Tag: ಜೋಯಿಡಾ

  • ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಕಾರವಾರ: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಾಡಿದ ಆಸ್ತಿಯೂ ಕಾರಣವಾಯ್ತ ಎಂಬ ಅನುಮಾನ ಇದೀಗ ದಟ್ಟವಾಗಿದೆ.

    ಓಂ ಪ್ರಕಾಶ್ ಅವರು 1996ರಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಇವರ ಸಹೋದರಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಪರಿಸರಕ್ಕೆ ಮನಸೋತಿದ್ದ ಅವರು 2011-12ರ ನಡುವೆ ಸಾಮಜೋಯಿಡಾದಲ್ಲಿ 2 ಎಕ್ರೆ 17 ಗುಂಟೆ ಜಮೀನು ಖರೀದಿಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಜೊತೆಗೆ ಜೋಯಿಡಾ (Joida) ತಾಲೂಕಿನ ಗಣೇಶ ಗುಡಿಯ ಬಾಡಗುಂದ (Badagunda) ಗ್ರಾಮದಲ್ಲಿ 17 ಎಕ್ರೆ ಜಮೀನು ಖರೀದಿ ಮಾಡಿದ್ದು, ಈ 2 ಜಮೀನನ್ನು ಮಗ ಕಾರ್ತೀಕೇಶ್ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದ 17 ಎಕ್ರೆಯಲ್ಲಿ 10 ಎಕ್ರೆ ಬೇರೆಯವರ ಹೆಸರಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಸಾಮಜೋಯಿಡಾದಲ್ಲಿ ಗಂಧ, ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಬೆಳೆದಿದ್ದು, ಇಲ್ಲಿಯೇ ಗೆಸ್ಟ್ ಹೌಸ್ ನಿರ್ಮಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿದ್ದ 5 ಎಕ್ರೆ ಜಮೀನನ್ನು ರಿವರ್ ರಾಫ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ 10 ಎಕ್ರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ಸಿದ್ಧರಾಗಿದ್ದರು. ಈ ವಿಚಾರಕ್ಕೆ ಪತ್ನಿ ಹಾಗೂ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ: ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?

    ಮನೆಯಲ್ಲಿ ಕಿತ್ತಾಟ ಜಾಸ್ತಿಯಾದಾಗ ಜೋಯಿಡಾದ ಗೆಸ್ಟ್ ಹೌಸ್‌ಗೆ ಬಂದು ಇಲ್ಲಿನ ಗೆಳೆಯರು ಜೊತೆ ಸಮಯ ಕಳೆಯುತ್ತಿದ್ದರು. ಓಂ ಪ್ರಕಾಶ್ ಅವರು ಬಹುತೇಕ ಎಲ್ಲೇ ಹೋದರೂ ಪತ್ನಿಯನ್ನು ಬಿಟ್ಟು ಬರುತಿದ್ದರು. ಅಷ್ಟೇ ಅಲ್ಲದೇ ಅವರು ಮಾನಸಿಕವಾಗಿ ನೊಂದಿದ್ದರು ಬಗ್ಗೆ ಅವರ ಸಹವರ್ತಿಗಳು ಹೇಳಿದ್ದಾರೆ.

  • ಲ್ಯಾಂಡಿಂಗ್ ಸಮಸ್ಯೆ – ಅರ್ಧ ಗಂಟೆಗೂ ಹೆಚ್ಚುಕಾಲ ಆಕಾಶದಲ್ಲಿ ಹಾರಾಡಿದ ಹೆಚ್‌ಡಿಕೆ ಹೆಲಿಕಾಪ್ಟರ್

    ಲ್ಯಾಂಡಿಂಗ್ ಸಮಸ್ಯೆ – ಅರ್ಧ ಗಂಟೆಗೂ ಹೆಚ್ಚುಕಾಲ ಆಕಾಶದಲ್ಲಿ ಹಾರಾಡಿದ ಹೆಚ್‌ಡಿಕೆ ಹೆಲಿಕಾಪ್ಟರ್

    ಕಾರವಾರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy) ಪ್ರಯಾಣಿಸುತಿದ್ದ ಹೆಲಿಕಾಪ್ಟರ್ ನಿಗದಿತ ಸ್ಥಳದಲ್ಲಿ ಲ್ಯಾಂಡಿಂಗ್ (Landing) ಆಗದೇ ಅರ್ಧಗಂಟೆಗೂ ಹೆಚ್ಚುಕಾಲ ಆಕಾಶದಲ್ಲಿ ಹಾರಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜೋಯಿಡಾದಲ್ಲಿ (Joida) ನಡೆದಿದೆ.

    ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter) ಸವದತ್ತಿಯಿಂದ ಜೋಯಿಡಾದ ದುರ್ಗಾದೇವಿ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ನಲ್ಲಿ ಗಂಧಕದ ಹೊಗೆ ಹಾಕಿ ಸಿಗ್ನಲ್ ನೀಡಬೇಕಿತ್ತು. ಆದರೆ ಇದು ತಡವಾಗಿದ್ದರಿಂದ ಹೆಲಿಕಾಪ್ಟರ್ ಆಕಾಶದಲ್ಲೇ ಹಾರಾಡಿದೆ. ನಂತರ ಲ್ಯಾಂಡಿಗ್ ಮಾಡಲು ಸ್ಥಳ ಸಿಗದೆ ಬೆಳಗಾವಿಯತ್ತ ಹೋಗಿದೆ. ಈ ವಿಷಯ ಗಮನಕ್ಕೆ ಬಂದ ನಂತರ ವೈರ್‌ಲೆಸ್ ಸಿಗ್ನಲ್ ಕಳುಹಿಸಿ ಹೆಲಿಕಾಪ್ಟರನ್ನು ಮರಳಿ ಕರೆಸಿ ಲ್ಯಾಂಡಿಂಗ್ ಮಾಡಲಾಯಿತು. ಇದನ್ನೂ ಓದಿ: ಟಿಕೆಟ್ ನೀಡದಿದ್ರೂ ಸ್ಪರ್ಧೆ, 10 ವರ್ಷ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್ 

    ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆಯಿಂದ ಜೋಯಿಡಾಗೆ ಬರಲು 30 ನಿಮಿಷ ತಡವಾಯಿತು. ಇದರಿಂದಾಗಿ ಏನೂ ಸಮಸ್ಯೆಯಾಗಿಲ್ಲ ಎಂದರು. ಇದನ್ನೂ ಓದಿ: KMF ನಷ್ಟದಲ್ಲಿಲ್ಲ, 200 ಕೋಟಿ ಲಾಭದಲ್ಲಿದೆ – ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌

  • ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ರಿವರ್ ರ‍್ಯಾಫ್ಟಿಂಗ್ ವೇಳೆ ನದಿಗೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ 12 ಜೀವಗಳು ಪಾರು

    ಕಾರವಾರ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿ ರಿವರ್ ರ‍್ಯಾಫ್ಟಿಂಗ್ ಮಾಡುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ನದಿಗೆ ಸಿಲುಕಿ, ಮುಳುಗುವ ಹಂತ ತಲುಪಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ 12 ಜನರ ಜೀವ ಉಳಿದಿದೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ಘಟನೆ ಸಂಭವಿಸಿದ್ದು, ಕೊಂಚದಲ್ಲೇ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ರಕ್ಷಣಾ ಕಾರ್ಯದಿಂದ 12 ಮಂದಿ ಬದುಕುಳಿಯುವಂತಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    RIVER RESCUE

    ಹೌದು… ರಬ್ಬರ್ ಬೋಟ್‌ನಲ್ಲಿ 6 ಕ್ಕಿಂತ ಹೆಚ್ಚು ಮಂದಿ ರಿವರ್ ರ‍್ಯಾಫ್ಟಿಂಗ್‌ ಮಾಡುವಂತಿಲ್ಲ. ಆದರೆ, ಖಾಸಗಿ ಆಯೋಜಕರು ಅನುಮತಿಯಿಲ್ಲದೇ 12 ಜನ ಪ್ರವಾಸಿಗರನ್ನು ರಿವರ್ ರ‍್ಯಾಫ್ಟಿಂಗ್ ಬೋಟ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ವೇಳೆ ಬೋಟ್ ಮೇಲಿನ ಭಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದೆ. ಕೆಲ ಮಕ್ಕಳೂ ನೀರಿಗೆ ಬಿದ್ದಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರು ರಕ್ಷಣೆಗೆ ಬರಲಾಗಿ 12 ಮಂದಿ ಜೀವ ಉಳಿದಿದೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ಘಟನೆ ಸಂಬಂಧ ಜೋಯಿಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಕೈಗಾದಲ್ಲಿ ಪ್ರತ್ಯಕ್ಷವಾದ ಹುಲಿ ಕಂಡು ಜನರಲ್ಲಿ ಆತಂಕ

