Tag: ಜೋಡಿಹಕ್ಕಿ

  • ಮತ್ತೆ ಗುಡ್ ನ್ಯೂಸ್ ಕೊಟ್ಟ ‘ಜೋಡಿಹಕ್ಕಿ’ ನಟಿ ಮಧುಶ್ರೀ ಅಯ್ಯರ್

    ಮತ್ತೆ ಗುಡ್ ನ್ಯೂಸ್ ಕೊಟ್ಟ ‘ಜೋಡಿಹಕ್ಕಿ’ ನಟಿ ಮಧುಶ್ರೀ ಅಯ್ಯರ್

    ಕಿರುತೆರೆ ಜನಪ್ರಿಯ ‘ಜೋಡಿಹಕ್ಕಿ’ (Jodihakki) ನಟಿ ಮಧುಶ್ರೀ ಅಯ್ಯರ್ (Madhushree Iyer) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗುವಿನ (Second Baby) ನಿರೀಕ್ಷೆಯಲ್ಲಿದ್ದಾರೆ.  ಸದ್ಯ ಬೇಬಿ ಬಂಪ್ ಫೋಟೋ ನಟಿ ಶೇರ್ ಮಾಡಿದ್ದಾರೆ.

    ಮಧುಶ್ರೀ ಅಯ್ಯರ್ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಕುಟುಂಬದ ಜೊತೆಗೆ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಮಧುಶ್ರೀ ಅಯ್ಯರ್ ಗರ್ಭಿಣಿಯಾಗಿದ್ದು, ಪತಿ ಯಶ್ ಹಾಗೂ ಮೊದಲ ಮಗು ಸ್ವರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. 2018ರಲ್ಲಿ ವಿವಾಹವಾದ ನಟಿ ಮಧು 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದೆ ಮಧುಶ್ರೀ ಕುಟುಂಬ.

    ಜೋಡಿಹಕ್ಕಿ, ರಾಧಾ ರಮಣ, ಅವಳು ಸೀರಿಯಲ್‌ಗಳಲ್ಲಿ ಮಧುಶ್ರೀ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ನಟಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಬಣ್ಣದ ಲೋಕದಿಂದ ನಟಿ ಬ್ರೇಕ್ ಪಡೆದರು. ಇದನ್ನೂ ಓದಿ: ‘ಗೌರಿಶಂಕರ’ ನಟಿ ಕೌಸ್ತುಭ ಕೈಬಿಟ್ಟ ಪಾತ್ರಕ್ಕೆ ದಿವ್ಯಾ ಎಂಟ್ರಿ

    ಮಧುಶ್ರೀ ಮೂಲತಃ ಶಿವಮೊಗ್ಗದವರು. ಬಿಕಾಂ ಪದವೀಧರೆ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಬೇಕು ಎಂದು ಅಂದುಕೊಂಡಿದ್ದ ಮಧುಶ್ರೀ ನಟನೆಗೆ ಬಂದಿದ್ದು ಅನಿರೀಕ್ಷಿತ. ಸದ್ಯ ನಟನೆಯ ಬಿಟ್ಟು ಸಂಸಾರ ಕಡೆ ನಟಿ ಗಮನ ನೀಡುತ್ತಿದ್ದಾರೆ.

  • ‘ಜೋಡಿಹಕ್ಕಿ’ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’- ಫಸ್ಟ್ ಲುಕ್ ರಿಲೀಸ್

    ‘ಜೋಡಿಹಕ್ಕಿ’ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’- ಫಸ್ಟ್ ಲುಕ್ ರಿಲೀಸ್

    ‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈಗ 3ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ (Jodihakki) ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ (Thandav Ram) ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ವಿಶೇಷವಾಗಿ ಇಂದು ಬಿಡುಗಡೆ ಮಾಡಲಾಗಿದೆ.

     

    View this post on Instagram

     

    A post shared by Thandav Ram (@thandav_ram)

    ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ ಹಾಗೂ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿ ಗಳಿಸಿರುವ ತಾಂಡವ್ ರಾಮ್ ಸಿನಿಮಾಗೆ ‘ದೇವನಾಂಪ್ರಿಯ’ ಎಂಬ ಶೀರ್ಷಿಕೆ ಇಡಲಾಗಿದೆ. ‘ದೇವನಾಂಪ್ರಿಯ’ ಅಂದರೆ ದೇವತೆಗಳಿಗೆ ಪ್ರಿಯನಾದವನು ಎಂದು ಕರೆಯಲಾಗುತ್ತದೆ.

    ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆಯ ಆಕೃತಿ, ಎರಡು ಗ್ರಾಮಗಳು ಹೀಗೆ ನಾನಾ ವಿಷಯಗಳು ಕಾಣಿಸುತ್ತವೆ.

    ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ (Devanampriya) ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.