Tag: ಜೋಳ

  • ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ

    ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ

    ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರದ ಜೋಳ ಹಾಗೂ ಬಡಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಕ್ಷೀರಭಾಗ್ಯ ಯೋಜನೆಯ, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್‌ಗಳ ಪ್ಯಾಕೆಟ್‌ಗಳನ್ನೂ ವಿದೇಶಕ್ಕೆ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಲಕ್ಷ್ಮೀ ತಿಮ್ಮಪ್ಪ ಹತ್ತಿ ಮಿಲ್‌ನಲ್ಲಿ ಅಕ್ರಮ ಬಯಲಾಗಿದೆ. ಪಡಿತರ ಅಕ್ಕಿ ಇದೆ ಎಂದು ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಮತ್ತಷ್ಟು ದಂಧೆ ಬಯಲಾಗಿದೆ.ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಟನ್‌ಗಟ್ಟಲೇ ಪಡಿತರ ಅಕ್ಕಿ ದಾಸ್ತಾನು ಜಪ್ತಿ ಮಾಡಲು ತೆರಳಿದ್ದ ತಂಡ ಅಕ್ಕಿ ಜೊತೆಗೆ ಜೋಳ ಹಾಗೂ ಹಾಲಿನ ಪೌಡರ್‌ನ ಚೀಲಗಳನ್ನೂ ಕಂಡು ಶಾಕ್ ಆಗಿದೆ.

    ಅಕ್ಕಿ ದಾಸ್ತಾನು ಜಪ್ತಿಯ ವೇಳೆ, ಗೋದಾಮಿನ ಮತ್ತೊಂದು ಭಾಗದಲ್ಲಿ ಸರ್ಕಾರಿ ಜೋಳ ಹಾಗೂ ನವೆಂಬರ್ 2024ರಲ್ಲೇ ಅವಧಿ ಮೀರಿದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ದಾಸ್ತಾನು ಸಿಕ್ಕಿದೆ. 200 ಕ್ವಿಂಟಾಲ್‌ನಷ್ಟು ಜೋಳದ ಚೀಲಗಳು ಹಾಗೂ 300 ಕೇಜಿಗೂ ಹೆಚ್ಚು ಹಾಲಿನ ಪೌಡರ್ ಅಂದಾಜು 20 ಚೀಲ ಗೋಧಿ ಪತ್ತೆಯಾಗಿದೆ.ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ 10 ವರ್ಷ ಜೈಲು – ತೆಲಂಗಾಣ ಕೋರ್ಟ್ ಆದೇಶ

  • ಭಾರತವೇಕೆ ಅಮೆರಿಕದ ಜೋಳವನ್ನು ಖರೀದಿಸುತ್ತಿಲ್ಲ?

    ಭಾರತವೇಕೆ ಅಮೆರಿಕದ ಜೋಳವನ್ನು ಖರೀದಿಸುತ್ತಿಲ್ಲ?

    ಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತ ಮೇಲೆ ಸುಂಕದ ಸಮರವನ್ನು ಸಾರುತ್ತಲೇ ಬರುತ್ತಿದ್ದಾರೆ. ಒಂದು ಕಡೆಯಿಂದ ಭಾರತದ ಪ್ರಧಾನಿ ನಾನು ಒಳ್ಳೆಯ ಸ್ನೇಹಿತ ಅಂತ ಹೇಳಿದ್ರೆ ಇನ್ನೊಂದು ಕಡೆ ಭಾರತದ (India) ಮೇಲೆಯೇ 50% ಸುಂಕ ವಿಧಿಸಿ, ಅತ್ತ ಮಗುನೂ ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ. ಹೌದು, ಇದೀಗ ಅಲ್ಲಿನ  ವಾಣಿಜ್ಯ ಸಚಿವರು ಇತ್ತೀಚೆಗೆ ಭಾರತ 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಆದರೆ ಅದು ನಮ್ಮಿಂದ ಒಂದು ಜೋಳವನ್ನು ಸಹ ಖರೀದಿಸುವುದಿಲ್ಲ ಎಂದು ಹೇಳಿದರು. ಭಾರತ ನಮ್ಮಿಂದ ಜೋಳವನ್ನು ಖರೀದಿಸದಿದ್ದರೆ, ಅದು ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

