Tag: ಜೊನಿ ಸಿನ್ಸ್

  • ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ತಿರುವನಂತಪುರ: ಸಾಮಾನ್ಯವಾಗಿ ಜನರು ತಮ್ಮ ಬಸ್ ಅಥವಾ ವಾಹನದ ಮೇಲೆ ತಮ್ಮ ನೆಚ್ಚಿನ ನಟ-ನಟಿ ಮತ್ತು ದೇವರ ಫೋಟೋವನ್ನು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ಬಸ್ ಮಾಲೀಕ ತನ್ನ ಬಸ್ ಮೇಲೆ ನೀಲಿ ಸಿನಿಮಾಗಳ ತಾರೆಯರ ಫೋಟೋಗಳನ್ನು ಹಾಕಿಸಿದ್ದಾರೆ.

    ಕೇರಳದ ಚಿಕ್ಕೋಸ್ ಎಂಬ ಖಾಸಗಿ ಬಸ್ ಮಾಲೀಕರೊಬ್ಬರು ಈ ರೀತಿ ನೀಲಿ ಚಿತ್ರಗಳ ತಾರೆಯರ ಫೋಟೋಗಳನ್ನು ಪೇಂಟ್ ಮಾಡಿಸಿದ್ದಾರೆ. ನೀಲಿ ಚಿತ್ರ ತಾರೆಯರಾದ ಸನ್ನಿ ಲಿಯೋನ್, ಮಿಯಾ ಖಲೀಫಾ, ಜೊನಿ ಸಿನ್ಸ್, ಜೊರ್ಡಿ ಎಲ್ ನಿನಿ ಮತ್ತು ಕಾಟ್ರ್ನಿ ಕೇನ್ ತಾರೆಯರ ಚಿತ್ರಗಳನ್ನು ಪೇಂಟ್ ಮಾಡಿಸಿದ್ದಾರೆ.

    ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಬಸ್ ಮೇಲೆ ಈ ರೀತಿಯ ಫೋಟೋ ಹಾಕಿಸಿದ್ದಾರೆ. ಈ ರೀತಿ ಆಕರ್ಷಕವಾಗಿರುವ ಬಸ್ ಫೋಟೋವನ್ನು ಟ್ವೀಟ್ಟರ್ ನಲ್ಲಿ `ಕೇರಳದ  ಈ ಬಸ್ಸಿನಲ್ಲಿ ನಿಮಗೆ ಗಂಭೀರವಾಗಿ ಇರಲು ಸಾಧ್ಯವಿಲ್ಲ’ ಎಂದು ಬರೆದು ಟ್ವಿಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

    ಬಸ್ ಮೇಲೆ ಮಾತ್ರವಲ್ಲದೇ ಬಸ್ ಒಳಗೆ ಕೂಡ ಡಿಜೆ ಸೌಂಡ್ ಸಿಸ್ಟಮ್ ಗಳು ಮತ್ತು ಲೇಸರ್ ಲೈಟಿಂಗ್ ಗಳನ್ನು ಅಳವಡಿಸಿದ್ದಾರೆ. ಈ ಬಸ್ ಸಿದ್ಧಪಡಿಸಲು ಸುಮಾರು 4ರಿಂದ 5 ಲಕ್ಷ ರೂ. ಖರ್ಚಾಗಿದ್ದು, ಈ ರೀತಿಯ 8 ಬಸ್ಸುಗಳನ್ನು ಚಿಕ್ಕೋಸ್ ಹೊಂದಿದೆ” ಎಂದು ಬಸ್ ಪ್ರಯಾಣಿಕರು ಹೇಳಿದ್ದಾರೆ.

    ಈ ಬಸ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ವೀಟ್ ನಲ್ಲಿ ಈ ಪೋಸ್ಟ್ ಹಾಕುತ್ತಿದ್ದಂತೆ ಅನೇಕ ಟ್ವಿಟ್ಟಿಗರು ಪರ- ವಿರೋಧವಾದ ರೀಟ್ವೀಟ್ ಮಾಡಿದ್ದಾರೆ. ಕೆಲವು ಬೇರೆ ಬೇರೆ ರೀತಿ ಪೇಂಟ್ ಮಾಡಿಸಿರುವ ಬಸ್ ಗಳ ಫೋಟೋ ಹಾಕಿ ಪ್ರತಿಕ್ರಿಯಿಸಿದ್ದಾರೆ.

    ಚಿಕ್ಕೋಸ್ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿರುವ ಸಂಸ್ಥೆ ತನ್ನದೇ ಆದ ಯೂ ಟ್ಯೂಬ್ ಖಾತೆಯನ್ನು ಹೊಂದಿದ್ದು, ಬಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡಿದೆ.