Tag: ಜೋಧಪುರ

  • ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?

    ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?

    ಜೈಪುರ: ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ (Light Combat Helicopter) ಅನ್ನು ಇಂದು ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ (IAF chief Air Chief Marshal VR Chaudhari) ಅವರ ಉಪಸ್ಥಿತಿಯಲ್ಲಿ ಜೋಧಪುರದಲ್ಲಿ (Jodhpur) ನಡೆದ ಕಾರ್ಯಕ್ರಮದಲ್ಲಿ ಪ್ರಚಂಡ್‌(Prachand) ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

    ಬೆಂಗಳೂರಿನಲ್ಲಿರುವ ಹೆಚ್‍ಎಎಲ್ ಈ ಲಘು ಯುದ್ಧ ಹೆಲಿಕಾಪ್ಟರ್ ನಿರ್ಮಿಸಿದ್ದು ಇದು ಭಾರತೀಯ ವಾಯು ಮತ್ತು ಭೂ ಸೇನೆಗೆ ಹೆಚ್ಚು ಬಲ ತಂದು ಕೊಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: 30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    5.8 ಟನ್ ತೂಕದ ಅವಳಿ-ಎಂಜಿನ್ LCH ಶಕ್ತಿ ಅನ್ನು ಈ ಹೆಲಿಕಾಪ್ಟರ್ ಹೊಂದಿದ್ದು, ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಫ್ರೆಂಚ್ ಎಂಜಿನ್ ತಯಾರಕ ಸಫ್ರಾನ್ ಸಹಯೋಗದೊಂದಿಗೆ ಅಭಿವೃದ್ಧಿಪಡಲಾಗಿದೆ. ಹೊಸ ತಂತ್ರಜ್ಞಾನದ ಅಗತ್ಯವಿರುವ ಚುರುಕುತನ ಇದರಲ್ಲಿದ್ದು, ಕುಶಲತೆ, ವಿಸ್ತೃತ ಶ್ರೇಣಿ, ಹೆಚ್ಚಿನ ಎತ್ತರದ ಕಾರ್ಯಕ್ಷಮತೆ ಮತ್ತು ಎಲ್ಲಾ ಹವಾಮಾನದಲ್ಲೂ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ವಿಮಾನಕ್ಕೆ ಬಾಂಬ್ ಬೆದರಿಕೆ- ಯುದ್ಧ ವಿಮಾನಗಳಿಂದ ಭದ್ರತೆ

    ಇದು ಅತ್ಯಂತ ಬಿಸಿ ವಾತಾವರಣದ ಮರುಭೂಮಿಯಲ್ಲಿ ಮತ್ತು ಸಿಯಾಚಿನ್‍ನಂತಹ ಅತಿ ತಣ್ಣನೆಯ ಪ್ರದೇಶದಲ್ಲಿ ಲ್ಯಾಂಡ್ ಮಾಡಬಹುದಾಗಿದ್ದು, ಸಮುದ್ರ ಮಟ್ಟದಿಂದ 5,000 ಮೀಟರ್ ಎತ್ತರ ಪ್ರದೇಶದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲದು. ಶಸ್ತ್ರ ಸಜ್ಜಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ್ದು ಇದು ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಬಲ್ಲದು ಮತ್ತು ನಿಧಾನವಾಗಿ ಸಾಗುವ ಶತ್ರು ವಿಮಾನಗಳ ಮೇಲೆ ಪ್ರತಿದಾಳಿ ಮಾಡುವ ವಿಶಿಷ್ಟತೆಯನ್ನು ಹೊಂದಿದೆ.

    ಇದು ರಾತ್ರಿ ಹೊತ್ತಿನಲ್ಲೂ ಕಾರ್ಯಾಚರಣೆ ಮಾಡುವ ಶಕ್ತಿ ಹೊಂದಿದ್ದು, ಕಾಡು, ಮಳೆ, ಹಿಮಪಾತದಂತಹ ಪ್ರಕೃತಿ ವೈಪರೀತ್ಯಗಳ ನಡುವೆ ಕ್ಷಮತೆಯಿಂದ ಕೆಲಸ ಮಾಡಬಲ್ಲದು. ಇದು ಶತ್ರು ದೇಶಗಳ ರೇಡಾರ್ ಕಣ್ಣು ತಪ್ಪಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಶಿಷ್ಟ ಹೆಲಿಕಾಪ್ಟರ್‌ಗೆ ಬೇಡಿಕೆ ಹೆಚ್ಚಿದ್ದು ಭಾರತೀಯ ವಾಯುಸೇನೆ 65 ಮತ್ತು ಭೂಸೇನೆ 95 ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿದೆ. ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಿಸುವ ಸಾಮರ್ಥ್ಯವಿದ್ದು ಆರಂಭಿಕವಾಗಿ 15 ಹೆಲಿಕಾಪ್ಟರ್‌ಗಳನ್ನು ಸೇನೆಗೆ ಇಂದು ಹಸ್ತಾಂತರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಮ್ಮಿ, ಪಪ್ಪಾ ಸಾರಿ- ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಮಮ್ಮಿ, ಪಪ್ಪಾ ಸಾರಿ- ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    – ಇನ್ಮುಂದೆ ನನ್ನಿಂದ ಆಗಲಾರದು ಸಾಲು ಬರೆದ ಪತ್ರ ಪತ್ತೆ

