Tag: ಜೋಕ್

  • ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ಕೊರೊನಾದಿಂದ ಬಿಗ್‍ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ವಾರದ ಕೊನೆಯ ದಿನ ಮನೆಮಂದಿಗೆ ಕಣ್ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಶಮಂತ್ ಹಾಗೂ ಅರವಿಂದ್ ವೈಷ್ಣವಿಯನ್ನು ಸಹಿಸಿಕೊಂಡು ಇದ್ದೀವಿ ಎಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ನಿಧಿ ಹಾಗೂ ಶುಭಾ ಇವರಿಬ್ಬರ ನಡುವೆ ಯಾರು, ಯಾರನ್ನು ಹೆಚ್ಚಾಗಿ ಸಹಿಸಿಕೊಳ್ಳುತ್ತಾರೆ ಎಂದು ಕಣ್ಮಣಿ ಪ್ರಶ್ನಿಸಿದೆ. ಆಗ ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬರುತ್ತಾರೆ. ಈ ವೇಳೆ ಶಮಂತ್ ಸರದಿ ಬಂದಾಗ, ನನಗೆ ಮೊನ್ನೆಯಿಂದ ವೈಷ್ಣವಿಯವರು ಬ್ರೂಸ್ಲಿ, ಬ್ರೂಸ್ಲಿ ಅಂತಾ ಒಂದು ಜೋಕ್ ಹೇಳುತ್ತಿದ್ದಾರೆ. ಅದನ್ನು ಕೇಳಿ ತಲೆಯನ್ನ ಹೋಗಿ ಗೋಡೆಗೆ ಗುದ್ದಿಕೊಳ್ಳೋಣ ಎನ್ನುವಷ್ಟು ತಲೆ ಕೆಟ್ಟು ಹೋಗಿದೆ. ಅದರಲ್ಲಿ ಉತ್ತರ ಯಾವುದೋ, ಪ್ರಶ್ನೆ ಯೂವುದೋ ಅಂತ ಗೊತ್ತೆ ಆಗುತ್ತಿರಲಿಲ್ಲ. ಆದರೆ ಸಖತ್ ಆಗಿ ಇತ್ತು. ಸ್ವಲ್ಪನಾದರೂ ತಲೆಗೆ ಕೆಲಸ ಕೊಟ್ಟರು. ಸೋ ವೈಷ್ಣವಿಯವರನ್ನು ಸಹಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ.

    ನಂತರ ಅರವಿಂದ್, ಸಹಿಸಿಕೊಳ್ಳುವುದೆಂದರೆ ಶಮಂತ್ ಹೇಳಿದಂತೆ ವೈಷ್ಣವಿ. ಯಾಕೆಂದರೆ ಕೆಲವೊಂದು ಬಾರಿ ಪಾಯಿಂಟ್ ಇಲ್ಲದಿರುವ ಜೋಕ್ ಹೇಳುತ್ತಿರುತ್ತಾರೆ. ಅದು ಡೈರೆಕ್ಷನ್‍ನಲ್ಲಿಯೂ ಇರುವುದಿಲ್ಲ. ಅದನ್ನು ಸ್ವಲ್ಪ ನುಂಗಿ, ನುಂಗಿ ಹೇಳುತ್ತಿರುತ್ತಾರೆ. ಅದಕ್ಕೆ ನಾನು ರೇಗಾಡಿಕೊಂಡು ಸಹಿಸಿಕೊಳ್ಳುತ್ತಿರುತ್ತೇನೆ. ಪಾಯಿಂಟ್ ಇಲ್ಲದೇ ಇರುವುದಕ್ಕೆ ರೇಗಾಡುತ್ತಿರುತ್ತೇವೆ ಹೊರತು ಜೋಕ್‍ಗೆ ರೇಗಾಡುವುದಿಲ್ಲ ಎನ್ನುತ್ತಾರೆ.

  • ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ಅರವಿಂದ್‍ಗೆ ಆನೆ, ಇರುವೆ ಜೋಕ್ ಹೇಳಿದ ವೈಷ್ಣವಿ!