    ಕೈಗಾದಲ್ಲಿ ಪ್ರತ್ಯಕ್ಷವಾದ ಹುಲಿ ಕಂಡು ಜನರಲ್ಲಿ ಆತಂಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ -ಜೋಯಿಡಾ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

    ಕೈಗಾದಿಂದ ಜೋಯಿಡಾ ಮಾರ್ಗವಾಗಿ ತೆರಳುತಿದ್ದ ಕೈಗಾ ಉದ್ಯೋಗಿ ಯೊಬ್ಬರಿಗೆ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಹುಲಿಯ ವೀಡಿಯೋವನ್ನು ಚಿತ್ರಿಸಿ ಸ್ಥಳೀಯರಾದ ಗೋಪಾಲಕೃಷ್ಣ ಎಂಬುವವರಿಗೆ ನೀಡಿದ್ದಾರೆ.

    ಅದೃಷ್ಟವಶಾತ್ ಕಾರಿನಲ್ಲಿ ಇದ್ದಿದ್ದರಿಂದ ಉದ್ಯೋಗಿಗೆ ಯಾವುದೇ ತೊಂದರೆಯಾಗಲಿಲ್ಲ. ಹುಲಿಯು ಕೈಗಾ ರಸ್ತೆ ಭಾಗದಲ್ಲಿ ಹಲವು ಕಡೆ ಓಡಾಡುತಿದ್ದು, ಸ್ಥಳೀಯ ಜನರಿಗೆ ಕಾಣಿಸಿಕೊಂಡಿದೆ. ಹುಲಿಯ ಸಂಚಾರದ ಬಗ್ಗೆ ಕಾರವಾರದ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಕದ್ರಾ ಜಲಾಶಯದ ಬಳಿ ಈ ಹುಲಿ ಕಾಣಿಸಿಕೊಂಡಿದ್ದು ನರಿಯೊಂದನ್ನು ಬೇಟೆಯಾಡಿ ತೆರಳಿತ್ತು. ಇದೀಗ ಕೈಗಾ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

  • ಅಬ್ಬರದ ಮಳೆಗೆ ಮನೆಗಳ ಮೇಲೆ ಉರುಳಿ ಬಿದ್ದ ಮರ

    ಅಬ್ಬರದ ಮಳೆಗೆ ಮನೆಗಳ ಮೇಲೆ ಉರುಳಿ ಬಿದ್ದ ಮರ

    – ಲಕ್ಷಾಂತರ ರೂ. ಹಾನಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಟೋಳಿಯಲ್ಲಿ ಭಾನುವಾರ ರಾತ್ರಿ ಸುರಿದ ಅಬ್ಬರದ ಮಳೆಗೆ ಮರ ಮನೆಗಳ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

    ಗ್ರಾಮದ ಕಾರ್ಟೋಳಿಯ ಸುರೇಶ್ ಕೇಶಬ್ ವೇಳಿಪ ಇವರ ಮನೆಯ ಮೇಲೆ ಮರ ಬಿದ್ದು ಸುಮಾರು 1 ಲಕ್ಷ 50 ಸಾವಿರ ಹಾನಿ ಸಂಭವಿಸಿದೆ. ಹಾಗೆಯೇ ಮಳೆ-ಗಾಳಿಯಿಂದಾಗಿ ಲಕ್ಷ್ಮಣ್ ಸುಭಾ ವೇಳಿಪ ವಿಜಯ್ ಕೇಶವ್ ವೇಳಿಪ, ಪ್ರೇಮಾನಂದ್ ಗುನೋ ವೇಳಿಪ ಅವರ ಮನೆಗಳಿಗೂ ಹಾನಿಯಾಗಿದೆ.

    ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗುಡುಗು, ಸಿಡಿಲು ಸಹಿತ ಅಬ್ಬರದ ಮಳೆಯಾಗಿದೆ. ಹಲವು ಭಾಗದಲ್ಲಿ ಮಳೆಯಿಂದ ಹಾನಿ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

  • ದನದ ಬಾಲ ಸೆಳೆದು ಗಟ್ಟಿ ಹಿಡಿದ ಮರ – ಜೋಯಿಡಾದಲ್ಲೊಂದು ಅಚ್ಚರಿಯ ಘಟನೆ

    ದನದ ಬಾಲ ಸೆಳೆದು ಗಟ್ಟಿ ಹಿಡಿದ ಮರ – ಜೋಯಿಡಾದಲ್ಲೊಂದು ಅಚ್ಚರಿಯ ಘಟನೆ

    ಕಾರವಾರ: ಕೆಲವು ಗಿಡ, ಮರಗಳು ಪ್ರಾಣಿಯ ರಕ್ತ ಹೀರುತ್ತವೆ, ಕೀಟಗಳನ್ನು ತಿನ್ನುತ್ತವೆ ಎನ್ನುವ ಅಂತೆ ಕಂತೆಗಳು ನೀವು ಕೇಳಿರಬಹುದು. ಈ ಅಂತೆ ಕಂತೆಗಳು ನಿಜ ಎನ್ನುವಂತೆ ಸಾವಿರಾರು ವರ್ಷಗಳಿಂದ ತನ್ನ ಮಡಿಲಿನಲ್ಲಿ ಅಪರೂಪದ ವನಸಿರಿಯನ್ನು ಹೊತ್ತು ನಿಂತಿರುವ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಸಮೀಪದ ಹನ್ನೊಲ್ಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ.

    ಕಾಡಿನಲ್ಲಿ ಹಸಿರು ಹುಲ್ಲು ಮೇಯಲು ಹೋಗಿದ್ದ ಹಸುವಿನ ಬಾಲವನ್ನು ಜಂಬೆ ಮರ ಸೆಳೆದುಕೊಂಡಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ದನದ ಸೆಳೆದುಕೊಂಡ ಬಾಲವನ್ನು ಬಿಡಿಸಿಕೊಳ್ಳದಷ್ಟರ ಮಟ್ಟಿಗೆ ಹಿಡಿದು ರಕ್ತವನ್ನು ಹೀರಿದೆ. ಪರಿಣಾಮ ಇದರೊಂದಿಗೆ ತೆರಳಿದ್ದ ಎಲ್ಲಾ ಹಸುಗಳು ಕಾಡಿನಿಂದ ಮರಳಿ ಮನೆಗೆ ಬಂದರೂ ಈ ದನ ಮಾತ್ರ ಮನೆಗೆ ಮರಳಿರಲಿಲ್ಲ.

    ಪಕ್ಕದ ಊರಿನ ಸದಾಶಿವ ಪಟಗಾರ್, ಸುಬ್ರಾಯ ಕುಣಬಿ, ಪರಶುರಾಮ ದೇಸಾಯಿ ಅವರು ಇದೇ ಕಾಡು ಮಾರ್ಗವಾಗಿ ಸಂಚರಿಸುತ್ತಿದ್ದಾಗ ಈ ದನ ನಿಂತಲ್ಲೇ ಒದ್ದಾಡುವುದನ್ನು ನೋಡಿದ್ದಾರೆ. ಕಾಡಿನಲ್ಲಿ ದನವನ್ನು ಯಾರೂ ಕಟ್ಟಿ ಹಾಕುವುದಿಲ್ಲ. ಆದರೂ ದನ ಕಟ್ಟಿ ಹಾಕಿದಂತೆ ವರ್ತನೆ ಮಾಡುತ್ತಿದೆಯಲ್ಲ ಎಂದು ತಿಳಿದು ಹತ್ತಿರ ಹೋದಾಗ ದನದ ಬಾಲ ಮರಕ್ಕೆ ಸುತ್ತಿಕೊಂಡು ಒದ್ದಾಡುತ್ತಿರುವುದನ್ನು ನೋಡಿದ್ದಾರೆ.

    ಈ ವೇಳೆ ಮರಕ್ಕೆ ಸುತ್ತಿಕೊಂಡಿದ್ದ ಬಾಲವನ್ನು ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಿಡಿದುಕೊಂಡ ಮರ ಮಾತ್ರ ದನದ ಬಾಲದ ಹಿಡಿತ ಸಡಿಲಿಸಲಿಲ್ಲ. ಕೊನೆಗೆ ಬೈಕಿನ ಕೀಯಿಂದ ಮರಕ್ಕೆ ಚುಚ್ಚಿದ್ದು ನಂತರ ನಿಧಾನವಾಗಿ ಬಾಲ ಮರದ ಸಡಿಲಿಕೆಯಿಂದ ಬಿಟ್ಟಿದ್ದು ಇದನ್ನು ಅವರು ವಿಡಿಯೋ ಸಹ ಮಾಡಿ ದಾಖಲಿಸಿದ್ದಾರೆ.

