Tag: ಜೈ ಲವ ಕುಶ

  • ಜೂ.ಎನ್‍ಟಿಆರ್ ನಟನೆಯ `ಜೈ ಲವ ಕುಶ’ ಟ್ರೇಲರ್ ಔಟ್

    ಜೂ.ಎನ್‍ಟಿಆರ್ ನಟನೆಯ `ಜೈ ಲವ ಕುಶ’ ಟ್ರೇಲರ್ ಔಟ್

    ಹೈದರಾಬಾದ್: ಟಾಲಿವುಡ್‍ನ ಬಹು ನಿರೀಕ್ಷಿತ ಜೂನಿಯರ್ ಎನ್.ಟಿ.ಆರ್ ಅಭಿನಯದ `ಜೈ ಲವ ಕುಶ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

    ಜೈ ಲವ ಕುಶ ಸಿನಿಮಾ ಮೂವರು ಸಹೋದರರು ನಡುವಿನ ಕಥಾ ಹಂದರವನ್ನು ಒಳಗೊಂಡಿದೆ. ಈಗಾಗಲೇ ಟೀಸರ್ ಮುಖಾಂತರ ಒಂದೊಂದು ಪಾತ್ರದ ಪರಿಚಯ ಮಾಡಿದ್ದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂ.ಎನ್‍ಟಿಆರ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ.

    ಬ್ಯಾಂಕ್ ಕೆಲಸ ಮಾಡುವ ಲವ, ಕಳ್ಳನಾಗಿ ಕುಶ ಮತ್ತು ರಾವಣ್ ಪಾತ್ರದಾರಿಯಾಗಿ ಜೈ ಮೂರು ವಿಭಿನ್ನ ಲುಕ್‍ನಲ್ಲಿ ಜೂ.ಎನ್.ಟಿ.ಆರ್ ನಟಿಸಲಿದ್ದಾರೆ. ಬೇರೆ ಬೇರೆ ವೃತ್ತಿಯಲ್ಲಿರುವ ಈ ಸಹೋದರ ನಡುವೆ ಉಂಟಾಗುವ ಕಥೆಯನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಮೂರು ಪಾತ್ರಕ್ಕೆ ಡಿಫರೆಂಟ್ ಲುಕ್ ನಲ್ಲಿ ಕಾಣುವಲ್ಲಿ ಹಾಲಿವುಡ್ ಮೇಕಪ್‍ಮನ್ ವ್ಯಾನ್ಸ್ ಹಾರ್ಟ್‍ವೆಲ್ ಅವರ ಕೈ ಚಳಕ ಅಡಗಿದೆ.

    ‘ಜೈ ಲವ ಕುಶ’ ಚಿತ್ರವನ್ನು ಕೆ.ಎಸ್.ರವೀಂದ್ರ ನಿರ್ದೇಶಿಸಿದ್ದಾರೆ. ಎನ್.ಟಿ.ಆರ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಸೆಪ್ಟೆಂಬರ್ 21ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ಯೂಟ್ಯೂಬ್ ನಲ್ಲಿ 45 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

  • ವಿಲನ್ ರೋಲ್‍ನಲ್ಲಿ ಕರಿ ಚಿರತೆ – ಜ್ಯೂ. ಎನ್‍ಟಿಆರ್ ಮುಂದೆ ಅಬ್ಬರ

    ವಿಲನ್ ರೋಲ್‍ನಲ್ಲಿ ಕರಿ ಚಿರತೆ – ಜ್ಯೂ. ಎನ್‍ಟಿಆರ್ ಮುಂದೆ ಅಬ್ಬರ

    ಬೆಂಗಳೂರು: ಜ್ಯೂನಿಯರ್ ಎನ್‍ಟಿಆರ್ ಹೀರೊ ಆಗಿರುವ `ಜೈ ಲವ ಕುಶ’ ಸಿನಿಮಾದಲ್ಲಿ ವಿಜಯ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೊಂದು ದಿನದಲ್ಲಿ ಹೊರ ಬೀಳುವ ಸಾಧ್ಯತೆಯಿದೆ.

    ಬಾಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಎನ್‍ಟಿಆರ್ ಫಸ್ಟ್ ಟೈಮ್ ತ್ರಿಬಲ್ ರೋಲ್‍ನಲ್ಲಿ ಕಾಣಿಸುತ್ತಿದ್ದಾರೆ. ಮೂರೂ ವಿಭಿನ್ನ ಗೆಟಪ್ ಗಳು ಕೂಡ ಈ ಚಿತ್ರದಲ್ಲಿವೆ. ಜೈ, ಲವ ಮತ್ತು ಕುಶ ಎನ್ನುವುದು ಪಾತ್ರಗಳ ಹೆಸರು. ಇಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣನ ಹೋಲಿಕೆ ಪಾತ್ರಕ್ಕಿರುತ್ತವೆ ಎಂದು ಫಸ್ಟ್‍ಲುಕ್‍ನಲ್ಲಿ ರಿವೀಲ್ ಆಗಿದೆ.

    ಟಾಲಿವುಡ್‍ನಲ್ಲಿ ಜ್ಯೂನಿಯರ್ ಎನ್‍ಟಿಆರ್‍ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸೀನಿಯರ್ ಎನ್‍ಟಿಆರ್ ಮೊಮ್ಮಗ ಎನ್ನುವ ಖ್ಯಾತಿ ಇದೆ. ಅಂಥ ಸ್ಟಾರ್ ಮುಂದೆ ವಿಲನ್ ಆಗುವುದು ಸಣ್ಣ ಮಾತೇನಲ್ಲ. ಅದರಲ್ಲೂ ಇಲ್ಲಿ ಹೀರೊ ಆಗಿರುವ ವಿಜಿ ಅಲ್ಲಿ ವಿಲನ್ ಆಗಿ ನಟಿಸುವುದು ರಿಸ್ಕ್ ಕೂಡ ಹೌದು. ಆದರೆ ಬಹುಶಃ ಇವರು ಮಾಡುತ್ತಿರುವ ಪಾತ್ರಕ್ಕೂ ಒಂದು ಗತ್ತು ಇದ್ದಿರಬೇಕು. ಹೀಗಾಗಿಯೇ ವಿಜಿ ಒಪ್ಪಿಕೊಂಡಿದ್ದಾರಂತೆ ಎನ್ನುವುದು ಗಾಂಧಿನಗರದ ಮಾತು.