Tag: ಜೋಗ್ ಫಾಲ್ಸ್

  • ಮೈದುಂಬಿ, ಬೋರ್ಗರೆಯುತ್ತಿದೆ ವಿಶ್ವವಿಖ್ಯಾತ ಜೋಗ್ ಫಾಲ್ಸ್: ವಿಡಿಯೋ ನೋಡಿ

    ಮೈದುಂಬಿ, ಬೋರ್ಗರೆಯುತ್ತಿದೆ ವಿಶ್ವವಿಖ್ಯಾತ ಜೋಗ್ ಫಾಲ್ಸ್: ವಿಡಿಯೋ ನೋಡಿ

    ಶಿವಮೊಗ್ಗ: ಮಲೆನಾಡು ಕ್ರಮೇಣ ಮಳೆನಾಡಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಮಲೆನಾಡಿನ ನದಿಗಳು ಮೈದುಂಬಿಕೊಂಡಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಸಹ ತುಂಬಿ ಹರಿಯುತ್ತಿದೆ.

    ದಟ್ಟ ಮೋಡ, ಮಂಜಿನ ನಡುವೆ ಬಿಸಿಲು ಬಿದ್ದು, ಕಂಡು ಕಾಣದಂತೆ ಮರೆಯಾಗುವ ಜಲಪಾತ ನೋಡುಗರ ಕಣ್ಣಿಗೆ ಹಬ್ಬವಾಗಿದೆ. ರಾಜಾ, ರೋರರ್, ರಾಕೆಟ್, ರಾಣಿ ಧುಮ್ಮಿಕ್ಕುತ್ತಿದ್ದು ಜೋಗದ ಗುಂಡಿ ನೋಡಲು ಎರಡೂ ಕಣ್ಣು ಸಾಲದಂತಾಗಿದೆ.

    ಮುಂಭಾಗದಿಂದ ಸಹಜ ಸುಂದರವಾಗಿ ಕಾಣುವ ಜಲಪಾತ ಅತ್ತ ಮದ್ರಾಸ್ ಐಬಿ ಕಡೆಯಿಂದ ರುದ್ರ ರಮಣೀಯವಾಗಿ ಕಾಣುತ್ತಿದೆ. ಜಲಪಾತದ ನೆತ್ತಿಯಲ್ಲಿ ನಿಂತು ನೋಡುವುದು ರೋಮಾಂಚನಕಾರಿ ಆಗಿ ಕಾಣುತ್ತದೆ.

    ಶರಾವತಿ ನದಿ ಜಲಾನಯನ ಪ್ರದೇಶಗಳಾದ ಹೊಸನಗರ, ಸಾಗರ ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಆಗುತ್ತಿರುವುದು ಜಲಪಾತ ಕಳೆಕಟ್ಟಲು ಕಾರಣವಾಗಿದೆ.

  • ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಶಿವಮೊಗ್ಗ: ಜೋಗ್ ಫಾಲ್ಸ್ ನಲ್ಲಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮಂಗಳವಾರದಂದು ನಾಪತ್ತೆಯಾಗಿದ್ದು, ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದರು.

    ಸೆಲ್ಫೀ ವಿಡಿಯೋದಲ್ಲಿ ಜ್ಯೋತಿರಾಜ್, ನಾನು ಜೀವಂತವಾಗಿ ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಸಹಾಯ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಹೋಗುತ್ತಿದ್ದೇನೆ. ನನಗೆ ಇಡೀ ಕರ್ನಾಟಕದ ಜನತೆಯ ಆಶೀರ್ವಾದ ಬೇಕು ಎಂದು ಹೇಳಿಕೊಂಡಿದ್ದರು.

    ಜ್ಯೋತಿರಾಜ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನೂ ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

    https://www.youtube.com/watch?v=0SlM6UAsVqg

    https://www.youtube.com/watch?v=4nriJLe3cYg