Tag: ಜೋಬೈಡನ್

  • ಅಮೆರಿಕದ ವಿವಿಧ ಹುದ್ದೆಯಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು- ದಾಖಲೆ ಸೃಷ್ಟಿಸಿದ ಬೈಡನ್

    ಅಮೆರಿಕದ ವಿವಿಧ ಹುದ್ದೆಯಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು- ದಾಖಲೆ ಸೃಷ್ಟಿಸಿದ ಬೈಡನ್

    ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರದಲ್ಲಿ ಇಲ್ಲಿಯವರೆಗೆ 130ಕ್ಕೂ ಅಧಿಕ ಪ್ರಮುಖ ಸ್ಥಾನಗಳಿಗೆ ಇಂಡೋ ಅಮೆರಿಕರನ್ನರನ್ನು ನೇಮಿಸಿದ್ದಾರೆ. ಈ ಮೂಲಕ ಬೈಡನ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

    ಅಮೆರಿಕಾದ ಜನಸಂಖ್ಯೆಯಲ್ಲಿ ಭಾರತೀಯ ಸಮೂದಾಯದ ಪ್ರಮಾಣ ಶೇ.1ರಷ್ಟಿದ್ದು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸಮೂದಾಯಕ್ಕೆ ನೀಡಿದ್ದ ಭರವಸೆಯನ್ನು ಪೂರೈಸಿದ್ದಾರೆ. ಈ ಮೂಲಕ ಹಿಂದಿನ 2 ಅಧ್ಯಕ್ಷರ ದಾಖಲೆಯನ್ನು ಮುರಿದಿದ್ದಾರೆ.

    Kamala Harris 3

    ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರದಲ್ಲಿ 80ಕ್ಕೂ ಹೆಚ್ಚು ಇಂಡೋ ಅಮೆರಿಕರಿದ್ದರೆ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ 60ಕ್ಕೂ ಅಧಿಕ ಇಂಡೋ ಅಮೆರಿಕರನ್ನು ನೇಮಿಸಿದ್ದರು. ಇದನ್ನೂ ಓದಿ: ಇಂದು ಒಂದೇ ದಿನ 155 ರೈಲು ಕ್ಯಾನ್ಸಲ್ – ರದ್ದುಗೊಂಡಿರುವ ರೈಲುಗಳ ಪಟ್ಟಿ ಇಲ್ಲಿದೆ‌

    ಆದರೆ ಈ ಬಾರಿ ಬೈಡನ್ ನೇತೃತ್ವದ ಸರ್ಕಾರದಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಕೆಲಸ ಮಾಡುತ್ತಿದ್ದಾರೆ. ಯುಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್ ಹಂತಗಳಲ್ಲಿ 40ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಚುನಾಯಿತರಾಗಿದ್ದಾರೆ. 20ಕ್ಕೂ ಹೆಚ್ಚು ಇಂಡೋ ಅಮೆರಿಕನ್ನರು ಯುಎಸ್ ಕಂಪನಿಗಳ ಪ್ರಮುಖ ಹುದ್ದೆಯಲ್ಲಿದ್ದಾರೆ.

    Joe Biden

    ಅಮೆರಿಕಾ ಮೂಲದ ಜಾಗತಿಕ ಸಂಸ್ಥೆಯಾದ ಇಂಡಿಯಾಸ್ಪೊರಾ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಈ ಬಗ್ಗೆ ಮಾತನಾಡಿ, ಇಂಡೋ ಅಮೆರಿಕನ್ನರು ತಮ್ಮ ಸೇವಾ ಮನೋಭಾವದಿಂದ ಗಮನಸೆಳೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ವಾಷಿಂಗ್ಟನ್: ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ ನಡೆದಿದೆ. ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಬಲಿ ಆಗಿರುವ ಘಟನೆ ನಡೆದಿದೆ.

    ಈ ಬಗ್ಗೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೊಟ್ ಮಾಹಿತಿ ನೀಡಿದ್ದು, ಸುಮಾರು 18 ವರ್ಷ ವಯಸ್ಸಿನ ಸಾಲ್ವಡೆರ್ ರೊಮೊಸ್ (18) ಎಂಬಾತ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಘಟನೆಯಲ್ಲಿ ಒಟ್ಟಾರೆಯಾಗಿ 21 ಜನರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಭದ್ರತಾ ಸಿಬ್ಬಂದಿ ಪ್ರತಿದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಶ್ವೇತಭವನದಲ್ಲಿ ಶೂಟೌಟ್‍ನಲ್ಲಿ ಮಡಿದವರಿಗೆ ಶೋಕ ವ್ಯಕ್ತಪಡಿಸಲು ಧ್ವಜಗಳನ್ನು ಅರ್ಧ ಹಾರಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಘಟನೆಯನ್ನು ಖಂಡಿಸಿದ್ದಾರೆ. ಇದು ಈ ವರ್ಷದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    Joe Biden

    2012ರಲ್ಲಿ ಕನೆಕ್ಟಿಕಟ್‍ನಲ್ಲಿ ನಡೆದ ಸ್ಯಾಂಡಿಹುಕ್ ಗುಂಡಿನ ದಾಳಿಯಲ್ಲಿ 20 ಮಕ್ಕಳು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿದರು. ಈ ಘಟನೆಯನ್ನು ನೆನಪಿಸುವಂತಿದೆ. ಇದನ್ನೂ ಓದಿ:  ಜ್ಞಾನವಾಪಿ ಕೇಸ್ – ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ

  • ಇಂದು ರಾತ್ರಿಯಿಂದ ಅಮೆರಿಕದಲ್ಲಿ ಹೊಸ ಶಕೆ – ಅಧ್ಯಕ್ಷರಾಗಿ ಜೋಬೈಡನ್ ಪದಗ್ರಹಣ

    ಇಂದು ರಾತ್ರಿಯಿಂದ ಅಮೆರಿಕದಲ್ಲಿ ಹೊಸ ಶಕೆ – ಅಧ್ಯಕ್ಷರಾಗಿ ಜೋಬೈಡನ್ ಪದಗ್ರಹಣ

    – ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ

    ವಾಷಿಂಗ್ಟನ್: ಬಿಗಿಭದ್ರತೆ ನಡುವೆ ಸಂಸತ್ತಿನಲ್ಲಿ ಇಂದು ರಾತ್ರಿ 10.30ಕ್ಕೆ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಶೇಷ ಅಂದ್ರೆ 127 ವರ್ಷದ ಹಳೆದಾದ ಕುಟುಂಬದ ಬೈಬಲ್ ಮೇಲೆ ಬೈಡನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಅಮೆರಿಕ ಕ್ಯಾಪಿಟಲ್ ಹಿಲ್‍ನ ಪಶ್ಚಿಮ ದ್ವಾರದ ಬಳಿ ಸಂಪೂರ್ಣ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿದೆ. ಅಮೆರಿಕದ ರಾಜಕೀಯದಲ್ಲಿ ಭಾರತದ ಪಾತ್ರ ಬಹುದೊಡ್ಡದು. 49ನೇ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಭಾರತ ಮೂಲದ ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಗರಿಮೆಗೆ ಕಮಲಾ ಪಾತ್ರರಾಗಲಿದ್ದಾರೆ. ತಮಿಳುನಾಡಿನ ತಿರುವರೂರ್ ಸಮೀಪದ ಹಳ್ಳಿ ಕಮಲಾ ಅವರ ತಂದೆ ಊರಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಮಲಾ ಅವರು ಭಾರತೀಯ ಸಂಪ್ರದಾಯದಂತೆ ಸೀರೆ ಉಡ್ತಾರಾ..? ಎಂಬ ಕುತೂಹಲವೂ ಎಲ್ಲರಲ್ಲಿದೆ.

    ಬೈಡನ್ ಪದಗ್ರಹಣ ಕಾರ್ಯಕ್ರಮಕ್ಕೆ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾಗಿಯಾಗುತ್ತಿಲ್ಲ. ಇಂದು ಶ್ವೇತಭವನದಿಂದ ಡೋನಾಲ್ಡ್ ಟ್ರಂಪ್ ನಿರ್ಗಮಿಸಲಿದ್ದಾರೆ. ಇದೇ ವೇಳೆ ಪ್ರಥಮ ಮಹಿಳೆ ಮಿಲೆನಿಯಾ ಟ್ರಂಪ್ ವಿದಾಯ ಭಾಷಣ ಕುತೂಹಲಕ್ಕೆ ಕಾರಣವಾಯ್ತು. ಶ್ವೇತಭವನದಿಂದ ಟ್ರಂಪ್ ಹೊರಡಲು ಎಲ್ಲಾ ಸಿದ್ಧತೆಯಾಗಿದೆ. ಕಳೆದ ನಾಲ್ಕು ವರ್ಷಗಳು ಮರೆಯಲಾರದ ಕ್ಷಣಗಳಾಗಿದೆ. ಟ್ರಂಪ್, ನಾನು ಶ್ವೇತಭವನದ ಸಮಯ ಮುಕ್ತಾಯಗೊಳಿಸಿದ್ದೇವೆ ಎಂದು ಸುಮಾರು 7 ನಿಮಿಷಗಳ ಭಾಷಣದಲ್ಲಿ ತಿಳಿಸಿದ್ರು. ಆದ್ರೆ ನೂತನ ಅಧ್ಯಕ್ಷರಿಗೆ ಸ್ವಾಗತ ಕೋರದೇ ಇರುವುದು ಚರ್ಚೆಗೆ ಕಾರಣವಾಗಿದೆ.

    ಅಮೆರಿಕದ ಕ್ಯಾಪಿಟಲ್ ಮೇಲಿನ ಕಂಡುಕೇಳರಿಯದ ದಾಳಿಯಿಂದ ಮುಂಜಾಗ್ರತೆಯಾಗಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮಿಚಿಗನ್, ವರ್ಜಿನಿಯಾ, ವಾಷಿಂಗ್ಟನ್ ಸೇರಿದಂತೆ ದೇಶದ 50ಕ್ಕೂ ಹೆಚ್ಚು ಕಡೆ ಪ್ರತಿಭಟನೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗಿದೆ. ಕ್ಯಾಪಿಟಲ್ ಸುತ್ತಮುತ್ತ 25 ಸಾವಿರಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭದ್ರತಾಪಡೆಗಳ ನಿಯೋಜನೆ ಮಾಡಲಾಗಿದೆ.