Tag: ಜೈ ಭೀಮ್

  • 70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಕಾಲಿವುಡ್‌ನ (Kollywood) ಸ್ಟಾರ್ ಕಪಲ್ ಸೂರ್ಯ – ಜ್ಯೋತಿಕಾ (Jyothika) ತಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಿರುವ ಈ ಜೋಡಿ, ತೆರೆ ಹಿಂದೆ ಕೂಡ ಅದೆಷ್ಟೋ ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಸೂರ್ಯ (Suriya) ದಂಪತಿ ಇದೀಗ ಹೊಸ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಸೂರರೈ ಪೊಟ್ರು, ಜೈ ಭೀಮ್ (Jai Bheem) ಚಿತ್ರಗಳ ಮೂಲಕ ಸೂರ್ಯ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದರೆ, ಜ್ಯೋತಿಕಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಇದೀಗ ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ಮೊತ್ತದ ಅಪಾರ್ಟ್ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಗಾರ್ಡನ್ ಏರಿಯಾ, ಪಾರ್ಕಿಂಗ್, ಸ್ವಿಮ್ಮಿಂಗ್ ಫೂಲ್, ಜಿಮ್, ಥಿಯೇಟರ್ ಸೇರಿದಂತೆ ಎಲ್ಲಾ ಸೌಕರ್ಯ ಇರುವ ದುಬಾರಿ ಫ್ಲಾಟ್ ಇದಾಗಿದ್ದು, ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಇದೆಯಂತೆ. ಇನ್ನೂ 2016ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.

    ಶೀಘ್ರದಲ್ಲೇ ಸೂರ್ಯ ದಂಪತಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಪೋಷಕರ ಜೊತೆಗಿನ ಮನಸ್ತಾಪದಿಂದ ಸೂರ್ಯ- ಜ್ಯೋತಿಕಾ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಇಬ್ಬರು ಮುಂಬೈಗೆ ಶಿಫ್ಟ್ ಆಗ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಸೂರ್ಯ ಇನ್ನು ಹೆಸರಿಡದ ಐತಿಹಾಸಿಕ ಕಥಾಹಂದರ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಡಲಿದ್ದಾರೆ. ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  • ರಜನಿಯ 170ನೇ ಚಿತ್ರ ಘೋಷಿಸಿದ ಲೈಕಾ ಪ್ರೊಡಕ್ಷನ್ : ನಿರ್ದೇಶಕ ಯಾರು ಗೊತ್ತಾ?

    ರಜನಿಯ 170ನೇ ಚಿತ್ರ ಘೋಷಿಸಿದ ಲೈಕಾ ಪ್ರೊಡಕ್ಷನ್ : ನಿರ್ದೇಶಕ ಯಾರು ಗೊತ್ತಾ?

    ಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ (Lyca Production) ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾವನ್ನು (New Cinema) ಘೋಷಣೆ ಮಾಡಿದೆ. ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಹುಟ್ಟು ಹಬ್ಬದ ದಿನದಂದು ಈ ಮಹತ್ವದ ಸುದ್ದಿಯನ್ನು ಪ್ರಕಟಿಸಿದ್ದು, ಜೈ ಭೀಮ್ (Jai Bheem) ಚಿತ್ರ ಖ್ಯಾತಿಯ ಟಿ.ಜಿ ಜ್ಞಾನವೇಲ್ (Gnanavel) ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿಕೊಂಡಿದೆ.

    ಸದ್ಯ ರಜನಿಕಾಂತ್ 169ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜೈಲರ್ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡದಿಂದ ಶಿವರಾಜ್ ಕುಮಾರ್, ಮಲಯಾಳಂನಿಂದ ಮೋಹನ್ ಲಾಲ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಮಂಗಳೂರು ಸೇರಿದಂತೆ ದೇಶದ ನಾನಾ ಕಡೆ ಚಿತ್ರೀಕರಣವಾಗಿದೆ. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ 170ನೇ ಸಿನಿಮಾದಲ್ಲಿ ತೊಡಗಲಿದ್ದಾರೆ ರಜನಿ.

    ಜೈ ಭೀಮ್ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ಜ್ಞಾನವೇಲು, ಮತ್ತೊಂದು ಹೊಸ ಕಥೆಯೊಂದಿಗೆ ಲೈಕಾ ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದಾರೆ. ರಜನಿಕಾಂತ್ ಗಾಗಿಯೇ ಅವರು ಹೊಸ ಬಗೆಯ ಪಾತ್ರವನ್ನು ಬರೆದುಕೊಂಡಿದ್ದು, ಈ ಮೂಲಕ ಮತ್ತೊಂದು ಸಮಾಜಮುಖಿ ಸಿನಿಮಾವನ್ನು ನೀಡಲಿದ್ದಾರಂತೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

     

    ಲೈಕಾ ಪ್ರೊಡಕ್ಷನ್ ಈ ಮೊದಲು ರಜನಿಕಾಂತ್ ನಟನೆಯ ದರ್ಬಾರ್ ಮತ್ತು ಕಾಲ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೇ ಮೊದಲ ಬಾರಿಗೆ ಜ್ಞಾನವೇಲ್ ಚಿತ್ರಕ್ಕೆ ಹಣ ಹೂಡುತ್ತಿದೆ. ಹೆಸರಾಂತ ಸಂಸ್ಥೆಯ ಜೊತೆಗೆ ಹೆಸರಾಂತ ನಟ ಮತ್ತು ಪ್ರತಿಭಾವಂತ ನಿರ್ದೇಶಕ ಒಟ್ಟಾಗಿರುವುದರಿಂದ ರಜನಿಯ 170ನೇ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.