    ಜೈಪುರ: ಡೆತ್ ನೋಟ್ ಬರೆದಿಟ್ಟು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೋಧಪುರದಲ್ಲಿ ನಡೆದಿದೆ. ವಿದ್ಯಾರ್ಥಿ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಗೇನಾರಾಮ್ ದೇವಾಸಿ ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ. ಜಾಲೌರ ಜಲ್ಲೆಯ ರಾಂಸೀನ್ ನಿವಾಸಿಯಾಗಿದ್ದ ಗೇನಾರಾಮ್ ಜೋಧಪುರ ನಗರದ ಎಸ್‍ಎನನ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದು, ವಿದ್ಯಾಲಯದ ಹಾಸ್ಟೆಲ್ ನಲ್ಲಿ ವಾಸವಾಗಿದ್ದನು. ಶನಿವಾರ ಸಂಜೆ ಸುಮಾರು 7.30ಕ್ಕೆ ಕೊನೆಯ ಬಾರಿ ಗೇನಾರಾಮ್ ಗೆಳೆಯರನ್ನ ಭೇಟಿಯಾಗಿದ್ದ. ಸಂಜೆ ರೂಮ್ ಸೇರಿದ ಬಳಿಕ ಆತನ ರೂಮೇಟ್ ಬಾಗಿಲು ತೆಗೆಯುವಂತೆ ಹೇಳಿದ್ದಾನೆ. ತುಂಬಾ ಸಮಯ ಗೇನಾರಾಮ್ ಹೊರ ಬಾರದಿದ್ದಾಗ ವಿದ್ಯಾರ್ಥಿಗಳು ಬಾಗಿಲು ಮುರಿದು ನೋಡಿದಾಗ ಶವ ಫ್ಯಾನ್ ನಲ್ಲಿ ನೇತಾಡುತ್ತಿತ್ತು.

    ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಮತ್ತು ಹಾಸ್ಟೆಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಶವವನ್ನ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸ್ಥಳಾಂತರಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೇನಾರಾಮ್ ಪರೀಕ್ಷೆಗೂ ಗೈರಾಗಿದ್ದನು. ಶನಿವಾರ ಗೇನಾರಾಮ್ ಹೊಸ ಹಗ್ಗ ತಂದಿರೋದನ್ನ ಕೆಲವರು ಗಮನಿಸಿದ್ದಾರೆ.

    ಡೆತ್‍ನೋಟ್: ಮಮ್ಮಿ, ಪಪ್ಪಾ, ಚಿಕ್ಕಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ. ಕಳೆದ ಎರಡು ತಿಂಗಳಿನಿಂದ ತುಂಬಾ ಒತ್ತಡದಲ್ಲಿದ್ದೇನೆ. ಇನ್ಮುಂದೆ ಇದು ನನ್ನಿಂದ ಆಗಲಾರದು ಎಂದು ಗೇನಾರಾಮ್ ಬರೆದಿರುವ ಡೆತ್‍ನೋಟ್ ಪತ್ತೆಯಾಗಿದೆ.

  • ಪಾಸ್‍ವರ್ಡ್ ತೆಗೆದು ಗೆಳೆಯರಿಗೆ ಮೊಬೈಲ್ ನೀಡೋ ಮುನ್ನ ಎಚ್ಚರ!

    ಪಾಸ್‍ವರ್ಡ್ ತೆಗೆದು ಗೆಳೆಯರಿಗೆ ಮೊಬೈಲ್ ನೀಡೋ ಮುನ್ನ ಎಚ್ಚರ!