    ಇಷ್ಟೆಲ್ಲ ಹೇಳಿದಾಗ ಭಾರತ ಯಾಕೆ ಅಮೆರಿಕದಿಂದ ಜೋಳ ಖರೀಸಲ್ಲ? ಮತ್ತೆ ಯಾವ ದೇಶಗಳಿಂದ ಜೋಳ ಖರೀದಿ ಮಾಡುತ್ತಿಲ್ಲ ಎಂದೆಲ್ಲ ಪ್ರಶ್ನೆ ಉದ್ಭವಿಸುವುದು ಸಹಜ. ಹೌದು, ಭಾರತ ಅಮೆರಿಕದಿಂದ ಜೋಳ ಖರೀದಿ ಮಾಡಲ್ಲ. ಭಾರತವು ತನ್ನ ಸ್ವಂತ ಬಳಕೆಗೆ ಸಾಕಾಗುವಷ್ಟು ಜೋಳವನ್ನು ಹೊಂದಿದೆ. ಆದರೆ ಎಥೆನಾಲ್ ನೀತಿ ಬಂದ ನಂತರ, ಅದರ ಬಳಕೆ ಹೆಚ್ಚಾಗಿದೆ. ಸರ್ಕಾರವು ಇಂಧನಕ್ಕೆ ಎಥೆನಾಲ್ ಸೇರಿಸಲು ಜೋಳವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು.

    ಇದೀಗ ಭಾರತವು ಬೇರೆ ಬೇರೆ ದೇಶಗಳಿಂದ ಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಅಮೆರಿಕದಿಂದ ಮಾತ್ರ ಜೋಳವನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಇದರಿಂದ ಕೋಪಗೊಂಡ ಟ್ರಂಪ್, ಇತರ ದೇಶಗಳಿಂದ ಜೋಳವನ್ನು ಖರೀದಿಸ್ತಾರೆ ಅಂದ್ರೆ ನಮ್ಮಿಂದ ಏಕೆ ಖರೀದಿಸಬಾರದು ಎಂದು ಪ್ರಶ್ನೆ ಮಾಡ್ತಿದೆ.

    ಜೋಳ ಬೆಳೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

    ಜೋಳ ಉತ್ಪಾದನೆಯ ವಿಷಯದಲ್ಲಿ, ಭಾರತವು ವಿಶ್ವದ 6 ನೇ ಅತಿದೊಡ್ಡ ರಾಷ್ಟ್ರವಾಗಿದೆ. ಜೋಳ ಸೇವನೆಯ ಜೊತೆಗೆ, ಜೋಳವನ್ನು ಪಶು ಆಹಾರ, ಎಥೆನಾಲ್ ಉತ್ಪಾದನೆ ಮತ್ತು ಕೋಳಿ ಸಾಕಣೆ ಕೇಂದ್ರಗಳಿಗೆ ಬಳಸಲಾಗುತ್ತದೆ. ಭಾರತದಲ್ಲೂ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಬಿಹಾರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲೇ ಅತ್ಯಧಿಕವಾಗಿ ಜೋಳವನ್ನು ಬೆಳೆಯಲಾಗುತ್ತದೆ.

    ಇದೀಗ ದೇಶದಲ್ಲಿ ಸುಮಾರು 4 ಕೋಟಿ ಟನ್ ಜೋಳವನ್ನು ಉತ್ಪಾದಿಸಲಾಗುತ್ತಿದೆ. ಈ ಉತ್ಪಾದನೆಯನ್ನು 2047ರ ಹೊತ್ತಿಗೆ 8.6 ಕೋಟಿ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ. ದೇಶದಲ್ಲಿ ಒಟ್ಟು ಉತ್ಪಾದನೆಯ 50 ರಿಂದ 60 ಪ್ರತಿಶತವು ಪಶುಗಳ ಆಹಾರಕ್ಕಾಗಿ ಬಳಕೆಯಾಗುತ್ತದೆ. ಆದರೆ 15 ರಿಂದ 20 ಪ್ರತಿಶತವು ಎಥೆನಾಲ್‌ಗಾಗಿ ಬಳಕೆಯಾದರೆ, ಇನ್ನುಳಿದ 10 ರಿಂದ 15 ಪ್ರತಿಶತವನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ.