  • ಸೂರ್ಯ ನಟನೆಯ `ಜೈ ಭೀಮ್’ ಪಾರ್ಟ್‌ 2 ಬರುತ್ತಾ? ಇಲ್ಲಿದೆ ಅಪ್‌ಡೇಟ್‌

    ಸೂರ್ಯ ನಟನೆಯ `ಜೈ ಭೀಮ್’ ಪಾರ್ಟ್‌ 2 ಬರುತ್ತಾ? ಇಲ್ಲಿದೆ ಅಪ್‌ಡೇಟ್‌

    ಕಾಲಿವುಡ್‌ನಲ್ಲಿ (Kollywood)  `ಜೈ ಭೀಮ್’ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ನಟ ಸೂರ್ಯ ಅವರ ಲಾಯರ್ ಗತ್ತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಈ ಚಿತ್ರದ ಪಾರ್ಟ್ 2 ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ.

    `ಜೈ ಭೀಮ್’ (Jai Bhim) ಸಿನಿಮಾ ನೋಡಿ ಇಷ್ಟಪಟ್ಟವರಿಗೆ ಇದೀಗ ಈ ವಿಚಾರ ನಿಜಕ್ಕೂ ಸಿಹಿ ಸುದ್ದಿ ಎಂದೇ ಹೇಳಬಹುದು. ಸಂಕಷ್ಟದಲ್ಲಿರುವವರ ಪರ ನಿಂತು ಖಡಕ್ ವಕೀಲ ಪಾತ್ರದಲ್ಲಿ ನಟ ಸೂರ್ಯ (Actor Surya)  ಕಮಾಲ್ ಮಾಡಿದ್ದರು. ಇದೀಗ ಇದೇ ಚಿತ್ರದ ಪಾರ್ಟ್ 2 ಅನ್ನು ತೆರೆಗೆ ತರೋದರ ಬಗ್ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್

    ಜ್ಞಾನ್‌ವೇಲ್ ನಿರ್ದೇಶನದಲ್ಲಿ `ಜೈ ಭೀಮ್’ ಮೂಡಿ ಬಂದಿತ್ತು. ಇದೀಗ ಸೌತ್‌ನ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ನಿರ್ಮಾಣದಲ್ಲಿ ಜೈ ಭೀಮ್ ಪಾರ್ಟ್ 2ಗೆ ಮಾತುಕತೆ ನಡೆದಿದೆ. ಸದ್ಯದಲ್ಲಿ ಈ ಚಿತ್ರದ ಸೀಕ್ವೇಲ್ ಚಿತ್ರೀಕರಣ ಕೂಡ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಜೈ ಭೀಮ್: ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ

    ಜೈ ಭೀಮ್: ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ

    ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ತಮಿಳಿನ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ತಂಡಕ್ಕೆ ಬಂಧನದ ಭೀತಿ ಎದುರಾಗಿದೆ. ಒಂದೊಳ್ಳೆ ಆಶಯ, ವಿಚಾರವನ್ನಿಟ್ಟುಕೊಂಡು ನಿರ್ಮಾಣ ಮಾಡಿದ ಚಿತ್ರತಂಡದ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಚೆನ್ನೈ ಕೋರ್ಟ್ ಪೊಲೀಸ್ ರಿಗೆ ಆದೇಶಿಸಿದೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಜೈ ಭೀಮ್ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯದ ಜನರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ‘ರುದ್ರ ವನ್ನಿಯಾರ್ ಸೇನಾ’ ಸಂಘಟನೆಯು ಈ ಹಿಂದೆ ಕೇಸ್ ದಾಖಲಿಸಿತ್ತು. ನಿರ್ದೇಶಕ ಜ್ಞಾನವೇಲ್, ನಿರ್ಮಾಪಕಿ ಜ್ಯೋತಿಕಾ ಮತ್ತು ನಟ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಹೇಳಲಾಗಿತ್ತು. ಆದರೆ, ಪೊಲೀಸ್ ರು ಎಫ್.ಐ.ಆರ್ ದಾಖಲಿಸಿರಲಿಲ್ಲ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಬುಡಕಟ್ಟು ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ದೃಶ್ಯಗಳಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನಕಾರಿಯಂತೆ ಚಿತ್ರಿಸಲಾಗಿದೆ. ಅದರಿಂದ ಆ ಸಮುದಾಯದವರಿಗೆ ತುಂಬಾ ನೋವಾಗಿದೆ ಎಂದು ದೂರದಾರರು ಆರೋಪಿಸಿದ್ದರು. ಏ.29 ರಂದು ಈ ಪ್ರಕರಣವನ್ನು ವಿಚಾರಣೆಗೆ ತಗೆದುಕೊಂಡಿದ್ದ ನ್ಯಾಯಾಧೀಶರು ‘ನಟ, ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ.20ರಂದು ನಡೆಯಲಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಬಾಕ್ಸ್ ಆಫೀಸನಲ್ಲಿ ಸಖತ್ ಸದ್ದು ಮಾಡಿ, ಸದ್ಯ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಜೈ ಭೀಮ್ ಚಿತ್ರವು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ಜನರಿಂದಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೈ ಭೀಮ್ ಒಂದೊಳ್ಳೆ ಸಂದೇಶ ನೀಡಿದ ಚಿತ್ರ ಎಂಬ ಪ್ರಶಂಸೆಗೂ ಪಾತ್ರವಾಗಿತ್ತು. ಇದೀಗ  ಚಿತ್ರತಂಡಕ್ಕೆ ಅದು ಸಂಕಷ್ಟ ತಂದಿದೆ.