Tag: ಜೊಮ್ಯಾಟೊ

  • ಬ್ರ್ಯಾಂಡ್‌ ನೇಮ್‌ ಚೇಂಜ್‌; ‘ಎಟರ್ನಲ್‌’ ಎಂದು ಹೆಸರು ಬದಲಿಸಿಕೊಂಡ Zomato

    ಬ್ರ್ಯಾಂಡ್‌ ನೇಮ್‌ ಚೇಂಜ್‌; ‘ಎಟರ್ನಲ್‌’ ಎಂದು ಹೆಸರು ಬದಲಿಸಿಕೊಂಡ Zomato

    ನವದೆಹಲಿ: ಫುಡ್‌ ಡೆಲಿವರಿ ಪ್ಲಾಟ್‌ಫರ್ಮ್‌ ಜೊಮ್ಯಾಟೊ ತನ್ನ ಬ್ರ್ಯಾಂಡ್‌ ನೇಮ್‌ ಅನ್ನು ‘ಎಟರ್ನಲ್‌’ ಎಂದು ಮರುನಾಮಕರಣ ಮಾಡಿಕೊಂಡಿದೆ. ಹೊಸ ಲೋಗೊ ಕೂಡ ಅನಾವರಣಗೊಳಿಸಿದೆ.

    ಈಗಾಗಲೇ ಕಳೆದ ಎರಡು ವರ್ಷಗಳಿಂದ ಆಂತರಿಕವಾಗಿ ‘ಎಟರ್ನಲ್‌’ ಹೆಸರು ಬಳಕೆಯಲ್ಲಿದೆ. ಇನ್ಮುಂದೆ ಸಂಪೂರ್ಣವಾಗಿ ಹೊಸ ಹೆಸರು ಬಳಸಲಾಗುವುದು.

    ‘ಎಟರ್ನಲ್’ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿರಲಿದೆ. ಫುಡ್‌ ಡೆಲಿವರಿ, ಬ್ಲಿಂಕಿಟ್‌, ಹೈಪರ್‌ಪ್ಯೂರ್‌ ಮತ್ತು ಇನ್ನಿತರೆ ಸೇವೆಗಳು ಇರಲಿವೆ ಎಂದು ಜೊಮ್ಯಾಟೊ ಕಂಪನಿ ತಿಳಿಸಿದೆ.

  • ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    ನವದೆಹಲಿ: ಗ್ರಾಹಕರಿಗೆ ನಿಗದಿತ ಸಮಯಕ್ಕೆ ಆಹಾರ ಪೂರೈಕೆ ಮಾಡದೇ ಆರ್ಡರ್ ರದ್ದಾದರೆ ದಂಡ ಪಾವತಿಸುವ ಜೊತೆಗೆ ಊಟವನ್ನೂ ಉಚಿತವಾಗಿ ನೀಡಬೇಕಾಗುತ್ತದೆ ಎಂದು ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್‌ಸಿಡಿಆರ್‌ಸಿ) ಜೊಮ್ಯಾಟೊ ಕಂಪನಿಗೆ ಆದೇಶಿಸಿದೆ.

    `ಸಕಾಲಕ್ಕೆ ಊಟ ಪೂರೈಕೆ ಇಲ್ಲವೇ ಉಚಿತ’ (ಆನ್‌ಟೈಮ್ ಆರ್ ಫ್ರೀ) ಆಯ್ಕೆಯಡಿ ಆಹಾರ ಪೂರೈಸದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಪರಿಹಾರ ರೂಪದಲ್ಲಿ 10 ಸಾವಿರ ರೂಪಾಯಿ ದಂಡ ಮತ್ತು ಉಚಿತ ಊಟ ನೀಡುವಂತೆ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್‌ಸಿಡಿಆರ್‌ಸಿ) ಜೊಮ್ಯಾಟೊಗೆ ಆದೇಶಿಸಿದೆ. ಇದನ್ನೂ ಓದಿ: ಬಾಯ್ಕಟ್‍ಗೆ ಕರೆ ಬೆನ್ನಲ್ಲೇ ಕ್ಷಮೆಯಾಚಿಸಿದ Zomato

    ಜಾಹಿರಾತುಗಳಲ್ಲಿನ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೇ ಅಂತಹ ಜಾಹೀರಾತು ಅಥವಾ ಪ್ರಚಾರ ಪ್ರಕಟಣೆಗಳನ್ನು ನೀಡಬಾರದು ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಸೇವೆ ಒದಗಿಸುವಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪ್ರಕ್ರಿಯೆಗಾಗಿ ಹಾಗೂ ಅರ್ಜಿದಾರರರು ಅಪಾರ ದೈಹಿಕ ಮತ್ತು ಮಾನಸಿಕ ಸಂಕಟ ಅನುಭವಿಸುವಂತೆ ಮಾಡಿದ್ದಕ್ಕಾಗಿ ಪ್ರತಿವಾದಿಗಳು ಪರಿಹಾರ ನೀಡಲು ಜವಾಬ್ದಾರರಾಗಿರುತ್ತಾರೆ ಎಂದು ಆಯೋಗ ಹೇಳಿದೆ. ಆಹಾರ ಪೂರೈಕೆ ಬರೀ ತಡವಾಗಿಲ್ಲ. ಬದಲಿಗೆ ಸಂಪೂರ್ಣ ರದ್ದಾಗಿದೆ ಎಂಬ ಅಂಶವನ್ನು ಆಯೋಗ ಪರಿಗಣಿಸಿತು.

    ಮೇಲ್ಮನವಿದಾರರು ಜೊಮ್ಯಾಟೊದಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು. ಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತ’ ಆಯ್ಕೆಯಡಿ ಹೆಚ್ಚುವರಿಯಾಗಿ 10 ಹಣ ಪಾವತಿಸಿದರು. ಆದರೆ ಆಹಾರ ಅರ್ಜಿದಾರರಿಗೆ ತಲುಪದೆ ಕಡೆಗೆ ರದ್ದಾಗಿತ್ತು. ಆದ ಕಾರಣ ಆಯೋಗ ದಂಡದೊಂದಿಗೆ ಉಚಿತ ಊಟ ನೀಡುವಂತೆ ಆದೇಶಿಸಿತು.

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಝೊಮ್ಯಾಟೋ ಉದ್ಯೋಗಿಗಳಿಗೆ ಕೊವೀಡ್ ಲಸಿಕೆ ವಿತರಣೆ: ಸಿಇಒ ಘೋಷಣೆ

    ಇಂದಿನಿಂದ ಝೊಮ್ಯಾಟೋ ಉದ್ಯೋಗಿಗಳಿಗೆ ಕೊವೀಡ್ ಲಸಿಕೆ ವಿತರಣೆ: ಸಿಇಒ ಘೋಷಣೆ

    ದೆಹಲಿ: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲೂ ಕೆಲಸ ಮಾಡಿದ ಝೊಮ್ಯಾಟೋ ಆನ್‍ಲೈನ್ ಫುಡ್ ಆರ್ಡರ್ ಕಂಪನಿಯ ಉದ್ಯೋಗಿಗಳು, ಸಿಬ್ಬಂದಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

    ಹೀಗಾಗಿ ಜೊಮ್ಯಾಟೋದ ಸುಮಾರು 1.5 ಲಕ್ಷ ಉದ್ಯೋಗಿಗಳು ಕಂಪನಿಯ ವತಿಯಿಂದ ಉಚಿತವಾಗಿ ಕೊರೊನಾ ಲಸಿಕೆ ಪಡೆಯಲಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ಈಗಾಗಲೇ ಲಸಿಕೆ ವಿತರಣೆ ನಡೆಯುತ್ತಿದ್ದು, ಸಾವಿರಕ್ಕೂ ಹೆಚ್ಚು ಮಂದಿ ವ್ಯಾಕ್ಸಿನೇಶನ್ ಮಾಡಿಸಿಕೊಂಡಿದ್ದಾರೆ. ಇಂದಿನಿಂದ ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಝೊಮ್ಯಾಟೋ ಉದ್ಯೋಗಿಗಳಿಕೆ ಲಸಿಕೆ ನೀಡಲು ಪ್ರಾರಂಭಿಸಲಾಗುವುದು. ಮುಂದಿನ ವಾರದಲ್ಲಿ ಇನ್ನಷ್ಟು ನಗರಗಳಲ್ಲಿ ಈ ಅಭಿಯಾನ ಶುರುವಾಗುತ್ತದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

    ನಮಗೆ ನಮ್ಮ ಗ್ರಾಹಕರ ಸುರಕ್ಷತೆ ಮೊದಲ ಆದ್ಯತೆ. ಕೊರೊನಾ ವೈರಸ್ ಕಾಲದಲ್ಲೂ ನಮ್ಮ ಡೆಲಿವರಿ ಪಾಲುದಾರರು ಸುರಕ್ಷಿತವಾಗಿ, ತಮಗೆ ಅಪಾಯವಿದ್ದರೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಹೀಗೆ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ ಸುಮಾರು 1.5 ಲಕ್ಷ ಉದ್ಯೋಗಿಗಳಿಗೆ ನೀಡುವ ಲಸಿಕೆ ವೆಚ್ಚವನ್ನು ಕಂಪನಿಯೇ ಭರಿಸಲಿದೆ ಎಂದೂ ಹೇಳಿದ್ದಾರೆ.

    ಇನ್ನು ಲಸಿಕೆ ಪಡೆಯುವ ಬಗ್ಗೆ, ಅದರ ಮಹತ್ವದ ನಮ್ಮ ಆಹಾರ ವಿತರಣಾ ಪಾಲುದಾರರಿಗೆ ಅರಿವು ಮೂಡಿಸಲಾಗುವುದು. ಝೊಮ್ಯಾಟೋ ಆ್ಯಪ್​ನಲ್ಲೂ ಇದು ಗೋಚರವಾಗುವಂತೆ ಮಾಡುತ್ತೇವೆ ಎಂದು ಸಿಇಒ ತಿಳಿಸಿದ್ದಾರೆ.