    – ಫೋಟೋ ಕದ್ದ ಗೆಳೆಯನಿಂದ ನೀಚ ಕೆಲಸ
    – ಪತಿಯ ತಪ್ಪಿನಿಂದ ಠಾಣೆ ಮೆಟ್ಟಿಲೇರಿದ ಪತ್ನಿ

    ಜೈಪುರ: ಪಾಸ್‍ವರ್ಡ್ ತೆಗೆದು ಗೆಳೆಯನಿಗೆ ನೀಡಿದ ತಪ್ಪಿಗೆ ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ. ಗೆಳೆಯನ ಮೊಬೈಲಿನಿಂದ ಆತನ ಪತ್ನಿಯ ಖಾಸಗಿ ಫೋಟೋ ಕದ್ದಿದ್ದ ಯುವಕ ಜೈಲುಪಾಲಾಗಿದ್ದಾನೆ. ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬನಾಡ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?: ಬನಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮಹಿಳೆಗೆ ಕೆಲ ದಿನಗಳ ಹಿಂದ ಅನಾಮಧೇಯ ಕರೆ ಬಂದಿತ್ತು. ನಿನ್ನ ಖಾಸಗಿ ಫೋಟೋಗಳು ನನ್ನ ಬಳಿಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದನು. ಫೋಟೋ ಲೀಕ್ ಮಾಡದಿರಲು 3.50 ಲಕ್ಷ ರೂ. ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದನು. ಇದನ್ನೂ ಓದಿ: ಬಲವಂತವಾಗಿ ಪತ್ನಿಗೆ ಮದ್ಯ ಕುಡಿಸಿ ಫೋಟೋ ಕ್ಲಿಕ್ – ಬ್ಲ್ಯಾಕ್‍ಮೇಲ್

    ಆರೋಪಿ ತನ್ನ ಬಳಿಯಲ್ಲಿದ್ದ ಕೆಲ ಫೋಟೋಗಳನ್ನ ಮಹಿಳೆಗೆ ಕಳುಹಿಸಿ ಬ್ಲ್ಯಾಕ್‍ಮೇಲ್ ಮಾಡತೊಡಗಿದ್ದನು. ಅಪರಿಚಿತನಿಗೆ ಹಣ ನೀಡದೇ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನ ಬಂಧಿಸಿದಾಗ ಆತ ಪತಿಯ ಗೆಳೆಯ ಎಂಬ ಸತ್ಯ ತಿಳಿದಿದೆ. ಇದನ್ನೂ ಓದಿ: ಮದ್ವೆ ಆಗೋದಾಗಿ ನಂಬಿಸಿ ‘ಜೋಶ್’ ಸಿನಿಮಾ ಖ್ಯಾತಿಯ ನಟಿಗೆ ಬ್ಲ್ಯಾಕ್‍ಮೇಲ್- ಆರೋಪಿಗಳು ಅರೆಸ್ಟ್

    ಸಿಕ್ಕಿ ಬಿದ್ದಿದ್ದು ಪತಿಯ ಗೆಳೆಯ: ಮಹಿಳೆಯ ಪತಿ ಮತ್ತು ಆರೋಪಿ ಇಬ್ಬರೂ ಐದು ವರ್ಷಗಳಿಂದ ಜೊತೆಯಾಗಿಯೇ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ ಆರೋಪಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದನು. ಹೀಗಾಗಿ ಗೆಳೆಯನ ಪತ್ನಿಗೆ ಬ್ಲ್ಯಾಕ್‍ಮೇಲ್ ಮಾಡಿ ಹಣ ಲಪಟಾಯಿಸಲು ಪ್ಲಾನ್ ಮಾಡಿದ್ದನು. ಇದನ್ನೂ ಓದಿ: ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಮಗನಿಂದಲೇ ಬ್ಲ್ಯಾಕ್‍ಮೇಲ್

    ಫೋಟೋ ಕದ್ದಿದ್ದೇಗೆ?: ಗೆಳೆಯ ಫೋನ್ ಪಡೆದಿದ್ದ ಆರೋಪಿ ಎಲ್ಲ ಫೋಟೋ ಮತ್ತು ವೀಡಿಯೋಗಳನ್ನ ತನ್ನ ಲ್ಯಾಪ್‍ಟಾಪ್‍ಗೆ ಟ್ರಾನ್ಸಫರ್ ಮಾಡಿಕೊಂಡಿದ್ದನು. ಗೆಳೆಯ ಮತ್ತು ಆತನ ಪತ್ನಿಯ ಖಾಸಗಿ ಫೋಟೋ ಬಳಸಿ ಹಣ ಮಾಡಲು ಆರೋಪಿ ಮುಂದಾಗಿದ್ದನು. ಆರೋಪಿಯನ್ನ ಬಂಧಿಸಲಾಗಿದ್ದು, ಇದೇ ರೀತಿ ಯಾರಿಗಾದ್ರೂ ಬೆದರಿಕೆ ಹಾಕಿದ್ದಾನಾ ಎಂಬುದರ ಕುರಿತು ವಿಚಾರಣೆ ನಡೆಸಲಾಗ್ತಿದೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ಅಂಜನಾ ಹೇಳಿದ್ದಾರೆ.

