Tag: ಜೈ ಭೀಮ್ ಸೂರ್ಯ

  • ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ

    ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ

    ಚೆನ್ನೈ: “ಜೈ ಭೀಮ್” ಚಿತ್ರದ ನಾಯಕ ನಟ ಸೂರ್ಯ ಅವರಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ. ಹೀಗಾಗಿ ನಟನ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

    ಜೈ ಭೀಮ್ ಸಿನಿಮಾದಲ್ಲಿ ತಮಿಳುನಾಡಿನ ವನ್ನಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ವನ್ನಿಯಾರ್ ಸಂಘವು ಸಿನಿಮಾ ನಿರ್ದೇಶಕರಿಗೆ ಲೀಗಲ್‌ ನೋಟಿಸ್ ನೀಡಿದೆ. ಜೊತೆಗೆ 5 ಲಕ್ಷ ರೂ. ಪರಿಹಾರಕ್ಕೂ ಆಗ್ರಹಿಸಿದೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ಸಿದ್ಧರಾದ ವಿಶಾಲ್ – ಅಪ್ಪು ಪತ್ನಿ ಅಶ್ವಿನಿ ಬಳಿ ಕೋರಿಕೆ

    ಇದರ ನಡುವೆ ಪಿಎಂಕೆ (ಪ್ರಾದೇಶಿಕ ರಾಜಕೀಯ ಪಕ್ಷ) ನಾಯಕರೊಬ್ಬರು, “ಜೈ ಭೀಮ್” ಸಿನಿಮಾದ ನಟ ಸೂರ್ಯನಿಗೆ ದೈಹಿಕವಾಗಿ ಹಲ್ಲೆ ನಡೆಸಿದವರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಟ ಸೂರ್ಯನಿಗೆ ದೈಹಿಕ ಹಲ್ಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ನಟನ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

    ವನ್ನಿಯಾರ್ ಸಮುದಾಯ ತಮಿಳುನಾಡಿನಲ್ಲಿ ಹಿಂದುಳಿದ ವರ್ಗವಾಗಿದೆ. ರಾಜ್ಯದ ಉತ್ತರ ಭಾಗದಲ್ಲಿ ಈ ಸಮುದಾಯ ಪ್ರಬಲವಾಗಿದೆ. ಈ ಸಮುದಾಯಕ್ಕೆ “ಜೈ ಭೀಮ್” ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂಬುದು ವನ್ನಿಯಾರ್ ಸಂಘದವರ ಆರೋಪವಾಗಿದೆ. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರ್ತಾನೆ: ಜಗ್ಗೇಶ್

    “ಜೈ ಭೀಮ್” ತಮಿಳು ಭಾಷೆಯ ಸಿನಿಮಾವಾಗಿದ್ದು, ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ.