ಸ್ಯಾಂಡಲ್‌ವುಡ್ ನಟ ದರ್ಶನ್ ನಟನೆಯ ‘ಕರಿಯಾ’ (Kariya) ಸಿನಿಮಾ ಇಂದು (ಆ.30) ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇನ್ನೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ದರ್ಶನ್ ಅಭಿಮಾನಿಗಳು (Fans) ಪುಂಡಾಟಿಕೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ಪ್ರೀತಿ ಅಂದರೆ ಕಮಿಟ್‌ಮೆಂಟ್: ಲೈಫ್ ಪಾರ್ಟ್ನರ್ ಬಗ್ಗೆ ರಂಜನಿ ರಾಘವನ್ ಓಪನ್ ಟಾಕ್
ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಪುಂಡಾಟಿಕೆ ಮಾಡುತ್ತಿದ್ದ ಅಭಿಮಾನಿಗಳಿಗೆ ಪೊಲೀಸರು ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಧ್ಯಮಗಳ ವಿರುದ್ಧ ಘೋಷಣೆ ಕೂಗುತ್ತಿದ್ದವರಿಗೆ ನಿಮ್ಮಂತಹ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು ಎಂದು ಪೊಲೀಸರು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಅಂದಹಾಗೆ, 2003ರಲ್ಲಿ ‘ಕರಿಯಾ’ ಸಿನಿಮಾ ರಿಲೀಸ್ ಆಗಿತ್ತು. ಇದನ್ನೂ ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ದರ್ಶನ್ ನಟನೆ ಮತ್ತು ಕಥೆ ಎರಡು ಜನರ ಮನಗೆದ್ದಿತ್ತು.
ನಿರ್ದೇಶಕ ಜೋಗಿ ಪ್ರೇಮ್ (Jogi Prem) ಕುರಿತಾಗಿ ಮತ್ತೊಂದು ಹೊಸ ಸುದ್ದಿ ಬಂದಿದೆ. ಸದ್ಯ ಪ್ರೇಮ್ ಕೆಡಿ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಸಲ್ಮಾನ್ ಖಾನ್ (Salman Khan) ಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕನ್ನಡದ ಮತ್ತೋರ್ವ ನಿರ್ದೇಶಕ ಬಾಲಿವುಡ್ (Bollywood) ಬಾಗಿಲು ತಟ್ಟಿದಂತಾಗುತ್ತದೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಲ್ಮಾನ್ ಖಾನ್ ಅವರಿಗಾಗಿ ಸುದೀಪ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿತ್ತು. ಕಥೆಯನ್ನು ಸಲ್ಮಾನ್ ಖಾನ್ ಗೆ ಒಪ್ಪಿಸಿರುವ ಕುರಿತು ಕಿಚ್ಚ ಈ ಹಿಂದೆಯೇ ಹೇಳಿಕೊಂಡಿದ್ದರು. ಆದರೆ, ಸುದೀಪ್ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ಹೋದರು. ಹಾಗಾಗಿ ಸದ್ಯಕ್ಕೆ ಸಲ್ಮಾನ್ ಜೊತೆಗಿನ ಸಿನಿಮಾ ಅನುಮಾನ ಎನ್ನಲಾಗುತ್ತಿದೆ.
ಕಿಚ್ಚ ಸುದೀಪ್ ಅವರಿಗೆ ಸಿಕ್ಕಿದ್ದ ಅವಕಾಶವೇ ಪ್ರೇಮ್ ಅವರಿಗೆ ವರ್ಗಾವಣೆ ಆಗಿದ್ಯಾ? ಗೊತ್ತಿಲ್ಲ. ಆದರೆ, ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಚಿತ್ರವನ್ನು ಸಜೀಸ್ ನಡಿಯಾಲ್ ಅನ್ನುವವರು ನಿರ್ಮಾಣ ಮಾಡಲಿದ್ದಾರಂತೆ. ಇದಿಷ್ಟು ವಿಷಯಗಳು ಗಾಂಧಿನಗರದಲ್ಲಿ ಭಾರೀ ಗಿರಿಕಿ ಹೊಡೆಯುತ್ತಿವೆ.
ಕೆಡಿ ಸಿನಿಮಾದ ನಂತರ ಇದೇ ಪ್ರೇಮ್ ಅವರು ದರ್ಶನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕೆ.ವಿಎನ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವುದೂ ಸುದ್ದಿ ಆಗಿತ್ತು. ಮೊದಲು ದರ್ಶನ್ ಅವರ ಸಿನಿಮಾವಾಗುತ್ತಾ? ಅಥವಾ ಸಲ್ಮಾನ್ ಚಿತ್ರಕ್ಕೆ ಪ್ರೇಮ್ ಕೈ ಹಾಕ್ತಾರಾ ಕಾದು ನೋಡಬೇಕು.
ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ (Jogi Prem) ಕಾಂಬಿನೇಷನ್ ಕೇಡಿ (KD) ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಕೇಡಿ 2 ಸಿನಿಮಾದ ಕೆಲಸದಲ್ಲಿ ನಿರ್ದೇಶಕ ಪ್ರೇಮ್ ಬ್ಯುಸಿಯಾಗಿದ್ದಾರಂತೆ. ಕೇಡಿ 2 ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಹಲವು ಕೆಲಸಗಳನ್ನು ಪ್ರೇಮ್ ಮಾಡುತ್ತಿದ್ದಾರಂತೆ.
ಈ ನಡುವೆ ಧ್ರುವ ಸರ್ಜಾ ಅವರ ಮತ್ತೊಂದು ಚಿತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ದಿನದಂದು ಕೆಡಿ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಮಾರ್ಟಿನ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಮಾರ್ಟಿನ್ ಗಿಂತ ಮುಂಚೆ ಕೆಡಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಡಿ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಮಾರ್ಟಿನ್ ಕೆಲಸದ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ನಟಿಸಲಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ.
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸಿದ್ದಾರೆ.
ದರ್ಶನ್ (Darshan) ನಟನೆಯ ಕಾಟೇರ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಡಿಸೆಂಬರ್ 29ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ದರ್ಶನ್ ಕುರಿತಾದ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದು ಸುಳ್ಳೋ ನಿಜವೋ ಗೊತ್ತಿಲ್ಲ. ಆದರೆ, ನಾನಾ ಕಾರಣಗಳಿಂದಾಗಿ ಸುದ್ದಿಗೆ ಮಹತ್ವ ನೀಡಲಾಗುತ್ತಿದೆ.
ಕಾಟೇರ ಸಿನಿಮಾ ರಿಲೀಸ್ ನಂತರ ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಇನ್ನೂ ಆ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿಲ್ಲ. ಆದರೂ, ಮತ್ತೊಂದು ಸಿನಿಮಾದ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ದರ್ಶನ್ ಸಿನಿಮಾವೊಂದನ್ನು ಮಾಡಲಿದ್ದು, ಆ ಸಿನಿಮಾದಲ್ಲಿ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ (Chiranjeevi) ಪಾತ್ರ ಮಾಡಲಿದ್ದಾರಂತೆ.
ಜೋಗಿ ಪ್ರೇಮ್ ಸಿನಿಮಾ ಮಾಡುತ್ತಾರೆ ಎಂದಾಗ ಸುದ್ದಿಗೇನೂ ಬರವಿರುವುದಿಲ್ಲ. ಹೆಸರಾಂತ ನಟರ ಹೆಸರುಗಳು ಕೇಳಿ ಬರುವುದು ಸಹಜ. ಆ ನಟರು ಬರುತ್ತಾರೋ ಇಲ್ಲವೋ ಬೇರೆ ಮಾತು, ಒಂದಷ್ಟು ಸುದ್ದಿಯಂತೂ ಆಗುತ್ತದೆ. ಇದು ಹಾಗೇನಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಯಾಕೆಂದರೆ, ಈ ಸಿನಿಮಾದಲ್ಲಿ ಚಿರಂಜೀವಿ ಅವರು ಅತಿಥಿ ಪಾತ್ರ ಮಾಡಲಿದ್ದಾರಂತೆ.
ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ನ ಸಿನಿಮಾ ಬರುತ್ತಾ ಎನ್ನುವ ಪ್ರಶ್ನೆಯನ್ನೂ ಹಲವರು ಕೇಳುವವರು ಇದ್ದಾರೆ. ಇದಕ್ಕೆಲ್ಲ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ. ಅಲ್ಲಿವರೆಗೂ ಬಂದಿರೋ ಸುದ್ದಿಯನ್ನು ಎಂಜಾಯ್ ಮಾಡುತ್ತಿದ್ದಾರೆ ದರ್ಶನ್ ಫ್ಯಾನ್ಸ್.
ಕರುನಾಡ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ (Birthday) ಸಂದರ್ಭದಲ್ಲಿ ಎರಡು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ (KD) ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಆ ಸಿನಿಮಾದ ಪೋಸ್ಟರ್ (Poster) ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ ದ ಜಡ್ಜ್ ಮೆಂಟ್ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದು ಆ ಸಿನಿಮಾ ಟೀಮ್ ಕೂಡ ಪೋಸ್ಟರ್ ರಿಲೀಸ್ ಮಾಡಿದೆ.