  • ಗ್ರಾಹಕಿಯ ಮೂಗಿಗೆ ಪಂಚ್ ಮಾಡಿದ್ದ ಫುಡ್ ಡೆಲಿವರಿ ಬಾಯ್ ಅರೆಸ್ಟ್

    ಗ್ರಾಹಕಿಯ ಮೂಗಿಗೆ ಪಂಚ್ ಮಾಡಿದ್ದ ಫುಡ್ ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಫುಡ್ ಡೆಲಿವರಿ ತಡವಾಗಿಕೊಟ್ಟಿದ್ದು ಅಲ್ಲದೆ, ಮಹಿಳೆಗೆ ರಕ್ತ ಬರುವಂತೆ ಹೊಡೆದಿದ್ದ ಜೊಮ್ಯಾಟೊ ಸಿಬ್ಬಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಕಾಮರಾಜ್ ಆಗಿದ್ದಾನೆ. ಈತ ಫುಡ್ ಆರ್ಡರ್ ಮಾಡಿದ್ದ ಹಿತೇಶಾ ಚಂದ್ರಾಣಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಇಲೆಕ್ಟ್ರಾನಿಕ್ ಪೊಲೀಸರು ಡೆಲಿವರಿಬಾಯ್‍ನನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    ಮಂಗಳವಾರ ಮಧ್ಯಾಹ್ನ ಚಂದ್ರಾಣಿ ಜೊಮ್ಯಾಟೊದಲ್ಲಿ ಊಟವನ್ನು ಆರ್ಡರ್ ಮಾಡಿದ್ದಾರೆ. ಮಧ್ಯಾಹ್ನ 3:30ರ ಸುಮಾರಿಗೆ ಊಟ ಡೆಲಿವರಿ ಆಗುವುದಾಗಿ ಆ್ಯಪ್‍ನಲ್ಲಿ ತಿಳಿಸಲಾಗಿತ್ತು. ಆದರೆ ಡೆಲಿವರಿ ಬಾಯ್ ಕಾಮರಾಜ್ 4:30ಕ್ಕೆ ಬಂದಿದ್ದಾನೆ. ಊಟ ಬರುವುದು ತಡವಾಗಿದೆ ಎಂದು ಯುವತಿ ಜೊಮ್ಯಾಟೊ ತಿಳಿಸಿ ಆರ್ಡರ್ ರದ್ದು ಮಾಡಿದ್ದರು. ನಂತರ ಡೆಲಿವರಿ ಬಾಯ್ ಊಟ ಹಿಡಿದುಕೊಂಡು ಮನೆ ಬಾಗಿಲಿಗೆ ಬಂದಿದ್ದಾನೆ. ಆರ್ಡರ್ ಅನ್ನು ನಾನು ಕ್ಯಾನ್ಸಲ್ ಮಾಡಿದ್ದೇನೆ ಎಂದು ಹಿತೇಶಾ ತಿಳಿಸಿದ್ದಾರೆ ಈ ವೇಳೆ ಕೋಪಗೊಂಡ ಕಾಮರಾಜ್ ಬಾಗಿಲನ್ನು ದೂಡಿ ಮನೆಯೊಳಗೆ ನುಗ್ಗಿ ಊಟವನ್ನು ಇಟ್ಟು ಬಂದಿದ್ದಾನೆ.

    ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ಗುಲಾಮ ನಾನಲ್ಲ ಎಂದು ಡೆಲವರಿ ಬಾಯ್ ಕಾಮರಾಜ್ ಹೇಳಿದ್ದಾನೆ. ಹಿತೇಶಾ ಮತ್ತು ಡೆಲಿವರಿ ಬಾಯ್ ಜಗಳದಲ್ಲಿ ಆಕೆಯ ಮೂಗಿಗೆ ಪಂಚ್ ಮಾಡಿದ್ದಾನೆ. ನಂತರ ಯುವತಿ ಕಣ್ಣೀರು ಹಾಕುತ್ತಾ ನಡೆದಿರುವ ಘಟನೆಯನ್ನು ಹೇಳಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ಡೆಲವರಿಬಾಯ್ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಡೆಲವರಿಬಾಯ್‍ನ್ನು ಕೆಲಸದಿಂದ ಕಿತ್ತು ಹಾಕಿದ್ದೇವೆ. ಕ್ಷಮಿಸಿ ಎಂದು ಹೇಳಲು ಸಾಧ್ಯವಿಲ್ಲ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಈ ಆಘಾತಕಾರಿ ಅನುಭವಕ್ಕಾಗಿ ಹಿತೇಶಾಗೆ ಕ್ಷಮೆಯಾಚಿಸುತ್ತೇವೆ. ನಾವು ಹಿತೇಶಾರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಅಗತ್ಯವಾದ ವೈದ್ಯಕೀಯ ಆರೈಕೆ ಮತ್ತು ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಜೊಮ್ಯಾಟೊ ಟ್ವೀಟ್ ಮಾಡಿದೆ.