Tag: ಜೊಹಾನ್ಸ್ ಬರ್ಗ್

  • ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗಿ ಮದುವೆ ಆಗಿದ್ದಾರೆ.

    ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಕ್ಯಾಪ್ಟನ್ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಅದೇ ತಂಡದ ಅಲ್‍ರೌಂಡರ್ ಮರಿಝಾನ್ ಕಾಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್‍ರೌಂಡರ್ ಕಾಪ್ ತಮ್ಮ ಮದುವೆಯ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಬಹಿರಂಗಪಡಿಸಿದ್ದಾರೆ.

    2009ರ ಮಹಿಳಾ ವಿಶ್ವಕಪ್ ಸಮಯದಲ್ಲಿ ನಿಕೆರ್ಕ್ ಹಾಗೂ ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

    ಈ ಮದುವೆಗೆ ಇಬ್ಬರು ಆಟಗಾರ್ತಿಯರ ಕುಟುಂಬದವರು, ಸ್ನೇಹಿತರು ಹಾಗೂ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು. ನಿಕೆರ್ಕ್ ಹಾಗೂ ಕಾಪ್ ಅವರದ್ದು ಸಲಿಂಗಿ ಮದುವೆಯಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಇವರ ಮದುವೆ ಎರಡನೇ ಪ್ರಕರಣವಾಗಿದೆ.

    ಈ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ????

    A post shared by Marizanne Kapp (@kappie777) on

  • 33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಟೀಂ ಇಂಡಿಯಾ ವೈಟ್ ವಾಷ್‍ನಿಂದ ತಪ್ಪಿಸಿಕೊಂಡಿದೆ. ಗೆಲ್ಲಲು 241 ರನ್‍ಗಳನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 177 ರನ್‍ಗೆ ಆಲೌಟಾಯಿತು. ಈ ಮೂಲಕ 63 ರನ್‍ಗಳಿಂದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. 144 ರನ್‍ಗೆ 4ನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 177 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು.

    ಆರಂಭಿಕ ಆಟಗಾರ ಎಲ್ಗರ್ ಭಾರತದ ದಾಳಿಗೆ ಪ್ರತಿರೋಧ ತೋರಿ 86 ರನ್ ಗಳಿಸಿದರೂ ಭಾರತದ ವೇಗಿಗಳ ಮುಂದೆ ಇತರೆ ಎಲ್ಲಾ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಆಟಗಾರರು ಎರಡಂಕಿ ರನ್ ತಲುಪುವಲ್ಲೂ ವಿಫಲರಾದರು. ಅಲ್ಲದೆ ನಾಲ್ವರು ಆಟಗಾರು ಶೂನ್ಯಕ್ಕೆ ಔಟಾದರು.

    ಟೀಂ ಇಂಡಿಯಾ ಪರವಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿದರೆ, ಬೂಮ್ರಾ 2, ಇಶಾಂತ್ ಶರ್ಮಾ 2, ಪಾಂಡ್ಯಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 187 ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 247 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ 194 ಹಾಗೂ 177 ರನ್ ಗಳಿಸಿತು. ಈ ಮೂಲಕ ಭಾರತ 63 ರನ್ ಗಳ ಗೆಲುವು ಸಾಧಿಸಿತು. ಭಾರತದ ಪರವಾಗಿ ಬೂಮ್ರಾ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಗಳಿಸಿದ್ದರು.

    ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಆಟಗಾರ ಎಲ್ಗರ್ ಅಜೇಯ 86 ರನ್, ಹಶೀಂ ಆಮ್ಲ 52, ಎಬಿಡಿ ವಿಲಿಯರ್ಸ್ 6, ಫಿಲಾಂಡರ್ 10, ಮಕ್ರ್ರಮ್ 4 ರನ್ ಗಳಿಸಿದರು. ಡಿ’ಕಾಕ್, ಫೆಲುಕ್ವಾಯೋ, ರಬಾಡ ಹಾಗೂ ಮಾರ್ಕೆಲ್ ಸೊನ್ನೆ ಸುತ್ತಿದರು.