿಲ್ಲೆಯ ಮಸೀದಿಯೊಂದು ವಿವಾದದ ಕೇಂದ್ರವಾಗಿದೆ. ಮೊಘಲ್ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ. ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್ ಕುಮಾರ್ ಅವರು ಈ ಕುರಿತು ವಿಚಾರಣೆ ನಡೆಸಿದ್ದಾರೆ. ಈ ಅರ್ಜಿಯ ವಿಚಾರಣೆ ಡಿ.17ಕ್ಕೆ ಮುಂದೂಡಿಕೆಯಾಗಿದೆ. 

    ಸಂಬಲ್‌ನ  ಶಾಹಿ ಜಾಮಾ ಮಸೀದಿ: ಸಂಬಲ್‌ನ  ಶಾಹಿ ಜಾಮಾ ಮಸೀದಿ ಹಿಂದೆ ದೇವಾಲಯವಾಗಿತ್ತು. ಹರಿಹರನ ದೇಗುಲದಲ್ಲಿ ಈಗ ನಮಾಜ್‌ ನಡೆಯುತ್ತಿದೆ. 15ನೇ ಶತಮಾನದವರೆಗೂ ಮಂದಿರವಾಗಿದ್ದ ಜಾಗವು ಮಸೀದಿಯಾಗಿ ಪರಿವರ್ತನೆ ಆಗಿದೆ ಎಂದು ಉತ್ತರ ಪ್ರದೇಶ ಕೋರ್ಟ್‌ಗೆ ಮನವಿ ಸಲ್ಲಿಕೆಯಾಗಿದೆ. ಮಸೀದಿಯಲ್ಲಿ ಫೋಟೊ, ವಿಡಿಯೋ ಒಳಗೊಂಡ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಂಭಲ್‌ನ ಸಿವಿಲ್‌ ಕೋರ್ಟ್‌ ಹೇಳಿತ್ತು. ಆದರೆ ಸಮೀಕ್ಷೆಗೆ ತೆರಳಿದ್ದ ವೇಳೆ ಕಲ್ಲು ತೂರಾಟ ನಡೆದು ಘರ್ಷಣೆ ಉಂಟಾಗಿತ್ತು. ಈಗ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್‌, ಸಿವಿಲ್‌ ಕೋರ್ಟ್ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಈ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದರು. 

    ಸಂಭಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹಾಗೇ ಮುಂದಿನ ವಿಚಾರಣೆಯನ್ನು 2025ರ ಜ.6ಕ್ಕೆ ನಿಗದಿ ಪಡಿಸಿದೆ. ಈಗಾಗಲೇ ಆಗಿರುವ ಸರ್ವೇ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ.

    ಸಂಭಲ್‌ನಲ್ಲಿ ಮೊಘಲ್‌ ಸಾಮ್ರಾಟ ಬಾಬರ್‌ 1526ರಲ್ಲಿ ಮಸೀದಿಯನ್ನು ಕಟ್ಟಿಸಿದ ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ಹರಿಹರ ದೇವಾಲಯವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಿರುವುದಾಗಿ ಆರೋಪಿಸಲಾಗಿದೆ.

    ಜ್ಞಾನವಾಪಿ ಮಸೀದಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ ಇದೆ. ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಳ್ಕರ್ 1780ರಲ್ಲಿ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯದಿಂದ ಇದು ಸ್ವಲ್ಪ ದೂರದಲ್ಲಿದೆ. ಈ ಮಸೀದಿ ವಿಶ್ವೇಶ್ವರ ದೇವಾಲಯದ ಅವಶೇಷಗಳ ಮೇಲೆ ನಿಂತಿದೆ ಎನ್ನಲಾಗಿದೆ. 12ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ಇದನ್ನು ನಾಶ ಮಾಡಿದ ಎನ್ನಲಾಗಿದೆ. ಈ ವಿವಾದ ಸಂಬಂಧ ಸರ್ವೆ ನಡೆದಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

    ಭೋಜ ಶಾಲಾ-ಕಮಲ್‌ ಮೌಲಾ: ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಈ ಸ್ಥಳವಿದೆ. 1034ರಲ್ಲಿ ಮಧ್ಯಪ್ರದೇಶದ ಧಾರ್‌ನಲ್ಲಿ ವಾಗ್ದೇವಿ ದೇಗುಲ ನಿರ್ಮಾಣ ಮಾಡಲಾಗಿತ್ತು. ಅಲ್ಲಾವುದ್ದೀನ್‌ ಖಿಲ್ಜಿ 13ನೇ ಶತಮಾನದಲ್ಲಿ ಮಸೀದಿ ನಿರ್ಮಿಸಿದ್ದ ಎಂಬುದು ಹಿಂದೂಗಳ ವಾದ. ಇನ್ನೂ ದೇಗುಲ ನಾಶ ಆಗಿರಲಿಲ್ಲ. 1291ರಲ್ಲಿ ಮೌಲಾ ಕಮಾಲುದ್ದೀನ್‌ ಚಿಸ್ತಿ ಎಂದ ಸೂಫಿ ಸಂತ ಅಲ್ಲಿಗೆ ಬಂದಿದ್ದ. ಆತನ ಕಾಲಾನಂತರ ಮಸೀದಿ ಜತೆಗೆ ಸಮಾಧಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರವಾದವಾಗಿದೆ. 

    ಬಿಜಾ ಮಂಡಲ್‌ ಮಸೀದಿ: ಮಧ್ಯಪ್ರದೇಶದ ವಿದಿಶಾದಲ್ಲಿರುವ ಧಾರ್ಮಿಕ ಸ್ಥಳ ಇದಾಗಿದೆ. ಇಲ್ಲಿರುವುದು ವಿಜಯ ಸೂರ್ಯ ಮಂದಿರವಾಗಿದೆ. 11ನೇ ಶತಮಾನದಲ್ಲಿ ಚಾಲುಕ್ಯ ರಾಜ ಮನೆತನಕ್ಕೆ ಸೇರಿದ ವಾಚಸ್ಪತಿ ಇಲ್ಲಿ ಭವ್ಯವಾದ ಸೂರ್ಯ ಮಂದಿರವನ್ನು ನಿರ್ಮಾಣ ಮಾಡಿದ್ದ  ಇದು ಹಿಂದೂ ಸಮುದಾಯಕ್ಕೆ ಸೇರಿದ ಸ್ಥಳ ಎಂಬುದು ಹಿಂದೂಗಳವಾದ. ಇನ್ನೂ 1951ರ ಗೆಜೆಟ್‌ ಪ್ರಕಾರ ಅದು ಸಮುದಾಯಕ್ಕೆ ಸೇರಿದ್ದು. ಅದು ದೇಗುಲಕ್ಕೆ ಸೇರಿದ ಜಾಗ ಅಲ್ಲ. ಅಲ್ಲಿ ಸರ್ಕಾರದ ವತಿಯಿಂದಲೇ ಮಸೀದಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರ ವಾದವಾಗಿದೆ. 

    ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ: ಉತ್ತರಪ್ರದೇಶದ ಮಥುರಾದಲ್ಲಿರುವ ಸ್ಥಳ ಇದಾಗಿದೆ. ಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದಲ್ಲಿ ದೇಗುಲ ನಿರ್ಮಾಣವಾಗಿತ್ತು. ಅದನ್ನು ಕೆಡವಿ ಹಾಕಿ ಒಟ್ಟು 13.37 ಎಕ್ರೆ ಪ್ರದೇಶದಲ್ಲಿ ಕಾಲಾನಂತರದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಹಿಂದೂಗಳ ವಾದವಾಗಿದೆ. ಮಸೀದಿ ಎನ್ನುವುದು ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿಲ್ಲ. 1968ರ ಒಪ್ಪಂದದ ಪ್ರಕಾರ ಜಮೀನಿನ ಆಂಶಿಕ ಭಾಗವನ್ನು ಮಸೀದಿ ಆಡಳಿತ ಮಂಡಳಿಗೆ ನೀಡಿತ್ತು ಎಂಬುದು ಮಸ್ಲಿಮರ ವಾದವಾಗಿದೆ. 

    ತಾಜ್‌ಮಹಲ್‌: ಆಗ್ರಾದಲ್ಲಿರುವುದು ತಾಜ್‌ ಮಹಲ್‌ ಅಲ್ಲ, ತೇಜೋಆಲಯ ಎಂಬುದು ಕೆಲವರ ವಾದ. ಈ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ಗೆ ಬಿಜೆಪಿ ನಾಯಕ ರಜನೀಶ್‌ ಸಿಂಗ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರು ತಮ್ಮ ಅರ್ಜಿಯಲ್ಲಿ ತಾಜ್‌ಮಹಲ್‌ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯಿಂದ ಸರ್ವೇ ನಡೆಸಬೇಕು. ಮುಚ್ಚಿರುವ 22 ಕೋಣೆಗಳ ಒಳಗೆ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ತಿರಸ್ಕರಿಸಿರುವ ಕೋರ್ಟ್‌, ಈ ಕುರಿತಂತೆ ಇತಿಹಾಸಕಾರರು ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದೆ.

    ಕುತುಬ್‌ ಮಿನಾರ್‌: 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ, ಕುತುಬ್‌ ಮಿನಾರ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ದಿನಗಳಂದು ಪೂಜೆ ಮಾಡಬಹುದು ಎಂದು ಆದೇಶ ನೀಡಿದೆ. ಅಂದರೆ ಹಿಂದೂಗಳ ಪ್ರಕಾರ, ಕುತುಬ್‌ ಮಿನಾರ್‌ ಅಂದರೆ ಸರಸ್ವತಿ ದೇಗುಲವಾಗಿದ್ದು, ಇದನ್ನು ಬೋಜಶಾಲೆ ಎಂದು ಕರೆಯಲಾಗುತ್ತದೆ. ಆದರೆ ಮುಸ್ಲಿಮರು ಇದು ಮಸೀದಿಯೇ ಎಂದು ಹೇಳುತ್ತಿದ್ದಾರೆ ಎಂದು ವಾದಿಸುತ್ತಿವೆ. 2021ರ ನವೆಂಬರ್‌ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸ್ಥಳೀಯ ಕೋರ್ಟ್‌ ತಿರಸ್ಕರಿಸಿತ್ತು.