ಕೆಲ ತಿಂಗಳ ಹಿಂದೆಯಷ್ಟೇ ರವಿಚಂದ್ರನ್ ಅವರ ಫಸ್ಟ್ ಲುಕ್ ಅನ್ನು ಕೆಡಿ ಟೀಮ್ ರಿಲೀಸ್ ಮಾಡಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ
ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ `ಕೆಡಿ’ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಕೆಡಿ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ. ಸಂಜಯ್ ದತ್ ಅವರ ಶೂಟಿಂಗ್ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆ ನಂತರ ಚಿತ್ರೀಕರಣ ಸ್ವಲ್ಪ ದಿನದ ಮಟ್ಟಿಗೆ ನಿಲ್ಲಿಸಲಾಗಿತ್ತು. ಪ್ರೇಮ್ ಮತ್ತೆ ಈ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’ ಸಿನಿಮಾದ ನಾಯಕಿ ಯಾರು ಎನ್ನುವುದನ್ನು ಏಪ್ರಿಲ್ 28ಕ್ಕೆ ಘೋಷಿಸುವುದಾಗಿ ನಿರ್ದೇಶಕ ಪ್ರೇಮ್ ತಿಳಿಸಿದ್ದರು. ಸರಿಯಾದ ಸಮಯಕ್ಕೆ ತಮ್ಮ ಚಿತ್ರದ ನಾಯಕಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ಪ್ರೇಮ್. ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರೇಮ್ (Jogi Prem) ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ (KD) ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇದೆ. ದಿನದಿಂದ ದಿನಕ್ಕೆ ಚಿತ್ರತಂಡದ ತಾರಾಗಣ ಹಿರಿದಾಗುತ್ತಲೇ ಇದೆ. ಹೀಗಿರುವಾಗ ಧ್ರುವ ಸರ್ಜಾಗೆ (Dhruva Sarja) ನಾಯಕಿಯಾಗಿ ಯಾರು ಸಾಥ್ ಕೊಡುತ್ತಾರೆ ಎಂಬುದನ್ನ ರಿವೀಲ್ ಮಾಡುವುದಕ್ಕೆ ಕೌಂಟ್‌ಡೌನ್ ಶುರುವಾಗಿತ್ತು. ಇದೀಗ ಮಚ್‌ಲಕ್ಷ್ಮೀಯನ್ನು ಅವರು ಪರಿಚಯಿಸಿದ್ದಾರೆ.
ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್ ಡೇಟ್
KDಗೆ ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ. ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ ‘KD’ ಚಿತ್ರಕ್ಕೂ ಆಕೆನೇ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ (KD) ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇದೆ. ದಿನದಿಂದ ದಿನಕ್ಕೆ ಚಿತ್ರತಂಡದ ತಾರಾಗಣ ಹಿರಿದಾಗುತ್ತಲೇ ಇದೆ. ಹೀಗಿರುವಾಗ ಧ್ರುವ ಸರ್ಜಾಗೆ (Dhruva Sarja) ನಾಯಕಿಯಾಗಿ ಯಾರು ಸಾಥ್ ಕೊಡುತ್ತಾರೆ ಎಂಬುದನ್ನ ರಿವೀಲ್ ಮಾಡುವುದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ನಾಯಕಿ ಮಚ್ಚ್‌ಲಕ್ಷ್ಮಿ ಪರಿಚಯಿಸೋದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.
ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ. ‘ಕೆಡಿ’ ನಾಯಕಿ ಮಚ್ಚ್‌ಲಕ್ಷ್ಮಿ ಬಗ್ಗೆ ಅನೌನ್ಸ್ ಮಾಡ್ತಿವಿ ಎನ್ನುತ್ತಿದ್ದಂತೆ ಯಾರಿರಬಹುದು ಎಂಬ ಗುಸು ಗುಸು ಈಗಾಗಲೇ ಶುರುವಾಗಿದೆ.
KDಗೆ ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ. ಏ.28ಕ್ಕೆ ಶುಕ್ರವಾರ 10:05ಕ್ಕೆ ಫಸ್ಟ್ ಲುಕ್ ಸಮೇತ ಮಚ್ಚ್‌ಲಕ್ಷ್ಮಿ ದರ್ಶನ ಮಾಡಿಸಲಿದೆಯಂತೆ ಚಿತ್ರತಂಡ. ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ ‘KD’ ಚಿತ್ರಕ್ಕೂ ಆಕೆನೇ ನಾಯಕಿ ಎನ್ನಲಾಗ್ತಿದೆ. ಎಲ್ಲದಕ್ಕೂ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ KD ಸಿನಿಮಾದ ಕರಾಮತ್ತು ಶುರುವಾಗಲಿದೆ.
ಪ್ರಚಾರದ ವಿಷಯದಲ್ಲಿ ಜೋಗಿ ಪ್ರೇಮ್ (Jogi Prem) ಯಾವತ್ತಿಗೂ ಮುಂದು. ಸಣ್ಣ ಸಣ್ಣ ಸಂಗತಿಗಳನ್ನೂ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಆದರೆ, ಶೂಟಿಂಗ್ ಸ್ಥಳದಲ್ಲಿ ನಡೆದ ಅವಘಡವನ್ನು ಮುಚ್ಚಿಟ್ಟರಾ ಅನ್ನುವ ಅನುಮಾನ ಮೂಡಿದೆ. ಸಾಹಸ ಸನ್ನಿವೇಶವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಸಂಜಯ್ ದತ್ (Sanjay Dutt) ಗೆ ಆದ ಗಾಯದ ಬಗ್ಗೆ ಎಲ್ಲಿಯೂ ಸುದ್ದಿ ಆಗದಂತೆ ನೋಡಿಕೊಳ್ಳಲಾಗಿದೆ ಎನ್ನುವ ಮಾತು ಹರಿದಾಡುತ್ತಿದೆ. ಶುಕ್ರವಾರ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬಾಲಿವುಡ್ ನಟ ಸಂಜಯ್ ದತ್ ಸದ್ಯ ಕನ್ನಡದ ಕೆಡಿ (KD) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ (Bomb Blasting) ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ. ಈ ಸನ್ನಿವೇಶವನ್ನು ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ್ದರು.
ಧ್ರುವ ಸರ್ಜಾ (Dhruva Sarja) ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ಈ ಅವಘಡ ನಡೆದಿದೆ. ಇದನ್ನೂ ಓದಿ:ನಟಿ ಶ್ರುತಿ ವಿರುದ್ಧ ಹಿರೆಕೇರೂರಿನಲ್ಲಿ ದೂರು ದಾಖಲು
ಒಂದು ಕಡೆ ಸಂಜಯ್ ದತ್ ಅವರಿಗೆ ಗಾಯವಾಗಿದೆ ಎನ್ನುವ ಸುದ್ದಿ ಇದ್ದರೂ, ಮತ್ತೊಂದು ಕಡೆ ತಮಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಸಂಜಯ್ ಅವರು ಗೆಳೆಯನ ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಇತ್ತ ರವಿವರ್ಮಾ ಅವರು ಪ್ರೇಮ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಹಾಗಾದರೆ, ನಿಜವಾಗಿ ಅಲ್ಲಿ ಆಗಿದ್ದು ಏನು ಎನ್ನುವುದನ್ನು ಚಿತ್ರತಂಡವೇ ಸ್ಪಷ್ಟ ಪಡಿಸಬೇಕಿದೆ.
ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಸದ್ಯ ಕನ್ನಡದ ಕೆಡಿ (KD) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ಸನ್ನಿವೇಶ ಚಿತ್ರೀಕರಣವಾಗುತ್ತಿದ್ದು, ಈ ವೇಳೆ ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ (Bomb Blasting) ಮಾಡುವಾಗ ಸಂಜಯ್ ಗಾಯ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾ (Dhruva Sarja) ಮತ್ತು ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಫೈಟಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕೆಡಿ ಚಿತ್ರದ ಚಿತ್ರೀಕರಣವು ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ನಡೆಯುತ್ತಿತ್ತು. ಇದನ್ನೂ ಓದಿ:ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್
ಎಷ್ಟೇ ಮುತುವರ್ಜಿವಹಿಸಿದರೂ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಕೆಡಿ ಸಿನಿಮಾ ಕೂಡ ಅದಕ್ಕೆ ಹೊರತಾಗಲಿಲ್ಲ. ಸಂಜಯ್ ದತ್ ಗಾಯಗೊಳ್ಳುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ಸಂಜಯ್ ಮತ್ತು ಧ್ರುವ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದರು ಎಂದು ಗೊತ್ತಾಗಿದೆ. ಈ ಘಟನೆ ಕಳೆದ ಶುಕ್ರವಾರದಂದು ನಡೆದದ್ದು, ಸಂಜಯ್ ದತ್ ಘಟನೆಯ ನಂತರ ಮುಂಬೈಗೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.
ಸಂಜಯ್ ದತ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಮೊದಲನೇ ಸಿನಿಮಾ ಇದಾಗಿದ್ದು, ಸಂಜಯ್ ಅವರ ಕನ್ನಡದ ಎರಡನೇ ಚಿತ್ರ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಬಾಲಿವುಡ್ ಇನ್ನೋರ್ವ ಕಲಾವಿದರು ನಟಿಸುತ್ತಿದ್ದು, ಈ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.