Tag: ಜೋಗ ಜಲಪಾತ

  • ಲಿಂಗನಮಕ್ಕಿ, ಗೇರುಸೊಪ್ಪ ಡ್ಯಾಮ್‌ನಿಂದ ನೀರು ಬಿಡುಗಡೆ – ಜೋಗ್‌ ಫಾಲ್ಸ್‌ಗೆ ಜೀವಕಳೆ

    ಲಿಂಗನಮಕ್ಕಿ, ಗೇರುಸೊಪ್ಪ ಡ್ಯಾಮ್‌ನಿಂದ ನೀರು ಬಿಡುಗಡೆ – ಜೋಗ್‌ ಫಾಲ್ಸ್‌ಗೆ ಜೀವಕಳೆ

    ಕಾರವಾರ/ಶಿವಮೊಗ್ಗ: ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಶರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಯಲ್ಲಿ ಇಂದು 36 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಯಿತು. ಇದರಿಂದ ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಹರಿದುಬಂದಿದ್ದು, ಜೀವ ಕಳೆ ಪಡೆದುಕೊಂಡಿದೆ.

    ಶುಕ್ರವಾರವು ಸಹ ನೀರು ಬಿಡುಗಡೆ ಮಾಡುವುದರಿಂದ ಜೋಗ ಜಲಪಾತ ಮತ್ತಷ್ಟು ನಯನ ಮನೋಹರವಾಗಿರಲಿದೆ. ಇಂದು ಸಾವಿರಾರು ಜನ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿ ಜಲಪಾತ ವೀಕ್ಷಿಸಿ ಕಣ್ತುಂಬಿಕೊಂಡರು.

    ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ
    ಲಿಂಗನಮಕ್ಕಿಯಲ್ಲಿ ಕಳೆದ ಎರಡು ದಿನದಿಂದ ನೀರು ಬಿಡುಗಡೆ ಮಾಡಿದ್ದು, ಜೋಗ ಮೂಲಕ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಈ ಹಿನ್ನೆಲೆಯಲ್ಲಿ ಗೇರುಸೊಪ್ಪ ಡ್ಯಾಮ್‌ನಿಂದ ಇಂದು ಐದು ಗೇಟ್ ತೆರೆದು ಒಟ್ಟು 75 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದ ಹೊನ್ನಾವರ ಭಾಗದ ಶರಾವತಿ ನದಿ ಪಾತ್ರದ ಜನರಿಗೆ ಪ್ರವಾಹ ಏರ್ಪಡುವ ಸಾಧ್ಯತೆ ಇದ್ದು, ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ…

  • ನಿರಂತರ ಮಳೆಯಿಂದ ಜೋಗ ಜಲಪಾತಕ್ಕೆ ಜೀವಕಳೆ – ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

    ನಿರಂತರ ಮಳೆಯಿಂದ ಜೋಗ ಜಲಪಾತಕ್ಕೆ ಜೀವಕಳೆ – ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

    ಶಿವಮೊಗ್ಗ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವಕಳೆ ಬಂದಿದ್ದು, ಫಾಲ್ಸ್ ಸೌಂದರ್ಯ ಕಂಡು ಪ್ರವಾಸಿಗರು ಮನಸೋತಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ನಿರಂತರ ಮಳೆಯಿಂದಾಗಿ ಲಿಂಗನಮಕ್ಕಿ (Linganamakki) ಜಲಾಶಯದ ಮೂಲಕ ಶರಾವತಿ ನದಿಗೆ (Sharavathi River) ನೀರು ಹರಿದುಬಂದಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ. ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.‌

    ಜಲಪಾತದ ರಾಜ, ರಾಣಿ, ರೋರರ್ ಹಾಗೂ ರಾಕೆಟ್ ಜಲಧಾರೆಗಳು ಭೋರ್ಗರೆಯುತ್ತಿದ್ದು, ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.ಇದನ್ನೂ ಓದಿ: ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂಕುಸಿತ

  • ಹೊಸ ವರ್ಷ ಹಿನ್ನೆಲೆ – ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು

    ಹೊಸ ವರ್ಷ ಹಿನ್ನೆಲೆ – ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು

    ಶಿವಮೊಗ್ಗ: ಹೊಸ ವರ್ಷದ (New Year 2025) ಹಿನ್ನೆಲೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

    ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಜ.1 ರಿಂದ ಮಾ.15 ರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಇದೀಗ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಪ್ರವಾಸಿಗರು ಜೋಗಕ್ಕೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

