Tag: ಜೈ ಶ್ರೀ ರಾಮ್

  • ‘ಜೈ ಶ್ರೀರಾಮ್’ ಹೇಳದ ಹುಡುಗನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

    ‘ಜೈ ಶ್ರೀರಾಮ್’ ಹೇಳದ ಹುಡುಗನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

    ಹೈದರಬಾದ್: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗದೇ ಇದ್ದಿದ್ದಕ್ಕೆ ಹುಡುಗನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‍ನ ಓಲ್ಡ್ ಸಿಟಿಯ ಚಾರ್ಮಹಲ್ ಪ್ರದೇಶದಲ್ಲಿ ನಡೆದಿದೆ.

    ಹುಸೇನಿ ಆಲಂ ನಿವಾಸಿಯಾದ 17 ವರ್ಷದ ಹುಡುಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಾನಾಗಿದ್ದು, ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾರ್ಮಿನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾದ್ ಕೆಫೆ ಹುಸೇನಿ ಆಲಂನಿಂದ ಬೋನಾಲು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ಹುಡುಗನನ್ನು ತಡೆದು ಹಣೆಗೆ ತಿಲಕವಿಟ್ಟು ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಆಗ ಘೋಷಣೆ ಕೂಗಲು ಹುಡುಗ ನಿರಾಕರಿಸಿದ್ದರಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಹುಡುಗ ಆರೋಪಿಸಿದ್ದಾನೆ. ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ಬಿಎಸ್‌ವೈ ನಿರ್ಧಾರ

    ಈ ಬಗ್ಗೆ ಬಾಲಕ ಚಾರ್ಮಿನಾರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಪ್ರಮುಖ ಆರೋಪಿಯನ್ನು ರೂಪೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು

    Live Tv
    [brid partner=56869869 player=32851 video=960834 autoplay=true]

  • ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ರಾಂಚಿ: ಕಾಶ್ಮೀರದ ವ್ಯಾಪಾರಿಗಳನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿರುವ ಪ್ರಕರಣ ಜಾರ್ಖಂಡ್ ನಲ್ಲಿ ದಾಖಲಾಗಿದೆ.

    ರಾಂಚಿಯಲ್ಲಿ ಕಾಶ್ಮೀರಿ ವ್ಯಾಪಾರಿಗಳಿಗೆ ‘ಜೈ ಶ್ರೀ ರಾಮ್’ ಮತ್ತು ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸಿದ ಮೂವರನ್ನು ಬಂಧಿಸಿರುವುದಾಗಿ ಜಾರ್ಖಂಡ್ ಪೊಲೀಸರು ಇಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್

    ನಡೆದಿದ್ದೇನು?
    ಚಳಿಗಾಲದ ಬಟ್ಟೆಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿಯೊಬ್ಬ ಶನಿವಾರ ಪೊಲೀಸರಿಗೆ ದೂರ ನೀಡಿದ್ದಾರೆ. ಈ ದೂರಿನಲ್ಲಿ ರಾಂಚಿಯ ಡೊರಾಂಡಾ ಪ್ರದೇಶದಲ್ಲಿ ನನ್ನ ಮತ್ತು ಇತರ ಕೆಲವು ಕಾಶ್ಮೀರಿ ವ್ಯಾಪರಿಗಳ ಮೇಲೆ 25 ಜನರು ದಾಳಿ ಮಾಡಿದ್ದು, ಜೈ ಶ್ರೀ ರಾಮ್ ಮತ್ತು ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳುವಂತೆ ಒತ್ತಾಯಿಸಿದರು ಎಂದು ದಾಖಲಿಸಿದ್ದಾರೆ.

    ಕಾಶ್ಮೀರಿ ವ್ಯಾಪಾರಿಗಳು ಘಟನೆಯ ಬಗ್ಗೆ ದೂರು ನೀಡಿರುವ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನಾವು ಕಾಶ್ಮೀರಿಯಾಗಿರುವುದು ಅಪರಾಧವೇ? ನಾವು ಭಾರತೀಯರಲ್ಲವೇ? ಇವರು ನಮ್ಮ ಜೀವನವನ್ನು ನರಕವಾಗಿಸಿದ್ದು, ಯಾವಾಗಲೂ ‘ಜೈ ಶ್ರೀ ರಾಮ್’, ‘ಪಾಕಿಸ್ತಾನ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸುತ್ತಿರುತ್ತಾರೆ. ಅವರು ಹೇಳಿದಂತೆ ನಾವು ಕೇಳಲಿಲ್ಲವೆಂದು ನಮ್ಮ ನಾಲ್ವರನ್ನು ಥಳಿಸಿದ್ದಾರೆ. ನಾವು ಭಾರತೀಯರು ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಾನೂನಿನಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಸಿಎಂ ಹೇಮಂತ್ ಸೊರೆನ್ ಅವರು ಆ ವೀಡಿಯೋವನ್ನು ರೀ-ಟ್ವೀಟ್ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದರು. ಜಾರ್ಖಂಡ್‍ನಲ್ಲಿ ಧಾರ್ಮಿಕ ದ್ವೇಷ ಮತ್ತು ತಾರತಮ್ಯಕ್ಕೆ ಯಾವುದೇ ಸ್ಥಳವಿಲ್ಲ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ

    ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ಝಾ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.