Tag: ಜೋಳದ ರೊಟ್ಟಿ

  • ಉತ್ತರ ಕರ್ನಾಟಕದ ಜೋಳದ ರೊಟ್ಟಿ ಮುಟಿಗಿ ಹೀಗೆ ಮಾಡಿ

    ಉತ್ತರ ಕರ್ನಾಟಕದ ಜೋಳದ ರೊಟ್ಟಿ ಮುಟಿಗಿ ಹೀಗೆ ಮಾಡಿ

    ಸಾಮಾನ್ಯವಾಗಿ ಉತ್ತರ ಕರ್ನಾಟಕದ (North Karnataka) ಕೆಲವು ತಿನಿಸುಗಳನ್ನು ಮಾಡುವುದು ತುಂಬಾ ಸುಲಭ. ಮಾಡುವುದು ಸುಲಭವಾದರೂ ವೇಗವಾಗಿ ಜನರನ್ನು ಆಕರ್ಷಿಸುತ್ತವೆ. ಈ ರೀತಿಯಾಗಿ ಜನರನ್ನು ಬಲು ಆಕರ್ಷಿಸಿದ ತಿನಿಸುಗಳಲ್ಲಿ ಇದು ಒಂದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು.

    ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಮಾಡುವುದು ಹೆಚ್ಚು. ಈ ಜೋಳದ ರೊಟ್ಟಿ ಮಾಡುವಾಗ ವಿಭಿನ್ನವಾಗಿ ಈ ಮುಟಿಗಿಯನ್ನು ಮಾಡಲು ಪ್ರಾರಂಭಿಸಿದರು. ಹೀಗೆ ಶುರುವಾದ ಮುಟಿಗಿ ಇಂದಿಗೂ ತುಂಬಾ ಹೆಸರು ಮಾಡಿದೆ. ಒಂದೊಂದು ಕಡೆ ಒಂದೊಂದು ರೀತಿಯಾಗಿ ಈ ಮುಟಿಗಿಯನ್ನು ಮಾಡುತ್ತಾರೆ. ಕೆಲವರು ಮುಟಿಗಿಯನ್ನು ಸರಳ ವಿಧಾನ ಅನುಸರಿಸಿ ಮಾಡಿದರೆ, ಇನ್ನೂ ಕೆಲವರು ಮಾಡುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    ಜೋಳದ ಹಿಟ್ಟು
    ಉಪ್ಪು
    ಎಣ್ಣೆ
    ಬೆಳ್ಳುಳ್ಳಿ

    ಮಾಡುವ ವಿಧಾನ:
    ಮೊದಲಿಗೆ ಜೋಳದ ಹಿಟ್ಟನ್ನು ಬಿಸಿ ನೀರಿನೊಂದಿಗೆ ರೊಟ್ಟಿ ಮಾಡುವ ಹದಕ್ಕೆ ಕಲಸಿಕೊಳ್ಳಬೇಕು. ಬಳಿಕ ರೊಟ್ಟಿಯನ್ನು ತಟ್ಟಿಕೊಂಡು ಬೇಯಿಸಿಕೊಳ್ಳಬೇಕು. ಆನಂತರ ಬಿಸಿ ರೊಟ್ಟಿಯನ್ನು ತಟ್ಟೆಯಂತೆ ಹಿಡಿದು ಅದಕ್ಕೆ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ ಹಾಗೂ ಸ್ವಲ್ಪ ಉಪ್ಪು ಹಾಕಿಕೊಳ್ಳಬೇಕು. ಎಲ್ಲ ಹಾಕಿದ ನಂತರ ರೊಟ್ಟಿಯನ್ನು ಮಡಚಿಕೊಂಡು ಅದರ ಮೇಲೆ ಕುಟ್ಟುವ ಕಲ್ಲಿನಿಂದ ಜಜ್ಜಿಕೊಳ್ಳಬೇಕು. ನಂತರ ರೊಟ್ಟಿ ಸ್ವಲ್ಪ ಸಣ್ಣಗಾದ ಮೇಲೆ ಅದನ್ನ ಉಂಡೆ ರೀತಿ ಕಟ್ಟಿಕೊಳ್ಳಬೇಕು. ಆಗ ಮುಟಿಗಿ ತಯಾರಾಗುತ್ತದೆ. ಮುಟಿಗಿಯನ್ನು ಬಿಸಿಬಿಸಿಯಾಗಿ ಸವಿದರೆ ತುಂಬಾ ಒಳ್ಳೆಯದು.

  • ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿಗೆ ಪ್ರಧಾನಿ ಮೋದಿ ಪ್ರಶಂಸೆ

    ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿಗೆ ಪ್ರಧಾನಿ ಮೋದಿ ಪ್ರಶಂಸೆ

    ನವದೆಹಲಿ/ಕಲಬುರಗಿ: ಬಿಸಿಲನಾಡು ಕಲಬುರಗಿಯ (Kalaburagi) ಖಡಕ್ ‘ಜೋಳದ ರೊಟ್ಟಿ’ಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪ್ರಶಂಸೆ ಸಿಕ್ಕಿದೆ. ಮಾತ್ರವಲ್ಲದೇ ಮಹಿಳೆಯರ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾನುವಾರ ತಮ್ಮ ಮನ್ ಕಿ ಬಾತ್‌ನ (Mann Ki Baat) 123ನೇ ಸರಣಿಯಲ್ಲಿ ಈ ಕುರಿತು ಉಲ್ಲೇಖಿಸಿದ ಮೋದಿ, ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದೆ. ಮಹಿಳೆ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು (Jowar Roti) ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದರು.  ಇದನ್ನೂ ಓದಿ: Tumakuru | ಟೈಯರ್ ಬ್ಲಾಸ್ಟ್ ಆಗಿ ಮನೆಗೆ ನುಗ್ಗಿದ KSRTC ಬಸ್

    ಮುಂದುವರಿದು ಮಾತನಾಡಿ, ಕಲಬುರಗಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಪ್ರತಿನಿತ್ಯ 3 ಸಾವಿರ ರೊಟ್ಟಿ ತಯಾರಿಸುತ್ತಾರೆ. ಈ ರೊಟ್ಟಿ ಕೇವಲ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆದಿದ್ದು, ಆನ್‌ಲೈನ್ ಮೂಲಕ ಆರ್ಡರ್ ಬರುತ್ತವೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮನಿರ್ಭರದ ಪ್ರತೀಕ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