    ಮುಖ್ಯ ರಸ್ತೆಯ ವೀವ್ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬಯಿ ಬಂಗಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರೆ ಸ್ಥಳಗಳಿಂದ ಪ್ರವಾಸಿಗರು ಜಲಪಾತದ ಸೊಬಗು ಕಣ್ತುಂಬಿಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಜೋಗ ಜಲಪಾತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಲಪಾತ ವೀಕ್ಷಿಸಲು ತೆರಳುವ ಮುಖ್ಯ ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದರಿಂದಾಗಿ 3 ತಿಂಗಳ ಕಾಲ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ನಿಬರ್ಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

  • ಜೋಗ್ ಫಾಲ್ಸ್ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಬೇಕು: ಬಿ.ವೈ ರಾಘವೇಂದ್ರ

    ಜೋಗ್ ಫಾಲ್ಸ್ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಬೇಕು: ಬಿ.ವೈ ರಾಘವೇಂದ್ರ

    ಶಿವಮೊಗ್ಗ: ಜಿಲ್ಲೆಯ (Shivamogga) ಜೋಗ ಜಲಪಾತ (Jog Falls) ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ತಾಣ ಆಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಪ್ರಕೃತಿ ಕೊಟ್ಟ ಪ್ರವಾಸೋದ್ಯಮ ಸ್ಥಳ ಜೋಗ ಜಲಪಾತ. ಇಲ್ಲಿ ಪ್ರವಾಸಿಗರಿಗಾಗಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

    ಅಭಿವೃದ್ದಿ ಬಗ್ಗೆ ಅನೇಕ ಸರ್ಕಾರಗಳು ಭಾಷಣ ಮಾಡಿಕೊಂಡು ಬರುತ್ತಿವೆ. ಜೋಗ ಅಭಿವೃದ್ದಿಗೆ ಯಡಿಯೂರಪ್ಪ ಸಾಕಷ್ಟು ಅನುದಾನ ಕೊಟ್ಟು, ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಹೋಟೆಲ್ ನಿರ್ಮಾಣ ಮಾಡಲು ಅನುಮತಿ ಸಿಕ್ಕಿದೆ. ಹೊರಗಡೆಯಿಂದ ಬರುವ ಪ್ರವಾಸಿಗರಿಗೆ ಹೋಟೆಲ್ ಅವಶ್ಯಕತೆ ಇತ್ತು. ಆದಷ್ಟು ಬೇಗ ಕಾಮಗಾರಿ ಮುಗಿಯಬೇಕು. ಶಿವಮೊಗ್ಗ ಸಮಗ್ರ ಪ್ರವಾಸಿ ತಾಣವಾಗಬೇಕು ಎಂದಿದ್ದಾರೆ.

    ಪ್ರವಾಸಿಗರು ಬಂದಾಗ ಎಲ್ಲಾ ರೀತಿಯ ಸೌಲಭ್ಯಗಳು ಇಲ್ಲಿ ಸಿಗಬೇಕು. ನೋವಿನ ಸಂಗತಿ ಎಂದರೆ ಪ್ರವಾಸೋದ್ಯಮ ಇಲಾಖೆ ಸಕ್ರೆಬೈಲು ಅಭಿವೃದ್ಧಿಯ 60 ಕೋಟಿ ರೂ. ಹಣ ವಾಪಸ್ ಪಡೆದಿದೆ. ಜೋಗದ ಅಭಿವೃದ್ದಿಗೆ 180 ಕೋಟಿ ರೂ. ಹಣ ಹಿಂದಿನ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೇವಲ 80 ಕೋಟಿ ರೂ. ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. 100 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಅಲ್ಲಮಪ್ರಭು ಜನ್ಮಸ್ಥಳ, ಚಂದ್ರಗುತ್ತಿ ಅಭಿವೃದ್ಧಿ ಹಣ ಹಿಂಪಡೆದಿದ್ದಾರೆ. ಪ್ರವಾಸೋದ್ಯಮ ಸಚಿವರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

    ಕಳಸವಳ್ಳಿ – ಸಿಗಂದೂರು ಸೇತುವೆ ಆಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ನಷ್ಟ ಆಗಬಹುದು ಆದರೆ ಮುಂದೆ ಲಾಭ ಬರುತ್ತದೆ. ವಿಮಾನ ನಿಲ್ದಾಣದಿಂದ ಹೆಚ್ಚಿನ ವಿಮಾನ ಹಾರಾಟ ಮಾಡುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ 2-3 ವರ್ಷದಲ್ಲೇ ಸರ್ಕಾರಕ್ಕೆ ಹಣ ವಾಪಸ್ ಬರಲಿದೆ ಎಂದಿದ್ದಾರೆ.

  • ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ

    ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ

    ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ. ಜೋಗ ಜಲಪಾತಕ್ಕೆ (Jog Falls) ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು (Black Leopard)  ಹಸುವನ್ನು ಬೇಟೆಯಾಡಿದೆ.

    ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್‌, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ

    ಕರಿಚಿರತೆ ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ

  • ಜೋಗ ವೀಕ್ಷಿಸಲು 2 ಗಂಟೆ ಸಮಯ ನಿಗದಿ –  ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರು ಆಕ್ರೋಶ

    ಜೋಗ ವೀಕ್ಷಿಸಲು 2 ಗಂಟೆ ಸಮಯ ನಿಗದಿ – ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರು ಆಕ್ರೋಶ

    ಶಿವಮೊಗ್ಗ: ಜೋಗ ಜಲಪಾತ (Jog Falls) ನೋಡಲು ಬರುವ ಪ್ರವಾಸಿಗರಿಗೆ ಜೋಗ ನಿರ್ವಹಣಾ ಪ್ರಾಧಿಕಾರ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಪ್ರವಾಸಿಗರು (Tourists) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೋಗ ಜಲಪಾತದಲ್ಲಿ ಅಭಿವೃದ್ದಿ ಕಾರ್ಯ ಪೂರ್ಣಗೊಳಿಸುವ ಮೊದಲೇ ಶುಲ್ಕ ಹೆಚ್ಚಿಸಿ, ಜೋಗ ನಿರ್ವಹಣಾ ಪ್ರಾಧಿಕಾರವು ಪ್ರವಾಸಿಗರಿಂದ ಹಣ ವಸೂಲಿಗೆ ಇಳಿದಿದೆ. ಹಾಗೆಯೇ ಜೋಗದ ಸೌಂದರ್ಯ ನೋಡಲು 2 ಗಂಟೆಯ ಅವಧಿ ನಿಗದಿ ಮಾಡಿದೆ. ಇದರಿಂದಾಗಿ 2 ಗಂಟೆಯೊಳಗೆ ಜೋಗದ ಪರಿಸರ ನೋಡಲು ಸಾಧ್ಯವೇ? ಎಂದು ನಿರ್ವಹಣಾ ಪ್ರಾಧಿಕಾರದ ನಡೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ಬಸ್‌ಗೆ 150 ರೂ. ಇದ್ದ ಶುಲ್ಕ 200 ರೂ., ಕಾರಿಗೆ 50 ರೂ. ಇದ್ದ ಶುಲ್ಕ 80 ರೂ. ಮತ್ತು ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ.ಗೆ ಏರಿಕೆ ಮಾಡಲಾಗಿದೆ.

    ಪ್ರಕೃತಿದತ್ತವಾಗಿರುವ ಜಲಪಾತ ವೀಕ್ಷಣೆಗೆ ಶುಲ್ಕ ದುಬಾರಿ ಮಾಡಲಾಗುತ್ತಿದೆ ಏಕೆ? ಪ್ರವಾಸಿಗರಿಂದ ಈ ರೀತಿ ಸುಲಿಗೆ ಏಕೆ? ಜಲಪಾತ ಪೂರ್ಣ ಅಭಿವೃದ್ಧಿಗೊಳಿಸದೇ ಶುಲ್ಕ ಹೆಚ್ಚಳ ಬೇಡ ಎಂದು ಸ್ಥಳಿಯರಿಂದಲೇ ಜೋಗ ನಿರ್ವಾಹಣಾ ಪ್ರಾಧಿಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

     

  • ಮೇ 10ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

    ಮೇ 10ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

    ಶಿವಮೊಗ್ಗ: ಮೇ 10ರಂದು ವಿಧಾನಸಭಾ ಚುನಾವಣೆ (Election) ನಡೆಯುವ ಹಿನ್ನೆಲೆ ಜೋಗ ಜಲಪಾತ (Jog Falls) ವೀಕ್ಷಣೆಗೆ ನಿರ್ಬಂಧವನ್ನು ಹೇರಲಾಗಿದೆ.

    ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತ ವಿಶ್ವ ವಿಖ್ಯಾತವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಸರ್ಕಾರಿ ರಜೆ ನೀಡಲಾಗಿದೆ. ರಜಾ ದಿನವಾದ್ದರಿಂದ ಮತದಾನ (Voting) ಮಾಡದೇ ಜನರು ಪ್ರವಾಸಕ್ಕೆ ಹೊರಡುತ್ತಾರೆ ಎಂಬ ಕಾರಣಕ್ಕಾಗಿ ಜೋಗ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಜಲಪಾತ ವೀಕ್ಷಣೆ ನಿರ್ಬಂಧದ ಕುರಿತು ಜಲಪಾತದ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಫ್ಲೆಕ್ಸ್‌ವೊಂದನ್ನು ಹಾಕಿದೆ. ಈ ಮೂಲಕ ಮತದಾನಕ್ಕೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

  • ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

    ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

    ಶಿವಮೊಗ್ಗ: ಬಿರುಬೇಸಿಗೆಯಲ್ಲೂ ಮಳೆಗಾಲದಂತೆ ಧುಮ್ಮಿಕ್ಕಿ ಹರಿಯುತ್ತಿರುವ ಶರಾವತಿ ಜಲಧಾರೆಯನ್ನು ಕಂಡು ಪ್ರವಾಸಿಗರು ಇದೀಗ ಫುಲ್ ಶಾಕ್ ಆಗಿದ್ದಾರೆ.

    ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಆಶ್ಚರ್ಯವಾದರೂ ಇದು ಸತ್ಯ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರುಬೇಸಿಗೆಯಲ್ಲೂ ಕಾಣಸಿಗುತ್ತಿದೆ.

    ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದ್ದು, ಸುಮಾರು 900 ಅಡಿ ಎತ್ತರದಿಂದ ಈ ಜಲಪಾತದ ಕಣಿವೆಗಳಲ್ಲಿ ಹಾಲ್ನೊರೆಯಂತೆ ಶರಾವತಿ ಭೋರ್ಗರೆಯುತ್ತಾಳೆ. ಕೇವಲ ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಕಣ್ಮನ ಸೆಳೆಯುವ ಜೋಗ ಜಲಪಾತದಲ್ಲಿ ಇದೀಗ ಬೇಸಿಗೆ ಸಮಯದಲ್ಲೂ ನಯನ ಮನೋಹರವಾಗಿ ಜಲಧಾರೆ ಧುಮ್ಮಿಕ್ಕಿ ಹರಿಯತ್ತಿದೆ.

    ಈ ಸುಂದರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಸ್ಥಳೀಯರು ಸೇರಿದಂತೆ, ರಾಜ್ಯ, ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತಿದ್ದಾರೆ. ಕಡಿದಾದ ಬಂಡೆ ಕಣಿವೆಗಳ ಮೂಲಕ ಶರಾವತಿ ಹರಿಯುವುದನ್ನ ನೋಡುವುದೇ ಒಂದು ಸೊಬಗು. ಅದರಲ್ಲೂ ನಿಸರ್ಗಕ್ಕೆ ಅತ್ಯಂತ ಆಪ್ತ ಸ್ಥಳವಾಗಿರುವ ಜೋಗದಲ್ಲಿ, ಇದೀಗ ಬಿರು ಬಿಸಿಲ ಝಳದ ನಡುವೆ ರಾಜ, ರಾಣಿ, ರೋರರ್, ರಾಕೆಟ್ ಕಣಿವೆಗಳಲ್ಲಿ ಜಲಧಾರೆ ಹರಿಯುತ್ತಿದ್ದು, ಎಲ್ಲರೂ ಆಶ್ಚರ್ಯಗೊಳ್ಳುವಂತಾಗಿದೆ. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ

    ಇಲ್ಲಿನ ಮಹಾತ್ಮ ಗಾಂಧಿ ಪವರ್ ಸ್ಟೇಷನ್ ಗೆ ನೀರು ಹರಿಸುವ ಚೈನಾ ಗೇಟ್ ನಲ್ಲಿ ಸಾಕಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಈ ನೀರು ನೇರವಾಗಿ ನದಿ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ. ಪವರ್ ಚಾನಲ್‍ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಅದು ಕೂಡ ಜಲಪಾತಕ್ಕೆ ನೀರು ಹರಿಯಲು ಕಾರಣವಾಗಿದ್ದು ಇದರಿಂದ ಜಲಪಾತದಲ್ಲಿ ನಿರಂತರವಾಗಿ ಜಲಧಾರೆ ಸೃಷ್ಟಿಯಾಗಲು ಕಾರಣವಾಗಿದೆ.

    ಹಾಲ್ನೊರೆಯಂತೆ ಉಕ್ಕಿ ಹರಿಯುವ ನೀರು ನೋಡುವುದೇ ಒಂದು ದೃಶ್ಯ ಕಾವ್ಯ. ಅದರಲ್ಲೂ ಬಿರು ಬೇಸಿಗೆಯಲ್ಲಿ ಕೂಡ ಅಚಾನಕ್ಕಾಗಿ ಹರಿದು ಬಂದ ನೀರು ಜಲಪಾತದ ವರ್ಣನೆಗೆ ಪದಗಳೇ ಸಾಲದು. ಅಚಾನಕ್ಕಾಗಿ ಜೋಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಸ್ಥಳಿಯರು ಇದೀಗ ಮನಮೋಹಕ ದೃಶ್ಯವನ್ನು ಕಂಡು ಸಂಭ್ರಮಿಸುವಂತಾಗಿದೆ.

  • ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ

    ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ

    ಶಿವಮೊಗ್ಗ: ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಚನ್ನಗಿರಿಯ ಶಾಬಾಜ್ (23) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ರಿಹಾನ್ (14), ತಬಸ್ಸುಮ್ (23), ಶಿಫಾ (27), ಖಮರುನ್ನಿಸಾ (45), ಜಬ್ರುನ್ (55), ಮಹಮ್ಮದ್ ಉಸ್ಮಾನ್ (25) ಎಂಬುವರಿಗೆ ಗಂಭೀರ ಗಾಯಗಳಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಜೋಗ ಜಲಪಾತ ವೀಕ್ಷಿಸಿ ವಾಪಸ್  ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 10 ಜನ ಸಜೀವ ದಹನ

    ಗಾಯಾಳುಗಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಮುಸ್ಲಿಮ್‌ ಪ್ರಾರ್ಥನೆ – ಆವರಣಕ್ಕೆ ಗಂಗಾಜಲ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]

  • ಜೋಗ ಜಲಪಾತ ಮುಂಗಾರಿನ ವಿಸ್ಮಯ – ಬೀಸುವ ಗಾಳಿಗೆ ಮೇಲಕ್ಕೆ ಹಾರುತ್ತಿದೆ ಶರಾವತಿ!

    ಜೋಗ ಜಲಪಾತ ಮುಂಗಾರಿನ ವಿಸ್ಮಯ – ಬೀಸುವ ಗಾಳಿಗೆ ಮೇಲಕ್ಕೆ ಹಾರುತ್ತಿದೆ ಶರಾವತಿ!

    ಶಿವಮೊಗ್ಗ: ವಿಶೇಷವಾಗಿ ಪ್ರವಾಸಿಗರ ಕಣ್ಮನ ಸೆಳೆಯುವ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಮತ್ತೊಂದು ಕೌತುಕ ಸೃಷ್ಟಿಯಾಗಿದೆ.

    ಜಲಪಾತದಲ್ಲಿ ಮೇಲಿನಿಂದ ಕೆಳಗೆ ಬೀಳುತ್ತಿದ್ದ ನೀರು, ಗಾಳಿಯ ರಭಸಕ್ಕೆ ಮತ್ತೆ ಮೇಲಕ್ಕೆ ವಾಪಸ್ಸಾಗುತ್ತಿರುವಂತೆ ಭಾಸವಾಗುತ್ತಿದೆ. ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 400 ಕೇಸ್ – ಸಕ್ರಿಯ ಪ್ರಕರಣಗಳ ಸಂಖ್ಯೆ 3,545ಕ್ಕೆ ಏರಿಕೆ

    ಈ ಹಿಂದೆ ಜೋಗ ಜಲಪಾತದಲ್ಲಿ ಕೇವಲ ರಾಜ ಜಲಪಾತದ ನೀರು ಈ ರೀತಿ ಮೇಲಕ್ಕೆ ಹೋಗುತ್ತಿತ್ತು. ಆದರೆ ಈ ಬಾರಿ ರಾಜ, ರಾಣಿ, ರೋರರ್, ರಾಕೆಟ್ ಜಲಪಾತದ ನೀರು ಗಾಳಿಯ ರಭಸಕ್ಕೆ ಮೇಲಕ್ಕೆ ಚಿಮ್ಮುತ್ತಿದೆ. ಈ ದೃಶ್ಯ ನೆರೆದಿದ್ದ ಪ್ರವಾಸಿಗರಿಗೆ ಆಶ್ಚರ್ಯ ಚಕಿತರಾಗುವಂತೆ ಮಾಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