    ಜಾಮೀಯಾ ಮಸೀದಿ: ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ಕೆಲವು ವಿವಾದಗಳಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಹಿಂದೆ ಹನುಮಾನ್‌ ದೇಗುಲವಾಗಿತ್ತು. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ ಸ್ಥಳದ ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ, ಟಿಪ್ಪು ಸುಲ್ತಾನ್‌ ಕಾಲದಲ್ಲಿ ಇಲ್ಲಿದ್ದ ಹನುಮಾನ್‌ ದೇಗುಲವನ್ನು ಕೆಡವಿ, ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದ್ದವು. 

    ಮಳಲಿ ಮಸೀದಿ ಕಟ್ಟಡ: ಮಂಗಳೂರು ತಾಲೂಕಿನ ಗಂಜೀಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ಪ್ರಾಚೀನ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಕಾಣಿಸಿದೆ. ಮಸೀದಿಯನ್ನು ನವೀಕರಿಸುವ ಉದ್ದೇಶಕ್ಕಾಗಿ ಕೆಲಸ ನಡೆಯುತ್ತಿದ್ದ ವೇಳೆ ದೇಗುಲ ಮಾದರಿಯ ರಚನೆ ಕಾಣಿಸಿತ್ತು. ಅನಂತರ ವಿವಿಧ ಸಂಘಟನೆಗಳು, ಪೊಲೀಸರು ಭೇಟಿ ನೀಡಿದ್ದು, ತತ್‌ಕ್ಷಣದಿಂದಲೇ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. 

    ಕೆಲವರು ಇದೊಂದು ದೇಗುಲದ ರಚನೆ ಎಂದಿದ್ದಾರೆ. ಇನ್ನು ಕೆಲವರು ಇದೊಂದು ಬಸದಿಯ ರಚನೆಯಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸದ್ಯ ಯಾವುದೇ ಕಾಮಗಾರಿ ನಡೆಸದಂತೆ  ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ನಡುವೆ ಕೋರ್ಟ್‌ಗೆ ಕೂಡ ದೂರು ನೀಡಲಾಗಿದ್ದು, ಅಲ್ಲಿ ತಡೆ ಯಾಜ್ಞೆ ನೀಡಲಾಗಿತ್ತು. ಇದು ವಿಚಾರಣೆ ಹಂತದಲ್ಲಿದೆ.

    ‘1991ರ ಪೂಜಾ ಸ್ಥಳಗಳ ಕಾಯ್ದೆ

    ‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು.

    ಈ ಕಾಯ್ದೆಯ 4ನೇ ವಿಧಿಯ ಅನ್ವಯ, ಆಗಸ್ಟ್‌ 15, 1947ಕ್ಕೆ ಮುನ್ನ ಯಾವುದೇ ಧಾರ್ಮಿಕ ಸ್ಥಳದ ‘ಧಾರ್ಮಿಕ ಸ್ವರೂಪ’ ಬದಲಾಯಿಸಿ ಎಂದು ದೇಶದ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಅದು ವಿಚಾರಣೆಯ ಯಾವ ಹಂತದಲ್ಲಿ ಇದ್ದರೂ ರದ್ದುಪಡಿಸಬೇಕು. ಹೊಸ ಅರ್ಜಿಗಳನ್ನಂತೂ ಸ್ವೀಕರಿಸುವಂತೆಯೇ ಇಲ್ಲ.

    ‘1991ರ ಪೂಜಾ ಸ್ಥಳಗಳ ಕಾಯ್ದೆ’ಯ 3ನೇ ವಿಧಿಯ ಪ್ರಕಾರ, ಯಾವುದೇ ಧಾರ್ಮಿಕ ಸ್ಥಳದ ಯಾವುದೇ ಧಾರ್ಮಿಕ ವಿಧಿ ವಿಧಾನವನ್ನೂ ಬದಲಿಸುವಂತಿಲ್ಲ. ಪೂಜಾ ವಿಧಿ ವಿಧಾನವನ್ನು ಮಾರ್ಪಡಿಸುವಂತಿಲ್ಲ. ಅದೇ ಧರ್ಮದ ಬೇರೆ ಪಂಗಡದ ವಿಧಿ ವಿಧಾನವನ್ನೂ ಆಚರಿಸುವಂತಿಲ್ಲ.

    ಆದರೆ, ಯಾವುದೇ ಧಾರ್ಮಿಕ ಸ್ಥಳವು ಪ್ರಾಚೀನವಾಗಿದ್ದರೆ, ಐತಿಹಾಸಿಕ ಸ್ಮಾರಕವಾಗಿದ್ದರೆ, ಪ್ರಾಚ್ಯವಸ್ತು, ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರದೇಶವಾದರೆ, ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. 

    1991ರ ಪೂಜಾ ಸ್ಥಳಗಳ ಕಾಯ್ದೆ’ ಜಾರಿಗೆ ತಂದಿದ್ದು ಏಕೆ..?

    1991ರಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಸಂಪುಟದ ಗೃಹ ಸಚಿವ ಶಂಕರ್‌ ರಾವ್ ಭವರ್‌ರಾವ್ ಚೌಹಾಣ್ ಅವರು ಈ ಕಾಯ್ದೆಯಲ್ಲಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆದ ಬಳಿಕ ಕಾನೂನು ಜಾರಿಯಾಗಿತ್ತು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಕೈಗೊಂಡಿದ್ದ ರಾಮಜನ್ಮಭೂಮಿ ರಥಯಾತ್ರೆಗೆ ಆ ದಿನಗಳಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಈ ವೇಳೆ, ಕೋಮು ಸೌಹಾರ್ದತೆ ಕಾಪಾಡುವ ಸಲುವಾಗಿ ಕಾಯ್ದೆ ಜಾರಿಗೆ ತಂದಿದ್ದಾಗಿ ಪಿ. ವಿ. ನರಸಿಂಹ ರಾವ್ ಸರ್ಕಾರ ಹೇಳಿಕೊಂಡಿತ್ತು. 

    ಪೂಜಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಕಾಯ್ದೆಯ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. 

  • ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ರಾಮನಗರ: ಜ್ಞಾನವಾಪಿ ಮಸೀದಿಯ (Gyanvapi Mosque) ನೆಲ ಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ, ಫೇಸ್‍ಬುಕ್‍ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ರಾಮನಗರ (Ramanagara) ಮೂಲದ ವಕೀಲನನ್ನ (Lawyer) ಪೊಲೀಸರು  (Police) ಬಂಧಿಸಿದ್ದಾರೆ.

    ಬಂಧಿತ ವಕೀಲನನ್ನು ಚಾನ್ ಪಾಷ ಎಂದು ಗುರುತಿಸಲಾಗಿದೆ. ಆರೋಪಿ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ವಿಚಾರಕ್ಕೆ ನ್ಯಾಯಾಧೀಶರನ್ನು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಪೋಸ್ಟ್‍ನಲ್ಲಿ ನ್ಯಾಯಾಧೀಶರನ್ನು ನಾಲಾಯಕ್, ಭ್ರಷ್ಟ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ – ನ್ಯಾಯಾಧೀಶರ ವಿರುದ್ಧ ವಕೀಲನಿಂದ ಅವಹೇಳನಕಾರಿ ಪೋಸ್ಟ್

    ಈ ಸಂಬಂಧ ಹಿಂದೂಪರ ಕಾರ್ಯಕರ್ತರು ಹಾಗೂ ಕೆಲ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ನ್ಯಾಯಾಂಗ ನಿಂದನೆ (Contempt Of Court) ಆರೋಪದಡಿ ಚಾನ್ ಪಾಷನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: 15 ಪತ್ರ ಬರೆದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ- ಚೆಲುವರಾಯಸ್ವಾಮಿ

  • ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ

    ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ

    ಲಕ್ನೋ: ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರಿಗಾಗಿ ಕೇವಲ 5 ಗ್ರಾಮಗಳನ್ನು ಮಾತ್ರ ಕೇಳಿದ್ದ. ಆದರಿಂದು ನಾವು ಪವಿತ್ರ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಅಯೋಧ್ಯೆ ಬಳಿಕ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಪಡೆದುಕೊಳ್ಳುವ ಸುಳಿವು ನೀಡಿದ್ದಾರೆ.

    ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವಾಗ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ (Ramlalla Pran Pratishtha) ಸಮಾರಂಭದ ಕುರಿತು ಮಾತನಾಡಿದರು. ಇದೇ ವೇಳೆ ಕಾಶಿ ಮತ್ತು ಮಥುರಾ (Mathura And Kashi) ವಿವಾದಿತ ಸ್ಥಳಗಳನ್ನೂ ಉಲ್ಲೇಖಿಸಿದರು. ಇದನ್ನೂ ಓದಿ: ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು: ಈರಣ್ಣ ಕಡಾಡಿ

    ಈ ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಅಯೋಧ್ಯೆಯು (Ayodhya) ಕರ್ಫ್ಯೂ ಮತ್ತು ನಿಷೇಧಗಳನ್ನು ಎದುರಿಸಿತ್ತು. ಶತಮಾನಗಳವರೆಗೆ, ಅಯೋಧ್ಯೆಯು ನೀಚ ಉದ್ದೇಶಗಳಿಗೆ ಬಲಿಯಾಯಿತು, ಅನ್ಯಾಯ ಎದುರಿಸಿತ್ತು. ನಾನು ಆ ಅನ್ಯಾಯದ ಬಗ್ಗೆ ಮಾತನಾಡುವಾಗ, 5,000 ವರ್ಷಗಳ ಹಿಂದೆ ನಡೆದ ಅನ್ಯಾಯದ ಬಗ್ಗೆ ಮಾತನಾಡಬೇಕಾಗುತ್ತದೆ. ಆ ಸಮಯದಲ್ಲಿ ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಅನ್ಯಾಯ ಸಂಭವಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಅವರು ʻಮಹಾಭಾರತʼವನ್ನು ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ಬೇರೆ ಸ್ಥಳಗಳ ಬಗ್ಗೆ ತಕರಾರಿಲ್ಲ:
    ಆ ಸಮಯದಲ್ಲಿ, ಕೃಷ್ಣನು ಕೌರವರ ಬಳಿಗೆ ಹೋಗಿ 5 ಗ್ರಾಮಗಳನ್ನು ಮಾತ್ರ ಬಿಟ್ಟುಕೊಡುವಂತೆ ಕೇಳಿದ. ಉಳಿದದ್ದನ್ನು ನಿನ್ನ ಬಳಿಯೇ ಇಟ್ಟುಕೊಳ್ಳಿ ಎಂದು ಕೃಷ್ಣ ಕೌರವರಿಗೆ ಹೇಳಿದ್ದ. ದುರ್ಯೋಧನ ಅದನ್ನೂ ಬಿಟ್ಟುಕೊಡಲಿಲ್ಲ ಎಂದು ಕವಿತೆ ಮೂಲಕ ಉದಾಹರಣೆ ಕೊಟ್ಟರು. ಆದ್ರೆ ನಾವು ಈಗ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ, ಇತರ ಸ್ಥಳಗಳ ಬಗ್ಗೆ ಯಾವುದೇ ತಕರಾರಿಲ್ಲ ಎಂದು ಸಿಎಂ ಹೇಳಿದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಅಯೋಧ್ಯೆ, ಮಥುರಾ ಮತ್ತು ವಾರಣಾಸಿಯ ತಾಣಗಳನ್ನು ಕೇಳುತ್ತಿದ್ದೇವೆ. ಅಯೋಧ್ಯೆ ರಾಮನ ಜನ್ಮಸ್ಥಳವಾಗಿದ್ದರೆ, ಮಥುರಾವನ್ನು ಕೃಷ್ಣನ ಜನ್ಮಸ್ಥಳ ಎಂದು ನಂಬಲಾಗಿದೆ. ವಾರಣಾಸಿಯಲ್ಲಿರುವ ಜ್ಞಾನವಾಪಿ ಸ್ಥಳವನ್ನು 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಏಕೆಂದರೆ ಹಿಂದೂ ಸಮಾಜವು ನಮ್ಮ ನಂಬಿಕೆಯ ಕೇಂದ್ರಗಳಾದ ಮೂರು ಕೇಂದ್ರಗಳನ್ನು ಮಾತ್ರ ಹುಡುಕುತ್ತಿದೆ. ಈ ಮೂರು ಕೇಂದ್ರಗಳು ನಂಬಿಕೆಗೆ ಬಹಳ ವಿಶೇಷವಾಗಿವೆ. ಇದನ್ನು ರಾಜಕೀಯಗೊಳಿಸಿದಾಗ ಮಾತ್ರ ವಿವಾದಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಇಶಾಗೆ ಡಿವೋರ್ಸ್‌ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್‌ ಅಫೇರ್‌ ಕಾರಣ?

  • ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ – ನ್ಯಾಯಾಧೀಶರ ವಿರುದ್ಧ ವಕೀಲನಿಂದ ಅವಹೇಳನಕಾರಿ ಪೋಸ್ಟ್

    ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ – ನ್ಯಾಯಾಧೀಶರ ವಿರುದ್ಧ ವಕೀಲನಿಂದ ಅವಹೇಳನಕಾರಿ ಪೋಸ್ಟ್

    ರಾಮನಗರ: ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಹಿಂದೂಗಳ ಪೂಜೆಗೆ ಅವಕಾಶ ನೀಡಿದ ವಿಚಾರವಾಗಿ ನ್ಯಾಯಾಧೀಶರ ವಿರುದ್ಧ ವಕೀಲನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾನೆ.

    ರಾಮನಗರದ (Ramanagara) ಐಜೂರಿನ ವಕೀಲ ಚಾನ್ ಪಾಷಾ ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ನ್ಯಾಯಾಧೀಶರ (Varanasi District Judge) ಬಗ್ಗೆ ಆವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಪೋಸ್ಟ್‌ನಲ್ಲಿ ನ್ಯಾಯಾಧೀಶರ ವಿರುದ್ಧ ನಾಲಾಯಕ್, ಚಡ್ಡಿ ನ್ಯಾಯಾಧೀಶ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದೀಗ ವಕೀಲನ ವಿರುದ್ಧ ಹಿಂದೂ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ವಕೀಲನ ವಿರುದ್ಧ ಕಾನೂನು ಕ್ರಮವಹಿಸುವಂತೆ ಹಿಂದೂ ಪರ ಸಂಘಟನೆಗಳ ಸದಸ್ಯರು ಆಗ್ರಹಿಸಿದ್ದಾರೆ. ಈ ಸಂಬಂಧ ಹಿಂದೂ ಸಂಘಟನೆಗಳ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದೆ. ಆತನನ್ನು ಬಂಧಿಸುವಂತೆ ನಿಯೋಗ ಒತ್ತಾಯಿಸಿದೆ. ಅಲ್ಲದೇ ರೌಡಿಶೀಟರ್ ಹಿನ್ನೆಲೆ ಹೊಂದಿರುವ ಚಾನ್ ಪಾಷಾನನ್ನು ಗಡಿಪಾರು ಮಾಡುವಂತೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.

    ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾಗಿತ್ತು. ಇದರ ಬೆನ್ನಲ್ಲೇ ವಾರಣಾಸಿ ನ್ಯಾಯಾಲಯ ( District Court Varanasi) ಜ.31ರಂದು ನೀಡಿದ್ದ ಆದೇಶದಲ್ಲಿ ನೆಲ ಮಹಡಿಯಲ್ಲಿರುವ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ ನೀಡಿತ್ತು. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

  • ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ

    ಲಕ್ನೋ: ಜ್ಞಾನವಾಪಿ (Gyanvapi) ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ (Varanasi Court) ಆದೇಶ ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಅಲಹಾಬಾದ್ ಹೈಕೋರ್ಟ್‍ನ (Allahabad High Court) ಮೆಟ್ಟಿಲೇರಿದೆ.

    ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರ ಮುಂದೆ ಹಿರಿಯ ವಕೀಲ ಎಸ್‍ಎಫ್‍ಎ ನಖ್ವಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ವಿಷಯವನ್ನು ತುರ್ತು ಪಟ್ಟಿಯಲ್ಲಿ ಸೇರಿಸಲು ರಿಜಿಸ್ಟ್ರಾರ್ ಬಳಿಗೆ ಹೋಗುವಂತೆ ನ್ಯಾಯಮೂರ್ತಿ ಸೂಚಿಸಿದ್ದಾರೆ. ಅದರಂತೆ ವಕೀಲ ನಖ್ವಿ ಪ್ರಕರಣವನ್ನು ತುರ್ತು ಪಟ್ಟಿ ಸೇರಿಸುವಂತೆ ರಿಜಿಸ್ಟ್ರಾರ್‍ಗೆ ಮನವಿ ಮಾಡಿದ್ದಾರೆ. ಸದ್ಯದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಜ.31 ರಂದು ಆದೇಶ ನೀಡಿತ್ತು. ಇದರ ವಿರುದ್ಧ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಸಮಿತಿ ಹೈಕೋರ್ಟ್ ಮೊರೆ ಹೋಗಿದೆ. ಈ ನಡುವೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಪೂಜೆ ಪ್ರಾರಂಭಗೊಂಡಿದೆ.

    ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಮುಚ್ಚಿದ ನೆಲಮಾಳಿಗೆ ತೆಹ್ಖಾನಾ ಒಳಗಡೆ ಹಿಂದೂಗಳು ಪೂಜಾ ವಿಧಿಗಳನ್ನು ನಡೆಸಲು 7 ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

  • ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌

    ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಹಿಂದೂಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

    ವಾರಣಾಸಿಯ ಜ್ಞಾನವಾಪಿ (Gyanvapi mosque) ʼವಜುಖಾನಾʼ (Wazukhana) ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಮಸೀದಿ ಸಂಕೀರ್ಣದ ವಜುಖಾನಾದ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೋರ್ಟ್ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ಈ ಕಟ್ಟಡದಲ್ಲಿ ಶಿವಲಿಂಗವಿದೆ ಎಂದು ಹಿಂದೂಗಳು ಹೇಳಿಕೊಂಡಿದ್ದರು. ಜ್ಞಾನವಾಪಿಯ ಮುಚ್ಚಿದ ಪ್ರದೇಶವನ್ನು ತೆರೆಯಬೇಕು ಮತ್ತು ತಕ್ಷಣ ಸ್ವಚ್ಛಗೊಳಿಸಬೇಕು ಎಂದು ಹಿಂದೂಗಳು ಮನವಿ ಸಲ್ಲಿಸಿದ್ದರು. ಇದೀಗ ಹಿಂದೂಗಳ ಬೇಡಿಕೆಯನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟ್ ಸ್ವಚ್ಛತೆಗೆ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತೆಗೆ ಕೋರ್ಟ್ ಅನುಮತಿ ನೀಡಿದೆ. ಇದನ್ನೂ ಓದಿ: ಕೃಷ್ಣ ಜನ್ಮಭೂಮಿ-ಶಾಹೀ ಈದ್ಗಾ ಮಸೀದಿ ಕೇಸ್‌; ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

    ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2022 ರಲ್ಲಿ ‘ವಜುಖಾನಾ’ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಇಲ್ಲಿ ‘ಶಿವಲಿಂಗ’ ಆಕಾರದ ಕಲ್ಲು ಪತ್ತೆಯಾಗಿದ್ದು, ನಂತರ ಅದನ್ನು ಮುಚ್ಚಲು ಆದೇಶ ನೀಡಲಾಗಿತ್ತು. 16 ಮೇ 2022 ರಂದು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಕೊಳವೊಂದು ಪತ್ತೆಯಾಗಿತ್ತು. ಇದನ್ನು ಹಿಂದೂಗಳು ‘ಶಿವಲಿಂಗ’ ಎಂದು ವಾದಿಸಿದರೆ, ಮುಸ್ಲಿಮರು ‘ಕಾರಂಜಿ’ ಎಂದು ಪ್ರತಿಪಾದಿಸಿದ್ದರು.

  • ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಲಕ್ನೋ: ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ (Gyanvapi Mosque Suit) ಹಿಂದೂ ಮಂದಿರ ಸ್ಥಾಪನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ಕೋರಿ ಮುಸ್ಲಿಮರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್‌ ಹೈಕೋರ್ಟ್‌ (Allahabad High Court) ವಜಾಗೊಳಿಸಿದೆ.

    ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಐದು ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್‌ ಜ್ಞಾನವಾಪಿ ವಿವಾದದಲ್ಲಿನ ಅರ್ಜಿಯನ್ನು ಪೂಜಾ ಸ್ಥಳಗಳ ಕಾಯ್ದೆಯ (Places of Worship Act) ನಿಬಂಧನೆಗಳಿಂದ ತಡೆಯುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?

    ಈ ಪ್ರಕರಣವು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ದೇಶದ ಎರಡು ಪ್ರಮುಖ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲದೇ ಆರು ತಿಂಗಳೊಳಗೆ ವಿಷಯವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

    ಪೂಜಾ ಸ್ಥಳಗಳ ಕಾಯ್ದೆ “ಧಾರ್ಮಿಕ ಸ್ವರೂಪ” ವನ್ನು ವ್ಯಾಖ್ಯಾನಿಸುವುದಿಲ್ಲ. “ಮತಾಂತರ” ಮತ್ತು “ಆರಾಧನಾ ಸ್ಥಳ”ಗಳನ್ನು ಮಾತ್ರ ಕಾಯಿದೆಯಡಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪ ಏನು ಎಂಬುದಕ್ಕೆ ಕಕ್ಷಿದಾರರು ನೀಡಿದ ಪುರಾವೆಯ ನಂತರವೇ ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳಬಹುದು. ಅಗತ್ಯವಿದ್ದಲ್ಲಿ ಎಎಸ್‌ಐ ಮತ್ತೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

    ಮಸೀದಿ ಪರ ವಕೀಲರ ವಾದ ಏನಿತ್ತು?
    1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಅಂಜುಮಾನ್‌ ಮಸೀದಿಯ ಪರ ವಕೀಲರು ವಾದಿಸಿದ್ದರು.

    ಹಿಂದೆ ವಾರಣಾಸಿ ಕೋರ್ಟ್‌ ಹೇಳಿದ್ದು ಏನು?
    ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್‌ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು 2022ರ ಸೆಪ್ಟೆಂಬರ್‌ನಲ್ಲಿ ವಾರಣಾಸಿ ಜಿಲ್ಲಾ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.

    1991ರ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿದೆ ಅರ್ಜಿ
    ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ.

     

  • ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ

    ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ

    ನವದೆಹಲಿ: ಜ್ಞಾನವಾಪಿ (Gyanvapi) ಸಮೀಕ್ಷೆಯ ವರದಿಯನ್ನು (Survey Report) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ವರದಿ ಸಲ್ಲಿಕೆಗೆ ನಾಲ್ಕು ವಾರದ ಸಮಯ ವಿಸ್ತರಣೆಯಾದ ಬಳಿಕ ಇಂದು ಅಂತಿಮವಾಗಿ ನ್ಯಾ. ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರಿಗೆ ಎಎಸ್‌ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಅವಿನಾಶ್ ಮೊಹಾಂತಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದಾರೆ.

    ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ಆದೇಶದ ಮೇರೆಗೆ ಎಎಸ್‌ಐ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಜು.24ರಂದು ಸರ್ವೆ ಕಾರ್ಯ ಆರಂಭಿಸಲಾಗಿತ್ತು, ನ.2ರಂದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು. ಸರ್ವೆ ಬಳಿಕ ವರದಿಯನ್ನು ಸಿದ್ಧಪಡಿಸಲು 15 ದಿನಗಳ ಹೆಚ್ಚುವರಿ ಸಮಯ ನೀಡಲಾಗಿತ್ತು. ಬಳಿಕ ವಿವಿಧ ಹಂತದಲ್ಲಿ ನ್ಯಾಯಾಲಯವು ವರದಿ ಸಲ್ಲಿಸಲು ನಾಲ್ಕು ಬಾರಿ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು. ಡಿಸೆಂಬರ್ 21 ರಂದು ಅರ್ಜಿದಾರರೊಂದಿಗೆ ಈ ವರದಿಯನ್ನು ಹಂಚಿಕೊಳ್ಳಲಾಗುವುದು ಮತ್ತು ಅದರ ಪ್ರತಿಯನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಗುವುದು. ಇದನ್ನೂ ಓದಿ: ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ವರದಿಯ ಸಲ್ಲಿಕೆ ಕುರಿತು ಮಾತನಾಡಿದ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್, ಎಎಸ್‌ಐ ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯದ ಮುಂದೆ ತನ್ನ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಸಲ್ಲಿಸಿದೆ. 17 ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಎಎಸ್‌ಐ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಾಗಿದೆ ಎಂದರು. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಅಲಹಾಬಾದ್ ಹೈಕೋರ್ಟ್ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಬಳಿಕ ಸಮೀಕ್ಷೆಯು ಪ್ರಾರಂಭವಾಯಿತು. ಅಲಹಾಬಾದ್ ಹೈಕೋರ್ಟಿನ ಆದೇಶದ ನಂತರ, ಜ್ಞಾನವಾಪಿ ಸಮಿತಿಯು ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಸಿಜೆಐ ಡಿ.ವೈ ಚಂದ್ರಚೂಡ್ ಪೀಠ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

  • ಜ್ಞಾನವಾಪಿ ಮಸೀದಿ ವಿವಾದ – ಇಂದು ಜಿಲ್ಲಾ ಕೋರ್ಟ್‌ಗೆ ವರದಿ ಸಲ್ಲಿಕೆ

    ಜ್ಞಾನವಾಪಿ ಮಸೀದಿ ವಿವಾದ – ಇಂದು ಜಿಲ್ಲಾ ಕೋರ್ಟ್‌ಗೆ ವರದಿ ಸಲ್ಲಿಕೆ

    ಲಕ್ನೋ: ಜ್ಞಾನವಾಪಿ (Gyanvapi)  ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂದು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

    ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿ (Avinash Mohanty) ಅವರ ರಕ್ತದೊತ್ತಡ ಹಠಾತ್ ಹೆಚ್ಚಳ ಮತ್ತು ಆರೋಗ್ಯ ಹದಗೆಟ್ಟಿದ್ದರಿಂದ ಡಿಸೆಂಬರ್ 11ರಂದು ವರದಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಕೋರ್ಟ್ ಒಂದಿ ವಾರದ ಸಮಯ ನೀಡಿತ್ತು. ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ಆದೇಶದ ಮೇರೆಗೆ ಎಎಸ್‍ಐ ಜ್ಞಾನವಾಪಿ ಮಸೀದಿಯಮ ಆವರಣದಲ್ಲಿ ಜುಲೈ 24ರಂದು ಸರ್ವೆ ಕಾರ್ಯ ಆರಂಭಿಸಲಾಗಿದ್ದು, ನವೆಂಬರ್ ನ.2ರಂದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು.

    ಸರ್ವೆ ಬಳಿಕ ವರದಿಯನ್ನು ಸಿದ್ಧಪಡಿಸಲು 15 ದಿನಗಳ ಹೆಚ್ಚುವರಿ ನೀಡಲಾಗಿತ್ತು. ಬಳಿಕ ವಿವಿಧ ಹಂತದಲ್ಲಿ ನ್ಯಾಯಾಲಯವು ವರದಿ ಸಲ್ಲಿಸಲು ನಾಲ್ಕು ಬಾರಿ ಹೆಚ್ಚುವರಿ ಸಮಯವನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಎಎಸ್‍ಐ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರಾ ಅಥವಾ ಮತ್ತೊಮ್ಮೆ ಹೆಚ್ಚುವರಿ ಕಾಲಾವಕಾಶ ಕೋರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ

  • ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ

    ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ

    ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ (Gyanvapi Mosque) ಪತ್ತೆಯಾದ ಶಿವಲಿಂಗವನ್ನು (Shivling) ಕಾರ್ಬನ್ ಡೇಟಿಂಗ್ (Carbon Dating) ಸೇರಿದಂತೆ ವೈಜ್ಞಾನಿಕ ಸಮೀಕ್ಷೆಗೆ (Scientific Survey) ಒಳಪಡಿಸುವಂತೆ ಅಲಹಬಾದ್ ಹೈಕೋರ್ಟ್ (Allahabad High Court) ಶುಕ್ರವಾರ ಆದೇಶಿಸಿದೆ.

    ಅಲಹಬಾದ್ ಹೈಕೋರ್ಟ್ ಶುಕ್ರವಾರ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾಗಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅನುಮತಿ ನೀಡಿದೆ.

    ಕಳೆದ ವರ್ಷ ಜ್ಞಾನವಾಪಿ ಮಸೀದಿಯ ಆವರಣದೊಳಗೆ ವೀಡಿಯೋ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಶಿವಲಿಂಗದAತಹ ಆಕೃತಿಯೊಂದು ಪತ್ತೆಯಾಗಿದ್ದು, ಬಳಿಕ ಭಾರೀ ವಿವಾದಕ್ಕೆ ಕಾರಣವಾಯಿತು. ಹಿಂದೂ ಕಡೆಯವರು ಪತ್ತೆಯಾದ ಆಕೃತಿಯನ್ನು ಶಿವಲಿಂಗ ಎಂದು ಹೇಳಿಕೊಂಡರೆ ಮುಸ್ಲಿಂ ಕಡೆಯವರು ಇದು ಕಾರಂಜಿ ಎಂದು ವಾದಿಸಿದರು. ಬಳಿಕ ಆ ಆಕೃತಿಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸಬೇಕು ಎಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು

    ಮಸೀದಿ ಸಂಕೀರ್ಣದೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪೂಜೆ ಮಾಡಲು 5 ಹಿಂದೂ ಮಹಿಳೆಯರು ಮನವಿ ಮಾಡಿಕೊಂಡಿದ್ದರು. 5 ಅರ್ಜಿದಾರರಲ್ಲಿ ನಾಲ್ವರು ಶಿವಲಿಂಗ ಎಷ್ಟು ವರ್ಷ ಹಳೆಯದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರ್ಬನ್ ಡೇಟಿಂಗ್ ಒಳಗೊಂಡAತೆ ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿಕೊಂಡಿದ್ದರು. ಇದನ್ನೂ ಓದಿ: ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್ – ವಿದ್ಯುತ್‌ ದರ ಹೆಚ್ಚಳ