    ಬಳಕೆ ಹೆಚ್ಚಾದಂತೆ ಆಮದುಗಳು ಶುರು

    ದೇಶದಲ್ಲಿ ಎಥೆನಾಲ್‌ ತಯಾರಿಸುವ ಮೊದಲು ಜೋಳದ ಉತ್ಪಾದನೆ ಹಾಗೂ ಬಳಕೆ ಎರಡೂ ಸಮಾನವಾಗಿತ್ತು. ಆದರೆ ಎಥೆನಾಲ್‌ ತಯಾರಿಯಿಂದಾಗಿ ಹೆಚ್ಚಿಗೆ ಬೇಕಾದ ಜೋಳವನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. 2022-23ರ ನಂತರ ಕೋಳಿ ಉದ್ಯಮವು  ಗಣನೀಯ ಬೆಳವಣಿಗೆ ಹಾಗೂ ಸಕ್ಕರೆ ಉತ್ಪಾದನೆಯ ಇಳಿಕೆಯಿಂದಾಗಿ ಜೋಳದ ಬೇಡಿಕೆಯು ಹೆಚ್ಚಳವಾಯಿತು. ಇದಾದ ಬಳಿಕ 2023ರಲ್ಲಿ ಭಾರತ 5 ಸಾವಿರ ಟನ್‌ಗಳಷ್ಟು ಜೋಳವನ್ನು ಆಮದು ಮಾಡಿಕೊಂಡ್ರೆ, 2024ರಲ್ಲಿ ಸುಮಾರು 10 ಲಕ್ಷ ಟನ್‌ ಆಮದು ಮಾಡಿಕೊಂಡಿತು.

    ಭಾರತ ಯಾವೆಲ್ಲ ದೇಶದಿಂದ ಜೋಳ ಆಮದು ಮಾಡಿಕೊಳ್ಳುತ್ತದೆ?

    ದೇಶದಲ್ಲಿ ಜೋಳದ ಬೇಡಿಕೆ ಹೆಚ್ಚಾದಂತೆ ಬೇರೆ ಬೇರೆ ದೇಶಗಳಿಂದ ಖರೀದಿ ಮಾಡಲು ಪ್ರಾರಂಭಿಸಿತು. 2024 ರಲ್ಲಿ ಭಾರತವು ಮ್ಯಾನ್ಮಾರ್‌ನಿಂದ 1 ರಿಂದ 2 ಲಕ್ಷ ಟನ್‌ ಜೋಳವನ್ನು ಆಮದು ಮಾಡಿಕೊಂಡಿತು. ಭಾರತವು ಮ್ಯಾನ್ಮಾರ್‌ನೊಂದಿಗೆ ಆಮದು ತೆರಿಗೆ ಮುಕ್ತವಾಗಿದೆ. 

    ಮ್ಯಾನ್ಮಾರ್‌ನಿಂದ ಮಾತ್ರವಲ್ಲದೇ ಇದೇ ವರ್ಷ ಉಕ್ರೇನ್‌ನಿಂದ ಸುಮಾರು 4 ಲಕ್ಷ ಟನ್ ಜೋಳವನ್ನು ಖರೀದಿಸಿದೆ. ಉಕ್ರೇನ್‌ ಕೂಡ ಆಮದು ವಸ್ತುಗಳ ಮೇಲೆ ಯಾವುದೇ ಸುಂಕ ವಿಧಿಸಿಲ್ಲ. ಇನ್ನು ಭಾರತವು ಮೆಕ್ಕೆಜೋಳವನ್ನು ಥೈಲ್ಯಾಂಡ್, ಅರ್ಜೆಂಟೀನಾದಂತಹ ದೇಶಗಳಿಂದ ಸಹ ಖರೀದಿಸಿದೆ ಎಂದು ಕೇಂದ್ರ ಸಚಿವಾಲಯವು ತಿಳಿಸಿದೆ.

    ಅಮೆರಿಕದಿಂದ ಯಾಕೆ ಭಾರತ ಜೋಳ ಖರೀದಿಸಲ್ಲ?

    1. ಕುಲಾಂತರಿ ತಳೀಯ ಜೋಳ

    ಭಾರತವು ಅಮೆರಿಕದಿಂದ ಜೋಳ ಖರೀದಿಸದಿರಲು ಮುಖ್ಯ ಕಾರಣವೇನೆಂದರೆ ಅಲ್ಲಿನ ಕುಲಾಂತರಿ ತಳೀಯ ಜೋಳವನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಈ ತಳೀಯ ಜೋಳವನ್ನು ಸೇವನೆಗಾಗಲಿ ಅಥವಾ ಪ್ರಾಣಿಗಳ ಮೇವಿಗಾಗಿ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

    2. ಅಮೆರಿಕದ ಸುಂಕ ಸಮರ

    ಇನ್ನೊಂದು ಎಲ್ಲರಿಗೂ ತಿಳಿದಿರುವ ಕಾರಣವೆಂದ್ರೆ ಅದು ಭಾರತದ ಮೇಲೆ ವಿಧಿಸುತ್ತಿರುವ 50% ಸುಂಕ. ಮ್ಯಾನ್ಮಾರ್‌ ಹಾಗೂ ಉಕ್ರೇನ್‌ ದೇಶವು ಭಾರತದ ಆಮದು ವಸ್ತುಗಳ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುತ್ತಿಲ್ಲ. ಅಮೆರಿಕದಿಂದ ಆಮದು ಮಾಡಿಕೊಂಡರೆ ಲಾಜಿಸ್ಟಿಕ್ಸ್ ವೆಚ್ಚವು ಹೆಚ್ಚಾಗಿ, ದೇಶೀಯ ಮಾರುಕಟ್ಟೆಯಲ್ಲೂ ಇದರ ದರ ಹೆಚ್ಚಾಗುತ್ತದೆ. ಹೀಗಾಗಿ ಭಾರತವು ಅಮೆರಿಕದಿಂದ ಜೋಳ ಖರೀದಿಸುತ್ತಿಲ್ಲ.

    3. ಬೇಡಿಕೆ & ಪೂರೈಕೆಗೂ ಹೆಚ್ಚೇನು ವ್ಯತ್ಯಾಸವಿಲ್ಲ

    ದೇಶದಲ್ಲೂ ಜೋಳವನ್ನು ಬೆಳೆಯುವುದರಿಂದ ಬೇಡಿಕೆ ಹಾಗೂ ಪೂರೈಕೆಯ ನಡುವೆ ಹೆಚ್ಚು ವ್ಯತ್ಯಾಸವಾಗುತ್ತಿಲ್ಲ. ಭಾರತವು ಬೇಡಿಕೆ ಇರುವಷ್ಟು ಪ್ರಮಾಣದ ಜೋಳವನ್ನು ಸುಂಕ ರಹಿತ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.

    4.ದೇಶೀಯ ಉತ್ಪಾದನೆಗೆ ಆದ್ಯತೆ

    ಭಾರತವು ತನ್ನ ದೇಶ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಬೇರೆ ದೇಶಗಳಿಂದಲೇ ಎಲ್ಲವನ್ನು ಆಮದು ಮಾಡಿಕೊಂಡರೆ ನಮ್ಮ ದೇಶದ ರೈತರ ಮೇಲೆ ಪರಿಣಾಮ ಬೀರುತ್ತದೆ. ದೇಶದಲ್ಲೇ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಆಮದಿನ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ. 

    ಮೇಲಿನ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಅಮೆರಿಕದಿಂದ ಜೋಳವನ್ನು ಖರೀದಿ ಮಾಡುತ್ತಿಲ್ಲ. ಹಂತ ಹಂತವಾಗಿ ಭಾರತದ ಮೇಲೆ ಸುಂಕ ಹೇರುತ್ತಿರುವ ಅಮೆರಿಕಕ್ಕೆ ಭಾರತವು ಈ ರೀತಿಯಾಗಿ ಪಾಠ ಕಲಿಸುತ್ತಿದೆ.

  • ಗಬ್ಬೆದ್ದು ನಾರುತ್ತಿರುವ ಹುಳಗಳಿರುವ ಜೋಳ ಪಡಿತರ ಅಂಗಡಿಗಳಿಗೆ ವಿತರಣೆ!

    ಗಬ್ಬೆದ್ದು ನಾರುತ್ತಿರುವ ಹುಳಗಳಿರುವ ಜೋಳ ಪಡಿತರ ಅಂಗಡಿಗಳಿಗೆ ವಿತರಣೆ!

    ಬಳ್ಳಾರಿ: ಜಿಲ್ಲೆಯಾದ್ಯಂತ ಪಡಿತರ ಅಂಗಡಿಗಳಿಗೆ (Ration Shop) ಗಬ್ಬೆದ್ದು ನಾರುತ್ತಿರುವ ಹುಳು ಹಿಂಡಿದ, ಹಿಟ್ಟಾದ ಜೋಳ (Milled Corn) ಸರಬರಾಜಾಗುತ್ತಿದೆ.

    ಎರಡು ದಿನಗಳ ಹಿಂದೆ ಉಪ ಲೋಕಾಯುಕ್ತರು ಭೇಟಿ ಬಳಿಕವೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ತರಾತುರಿಯಲ್ಲಿ ಯೋಗ್ಯವಲ್ಲದ ಹುಳು ಮಿಶ್ರಿತ, ಹಿಟ್ಟಾದ ಜೋಳ ವಿತರಣೆಗೆ ಮುಂದಾಗಿದ್ದಾರೆ.

    ನಗರದ ಎಪಿಎಂಸಿ ಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮೂರು ಗೋಡಾನ್ ಗಳಲ್ಲಿ ಈ ಜೋಳದ ಚೀಲಗಳನ್ನು ಸಂಗ್ರಹಿಸಿಡಲಾಗಿದೆ. ಗೋಡಾನ್‌ನಲ್ಲಿ ಸಂಗ್ರಹಿಸಿದ ಜೋಳ ಸಂಪೂರ್ಣ ಹಾಳಾಗಿದ್ದು ಹಾಳಾಗಿರುವ ಜೋಳವನ್ನೇ ಬಡವರ ಹೊಟ್ಟೆಗೆ ಸೇರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್‌ ಕೇಸ್‌ | ಮಗನನ್ನು ಗಲ್ಲಿಗೇರಿಸಿದ್ರೂ ಬೇಸರ ಇಲ್ಲ: ಸಂಜಯ್ ತಾಯಿ

    ಜೋಳ ಸಂಗ್ರಹಿಸಿಟ್ಟಿರುವ ಗೋಡೌನ್ ಕಾಲಿಡುವುದಕ್ಕೂ ಸಾಧ್ಯ ಇಲ್ಲ. ಎಷ್ಟರ ಮಟ್ಟಿಗೆ ಅಂದರೆ ಒಳಗೆ ಕಾಲಿಟ್ಟರೆ ಘಾಟು ಹೊಡೆಯುತ್ತದೆ. ಒಂದು ಕೆಜಿ ಜೋಳದಲ್ಲಿ ಅರ್ಧ ಕೆಜಿ ಬರೀ ಹುಳು ಹಾಗೂ ಹಿಟ್ಟೇ ಸಿಗುತ್ತದೆ. ಗೋಡೌನ್ ನಲ್ಲಿ ಸಂಗ್ರಹಿಸಿಟ್ಟಿದ್ದ 40 ಸಾವಿರ ಚೀಲ ಜೋಳದ್ದು ಇದೇ ಪರಿಸ್ಥಿತಿ.

     

    ಇದೇ ಜೋಳ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.  ಗೋಡೌನ್ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲ, ನಾವು ಬಿಡುಗಡೆ ಮಾಡುತ್ತೇವೆ ಅಷ್ಟೇ ಎಂದು ಉಡಾಫೆಯ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ.

     

  • ಟ್ರ್ಯಾಕ್ಟರ್‌ನಲ್ಲಿದ್ದ ಜೋಳದ ಮೇವಿನ ಕಣಕಿಗೆ ಬೆಂಕಿ

    ಟ್ರ್ಯಾಕ್ಟರ್‌ನಲ್ಲಿದ್ದ ಜೋಳದ ಮೇವಿನ ಕಣಕಿಗೆ ಬೆಂಕಿ

    ಕಲಬುರಗಿ: ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್ ನಲ್ಲಿದ್ದ ಜೋಳದ ಮೇವಿನ ಕಣಕಿಗೆ ಬೆಂಕಿ ಹತ್ತಿಕೊಂಡ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

    ಕಲಬುರಗಿ ತಾಲೂಕಿನ ಮೇಳಕುಂದಾ ಬಿ. ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಮೇವಿನ ಕಣವು ಮಲ್ಲಿನಾಥ್ ಕೊಳ್ಳುರ ಎಂಬವರಿಗೆ ಸೇರಿದ್ದಾಗಿದೆ. ಇದನ್ನೂ ಓದಿ: ಚುನಾವಣೆಗೆ ಖರ್ಚು ಮಾಡಲು ನಮ್ಮ ಪಕ್ಷದಲ್ಲಿ ಹಣವಿಲ್ಲ: ಖರ್ಗೆ

    ಮಲ್ಲಿನಾಥ್‌ ಅವರು ಶಹಬಾದ್ ತಾಲೂಕಿನ ಹೊನಗುಂಟಿ ಗ್ರಾಮದಲ್ಲಿ ಮೇವಿನ ಕಣಕಿ ಖರಿದಿಸಿದ್ದರು. ಬಳಿಕ ಒಂದೇ ಟ್ರ್ಯಾಕ್ಟರ್ ನ ಎರಡು ಟ್ರ್ಯಾಲಿಯಲ್ಲಿ ತುಂಬಿಕೊಂಡು ತೆರಳುತ್ತಿದ್ದರು. ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮೇಳಕುಂದಾ ಗ್ರಾಮದ ಬೀದಿ ಬದಿಯ ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿ ಉರಿದಿದೆ.

    ನೋಡ ನೋಡ್ತಿದ್ದಂತೆಯೇ ಕ್ಷಣಾರ್ಧದಲ್ಲಿ 2 ಟ್ರ್ಯಾಲಿಯಲ್ಲಿನ ಕಣಕಿಗೆ ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳೀಯರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

    ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿಯಾಗಿ ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಹಾಗೂ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ವಿತರಣೆ ಬಗ್ಗೆ ಚರ್ಚಿಸಿದರು.

    ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಅಕ್ಕಿ ಮತ್ತು ಗೋಧಿ ವಿತರಣೆಯನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ-ಜೋಳ ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕೆಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.

    ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವ್ಯವಸ್ಥೆಯನ್ನು ವಿತರಣೆ ಮಾಡಬೇಕಾಗುತ್ತದೆ. ಪ್ರಸ್ತುತ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಹಾಗೂ ಒಂದು ಪ್ರದೇಶದ ರೈತರಿಗೆ ಮಾತ್ರ ಲಾಭವಾಗುತ್ತಿದ್ದು, ಸ್ಥಳೀಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಲಭಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಪ್ರಮಾಣವನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣದ ಸಬ್ಸಿಡಿ ದರವನ್ನು ಕರ್ನಾಟಕದ ಆಹಾರ ಪದ್ದತಿಯಲ್ಲಿ ಬಳಸುವ ರಾಗಿ, ಜೋಳ, ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.

    ಮನವಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ, ಕರ್ನಾಟಕ ಆಹಾರ ಇಲಾಖೆಯ ಅಲೋಚನೆ ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾದದ್ದು, ಇದರ ಅನುಷ್ಠಾನಕ್ಕೆ ಚಾಲ್ತಿಯಲ್ಲಿರುವ ನೀತಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಹೊಸ ಪಾಲಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

    ಈ ವೇಳೆ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಇಲಾಖೆಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಕೇಂದ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಬೆಳಗಾವಿ: ಆಹಾರ ಭದ್ರತೆ ಯೋಜನೆಯಡಿ ಪಡಿತರದಲ್ಲಿ ಸ್ಥಳೀಯ ಆಹಾರ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ರಾಗಿ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಎಪ್ರಿಲ್ ಒಂದರಿಂದ ಈ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ. ಇದರಿಂದ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದು ತಪ್ಪಲಿದೆ ಎಂದು ತಿಳಿಸಿದರು.

    ಪ್ರತಿವರ್ಷ ಪಂಜಾಬ್ ನಿಂದ ರಾಜ್ಯಕ್ಕೆ ಅಕ್ಕಿ ಸರಬರಾಜು ಆಗುತ್ತಿತ್ತು. ಕರ್ನಾಟಕದಲ್ಲೇ ಸಾಕಷ್ಟು ಭತ್ತ ಬೆಳೆಯುತ್ತಿದ್ದು, ಇಲ್ಲೇ ಖರೀದಿಸುವ ಯೋಜನೆ ಇದೆ. ಕೇಂದ್ರದ ಆಹಾರ ನಾಗರಿಕ ಸರಬರಾಜು ಸಚಿವರ ಜೊತೆಗೆ ಚರ್ಚಿಸಿ ಈ ಕುರಿತು ನಿರ್ಧರಿಸಲಾಗುವುದು. ಇದರಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಬಹುದಾಗಿದೆ. ಕಾಳಸಂತೆಗೆ ಅಕ್ಕಿ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಡಿತರ ರದ್ಧತಿ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ತಹಶಿಲ್ದಾರ್, ಪಿಡಿಒ ಒಳಗೊಂಡ ಸಮಿತಿ ರಚಿಸಿ ಸರ್ವೆ ಮಾಡಲಾಗುವುದು. ಮಾರ್ಚ್ 31 ರೊಳಗೆ ಅನಧಿಕೃತ ಕಾರ್ಡ್‍ಗಳ ವರದಿ ಕೈ ಸೇರಲಿದೆ. ಬಳಿಕ ಅನಧಿಕೃತ ಪಡಿತರ ಚೀಟಿ ರದ್ದುಗೊಳಿಸಲಾಗುವುದು. ಅನಧಿಕೃತ ಪಡಿತರ ಪತ್ತೆ ಸಮರ್ಪಕವಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

  • ಜೋಳದ ಬೆಳೆಗೆ ದುಷ್ಕರ್ಮಿಗಳಿಂದ ಬೆಂಕಿ – 3 ಎಕರೆ ಬೆಳೆ ನಾಶ

    ಜೋಳದ ಬೆಳೆಗೆ ದುಷ್ಕರ್ಮಿಗಳಿಂದ ಬೆಂಕಿ – 3 ಎಕರೆ ಬೆಳೆ ನಾಶ

    ಗದಗ: ದುಷ್ಕರ್ಮಿಗಳು ರೈತ ಬೆಳೆದ ಜೋಳದ ಬೆಳೆಗೆ ಬೆಂಕಿ ಇಟ್ಟು ಫಸಲು ನಾಶ ಮಾಡಿರುವ ಘಟನೆ ಗದಗದ ಲಕ್ಷ್ಮೇಶ್ವರ ತಾಲೂಕಿನ ಪುಟ್ಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.

    ಬಡ್ನಿ ಗ್ರಾಮದ ರೈತ ಭರಮಪ್ಪ ಕಾಂಬಳೆ ಅವರ ಬೆಳೆ ಹಾನಿಗೊಳಗಾಗಿದೆ. ಜೋಳದ ಫಸಲಿದ್ದ ಹೊಲಕ್ಕೆ ಬೆಂಕಿ ಬಿದ್ದ ಪರಿಣಾಮ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೈಗೆ ಬಂದಿರುವ ಬೆಳೆ ನಾಶವಾಗಿರುವ ಕುರಿತಾಗಿ ರೈತರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಿಳಿಜೋಳ ದುಷ್ಕರ್ಮಿಗಳ ಹೀನ ಕೃತ್ಯಕ್ಕೆ ಬೆಳೆಯಲ್ಲಾ ಸರ್ವನಾಶವಾಗಿದೆ. ವಾರದ ಹಿಂದಷ್ಟೇ ಅಕಾಲಿಕ ಮಳೆಗೆ ಜೋಳ ಬಿದ್ದು ಹಾಳಾಗಿತ್ತು. ಅಲ್ಪ-ಸ್ವಲ್ಪ ಉಳಿದ ಬೆಳೆ ಇನ್ನೇನು ಸಂಪೂರ್ಣ ಕಟಾವಿಗೆ ಬಂದಿತ್ತು. ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಬೆಂಕಿ ಬಿದ್ದು ಫಸಲು ನಾಶವಾಗಿದೆ. ಜಾನುವಾರುಗಳಿಗೂ ತಿನ್ನಲೂ ಬರದಂತೆ ಸುಟ್ಟುಕರಕಲಾಗಿದೆ. ಇದನ್ನು ಕಂಡ ಅನ್ನದಾತರ ಕಣ್ಣೀರು ಹಾಕುತ್ತಿದ್ದಾರೆ. ನೊಂದ ರೈತರಿಗೆ ಸರ್ಕಾರ ಪರಿಹಾರ ನೀಡಿ ಕೈಹಿಡಿದು ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕಿಡಿಗೇಡಿಗಳ ಕೃತ್ಯಕ್ಕೆ 200 ಕ್ವಿಂಟಾಲ್‍ಗೂ ಅಧಿಕ ಜೋಳ ಬೆಂಕಿಗಾಹುತಿ

    ಕಿಡಿಗೇಡಿಗಳ ಕೃತ್ಯಕ್ಕೆ 200 ಕ್ವಿಂಟಾಲ್‍ಗೂ ಅಧಿಕ ಜೋಳ ಬೆಂಕಿಗಾಹುತಿ

    ಹಾಸನ: ಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟುಹಾಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ, ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಹದೇವಸ್ವಾಮಿ ಎಂಬ ರೈತರು ಜೋಳದ ತೆನೆ ಕಟಾವು ಮಾಡಿ ಜಮೀನಿನಲ್ಲಿ ರಾಶಿ ಹಾಕಿದ್ದರು. ತಡರಾತ್ರಿ ಯಾರೋ ಕಿಡಿಗೇಡಿಗಳು ಜೋಳದ ರಾಶಿಗೆ ಬೆಂಕಿ ಹಾಕಿದ್ದಾರೆ. ಪರಿಣಾಮ ಜೋಳದ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಷ್ಟಪಟ್ಟು ಜೋಳ ಬೆಳೆದಿದ್ದ ರೈತ ಕಂಗಾಲಾಗಿ ಕಣ್ಣೀರು ಹಾಕುತ್ತಿದ್ದಾನೆ.

    ದುಷ್ಕರ್ಮಿಗಳ ಕೃತ್ಯದಿಂದ ರೈತನಿಗೆ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಸಂಭವಿಸಿದೆ. ಜೋಳದ ರಾಶಿಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ರೈತನ ನೆರವಿಗೆ ಧಾವಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಬೇಲೂರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.