Tag: ಜೊಯಿಡಾ

  • ಉತ್ತರ ಕನ್ನಡ – ಎರಡು ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಘೋಷಣೆ

    ಉತ್ತರ ಕನ್ನಡ – ಎರಡು ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಘೋಷಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕುಗಳ ಅಂಗನವಾಡಿ, ಶಾಲೆಗಳಿಗೆ ಗುರುವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.

    ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ರಜೆ ಘೋಷಣೆ ಮಾಡಲಾಗಿದ್ದು, ಇಂದು ಜಿಲ್ಲೆಯಾದ್ಯಾಂತ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

    ಜಿಲ್ಲೆಯಲ್ಲಿ ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿದ್ದು, ಇಂದು ಮಲೆನಾಡು ಭಾಗದಲ್ಲಿ ಮಳೆಯ ಜೊತೆಗೆ ಗಾಳಿಯ ರಭಸವೂ ಹೆಚ್ಚಿರಲಿದೆ. ಸಂಪ್ರದಾಯಿಕ ಮೀನುಗಾರಿಕೆಗೂ ಕೂಡ ನಿರ್ಬಂಧ ಇದ್ದು, ಜಿಲ್ಲೆಯ ಜಲಪಾತಗಳು, ಕಡಲತೀರ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರೆಸಲಾಗಿದೆ.

  • ಜೋಯಿಡಾ ನಂದಿಗದ್ದಾದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ!

    ಜೋಯಿಡಾ ನಂದಿಗದ್ದಾದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ!

    ಕಾರವಾರ: ಜೊಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್‍ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

    ಜೋಯಿಡಾದ ನಂದಿಗದ್ದಾ ಗ್ರಾಮದ ಗ್ರಾಮಪಂಚಾಯ್ತಿ ಅಧಿಕಾರಿ ರಾತ್ರಿ 8 ಗಂಟೆಯಾದರೂ ಕಚೇರಿ ಮುಂದೆ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನು ಇಳಿಸದೆ ನಿರ್ಲಕ್ಷ್ಯದಿಂದ ತೆರಳಿದ್ದಾರೆ. ಈ ಘಟನೆ ಸ್ಥಳೀಯ ಜನರ ಗಮನಕ್ಕೆ ಬಂದಿದ್ದು ನಂತರ ಪಂಚಾಯ್ತಿ ಸಿಬ್ಬಂದಿ ರಾಷ್ಟ್ರಧ್ವಜವನ್ನು ಇಳಿಸಿದ್ದಾರೆ.

    ನಿಯಮದ ಪ್ರಕಾರ ಎಲ್ಲಾ ಗ್ರಾ.ಪಂಗಳಲ್ಲೂ ರಾಷ್ಟ್ರಧ್ವಜ ಬೆಳಗ್ಗೆ ಏರಿಸಿ ಸೂರ್ಯಾಸ್ತದ ವೇಳೆ ಇಳಿಸಬೇಕು. ಆದರೆ ನಂದಿಗದ್ದಾ ಗ್ರಾ.ಪಂ.ನಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಏರಿಸಿದ್ದ ರಾಷ್ಟ್ರಧ್ವಜವನ್ನು ರಾತ್ರಿ 8 ಆದರೂ ಇಳಿಸಿರಲಿಲ್ಲ. ಗ್ರಾಮದ ಜನರು ಗಮನಕ್ಕೆ ತಂದ ನಂತರ ರಾಷ್ಟ್ರದ್ವಜ ಇಳಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.