    ವಿಚಾರ ಹೇಳಲು ಆಶ್ಚರ್ಯ ಆದರೂ ಮಲೆನಾಡು ಭಾಗದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲಿಯವರೆಗೆ ಇದು ದಾಖಲಾಗಿರಲಿಲ್ಲ. ಮಲೆನಾಡಿನ ಭಾಗದಲ್ಲಿ ಕಾಡಿಗೆ ಹೋದ ಹಲವು ಹಸುಗಳು ಮರಳಿ ಬರುವಾಗ ತಮ್ಮ ಬಾಲವನ್ನ ತುಂಡರಿಸಿಕೊಂಡು ಬಂದ ಘಟನೆಗಳು ಹಲವು ಇದೆ. ಹಿಂದೆ ಇವುಗಳನ್ನು ಹಲವರು ಕಣ್ಣಾರೆ ಕಂಡರೂ ದಾಖಲಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಇದು ದಾಖಲಾಗಿದ್ದು ಸಹ್ಯಾದ್ರಿ ಶ್ರೇಣಿಯ ಕಾಡಿನಲ್ಲಿ ಈ ರೀತಿಯ ಮರವೂ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜನ ಈಗ ವಿಡಿಯೋ ನೋಡಿ “ದನದ ರಕ್ತ ಹೀರುವ ಮರ”ಎಂದು ಕರೆಯುತ್ತಿದ್ದಾರೆ.

  • ನಾಟ ಕಳ್ಳ ಸಾಗಾಣೆ ಮಾಡುತ್ತಿದ್ದ ಪೊಲೀಸ್- 5 ಲಕ್ಷಕ್ಕೂ ಅಧಿಕ ಮೌಲ್ಯದ ನಾಟ ವಶ

    ನಾಟ ಕಳ್ಳ ಸಾಗಾಣೆ ಮಾಡುತ್ತಿದ್ದ ಪೊಲೀಸ್- 5 ಲಕ್ಷಕ್ಕೂ ಅಧಿಕ ಮೌಲ್ಯದ ನಾಟ ವಶ

    – ಅಧಿಕಾರಿಗಳ ದಾಳಿ ಅರಿತು ಕಾಲ್ಕಿತ್ತ ಪೊಲೀಸ್

    ಕಾರವಾರ: ಅಪರಾದ ತಡೆಯಬೇಕಾದ ಪೊಲೀಸರೇ ಅಡ್ಡ ದಾರಿ ಹಿಡಿದು ಕಾಡಿನಲ್ಲಿ ಬೆಳೆದ ನಾಟಗಳನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

    ಜೋಯಿಡಾ ತಾಲೂಕು ಗುಪ್ತದಳ ವಿಭಾಗದ ಗುರುರಾಜ್ ನಾಟಗಳನ್ನು ಮಾರುತ್ತಿದ್ದ ಪೊಲೀಸ್ ಪೇದೆ. ಅಧಿಕಾರಿಗಳು ದಾಳಿಯನ್ನು ಅರಿತ ಗುರುರಾಜ್ ಪರಾರಿಯಾಗಿದ್ದು, ಆತನ ಸಹಚರ ಉದಯ್ ಸಿಕ್ಕಿಬಿದ್ದಿದ್ದಾನೆ.

    ಜೋಯಿಡಾ ಪೊಲೀಸ್ ಠಾಣೆಯಲ್ಲಿ ಏಳು ವರ್ಷಗಳಿಂದ ಪೇದೆಯಾಗಿದ್ದ ಗುರುರಾಜ್, ಕೆಲವು ವರ್ಷಗಳ ಹಿಂದೆ ಗುಪ್ತದಳ ವಿಭಾಗಕ್ಕೆ ವರ್ಗವಾಗಿದ್ದ. ಜೋಯಿಡಾದಲ್ಲಿ ಸಿಗುವ ಅತ್ಯಂತ ದುಬಾರಿ ಬೆಲೆಯ ಸೀಸಂ ಹಾಗೂ ಸಾಗುವಾನಿ ನಾಟಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಇದರಿಂದಾಗಿ ಸಹಚರ ಉದಯ್ ಜೊತೆಗೆ ಸೇರಿ ಮರಗಳನ್ನು ಕಡಿದು ಪೀಠೋಪಕರಣಗಳನ್ನು ತಯಾರಿಸಿ, ಇಲ್ಲವೇ ಹಾಗೆಯೇ ಮಾರಾಟ ಮಾಡುತ್ತಿದ್ದ.

    ಗುರುರಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸ್ ಅಧಿಕಾರಿಗಳು ಆತನಿಗೆ ತಿಳಿಯದಂತೆ ತನಿಖೆ ಆರಂಭಿಸಿದ್ದರು. ಗುರುರಾಜ್ ವಸತಿ ನಿಲಯದಲ್ಲಿ ನಾಟಗಳು ಇರುವುದನ್ನು ಖಚಿತ ಪಡಿಸಿಕೊಂಡ ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ಅವರು ಡಿಸಿಐಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಇಂದು ದಾಳಿ ಮಾಡಿದ್ದಾರೆ. ಈ ವೇಳೆ ವಸತಿ ನಿಲಯದಲ್ಲಿ ಬಚ್ಚಿಟ್ಟಿದ್ದ 5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ನಾಟಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಗುರುರಾಜ್‍ಗೆ ಸಹಾಯ ಮಾಡುತ್ತಿದ್ದ ಉದಯ್‍ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

    ಗುರುರಾಜ್ ಅರಣ್ಯ ಸಂಪತ್ತನ್ನೇ ತನ್ನ ಬಂಡವಾಳವಾಗಿ ಪರಿವರ್ತಿಸಿಕೊಂಡಿದ್ದ. ತನ್ನದೇ ಆದ ತಂಡ ಮಾಡಿಕೊಂಡು ಕಾಡಿನಲ್ಲಿ ಅಮೂಲ್ಯ ಮರಗಳನ್ನು ಕಟಾವು ಮಾಡಿ ಮಾರಿ ಹಣ ಗಳಿಸುತ್ತಿದ್ದ ಎಂದು ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ತಿಳಿಸಿದ್ದಾರೆ.

    ಈ ಕುರಿತು ಜೋಯಿಡಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಗುರುರಾಜ್ ಪತ್ತೆಯಾಗಿ ಬಲೆ ಬೀಸಿದ್ದಾರೆ.

    ಪೊಲೀಸ್ ವಸತಿ ನಿಲಯಕ್ಕೆ ದಾಳಿ ಇಟ್ಟು ಈ ಮಟ್ಟದ ನಾಟಗಳನ್ನು ವಶಕ್ಕೆ ಪಡೆದಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದೆ ಹಳಿಯಾಳದಲ್ಲಿ ಅರಣ್ಯ ಇಲಾಖೆ ಪೊಲೀಸ್ ಡಿ.ಆರ್ ವ್ಯಾನ್‍ನಲ್ಲಿ ನಾಟ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದರು. ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಕಾರವಾರ: ಅಕ್ರಮವಾಗಿ ಗೋವಾದಿಂದ ತೆಲಂಗಾಣಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ 1.2 ಲಕ್ಷ ಮೌಲ್ಯದ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನ್ ಮೋಡ್ ಚಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದು, ಲಾರಿ ಚಾಲಕನ್ನು ಬಂಧಿಸಿದ್ದಾರೆ.

    ತೆಲಂಗಾಣ ಮೂಲದ ರಾಮಸ್ವಾಮಿ ಬಂಧಿತ ಲಾರಿ ಚಾಲಕ. ಬೃಹತ್ ಮೊತ್ತದ ಮದ್ಯವನ್ನು ಎಲೆಕ್ಟ್ರಿಕ್ ಬೋರ್ಡ್ ಲಾರಿಯಲ್ಲಿ ಕರ್ನಾಟಕದ ಗಡಿ ಮಾರ್ಗವಾಗಿ ಗೋವಾದಿಂದ ತೆಲಂಗಾಣಕ್ಕೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಅಬಕಾರಿ ಅಧಿಕಾರಿ ಮಂಜುನಾಥ್ ಅವರ ದಾಳಿ ನಡೆಸಿದ್ದರು, ಈ ವೇಳೆ ಲಾರಿ ಸಮೇತ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಅನ್‍ಮೋಡ್ ಮಾರ್ಗವಾಗಿ ಹೊರಟಿದ್ದ ಲಾರಿಯನ್ನು ನಿಲ್ಲಿಸಿ, ಅದರಲ್ಲಿದ್ದ 1.2 ಲಕ್ಷ ಮೌಲ್ಯದ ಮದ್ಯ ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಈ ಕುರಿತು ಜೋಯಿಡಾ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.