    ದೊಡ್ಮನೆಯಲ್ಲಿರುವ ಪ್ರಾಪರ್ಟಿಗಳಿಗೆ ಹಾನಿಯಾದರೆ ಸ್ಪರ್ಧಿಗಳಿಗೆ ಶಿಕ್ಷೆಯಂತೂ ಖಂಡಿತ ಆಗೇ ಆಗುತ್ತದೆ. ಅದರಂತೆ ಪಾತ್ರೆ ತೊಳೆಯುವ ವೇಳೆ ಗ್ಲಾಸ್ ಹೊಡೆದು ಹಾಕಿದ್ದ ವೈಷ್ಣವಿಗೆ ಬಿಗ್‍ಬಾಸ್ ಚಿಕ್ಕ ಗ್ಲಾಸ್ ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಆ ಚಿಕ್ಕ ಗ್ಲಾಸ್‍ನಲ್ಲಿಯೇ ನೀರು ಕುಡಿಯಬೇಕು ಎಂದು ತಿಳಿಸಿದ್ದರು. ಟ್ವಿಸ್ಟ್ ಏನಪ್ಪಾ ಅಂದರೆ ವೈಷ್ಣವಿ ನೀರು ಕುಡಿಯುವ ಮುನ್ನ ಮನೆಯ ಸದಸ್ಯರಿಗೆ ಒಂದು ಜೋಕ್ ಹೇಳಿ, ಅವರನ್ನು ನಗಿಸಿದ ನಂತರ ನೀರು ಕುಡಿಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.

    ಅದರಂತೆ ನಿನ್ನೆಯಿಂದ ನೀರು ಕುಡಿಯಬೇಕೆಂದು ಅನಿಸಿದಾಗಲೆಲ್ಲ ವೈಷ್ಣವಿ ಮನೆಯ ಓರ್ವ ಸದಸ್ಯರಿಗೆ ಜೋಕ್ ಹೇಳಿ ನೀರು ಕುಡಿಯುತ್ತಿದ್ದಾರೆ. ಸದ್ಯ ನಿನ್ನೆ ಅರವಿಂದ್‍ಗೆ ವೈಷ್ಣವಿ ಆನೆ ಇರುವೆ ಜೋಕ್ ಹೇಳಿದ್ದಾರೆ.

    ಒಮ್ಮೆ ಆನೆ ಇರುವೆ ಹೋಗುತ್ತಿರುತ್ತದೆ. ಇರುವೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿರುತ್ತದೆ. ಆದರೆ ಆನೆ ಮರೆತು ಹೋಗಿ ನಾರ್ಮಲ್ ಬಟ್ಟೆ ಹಾಕಿಕೊಂಡು ಹಾಗೆಯೇ ಹೋಗಿರುತ್ತದೆ ಎಂದಾಗ, ಅರವಿಂದ್ ಎರಡು ಇರುವೆ ಒಂದು ಆನೆನಾ ಎಂದು ಕೇಳುತ್ತಾರೆ. ಇಲ್ಲ ಒಂದು ಇರುವೆ ಒಂದು ಆನೆ ಇಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಎಂದು ವೈಷ್ಣವಿ ಹೇಳುತ್ತಾರೆ. ನಂತರ ಇರುವೆ ಆನೆಗೆ ಕೇಳುತ್ತದೆ ಯಾಕೆ ನೀನು ನಾರ್ಮಲ್ ಬಟ್ಟೆ ಹಾಕಿಕೊಂಡಿದ್ಯಾ? ಇನ್ನೊಂದು ಬಟ್ಟೆ ಏನಾಯಿತು ಅಂತಾ ಅದಕ್ಕೆ ಆನೆ ಏನು ಹೇಳಬಹುದು ಎಂದು ವೈಷ್ಣವಿ ಅರವಿಂದ್‍ಗೆ ಕೇಳುತ್ತಾರೆ.

    ಆಗ ಅರವಿಂದ್ ನಾನು ನಿನ್ನನ್ನು ಏಪ್ರಿಲ್ ಫೂಲ್ ಮಾಡಿದೆ ಎಂದು ಹೇಳಬಹುದು ಎನ್ನುತ್ತಾರೆ. ಆಗ ವೈಷ್ಣವಿ ಇಲ್ಲ. ಆನೆ ಹೇಳುತ್ತದೆ ನನ್ನ ಬಟ್ಟೆ ಕಳೆದುಹೋಗಿದೆ ಎಂದು ನಗುತ್ತಾ ಹಾಸ್ಯಮಯವಾಗಿ ಹೇಳುತ್ತಾರೆ. ಈ ಜೋಕ್ ಕೇಳಿ ಅರವಿಂದ್ ಅಚ್ಚರಿಯಿಂದ ಜೋರಾಗಿ ನಗುತ್ತಾರೆ.

    ಒಟ್ಟಾರೆ ಬಿಗ್‍ಬಾಸ್ ವೈಷ್ಣವಿಗೆ ಶಿಕ್ಷೆ ನೀಡಿದ್ದರೆ, ವೈಷ್ಣವಿ ಜೋಕ್ ಹೇಳುವ ಮೂಲಕ ಮನೆಮಂದಿಗೆ ಗೋಳೋಯ್ದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

  • ಟೇಕಾಫ್ ವೇಳೆ ಜೋಕ್‍ಗೆ ಹೆದರಿ ತುರ್ತು ದ್ವಾರ ಒಡೆದು ಹಾರಿದ್ರು ಪ್ರಯಾಣಿಕರು!

    ಟೇಕಾಫ್ ವೇಳೆ ಜೋಕ್‍ಗೆ ಹೆದರಿ ತುರ್ತು ದ್ವಾರ ಒಡೆದು ಹಾರಿದ್ರು ಪ್ರಯಾಣಿಕರು!

    ಜಕಾರ್ತ: ಟೇಕಾಫ್‍ಗೆ ವೇಳೆ ಬಾಂಬ್ ಇದೆ ಎಂದು ತಿಳಿದು ವಿಮಾನದಿಂದ ಹಾರಿ 10 ಮಂದಿ ಗಾಯಗೊಂಡ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ಗೆ ಸೇರಿದ್ದ ಬೋಯಿಂಗ್ 737 ವಿಮಾನ, ಇನ್ನೆನೂ ಕೆಲವೇ ಕ್ಷಣಗಳಲ್ಲಿ ಟೆಕಾಫ್‍ಗೆ ಸಿದ್ಧಗೊಂಡಿತ್ತು. ವಿಮಾನದಲ್ಲಿ ಸಹಪ್ರಯಾಣಿಕ ಹೇಳಿದ `ಬಾಂಬ್‍ಜೋಕ್’ ಅನ್ನು ಗಂಭೀರವಾಗಿ ತೆಗೆದುಕೊಂಡ ಪ್ರಯಾಣಿಕರು ವಿಮಾನದ ತುರ್ತು ದ್ವಾರವನ್ನು ಒಡೆದು ಕೆಳಕ್ಕೆ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಘಟನೆಯ ಕುರಿತು ಅಧಿಕಾರಿಗಳು ವಿಮಾನವನ್ನು ಪರಿಶೀಲಿಸಿದ್ದು, ವಿಮಾನದಲ್ಲಿ ಯಾವುದೇ ಬಾಂಬ್ ಹಾಗೂ ಸ್ಫೋಟಕಗಳು ದೊರೆತಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಬಾಂಬ್ ಇದೆ ಎಂದು ಜೋಕ್ ಮಾಡಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಣ ಉಳಿಸಿಕೊಳ್ಳುವ ಬರದಲ್ಲಿ ಪ್ರಯಾಣಿಕರು ಮೇಲಿಂದ ಹಾರಿದ್ದರಿಂದ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಯಾಣಿಕರು ವಿಮಾನದಲ್ಲಿ ಬಾಂಬ್ ಇದೆ ಹೇಳಿದರೂ ಕೂಡಲೇ ನಾನು ವಿಮಾನದ ತುರ್ತು ನಿರ್ಗಮದ ಮೂಲಕ ಹೊರಗೆ ಹೋಗುವಂತೆ ಸೂಚಿಸಿದೆ ಎಂದು ವಿಮಾನದ ಕ್ಯಾಪ್ಟನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

    ಈ ಘಟನೆಯಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದು, ಇದನ್ನು ಜೋಕ್ ಆಗಿ ತಿಳಿಯದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತು ದ್ವಾರಗಳನ್ನು ತೆಗೆಯುವಂತೆ ತಿಳಿಸಿದ್ದೇವೆ ಎಂದು ಲಯನ್ ಸಂಸ್ಥೆಯ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

    https://youtu.be/Bjcoq4-oGAE