Tag: ಜೈಶ್-ಎ-ಮೊಹಮ್ಮದ್

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಘಟನೆ ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ನಾಲ್ವರು ಶಂಕಿತ ಉಗ್ರರನ್ನು ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.

    ಶುಕ್ರವಾರ (ಸೆ.20) ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ದೋಡಾ-ಉಧಂಪುರ ಗಡಿಯ ಬಳಿ ಗುಂಡಿನ ಚಕಮಕಿ ನಡೆದಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಇದೇ ವೇಳೆ ಜೈಶ್-ಎ-ಮೊಹಮ್ಮದ್ ಸಂಘಟನೆಯವರು ಎನ್ನಲಾದ ನಾಲ್ವರು ಶಂಕಿತ ಉಗ್ರರು ಭದ್ರತಾ ಪಡೆಯ ಬಲೆಗೆ ಬಿದ್ದಿದ್ದಾರೆ.ಇದನ್ನೂ ಓದಿ: ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ, ಜನರೇ ಬರೆಸಿದ್ದಾರೆ: ಶಿವರಾಜ ತಂಗಡಗಿ

    ಈ ಕುರಿತು ಸೇನೆ ಮಾಹಿತಿ ನೀಡಿದ್ದು, ಭದ್ರತಾ ಪಡೆ ಹಾಗೂ ಪೊಲೀಸರು ನಿರ್ದಿಷ್ಟ ಮಾಹಿತಿಯ ಮೇರೆಗೆ ದೋಡಾ-ಉಧಂಪುರ ಗಡಿಯ ದುಡು ಬಸಂತ್‌ಗಢದ ಎತ್ತರ ಪ್ರದೇಶಕ್ಕೆ ತಲುಪಿದಾಗ ಗುಂಡಿನ ಚಕಮಕಿ ನಡೆದಿದೆ. ದಾಳಿ ವೇಳೆ ಯೋಧರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  • ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಇಸ್ಲಾಮಾಬಾದ್‌/ವಾಷಿಂಗ್ಟನ್‌: ಜೈಶ್‌ ಎ ಮೊಹಮ್ಮದ್‌ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ (Brad Sherman) ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೇ ಜೈಶ್‌ ಸಂಘಟನೆಯ ನೀಚ ಕೃತ್ಯಗಳನ್ನು ಪಾಕಿಸ್ತಾನದ ಮಾಜಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನಿ ನಿಯೋಗವನ್ನು (Pakistani delegation) ವಾಷಿಂಗ್ಟನ್‌ನಲ್ಲಿ ಭೇಟಿಯಾದ ಶೆರ್ಮನ್, ಜೆಇಎಂನ ನೀಚ ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ

    Bilawal Bhutto Zardari

    ಪಾಕ್‌ ಮುಖವಾಡ ಬಯಲು ಮಾಡಲು ಭಾರತ ಕಳುಹಿಸಿರುವ ಸಂಸದ ಶಶಿ ತರೂರ್‌ ನೇತೃತ್ವದ ಸರ್ವಪಕ್ಷ ನಿಯೋಗ ಸಹ ವಾಷಿಂಗ್ಟನ್‌ನಲ್ಲಿದ್ದು, ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಹಾಗೂ ಪಾಕ್‌ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹಫೀಜ್ ಅಬ್ದುರ್ ರೌಫ್ ಉಗ್ರನಲ್ಲ, ಧರ್ಮಗುರು – ವಿಶ್ವಸಂಸ್ಥೆಯಲ್ಲಿ ಪಾಕ್‌ ಮಾಜಿ ಸಚಿವನ ಮೊಂಡುವಾದ

    ಈ ನಡುವೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಬ್ರಾಡ್‌ ಶೆರ್ಮನ್‌, ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವದನ್ನು ನಾನು ಪಾಕಿಸ್ತಾನಿ ನಿಯೋಗಕ್ಕೆ ತಿಳಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚಿಸಿದ್ದೇನೆ. 2002ರಲ್ಲಿ ಜೈಶ್ ಉಗ್ರರು ನನ್ನ ಕ್ಷೇತ್ರದ ನಿವಾಸಿಯೂ ಆಗಿರುವ ಪತ್ರಕರ್ತ ಡೇನಿಯಲ್ ಪರ್ಲ್‌ರನ್ನ ಹತ್ಯೆಗೈದಿದ್ದರು. ಅವರ ಕುಟುಂಬ ಇನ್ನೂ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದೆ. ಡೇನಿಯಲ್ ಪರ್ಲ್ ಅಪಹರಣ ಮತ್ತು ಕೊಲೆಯಲ್ಲಿ ಭಯೋತ್ಪಾದಕ ಒಮರ್ ಸಯೀದ್ ಶೇಖ್ ಶಿಕ್ಷೆಗೊಳಗಾಗಿದ್ದಾನೆ ಎಂದು ವಿವರಿಸಿದ್ದಾರೆ.