  • ವಿವಾಹಿತೆ ಜೊತೆ ಮಗ ಎಸ್ಕೇಪ್ – ಪ್ರಾಣ ಕಳಕ್ಕೊಂಡ ಅಪ್ಪ, ಅಮ್ಮ

    ವಿವಾಹಿತೆ ಜೊತೆ ಮಗ ಎಸ್ಕೇಪ್ – ಪ್ರಾಣ ಕಳಕ್ಕೊಂಡ ಅಪ್ಪ, ಅಮ್ಮ

    – ಮಾನಸಿಕ ಒತ್ತಡದಲ್ಲಿದ್ದ ದಂಪತಿ
    – ನೇಣು ಬಿಗಿದುಕೊಂಡು ಆತ್ಮಹತ್ಯೆ

    ಜೈಪುರ/ಜೋಧಪುರ: ಪುತ್ರ ವಿವಾಹಿತೆ ಜೊತೆ ಓಡಿ ಹೋಗಿದ್ದಕ್ಕೆ ನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೋಧಪುರದ ದೇವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವಿಷ್ಣು ದತ್ ಮತ್ತು ಮಂಜು ದೇವಿ ಆತ್ಮಹತ್ಯೆಗೆ ಶರಣಾದ ದಂಪತಿ. ಕೆಲವು ದಿನಗಳ ಹಿಂದೆ ದಂಪತಿಯ ಮಗ ವಿವಾಹಿತ ಮಹಿಳೆ ಜೊತೆ ಮನೆಬಿಟ್ಟು ಓಡಿ ಹೋಗಿದ್ದನು. ಮಗನ ಈ ಕೆಲಸದಿಂದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಊರಿನಲ್ಲಿ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಿತ್ತು. ಇದೇ ಕಾರಣದಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ನಾಲ್ಕನೇ ಬಾರಿ ಮದುವೆಯಾಗಲು ಮಗನನ್ನೇ ಕೊಂದ 23ರ ವಿಧವೆ

    ಭಾನುವಾರ ಬೆಳಗ್ಗೆಯಾದ್ರೂ ದಂಪತಿ ಮನೆಯಿಂದ ಹೊರ ಬಂದಿರಲಿಲ್ಲ. ಪಕ್ಕದ ಮನೆಯವರು ಬಾಗಿಲು ತಟ್ಟಿದರೂ ಯಾರು ಉತ್ತರ ನೀಡಿರಲಿಲ್ಲ. ಕೊನೆಗೆ ಅನುಮಾನಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ದಂಪತಿ ಶವ ನೇತಾಡುತ್ತಿರೋದು ಬೆಳಕಿಗೆ ಬಂದಿದೆ. ಕೂಡಲೇ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪರಿಚಯಸ್ಥನಿಂದ ರೇಪ್- ಸೆಕ್ಸ್ ವಿಡಿಯೋ ತೋರ್ಸಿ 9.7 ಲಕ್ಷ ಹಣ ಪಡೆದ

    ಘಟನೆಗೆ ಸಂಬಂಧಿಸಿದಂತೆ ದಂಪತಿಯ ಸಂಬಂಧಿಯೊಬ್ಬರು ದೂರು ದಾಖಲಿಸಿದ್ದಾರೆ. ಮೃತದೇಹವನ್ನು ಸಮೀಪದ ಮಥುರಾ ಆಸ್ಪತ್ರೆಯಲ್ಲಿರಿಸಲಾಗಿದೆ. ಕೊರೊನಾ ಟೆಸ್ಟ್ ಬಳಿಕ ಮರಣೋತ್ತರ ಶವ ಪರೀಕ್ಷೆ ನಡೆಸಲಾಗುವುದು ಎಂದು ದೇವನಗರ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಾಸನಾಗಿದ್ದ ಅಣ್ಣನಿಂದ್ಲೇ ತಂಗಿಯ ರೇಪ್- 8 ತಿಂಗ್ಳ ಗರ್ಭಿಣಿಯಾದ ಅಪ್ರಾಪ್ತೆ

  • ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್

    ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್

    – ಪೇದೆ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಜೈಪುರ: ಪೊಲೀಸ್ ಪೇದೆಯೊಬ್ಬರು ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್ ಮಾಡಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ರಾಜಸ್ಥಾನದ ಜೋಧ್‌ಪುರದ ನಾಗೋರಿ ಗೇಟ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ತನ್ನ ಸಹೋದ್ಯೋಗಿಗೆ ಪೊಲೀಸ್ ಪೇದೆ ಕ್ಷೌರ ಮಾಡಿದ್ದಾರೆ. ಪೇದೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಆಸ್ಪತ್ರೆಗೆ ಕರೆದೊಯ್ದಿದ್ದ ಪೇದೆಯ ಹೆಸರನ್ನೇ ಮಗುವಿಗಿಟ್ಟ ತಾಯಿ

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಾಗೋರಿ ಗೇಟ್ ಠಾಣೆಯ ಅಧಿಕಾರಿ ಜಬ್ಬರ್ ಸಿಂಗ್, “ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‍ಡೌನ್‍ನಿಂದಾಗಿ ಕ್ಷೌರದ ಅಂಗಡಿಗಳು ಮುಚ್ಚಿವೆ. ಹೀಗಾಗಿ ಕೆಲವರು ಕೂದಲು, ಗಡ್ಡ ಕಟ್ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ ಪೊಲೀಸರಿಗೆ ಹೇರ್ ಕಟಿಂಗ್ ಅನಿವಾರ್ಯವಾಗಿದೆ. ಇದರಿಂದಾಗಿ ಸಹೋದ್ಯೋಗಿಯ ಹೇರ್ ಕಟಿಂಗ್ ಮಾಡುವ ಮೂಲಕ ಪೇದೆ ಇತರರಿಗೆ ಮಾದರಿಯಾಗಿದ್ದಾರೆ.

  • ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ: ಜೋಧ್‍ಪುರದ ಎಲ್ಲಾ ವಿಮಾನಗಳ ಹಾರಾಟ ರದ್ದು!

    ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ: ಜೋಧ್‍ಪುರದ ಎಲ್ಲಾ ವಿಮಾನಗಳ ಹಾರಾಟ ರದ್ದು!

    ಜೈಪುರ: ರಾಜಸ್ಥಾನದ ಜೋಧ್‍ಪುರ ವಿಮಾನ ನಿಲ್ದಾಣದಲ್ಲಿ ಹಾರಾಟಕ್ಕೆ ಸಿದ್ದವಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಕರೆ ಬಂದಿದ್ದರಿಂದ ಏರ್ ಇಂಡಿಯಾ ಸೇರಿದಂತೆ ಎಲ್ಲಾ ವಿಮಾನಗಳ ಹಾರಾಟವನ್ನು ವಿಮಾನ ನಿಲ್ದಾಣ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

    ಜೋಧ್‍ಪುರದಿಂದ ದೆಹಲಿಗೆ ಹೊರಡಲಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಕರೆ ಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಜೋಧ್‍ಪುರದಿಂದ ಹೊರಡಬೇಕಾಗಿದ್ದ ಎಲ್ಲಾ ವಿಮಾನಗಳ ಹಾರಾಟವನ್ನು ತಡೆಹಿಡಿದ್ದಾರೆ. ಅಲ್ಲದೇ ಏರ್ ಇಂಡಿಯಾ ವಿಮಾನವನ್ನು ಭದ್ರತಾ ಪಡೆಗಳು ತೀವ್ರವಾಗಿ ತಪಾಸಣೆ ನಡೆಸುತ್ತಿವೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

    ಜೋಧ್‍ಪುರ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ ವಾಯು ನೆಲೆಗೆ ತಾಗಿಕೊಂಡೇ ಇರುವುದರಿಂದ, ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಜೋಧ್‍ಪುರ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವಲ್ಲದೇ, ಜೆಟ್ ಏರ್ ವೇಸ್ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳ ವಿಮಾನಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

    ಸದ್ಯ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರನ್ನು ಪೊಲೀಸರು ವ್ಯಾಪಕ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೀವಾವಧಿ ಶಿಕ್ಷೆ ಕಡಿಮೆಗೊಳಿಸಿ: ರಾಜ್ಯಪಾಲರ ಮೊರೆ ಹೋದ ಆಸಾರಾಮ್ ಬಾಪು

    ಜೀವಾವಧಿ ಶಿಕ್ಷೆ ಕಡಿಮೆಗೊಳಿಸಿ: ರಾಜ್ಯಪಾಲರ ಮೊರೆ ಹೋದ ಆಸಾರಾಮ್ ಬಾಪು

    ಜೋಧಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನ ಆಸಾರಾಮ್ ಬಾಪು ತಮ್ಮ ಜೀವಾವಧಿ ಶಿಕ್ಷೆಯನ್ನು ಕಡಿಮೆಗೊಳಿಸುವಂತೆ ರಾಜಸ್ಥಾನ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.

    ಸ್ವಘೋಷಿತ ದೇವಮಾನವನೆಂದೇ ಹೆಸರು ಮಾಡಿದ್ದ ರಾಜಸ್ಥಾನದ ಆಸಾರಾಮ್ ಬಾಪು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸುಧೀರ್ಘ ವಿಚಾರಣೆ ನಡೆಸಿದ ಜೋಧಪುರ ನ್ಯಾಯಾಲಯ ಏಪ್ರಿಲ್ 25 ರಂದು ಜೀವಾವಧಿ ಶಿಕ್ಷೆ ಘೋಷಿಸಿತ್ತು.

    ಜೋಧಪುರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ಆಸಾರಾಮ್ ಬಾಪು ಜುಲೈ 2 ರಂದು ಹೈಕೋರ್ಟ್‍ಗೆ ಮೆಟ್ಟಿಲೇರಿದ್ದರು. ಆದರೆ ಇಲ್ಲಿಯವರೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ರಾಜಸ್ಥಾನದ ರಾಜ್ಯಪಾಲರ ಮೊರೆ ಹೋಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರು ಜೋಧಪುರ್ ಬಂಧಿಖಾನೆ ವರಿಷ್ಠಾಧಿಕಾರಿಯಾದ ಕೈಲಾಶ್ ತ್ರಿವೇದಿಯವರು, ಆಸಾರಾಮ್ ಬಾಪುರವರು ತಮ್ಮ ಶಿಕ್ಷೆಯ ಪ್ರಮಾಣವನ್ನು ಕಡಿಮೆಮಾಡುವಂತೆ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ ವಯೋಸಹಜ ಜೀವನ ನಡೆಸುತ್ತಿರುವ ನನಗೆ ನೀಡಿರುವ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾದಲ್ಲಿರುವ ಆಶ್ರಮದಲ್ಲಿ ಓದುತ್ತಿದ್ದ 16 ವರ್ಷದ ಬಾಲಕಿಯನ್ನು ಜೋಧಪುರದ ಬಳಿಯಿರುವ ಆಶ್ರಮದಲ್ಲಿ ಆಸಾರಾಮ ಬಾಪು 2013ರ ಆಗಸ್ಟ್ 15 ರಂದು ಅತ್ಯಾಚಾರ ಎಸಗಿದ್ದಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

    ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

    ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಜೋಧಪುರ ಪೊಲೀಸರು ಯಾವ ರೀತಿ ಭಯ ಪಡ್ತಾರೆ ಅನ್ನೋದು ಕನ್ನಡಿಗರರೊಬ್ಬರ ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

    ಸಲ್ಮಾನ್ ಜೈಲಲ್ಲಿ ಇದ್ದಾಗ ಯಾರೆಲ್ಲ ವಿಸಿಟರ್ಸ್ ಬಂದಿದ್ರು, ಎಷ್ಟು ಜನ ಬಂದಿದ್ರು, ಸಲ್ಮಾನ್‍ಗೆ ಯಾವ ರೀತಿ ವ್ಯವಸ್ಥೆಯನ್ನು ಜೈಲೊಳಗೆ ಮಾಡಲಾಗಿತ್ತು ಅಂತಾ ನರಸಿಂಹಮೂರ್ತಿಯವರು ಜೋಧಪುರ ಜೈಲಾಧಿಕಾರಿಗಳಿಗೆ ಮಾಹಿತಿ ಕೇಳಿದ್ರು.

    ನರಸಿಂಹಮೂರ್ತಿಯವರು ಕೇಳಿದ ಮಾಹಿತಿಗೆ ಪೊಲೀಸರು ಉತ್ತರ ಕೊಟ್ಟಿಲ್ಲ. ಮತ್ತೆ ಮೇಲ್ಮನವಿ ಹಾಕಿದಾಗ ಕಾರಾಗೃಹ ಅಧಿಕಾರಿಗಳು, ನೇರವಾಗಿ ಸಲ್ಮಾನ್ ಖಾನ್‍ಗೆ ಪತ್ರ ಬರೆದು ನೀವು ಜೈಲಿನಲ್ಲಿರುವಾಗ ಮಾಹಿತಿಯನ್ನು ಕೇಳಿದ್ದಾರೆ. ಕೊಡಬಹುದಾ ಸಾರ್ ಅಂತಾ ಮಾಹಿತಿ ಕೇಳಿದವರ ವಿಳಾಸವನ್ನು ಬಹಿರಂಗ ಪಡಿಸಿ ಸಲ್ಮಾನ್‍ಗೆ ಕಳುಹಿಸಿದ್ದಾರೆ.

    ಇದು ಕಾನೂನು ಬಾಹಿರವಾಗಿದ್ದು, ಜೈಲಾಧಿಕಾರಿಗಳಿಗೆ ಕೇಳಿದ ಮಾಹಿತಿಯನ್ನು ಖೈದಿಯಾಗಿದ್ದವರ ಬಳಿ ಕೇಳಿ ಉತ್ತರ ಕೊಡುತ್ತೇವೆ ಅಂದಿದ್ದು ಇತಿಹಾಸ. ಸಲ್ಮಾನ್ ಪವರ್ ಬಗ್ಗೆ ಪ್ರಶ್ನಿಸಿ, ಜೋಧಪುರ ಗೃಹ ಸಚಿವರಿಗೂ ದೂರು ಕೊಡಲಾಗಿದೆ. ಮಾಹಿತಿ ನೀಡಿಲ್ಲವಾದ್ರೇ ಹೈಕೋರ್ಟ್ ಮೆಟ್ಟಿಲೇರೋದಾಗಿ ಮೂರ್ತಿ ಹೇಳಿದ್ದಾರೆ.

  • ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

    ಜೋಧಪುರ: ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಮೊದಲ ದಿನ ಯಾವುದೇ ಆಹಾರ ಸೇವಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಜೈಲಿನ ಮೊದಲ ರಾತ್ರಿ ಊಟ ದಾಲ್ ರೋಟಿಯನ್ನು 52 ವರ್ಷದ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಹೊರಗಿನಿಂದಲೂ ಊಟವನ್ನು ತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

    ಜೈಲಿಗೆ ಬಂದಾಗ ಸಲ್ಮಾನ್‍ಗೆ ರಕ್ತದ ಒತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ನಂತರ ದೇಹ ಸಹಜ ಸ್ಥಿತಿಗೆ ಮರಳಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಲಾಸ್ – ಸಲ್ಮಾನ್ ಗೆ ಶಿಕ್ಷೆ ಪ್ರಕಟವಾಗ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ!

    ಸಲ್ಮಾನ್ ಖಾನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ. ಅವರ ಕೋಣೆಯಲ್ಲಿ ಒಂದು ಮರದ ಮಂಚ, ಒಂದು ಕಂಬಳಿ, ಒಂದು ಕೂಲರ್ ಇರುತ್ತದೆ. ಜೈಲಿನ ಆಹಾರ ಪದ್ಧತಿಯಂತೆ ದಾಲ್, ಚಪಾತಿ ಇರಲಿದೆ. ಬೆಳಗಿನ ಊಟದಲ್ಲಿ ಕಿಚಡಿ ಇರಲಿದೆ ಎಂದು ಸಿಂಗ್ ತಿಳಿಸಿದ್ದಾರೆ.

    ಇವತ್ತಿನಿಂದ ಕೆಲವು ಕೈದಿಗಳು ಜೊತೆ ಸಲ್ಮಾನ್‍ರನ್ನು ಇರಿಸಲಾಗುತ್ತದೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಒಂಟಿ ಎಂದು ಭಾವಿಸುವ ಅಗತ್ಯ ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆಯನ್ನುನಿನ್ನೆ ಪ್ರಕಟಮಾಡಿತ್ತು.

  • ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

    ಜೋಧಪುರ: ರೀಲ್ ಲೈಫ್‍ನಲ್ಲಿ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡರೂ, ರಿಯಲ್ ಲೈಫ್‍ನಲ್ಲಿ ಬ್ಯಾಡ್‍ಬಾಯ್ ಅಂತಲೇ ಕುಖ್ಯಾತಿ ಪಡೆದ ಸಲ್ಮಾನ್ ಖಾನ್ ಈಗ ಜೈಲುಪಾಲಾಗಿದ್ದಾರೆ.

    20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5 ವರ್ಷ ಶಿಕ್ಷೆ, 10 ಸಾವಿರ ದಂಡಕ್ಕೀಡಾಗಿದ್ದಾರೆ. 10 ಸಾವಿರ ಅವರಿಗೆ ಜುಜುಬಿ ಅನಿಸಿದರೂ 5 ವರ್ಷದ ಸೆರೆಮನೆ ವಾಸ ಮಾತ್ರ ಸಲ್ಮಾನ್ ಸಿನಿ ಜೀವನಕ್ಕೆ ಘಾಸಿಗೊಳಿಸಿದೆ.

    ಜೋಧಪುರ ಸಿಜೆಎಂ ಕೋರ್ಟ್‍ನಲ್ಲಿ ಬೆಳಗ್ಗೆ 11.15ಕ್ಕೆ ಅಂತಿಮ ತೀರ್ಪು ಪ್ರಕಟಿಸುವ ಪ್ರಕ್ರಿಯೆ ಆರಂಭವಾಯ್ತು. 11.30ರ ವೇಳೆಗೆ ಸಲ್ಮಾನ್ ಖಾನ್ ದೋಷಿ ಅಂತಲೂ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಜಡ್ಜ್ ದೇವ್ ಕುಮಾರ್ ಖತ್ರಿ ತೀರ್ಪು ಪ್ರಕಟಿಸಿದರು.

    ಶಿಕ್ಷೆ ಪ್ರಮಾಣ ಎಷ್ಟು ಅನ್ನೋದರ ಬಗ್ಗೆ ಗೊಂದಲ-ಜಿಜ್ಞಾಸೆ ಮೂಡಿತ್ತು. 12 ಗಂಟೆ ಸುಮಾರಿಗೆ ಎಲ್ಲಾ ಮಾಧ್ಯಮಗಳಲ್ಲೂ 2 ವರ್ಷ ಶಿಕ್ಷೆ, ಸಲ್ಮಾನ್‍ಗೆ ಬೇಲ್ ಸಿಗತ್ತೆ ಅಂತಲೇ ಸುದ್ದಿ ಪ್ರಸಾರವಾಯ್ತು. ಆದ್ರೆ, ಇದೆಲ್ಲಾ ಸುಳ್ಳಾಯ್ತು. ನಂತರ 2.15ರ ಸುಮಾರಿಗೆ 5 ವರ್ಷಗಳ ಶಿಕ್ಷೆ ಪ್ರಕಟಿಸಿದ ಜಡ್ಜ್, ಎಲ್ಲ ಗೊಂದಲಗಳಿಗೂ ಕೊನೆ ಹಾಡಿದರು.

    ಕೋರ್ಟ್ ಹಾಲ್‍ನಲ್ಲಿ ಸಹೋದರಿ ಅಲ್ವಿರಾ ಹಾಗು ಕುಟುಂಬಸ್ಥರು ಸಲ್ಮಾನ್‍ಗೆ ಮೊದಲಿನಿಂದಲೂ ಧೈರ್ಯ ತುಂಬುತ್ತಿದ್ದರು. ಆದ್ರೆ, ದೋಷಿ ಅಂತ ಆದೇಶ ಬರುತ್ತಿದ್ದಂತೆಯೇ ಸಲ್ಮಾನ್ ಕಳಾಹೀನರಾದರು. ಆದರೂ, ಶಿಕ್ಷೆ ಕಡಿಮೆ ಇರಲಿದೆ ಧೃತಿಗೆಡಬೇಡ ಅಂತ ಮಾನಸಿಕಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

    ಸಲ್ಮಾನ್ ಪರ ವಕೀಲರು ಸಹ, ನ್ಯಾಯಾಧೀಶರಿಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಮನವಿ ಮಾಡಿದರು. ಆದ್ರೆ, ಪ್ರಾಸಿಕ್ಯೂಷನ್ ಮಾತ್ರ 6 ವರ್ಷ ಶಿಕ್ಷೆ ವಿಧಿಸಲು ಮನವಿ ಮಾಡಿತ್ತು. ಎರಡು ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, 5 ವರ್ಷ ಶಿಕ್ಷೆ ಪ್ರಕಟಿಸಿತು.

    ಸಲ್ಮಾನ್ ನಿಂತಲ್ಲೇ ಅರೆಕ್ಷಣ ನಿಂತರೆ ಸಹೋದರಿ ಅಲ್ವಿರಾ ಕಣ್ಣೀರು ಸುರಿಸಿದರು. ಕೆಲಕ್ಷಣಗಳ ನಂತರ ಕೋರ್ಟ್‍ನಲ್ಲೇ ಅರೆಸ್ಟ್ ಮಾಡಿದ ಪೊಲೀಸರು, ಸಲ್ಮಾನ್‍ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಸೆಂಟ್ರಲ್ ಜೈಲ್‍ಗೆ ಕರೆದೊಯ್ದರು. ಕೋರ್ಟ್‍ಹಾಲ್‍ನಲ್ಲಿ ಸಲ್ಮಾನ್ ಅಭಿಮಾನಿಗಳು ತುಂಬಿ ಹೋಗಿದ್ದರು.

    ಅಪ್ರಾಪ್ತೆಯರ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಅಸಾರಾಂ ಬಾಪು ಪಕ್ಕದಲ್ಲೇ ಸಲ್ಮಾನ್ ಕೋಣೆ ಇದೆ. ಸದಾ ಎಸಿ ಕಾರ್, ಎಸಿ ರೂಮ್‍ಗಳಲ್ಲೇ ತಿರುಗಾಡುತ್ತಿದ್ದ ಸಲ್ಮಾನ್ ಇವತ್ತು ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಸೆಕೆಯಲ್ಲಿ ರಾತ್ರಿ ಕಳೆಯಬೇಕಾಗಿದೆ.

    ಜೋಧಪುರದಲ್ಲಿ ಸದ್ಯಕ್ಕೆ ಇವತ್ತು 39ರಿಂದ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಜಾಮೀನಿಗಾಗಿ ಮನವಿ ಸಲ್ಲಿಸಿದ್ದು ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಹಿಟ್ ಅಂಡ್ ರನ್ ಕೇಸ್‍ನಲ್ಲಿ ಬಚಾವ್ ಆಗಿದ್ದ ಸಲ್ಮಾನ್ ಬೇಟೆ ಕೇಸಲ್ಲಿ ಅಂದರ್ ಆಗಿದ್ದಾರೆ. ಈಗ ಸೇವ್ ಸಲ್ಮಾನ್ ಎಂದು ಬಾಲಿವುಡ್ ವಲಯದಿಂದ ಅಭಿಯಾನ ಆರಂಭವಾಗಿದೆ.