Tag: ಜೊಮ್ಯಾಟೋ

  • ಝೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ – ಮಾಡೆಲ್ ಹಿತೇಶಾ ಚಂದ್ರಾನೀ ಸುರಕ್ಷತೆಯ ಬಗ್ಗೆ ಕಳವಳ

    ಝೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ – ಮಾಡೆಲ್ ಹಿತೇಶಾ ಚಂದ್ರಾನೀ ಸುರಕ್ಷತೆಯ ಬಗ್ಗೆ ಕಳವಳ

    ಬೆಂಗಳೂರು: ಮಾಡೆಲ್ ಹಿತೇಶಾ ಚಂದ್ರಾನೀ ಮತ್ತು ಝೋಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿತೇಶಾ ಚಂದ್ರಾನೀ, ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಝೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ನೀಡಿರುವ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪೊಲೀಸರು ಸೆಕ್ಷನ್ 355 (ದಾಳಿ), 504 (ಅವಮಾನ), 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೀಗ ಇನ್‍ಸ್ಟಾಗ್ರಾಂ ನಲ್ಲಿ ಪತ್ರದ ಮೂಲಕ ಬರೆದುಕೊಂಡಿರುವ ಹಿತೇಶಾ ಚಂದ್ರಾನೀ, ಕೆಲವು ಸೆಲೆಬ್ರಿಟಿಗಳು ಈ ಘಟನೆಗೆ ನಾನೇ ಕಾರಣವೆಂದು ಮನಸ್ಸು ನೋಯಿಸಿದ್ದಾರೆ. ಇದರಿಂದಾಗಿ ನನಗೆ ನಾನು ನೋಡಿದ್ದ ಜನರು ಇವರೇನಾ ಎಂಬ ಸಂಶಯ ಮೂಡುತ್ತಿದೆ ಎಂದಿದ್ದಾರೆ.

    ನಾನು ನನ್ನ ಜೀವನವನ್ನು ಮತ್ತು ಗೌರವವನ್ನು ಯಾವುದೇ ಅಪಾಯಕ್ಕೆ ಒಳಪಡಿಸಲು ಇಷ್ಟ ಪಡುವುದಿಲ್ಲ. ಸೂಕ್ತವಾದ ಕಾನೂನು ಹೋರಾಟ ಮುಗಿಯುವವರೆಗೆ ಯಾರು ಕೂಡ ಈ ಕುರಿತು ಹೇಳಿಕೆಗಳನ್ನು ನೀಡಬಾರದೆಂದು ಅಭಿಮಾನಿಗಳೊಂದಿಗೆ ವಿನಂತಿ ಮಾಡಿಕೊಂಡಿದ್ದಾರೆ.

    ಈಗಾಗಲೇ ನಾನು ಬೆಂಗಳೂರು ಬಿಟ್ಟು ಹೋಗಿದ್ದೇನೆಂಬ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ನಾನು ಎಲ್ಲೂ ಹೋಗಿಲ್ಲ. ನಾನು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ. ತನಿಖೆಯ ಸತ್ಯಾಸತ್ಯತೆ ಹೊರ ಬರುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ- ಮಾಡೆಲ್ ಹಿತೇಶಾ ಚಂದ್ರಾನೀ ವಿರುದ್ಧ ಎಫ್‍ಐಆರ್

    ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ- ಮಾಡೆಲ್ ಹಿತೇಶಾ ಚಂದ್ರಾನೀ ವಿರುದ್ಧ ಎಫ್‍ಐಆರ್

    ಬೆಂಗಳೂರು: ಮಾಡೆಲ್ ಹಿತೇಶಾ ಚಂದ್ರಾನೀ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೆಲಿವರಿ ಬಾಯ್ ಕಾಮರಾಜ್ ಅವರ ದೂರಿನ ಮೇರೆಗೆ ಹಿತೇಶಾ ಚಂದ್ರಾನೀ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.

    ಘಟನೆಯ ಬಳಿಕ ಡೆಲಿವರಿ ಬಾಯ್‍ನನ್ನು ಬಂಧಿಸಿದ್ದ ಪೊಲೀಸರು ಜಾಮೀನಿನ ಮೇಲೆ ಅತನನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆ ನಂತರ ನಡೆದ ಘಟನೆಯ ಕುರಿತು ಡೆಲಿವರಿ ಬಾಯ್ ಕಾಮರಾಜ್, ನಾನು ಯುವತಿ ಮನೆಗೆ ತಲುಪಿದ ನಂತರ ಆಕೆ ಆರ್ಡರ್ ಮಾಡಿದ ಆಹಾರವನ್ನು ಹಸ್ತಾಂತರಿಸಿದೆ. ನಂತರ ಆಹಾರದ ಹಣ ಪಾವತಿ ಮಾಡುತ್ತಾರೆಂದು ಮನೆ ಬಾಗಿಲಿನಲ್ಲಿ ನಿಂತಿದ್ದೆ. ಆಗ ನೀನು ಏಕೆ ಆಹಾರ ತರಲು ತಡ ಮಾಡಿದ್ದು ಹಣ ಪಾವತಿ ಮಾಡುವುದಿಲ್ಲ ಎಂದು ವಾಗ್ವಾದಕ್ಕಿಳಿದಿದ್ದರು. ಎಂಬುದಾಗಿ ಘಟನೆಯ ಕುರಿತು ಪೂರ್ಣ ವಿವರವನ್ನು ತೋಡಿಕೊಂಡಿದ್ದರು. ಇದು ದೇಶದದ್ಯಾಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

    ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ನೀಡಿರುವ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಸೆಕ್ಷನ್ 355 (ದಾಳಿ), 504 (ಅವಮಾನ), 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಹಿಂದೆ ಪ್ರಕರಣ ಕುರಿತು ಬಾಲಿವುಡ್ ನಟಿ ಪರಿಣಿತಿ ಜೋಪ್ರಾ ಟ್ವಿಟ್ಟರ್‌ನಲ್ಲಿ ದಯವಿಟ್ಟು ಜೊಮ್ಯಾಟೋ ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆಮಾಡಿ. ಈ ಯುವಕ ಮುಗ್ಧನಾಗಿದ್ದು ನಾನು ಈ ವ್ಯಕ್ತಿಯ ಮಾತನ್ನು ನಂಬುತ್ತೇನೆ. ಆರೋಪ ಮಾಡಿದ ಮಹಿಳೆಯ ವಾದವನ್ನು ಸರಿಯಾಗಿ ಪ್ರಶ್ನೆ ಮಾಡಿ. ಇದು ನಾಚಿಕೆಗೇಡಿನ ಅಮಾನವೀಯತೆಯ ಘಟನೆಯಾಗಿದೆ. ನಾನು ಡೆಲಿವರಿ ಬಾಯ್ ಪರ ಸಹಾಯಕ್ಕೆ ಸಿದ್ಧರಿರುವುದಾಗಿ ಟ್ವೀಟ್ ಮಾಡಿ ಡೆಲಿವರಿ ಬಾಯ್ ಬೆಂಬಲ ಸೂಚಿಸಿದ್ದರು.

    ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜೊಮ್ಯಾಟೋ ಕಂಪನಿ ಹಿತೇಶಾ ಮತ್ತು ಕಾಮರಾಜ್ ರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಎರಡು ಕಡೆಯ ವಾದಗಳನ್ನು ನಾವು ಕೇಳಿದ್ದೇವೆ, ಇಬ್ಬರಿಗೂ ನಾವು ಬೆಂಬಲ ನೀಡಿದ್ದೇವೆ, ತನಿಖೆಯ ನಂತರ ಸತ್ಯ ಹೊರಬರಬೇಕಿದೆ ಎಂದು ಕಂಪನಿ ತಿಳಿಸಿತ್ತು. ಘಟನೆ ಬಳಿಕ ಡೆಲಿವರಿ ಬಾಯ್ ಕಾಮರಾಜ್‍ನನ್ನು ಜೊಮ್ಯಾಟೋ ಕೆಲಸದಿಂದ ವಜಾಗೊಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಮುಂದಿನ ಸತ್ಯಾಸತ್ಯತೆ ತನಿಖೆ ಬಳಿಕವಷ್ಟೆ ಹೊರಬರಬೇಕಿದೆ.

  • ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ- ಡೆಲಿವರಿ ಬಾಯ್ ಪರ ನಿಂತ ಪರಿಣಿತಿ ಚೋಪ್ರಾ

    ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ- ಡೆಲಿವರಿ ಬಾಯ್ ಪರ ನಿಂತ ಪರಿಣಿತಿ ಚೋಪ್ರಾ

    ಬೆಂಗಳೂರು: ಮಾಡೆಲ್ ಒಬ್ಬರ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಡೆಲಿವರಿ ಬಾಯ್ ಪರ ಬಾಲಿವುಡ್ ಸಿನಿಮಾ ನಟಿ ಪರಿಣಿತಿ ಚೋಪ್ರಾ ಟ್ವಿಟ್ಟರ್‍ ನಲ್ಲಿ ಬೆಂಬಲಕ್ಕೆ ನಿಂತಿದ್ದಾರೆ.

    ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.

    ಘಟನೆಯ ಬಳಿಕ ಡೆಲಿವರಿ ಬಾಯ್‍ನನ್ನು ಬಂಧಿಸಿದ್ದ ಪೊಲೀಸರು ಜಾಮೀನಿನ ಮೇಲೆ ಅತನನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆ ನಂತರ ನಡೆದ ಘಟನೆಯ ಕುರಿತು ಡೆಲಿವರಿ ಬಾಯ್ ಕಾಮರಾಜ್, ನಾನು ಯುವತಿ ಮನೆಗೆ ತಲುಪಿದ ನಂತರ ಆಕೆ ಆರ್ಡರ್ ಮಾಡಿದ ಆಹಾರವನ್ನು ಹಸ್ತಾಂತರಿಸಿದೆ. ನಂತರ ಆಹಾರದ ಹಣ ಪಾವತಿ ಮಾಡುತ್ತಾರೆಂದು ಮನೆ ಬಾಗಿಲಿನಲ್ಲಿ ನಿಂತಿದ್ದೆ. ಆಗ ನೀನು ಏಕೆ ಆಹಾರ ತರಲು ತಡ ಮಾಡಿದ್ದು ಹಣ ಪಾವತಿ ಮಾಡುವುದಿಲ್ಲ ಎಂದು ವಾಗ್ವಾದಕ್ಕಿಳಿದಿದ್ದರು. ಎಂಬುದಾಗಿ ಘಟನೆಯ ಕುರಿತು ಪೂರ್ಣ ವಿವರವನ್ನು ತೋಡಿಕೊಂಡಿದ್ದರು. ಇದು ದೇಶದದ್ಯಾಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

    ಈ ಪ್ರಕರಣ ಕುರಿತು ಇದೀಗ ಪರಿಣಿತಿ ಜೋಪ್ರಾ ಟ್ವಿಟ್ಟರ್ ನಲ್ಲಿ ದಯವಿಟ್ಟು ಜೊಮ್ಯಾಟೋ ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆಮಾಡಿ. ಈ ಯುವಕ ಮುಗ್ಧನಾಗಿದ್ದು ನಾನು ಈ ವ್ಯಕ್ತಿಯ ಮಾತನ್ನು ನಂಬುತ್ತೇನೆ. ಆರೋಪ ಮಾಡಿದ ಮಹಿಳೆಯ ವಾದವನ್ನು ಸರಿಯಾಗಿ ಪ್ರಶ್ನೆ ಮಾಡಿ. ಇದು ನಾಚಿಕೆಗೇಡಿನ ಅಮಾನವೀಯತೆಯ ಘಟನೆಯಾಗಿದೆ. ನಾನು ಡೆಲಿವರಿ ಬಾಯ್ ಪರ ಸಹಾಯಕ್ಕೆ ಸಿದ್ಧರಿರುವುದಾಗಿ ಟ್ವೀಟ್ ಮಾಡಿದ್ದಾರೆ.