    ಜೈಶ್ ಸಂಘಟನೆ ಪಾತ್ರ ಏನು?
    ಜೈಶ್-ಎ-ಮೊಹಮ್ಮದ್ ಅನ್ನು ವಿಶ್ವಸಂಸ್ಥೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. 2019ರ ಪುಲ್ವಾಮಾ ದಾಳಿಯಂತಹ ಅನೇಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ಅಲ್ಪಸಂಖ್ಯಾತರ ಬಗ್ಗೆ ಕಳವಳ
    ಭಯೋತ್ಪಾದನೆಯ ನಿರ್ಮೂಲನೆ ಬಗ್ಗೆ ಬಲವಾದ ಸಂದೇಶ ನೀಡಿರುವ ಶೆರ್ಮನ್‌, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಅಹ್ಮದೀಯ ಮುಸ್ಲಿಮರು ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಯವಿಲ್ಲದಂತೆ ಸ್ವತಂತ್ರರಾಗಿರುವಂತೆ ನೋಡಿಕೊಳ್ಳಬೇಕು ಅಂತಲೂ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

  • ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    ಶ್ರೀನಗರ: ಜಮ್ಮು ಕಾಶ್ಮೀರದ (Jammu And Kashmir) ತ್ರಾಲ್ (Tral) ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಆತನ ತಾಯಿ ಶರಣಾಗುವಂತೆ ಬೇಡಿಕೊಂಡಿದ್ದಾರೆ.

    ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ ನಾಡರ್ ಮತ್ತು ತ್ರಾಲ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಮೂವರು ಜೈಶ್ ಉಗ್ರರನ್ನು ಹೊಡೆದುರುಳಿಸಿದೆ. ಈ ಎನ್‌ಕೌಂಟರ್ ಮುನ್ನ ಜೈಶ್ ಎ ಮೊಹಮ್ಮದ್ ಉಗ್ರ ಅಮೀರ್ ನಜೀರ್ (Amir Nazir Wani) ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ಆತನ ತಾಯಿ ನೀನು ಶರಣಾಗು, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ.ಇದನ್ನೂ ಓದಿ: ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

    ವೈರಲ್ ಆಗಿರುವ ವಿಡಿಯೋದಲ್ಲಿ, ಉಗ್ರ ಅಮೀರ್ ನಜೀರ್ ಎಕೆ-47 ಗನ್ ಹಿಡಿದುಕೊಂಡು ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ವೇಳೆ ಮನೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ತಾಯಿ ಹಾಗೂ ಸಹೋದರಿ ಜೊತೆ ಮಾತನಾಡಿದ್ದು, ಸಹೋದರನ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ತಾಯಿ ನೀನು ಶರಣಾಗಿ, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ. ಜೊತೆಗೆ ಆತನ ಕುಟುಂಬಸ್ಥರು ಕೂಡ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಮೀರ್, ಸೇನೆ ಮುಂದೆ ಬರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

    ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್‌ಕೌಂಟರ್ ಇದಾಗಿದೆ. ಹತರಾದ ಮೂವರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜೊತೆಗೆ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

    ಈ ವಿಡಿಯೋ ಅಲ್ಲದೇ ಉಗ್ರರು ಕಟ್ಟಡದಲ್ಲಿ ಅವಿತಿದ್ದ ಕೊನೆ ಕ್ಷಣದ ವಿಡಿಯೋ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಸೋನು ನಿಗಮ್‍ಗೆ ಬಿಗ್ ರಿಲೀಫ್ – ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

  • ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

    ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮಾದಲ್ಲಿ (Pulwama) ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಜೈಶ್‌ ಉಗ್ರರನ್ನು (JEM Terrorists) ಹತ್ಯೆ ಮಾಡಿರುವುದಾಗಿ ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ (Awantipora) ನಾಡರ್‌ ಮತ್ತು ಟ್ರಾಲ್‌ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಉಗ್ರರನ್ನು ಹೊಡೆದುರುಳಿಸಿದೆ. ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್‌ಕೌಂಟರ್‌ ಇದಾಗಿದೆ. ಹತ್ಯೆಗೀಡಾದ ಮೂವರು ಜೈಶ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮಣಿಪುರದ ಚಾಂದೆಲ್‌ನಲ್ಲಿ ಎನ್‌ಕೌಂಟರ್‌ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

    ಇದಕ್ಕೂ ಮುನ್ನ ಮಂಗಳವಾರ (ಮೇ 13) ಶೋಪಿಯಾನ್ (Shopian) ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಉನ್ನತ ಭಯೋತ್ಪಾದಕ ಕಮಾಂಡರ್ ಶಾಹಿದ್ ಕುಟ್ಟಯ್, ಹರಿಸ್ ನಜೀರ್, ಅದ್ನಾನ್ ