Tag: ಜ್ಞಾನದೀವಿಗೆ

  • ಜ್ಞಾನದೀವಿಗೆ ಅಭಿಯಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿ: ಸುರೇಶ್ ಕುಮಾರ್

    ಜ್ಞಾನದೀವಿಗೆ ಅಭಿಯಾನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿ: ಸುರೇಶ್ ಕುಮಾರ್

    ಚಿತ್ರದುರ್ಗ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ಮಹಾಮಾರಿಯಿಂದಾಗಿ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ತರಗತಿಯಲ್ಲಿ ಪಾಠ ಕೇಳಲಾಗದೇ ಪರೀಕ್ಷೆ ಹೇಗೆ ಬರೆಯೋದು ಎಂಬ ಆತಂಕದಲ್ಲಿದ್ದ ಗ್ರಾಮೀಣ ಪ್ರದೇಶದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಪಬ್ಲಿಕ್ ಟಿವಿ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಪರೀಕ್ಷೆ ಪೂರ್ವಸಿದ್ಧತಾ, ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಂವಾದದಲ್ಲಿ ಭಾಗಿಯಾಗಿದ್ದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಧುಗಿರಿ ಜಿಲ್ಲೆಗಳ ಡಿಡಿಪಿಐ, ಡಿಡಿಪಿಯು ಹಾಗೂ ಬಿಇಓಗಳೊಂದಿಗೆ ಚರ್ಚಿಸುವಾಗ ಪಬ್ಲಿಕ್ ಟಿವಿ ಸೇವೆಯನ್ನು ಮನಸಾರೆ ಸ್ಮರಿಸಿದ್ದಾರೆ.

    ಮುಂಬರುವ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಪೂರಕವಾಗಿ ಸಹಕರಿಸಿದ ಸೇವಾ ಸಂಸ್ಥೆಗಳು ಹಾಗೂ ವಾಹಿನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮೊಟ್ಟ ಮೊದಲನೆಯದಾಗಿ ಪಬ್ಲಿಕ್ ಟಿವಿ, ರೋಟರಿಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಜ್ಞಾನದೀವಿಗೆ ಕಾರ್ಯಕ್ರಮವನ್ನು ನಾವು ಮರೆಯುವಂತಿಲ್ಲ. ಈ ಟ್ಯಾಬ್ ವಿತರಣೆ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಕೋವಿಡ್ ಭೀತಿಯಿಂದಾಗಿ ತರಗತಿಯಿಂದ ವಂಚಿತರಾಗಿ ನೇರವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಹೀಗಾಗಿ ಪಬ್ಲಿಕ್ ಟಿವಿ ಕಾರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.

  • ತುಮ್ಮನಹಳ್ಳಿ ಮಕ್ಕಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಿಸಿದ ವಕೀಲೆ

    ತುಮ್ಮನಹಳ್ಳಿ ಮಕ್ಕಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಿಸಿದ ವಕೀಲೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಆರಂಭಿಸಲಾಗಿರುವ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಉಚಿತ ಟ್ಯಾಬ್ ವಿತರಿಸಲಾಯಿತು.

    ತುಮ್ಮನಹಳ್ಳಿ ಶಾಲೆಯ 36 ವಿದ್ಯಾರ್ಥಿಗಳಿಗೆ 18 ಟ್ಯಾಬ್‍ಗಳನ್ನ ವಿತರಿಸಲಾಯಿತು. ಶಾಲೆಯಲ್ಲಿ ವ್ಯಾಸಂಗ ಮಾಡಿ ಸದ್ಯ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾದ ವಾಣಿ ಹರೀಶ್ ಗೌಡ ರವರು ಈ ಉಚಿತ ಟ್ಯಾಬ್‍ಗಳನ್ನ ಕೊಡುಗೆ ನೀಡಿದ್ದಾರೆ. ಸ್ವತಃ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನ ಸದ್ಭಳಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದೇಣಿಗೆ ನೀಡಿದ ವಾಣಿ ಹರೀಶ್ ಗೌಡರವರಿಗೆ ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • ಜ್ಞಾನದೀವಿಗೆ ಉಚಿತ ಟ್ಯಾಬ್ ವಿತರಿಸಿದ ಸಚಿವ ಸುಧಾಕರ್

    ಜ್ಞಾನದೀವಿಗೆ ಉಚಿತ ಟ್ಯಾಬ್ ವಿತರಿಸಿದ ಸಚಿವ ಸುಧಾಕರ್

    – ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಣೆ

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಮಾಡುತ್ತಿರುವ ಅಂಗವಾಗಿ ಇಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಸುಧಾಕರ್ ಟ್ಯಾಬ್ ವಿತರಣೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಂದು ಸಚಿವ ಸುಧಾಕರ್ ಸಾಂಕೇತಿಕವಾಗಿ ಟ್ಯಾಬ್ ವಿತರಿಸಿದರು. ಇಂದು ಬಿಬಿ ರಸ್ತೆಯ ಪ್ರೌಢಶಾಲೆಯ 201 ಮಂದಿ ವಿದ್ಯಾರ್ಥಿಗಳಿಗೆ 102 ಟ್ಯಾಬ್ ವಿತರಿಸಲಾಯಿತು.

    ಸಚಿವ ಸುಧಾಕರ್ ಪಬ್ಲಿಕ್ ಟಿವಿ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ್ದು, ಇಡೀ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಟ್ಯಾಬ್ ವಿತರಣೆ ಮಾಡುವುದಾಗಿ ತಿಳಿಸಿದರು. ಟ್ಯಾಬ್ ವಿತರಿಸಿ ಮಾತನಾಡಿದ ಅವರು, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್ ಆರ್ ರಂಗನಾಥ್ ಅವರ ಸಮಾಜಮುಖಿ ಕಾರ್ಯವನ್ನ ಕೊಂಡಾಡಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು, ಸಚಿವ ಸುಧಾಕರ್ ಹಾಗೂ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

  • ಮಂಗಳೂರಿನ ನಾಲ್ಯಪದವು ಶಾಲಾ ಮಕ್ಕಳಿಗೆ ವೇದವ್ಯಾಸ ಕಾಮತ್ ದೇಣಿಗೆಯಿಂದ ಟ್ಯಾಬ್‌ ವಿತರಣೆ

    ಮಂಗಳೂರಿನ ನಾಲ್ಯಪದವು ಶಾಲಾ ಮಕ್ಕಳಿಗೆ ವೇದವ್ಯಾಸ ಕಾಮತ್ ದೇಣಿಗೆಯಿಂದ ಟ್ಯಾಬ್‌ ವಿತರಣೆ

    ಮಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ ಜ್ಞಾನ ದೇವಿಗೆ ಕಾರ್ಯಕ್ರಮ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಶಕ್ತಿನಗರದ ನಾಲ್ಯಪದವು ಸರ್ಕಾರಿ ಫ್ರೌಡ ಶಾಲೆಯ 29 ವಿದ್ಯಾರ್ಥಿಗಳಿಗೆ 15 ಟ್ಯಾಬ್ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ದೇಣಿಗೆಯಿಂದ ಈ ಟ್ಯಾಬ್‍ಗಳನ್ನು ನೀಡಲಾಗಿದ್ದು ಸ್ವತಃ ಶಾಸಕರೇ ವಿತರಿಸಿದರು.

    ಟ್ಯಾಬ್‍ಗಳನ್ನು ಪಡೆದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಭರವಸೆ ನೀಡಿದರು. ಮನೆಯಲ್ಲಿ ಮೊಬೈಲ್ ಇದ್ದರೂ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಒಂದು ಮೊಬೈಲನ್ನು ಕುಟುಂಬದವರು ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಪಬ್ಲಿಕ್ ಟಿವಿ, ರೋಟರಿ ಸಂಸ್ಥೆಗೆ ಧನ್ಯವಾದ ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ, ಸ್ಥಳೀಯ ಕಾರ್ಪೋರೇಟರ್ ಗಳಾದ ವನಿತಾ ಪ್ರಸಾದ್ ಹಾಗೂ ಶಕೀಲಾ ಕಾವ, ರೋಟರಿ ಸಂಸ್ಥೆಯ ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಗವರ್ನರ್ ಡಾ.ಶಿವಪ್ರಸಾದ್, ಶಾಲಾಭಿವೃದ್ದಿ ಮಂಡಳಿಯ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿ, ರೋಟರಿ ಯಶಸ್ವಿ ಕಾರ್ಯಕ್ರಮದಲ್ಲಿ ನಾನು ಕೈ ಜೋಡಿಸಿದ್ದೇನೆ ಎಂಬುವುದು ಬಹಳ ಸಂತಸದ ವಿಚಾರ. ಸಾಮಾಜಿಕ ಚಟುವಟಿಕೆಯಲ್ಲಿ ಒಬ್ಬ ರಾಜಕಾರಣಿಯಾಗಿ ಬಹಳ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡ ಖುಷಿ ಆಗುತ್ತಿದೆ. ಮಾಧ್ಯಮವೊಂದು ಮಾದರಿ ಕಾರ್ಯಕ್ರಮ ಮಾಡುತ್ತಿದೆ. ಜನ ಮುಂದೆ ಬಂದು ಸರಕಾರಿ ಶಾಲೆಯ ವಿದ್ಯಾರ್ಥಿಗಳ ಹಿತಕ್ಕಾಗಿ ಸಹಾಯ ಮಾಡಬೇಕು ಎಂದು ಟ್ಯಾಬ್‍ನ ದಾನಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

    ಟ್ಯಾಬ್‍ಗಳನ್ನು ಹತ್ತನೇ ತರಗತಿ ವಿದ್ಯಾರ್ಥಿಗಳು ಬಳಸಿ ಮುಂದೆ ಅದನ್ನು ಶಾಲೆಗೆ ವಾಪಸ್ ಕೊಡಬೇಕು. ಇದು ಸರಕಾರಿ ಶಾಲೆಯ ಸೊತ್ತು. ಮಕ್ಕಳ ಮುಂದಿನ ಪರೀಕ್ಷೆಗೆ ಜೀವನಕ್ಕೆ ಜ್ಞಾನದೀವಿಗೆ ದಾರಿದೀಪವಾಗಲಿ. ಇಂತಹ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

  • 56 ಮಂದಿ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಣೆ

    56 ಮಂದಿ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಟ್ಯಾಬ್ ವಿತರಣೆ

    – ಸಾಫ್ಟ್‍ವೇರ್ ಎಂಜಿನಿಯರ್ ರವಿಕುಮಾರ್ ರಿಂದ ಕೊಡುಗೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಳೆಕೋಟೆ ಸರ್ಕಾರಿ ಪ್ರೌಢಶಾಲೆಯ 10ನೇ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ, ರೋಟರಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

    ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರವಿಕುಮಾರ್ ಪಬ್ಲಿಕ್ ಟಿವಿ ಸಮಾಜಮುಖಿಕಾರ್ಯ ಮೆಚ್ಚಿ ಟ್ಯಾಬ್‍ಗಳನ್ನ ಕೊಡುಗೆ ನೀಡಿದ್ದಾರೆ. ರವಿಕುಮಾರ್ ಅವರ ಅನುಪಸ್ಥಿತಿಯಲ್ಲಿ ನಿಮ್ಮ ಪಬ್ಲಿಕ್ ಟಿವಿ ತಂಡ ಶಾಲಾ ಮಕ್ಕಳಿಗೆ ಇಂದು ಉಚಿತ ಟ್ಯಾಬ್ ವಿತರಿಸಿದೆ.

    ಟ್ಯಾಬ್ ಪಡೆದುಕೊಂಡ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು ಪಬ್ಲಿಕ್ ಟಿವಿ ಹಾಗೂ ಸಹೃದಯಿ ದಾನಿಗಳಾದ ರವಿಕುಮಾರ್ ರವರಿಗ ಧನ್ಯವಾದಗಳನ್ನು ಅರ್ಪಿಸಿದರು. ಈ ಹಿಂದೆ ರವಿಕುಮಾರ್ ರವರು ಹಣಬೆ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ತಮ್ಮ ತಂದೆ ವ್ಯಾಸಂಗ ಮಾಡಿದ ಶಾಲೆ ಎಂಬ ನೆನಪಿನಾರ್ಥಕವಾಗಿ ಫ್ರೀ ಟ್ಯಾಬ್ ವಿತರಿಸಿದ್ದರು.

  • ಜ್ಞಾನದೀವಿಗೆಗೆ 2 ಲಕ್ಷ ನೀಡಿದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ

    ಜ್ಞಾನದೀವಿಗೆಗೆ 2 ಲಕ್ಷ ನೀಡಿದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ

    ಕಾರವಾರ: ಕಾರವಾರ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜ್ಞಾನದೀವಿಗೆಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ಶಾಲೆಗಳ ಎಸ್‍ಎಲ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುವ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಕಾರವಾರ ಮತ್ತು ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಅವರು ಎರಡು ಲಕ್ಷ ರುಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

    ಜ್ಞಾನ ದೀವಿಗೆ ಅಭಿಯಾನಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದ್ದು ಈ ಅಭಿಯಾನಕ್ಕೆ ಕೈ ಜೋಡಿಸುವ ಸಲುವಾಗಿ ನೂರಾರು ದಾನಿಗಳು ಸಹಾಯ ಹಸ್ತ ನೀಡಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಅವಶ್ಯಕತೆ ಇದೆ. ಈ ಟ್ಯಾಬ್‍ನಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ಸಹಾಯವಾಗಲಿದೆ. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗನಾಥ್ ರವರು ತುಂಬಾ ಮುತುವರ್ಜಿವಹಿಸಿ ಈ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಕೂಡ ಈ ಕಾರ್ಯಕ್ಕೆ ಕೈಜೋಡಿಸಿ ನಮ್ಮಿಂದ ಎಷ್ಟು ಸಹಕಾರ ಆಗುತ್ತದೋ ಅಷ್ಟು ಸಹಾಯವನ್ನು ನಿರಂತರವಾಗಿ ಮಾಡುತ್ತೇವೆ ಎಂದಿದ್ದಾರೆ.

    ಪಬ್ಲಿಕ್ ಟಿ.ವಿ ತಂಡ ಜ್ಞಾನದ ದೀಪವಾಗಿ ಬೆಳಗುತ್ತಿದೆ. ಸಮಾಜಕ್ಕೆ ಉತ್ತಮ ಕೆಲಸ ಮಾಡುವ ಮೂಲಕ ಸಂಸ್ಥೆ ಪ್ರತ್ಯೇಕವಾಗಿ ನಿಲ್ಲುತ್ತದೆ. ಇಡೀ ಪಬ್ಲಿಕ್ ಟಿವಿ ಬಳಗವನ್ನು ಶ್ಲಾಘಿಸುತ್ತೇನೆ. ಈ ಕಾರ್ಯಕ್ರಮದಿಂದ ಎಷ್ಟೋ ಬಡ ಮಕ್ಕಳ ಜೀವನದಲ್ಲಿ ಬೆಳಕು ಕಾಣುತ್ತಿದೆ ಎಂದು ಹೇಳಿದರು.

  • ಪಬ್ಲಿಕ್ ಟಿವಿ ಜ್ಞಾನದೀವಿಗೆ- ರಾಯಚೂರಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ಪಬ್ಲಿಕ್ ಟಿವಿ ಜ್ಞಾನದೀವಿಗೆ- ರಾಯಚೂರಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ರಾಯಚೂರು: ಪಬ್ಲಿಕ್ ಟಿವಿಯ ಮಹಾಯಜ್ಞ ಜ್ಞಾನದೀವಿಗೆ ಕಾರ್ಯಕ್ರಮ ಅಂಗವಾಗಿ ರಾಯಚೂರಿನ ಉಡಮಗಲ್ ಖಾನಾಪುರ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಂದು ಉಚಿತ ಟ್ಯಾಬ್ ವಿತರಿಸಲಾಯಿತು. ಆನ್‍ಲೈನ್ ತರಗತಿಗೆ ಬೇಸತ್ತಿರುವ ಗ್ರಾಮೀಣ ಭಾಗದ ಮಕ್ಕಳು ಖುಷಿಯನ್ನ ವ್ಯಕ್ತಪಡಿಸಿದರು.

    ಕೊರೊನಾ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳು ಹಿಂದುಳಿಯಬಾರದು ಅನ್ನೋ ಕಾರಣದಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಆರಂಭಿಸಿರುವ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ದಾನಿಗಳ ಮಹಾಪೂರವೇ ಹರಿದು ಬರುತ್ತಿದೆ. ದಾನಿಗಳ ಸಹಕಾರದಿಂದ ರಾಜ್ಯದ ಮೂಲೆ ಮೂಲೆಯ ಭಾಗದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ದೊರೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಉಡಮಗಲ್ ಖಾನಾಪುರ ಪ್ರೌಢಶಾಲೆಯ 103 ಮಕ್ಕಳಿಗೆ 51 ಟ್ಯಾಬ್ ಗಳನ್ನ ನೀಡಲಾಯಿತು.

    ರೋಟರಿ ಕ್ಲಬ್ ರಾಯಚೂರು ಸೆಂಟ್ರಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಆಯೋಜಿದ್ದ ಕಾರ್ಯಕ್ರಮದಲ್ಲಿ ದಾನಿಗಳಿಂದ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು. ಸ್ವತಃ ಉಡುಮಗಲ್ ಖಾನಾಪುರ ಪ್ರೌಢಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು 15 ಟ್ಯಾಬ್‍ಗಳನ್ನ ನೀಡಿದ್ದು ವಿಶೇಷ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು, ಗುರುರಾಜ ಸೇನೆ ಸೇರಿದಂತೆ ವಿವಿಧ ದಾನಿಗಳ ಸಹಕಾರದಿಂದ 51 ಟ್ಯಾಬ್‍ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಆನ್‍ಲೈನ್ ತರಗತಿ ಕಬ್ಬಿಣದ ಕಡಲೆಯಂತಾಗಿತ್ತು. ಶಾಲೆಯೂ ಇಲ್ಲಾ ಆನ್‍ಲೈನ್ ತರಗತಿಯೂ ಇಲ್ಲದೆ ಸರ್ಕಾರಿ ಶಾಲೆ ಮಕ್ಕಳು ಕೂಲಿಕೆಲಸಕ್ಕೆ ಹೋಗಿದ್ದಾರೆ. ಪಬ್ಲಿಕ್ ಟಿವಿ ಟ್ಯಾಬ್‍ಗಳಿಂದ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕುಳಿದು ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಅಂತ ದಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಟ್ಯಾಬ್‍ಗಳ ಸದ್ಬಳಕೆ ಜವಾಬ್ದಾರಿಯನ್ನ ಹೊತ್ತುಕೊಂಡಿರುವ ಶಾಲೆಯ ಶಿಕ್ಷಕರು ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್‍ಗೆ ಧನ್ಯವಾದ ಅರ್ಪಿಸಿದ್ದಾರೆ.

    ಕಾರ್ಯಕ್ರಮದಲ್ಲಿ ರಾಯಚೂರು ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ,ದಾನಿಗಳಾದ ಮಲ್ಲನಗೌಡ, ರಾಮು ಪರಿಟಾಲ, ಲಕ್ಷ್ಮಿಕಾಂತ್ ರೆಡ್ಡಿ, ರಂಗಾರಾವ್ ದೇಸಾಯಿ, ಪ್ರಭನಗೌಡ, ರೋಟರಿ ಕ್ಲಬ್‍ನ ರಾಯಚೂರು ಸೆಂಟ್ರಲ್ ಅಧ್ಯಕ್ಷ ಡಾ.ವಿಜಯ್ ಮಹಾಂತೇಶ್ ಹಾಗೂ ರೋಟರಿ ಕ್ಲಬ್‍ನ ನಿಜಾನಂದ್ ರೆಡ್ಡಿ, ಅಜಯ್ ಸೇರಿ ಇತರರು ಭಾಗವಹಿಸಿದ್ದರು.

  • ತಂದೆ ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಮಗ

    ತಂದೆ ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಮಗ

    – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ‘ಜ್ಞಾನದೀವಿಗೆ’ ಟ್ಯಾಬ್ ವಿತರಣೆ
    – ಮಕ್ಕಳಿಗೆ ಟ್ಯಾಬ್ ಕೊಟ್ಟ ರವಿಕುಮಾರ್

    ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಚಿತ ಟ್ಯಾಬ್ ವಿತರಣೆ ಮಾಡುವ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಮಹಾಯಜ್ಞ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಇಂದು ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಅವರು ತಮ್ಮ ತಂದೆ ಓದಿದ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು. ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ರವಿಕುಮಾರ್ ಟ್ಯಾಬ್ ಗಳನ್ನ ಸಹಾಯ ಮಾಡಿದರು. ತಮ್ಮ ತಂದೆ ರಾಮಮೂರ್ತಿಯವರು ವ್ಯಾಸಂಗ ಮಾಡಿದ ಹಣಬೆ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರವಿಕುಮಾರ್ ಇಂದು ಟ್ಯಾಬ್ ವಿತರಿಸಿದರು.

    ತಮ್ಮ ತಂದೆ, ತಾಯಿ ಕುಟುಂಬಸ್ಥರೊಂದಿಗೆ ಶಾಲೆಗೆ ಭೇಟಿ ನೀಡಿ 24 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 12 ಟ್ಯಾಬ್ ವಿತರಿಸಿದರು. ರವಿಕುಮಾರ್ ತಂದೆ ರಾಮಮೂರ್ತಿಯವರು ಮೂಲತಃ ಶಾಲೆ ಪಕ್ಕದ ಗ್ರಾಮ ಬೊಮ್ಮೇನಹಳ್ಳಿಯವರಾಗಿದ್ದು, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಇವರ ತಾಯಿ ಕಮಲಾವತಿ ಸಹ ಶಿಕ್ಷಕಿಯಾಗಿದ್ದವರು. ಹೀಗಾಗಿ ತಂದೆ ತಾಯಿಯ ಆಶಯದಂತೆ ಶಾಲೆಗೆ ಆಗಮಿಸಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಜೊತೆ ಸಹಯೋಗ ನೀಡಿರುವ ರೋಟರಿ ಸಂಸ್ಥೆಯ ಅವಿನಾಶ್, ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಿದ್ದರು. ಸ್ಥಳದಲ್ಲಿಯೇ ಟ್ಯಾಬ್ ನ ಉಪಯೋಗ ಹಾಗೂ ಬಳಕೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಕ್ಕಳಿಗೆ ವಿವರಿಸಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಹಾಗೂ ಟ್ಯಾಬ್ ಗಳಿಗೆ ದೇಣಿಗೆ ನೀಡಿದ ರವಿಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.

  • ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಜ್ಞಾನದೀವಿಗೆಗೆ ಬಿಜೆಪಿ ಮಾಜಿ ಶಾಸಕ ಎಸ್.ಮುನಿರಾಜು ನೆರವು

    ಬೆಂಗಳೂರು: ಸರ್ಕಾರಿ ಶಾಲೆಯ ಬಡ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೆರವಾಗಲು ರೋಟರಿ ಸಹಾಯೋಗದಿಂದಿಗೆ ನಡೆಸುತ್ತಿರುವ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಬೆಂಗಳೂರಿನ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ತಮ್ಮ ನೆರವಿನ ಹಸ್ತ ನೀಡಿದ್ದಾರೆ.

    ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಟ್ಯಾಬ್‌ನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್ ಮುನಿರಾಜು ಅವರು 40 ವಿದ್ಯಾರ್ಥಿಗಳಿಗೆ ನೆರವಾಗುವಂತೆ 20 ಟ್ಯಾಬ್‌ಗಳನ್ನು ನೀಡಲು ಮುಂದಾಗಿದ್ದಾರೆ.

    ಪಠ್ಯವನ್ನು ಒಳಗೊಂಡ ಎಲೆಕ್ಟ್ರಾನಿಕ್ ಟ್ಯಾಬ್‌ ನೀಡುವುದು ಉತ್ತಮ ಕಾರ್ಯಕ್ರಮ. ಈ ಪ್ರಯೋಜನವನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳು ಮುಂದಾಗಿ, ಗ್ರಾಮ, ಶಾಲೆ, ಗುರುಗಳು, ತಂದೆತಾಯಿಗೆ ಉತ್ತಮ ಕೀರ್ತಿ ಹೆಸರು ಬರುವಂತೆ ಮುಂದಾಗಬೇಕು. ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದಿದ್ದೇನೆ. ಹೀಗಾಗಿ ನಾನು ಕಿರು ಸಹಾಯವನ್ನು ನೀಡುತ್ತಿರುವುದಾಗಿ ಮುನಿರಾಜು ತಿಳಿಸಿದರು.

  • ಜ್ಞಾನ ದೀವಿಗೆಗೆ ಗೌರವ ಧನದ  ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಜ್ಞಾನ ದೀವಿಗೆಗೆ ಗೌರವ ಧನದ ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಉಡುಪಿ: ಪಬ್ಲಿಕ್ ಟಿವಿ ರಾಜ್ಯದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸರ್ಕಾರಿ ಶಾಲೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಒಂದು ಹೋರಾಟದ ಯೋಜನೆ. ನನ್ನಂತಹ ಸಾವಿರಾರು ಜನರಿಗೆ ಕಣ್ಣು ತೆರೆಸುವ ಯೋಜನೆಯಿದೆ. ನನ್ನ ಒಂದು ತಿಂಗಳ ಗೌರವಧನ ಮತ್ತು ಎರಡು ಟ್ಯಾಬ್ ನೀಡುವುದಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದರು.

    ಇದು ಮಕ್ಕಳ ಭವಿಷ್ಯ ನಿರ್ಣಯವಾಗುವ ವರ್ಷ. ಸರ್ಕಾರದಿಂದ ನನಗೆ ಪ್ರತಿ ತಿಂಗಳು ಗೌರವಧನ ಬರುತ್ತದೆ. ಈ ತಿಂಗಳ ನನ್ನ ಸಂಬಳವನ್ನು ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ನೀಡುತ್ತೇನೆ. ಇದರ ಜೊತೆಗೆ ಎರಡು ಟ್ಯಾಬ್ ನನ್ನ ವೈಯಕ್ತಿಕ ನೆಲೆಯಲ್ಲಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುತ್ತೇನೆ.

    ಇಂತಹ ಜನಪರ ಯೋಜನೆ ಮಾಧ್ಯಮದ ಮೂಲಕ ಆರಂಭವಾಗಿ ಸಮಾಜಕ್ಕೆ ಹೋದರೆ ಇದೊಂದು ಕ್ರಾಂತಿ ಆಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸದುಪಯೋಗವಾಗುವ ಎಷ್ಟು ಯೋಜನೆಗಳು ಬಂದರೂ ಅದಕ್ಕೆ ಖಂಡಿತವಾಗಿ ಜನ ಬೆಂಬಲ ಕೊಡಲೇಬೇಕು. ಈ ಜನಪರ ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸುವ ಯೋಜನೆಯಾಗಲಿ. ಆಯಾಯ ರಾಜ್ಯದ ಮಾಧ್ಯಮಗಳು, ಸಂಸ್ಥೆಗಳು ಸರ್ಕಾರಗಳು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದರು.

    ಶಾಲೆ ಆರಂಭ ಆಗುವ ಬಗ್ಗೆ ಸಾಕಷ್ಟು ಗೊಂದಲ ಪೋಷಕರಲ್ಲಿ ಮಕ್ಕಳಲ್ಲಿ ಸರ್ಕಾರದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬಹಳ ಕಷ್ಟ. ವಿದ್ಯಾಭ್ಯಾಸ ವಿಚಾರದಲ್ಲಿ ಮಕ್ಕಳ ಭವಿಷ್ಯ ಬಹಳ ಮುಖ್ಯ. ಶಾಲೆ ಆರಂಭವಾಗದಿದ್ದರೆ ಅವರ ಮುಂದಿನ ಭವಿಷ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಡೀ ವರ್ಷ ಶೂನ್ಯ ವರ್ಷ ಆಗುವ ಸಾಧ್ಯತೆ ಇದೆ.

    ಶ್ರೀಮಂತರ ಮಕ್ಕಳು ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಮಕ್ಕಳು ಸಾಲ ಮಾಡಿಯಾದರು ಮಕ್ಕಳಿಗೆ ಲ್ಯಾಪ್ಟಾಪ್ ಟ್ಯಾಬ್ ಮೊಬೈಲ್ ಕೊಡಿಸಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ಹೋಗುವ ಕಡುಬಡ ಮಕ್ಕಳು ಎಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕೊರೊನಾ ಸಂಕಷ್ಟ ಇದೆ. ಎಲ್ಲರನ್ನೂ ಆರ್ಥಿಕ ಸಂಕಷ್ಟ ಇದೆ. ಈ ನಡುವೆಯೂ ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಬೇಕು.

    ಎಲ್ಲವನ್ನು ಸರ್ಕಾರನೇ ಕೊಡಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಸಿರಿವಂತರು ಧನವಂತರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದವರು ತಮ್ಮ ಕೈಲಾದ ಸಹಾಯವನ್ನು ಬಡಮಕ್ಕಳಿಗೆ ಸಹಾಯ ಮಾಡಿ. ಆರಂಭವಾದ ಯೋಜನೆಯನ್ನು ಸರಕಾರ ಮುಂದೆ ಕೈಗೆತ್ತುಕೊಂಡು ಪ್ರತಿಯೊಬ್ಬರಿಗೂ ಕೂಡ ಜ್ಞಾನ ದೀವಿಗೆ ಟ್ಯಾಬ್ ಯೋಜನೆ ತಲುಪಬೇಕು. ಯೋಜನೆಗೆ ದಾರಿ ಗೊತ್ತಾಗಿದೆ ಆ ದಾರಿಯ ಮೂಲಕ ಮುನ್ನಡೆಯಬೇಕಾಗಿದೆ ಎಂದರು.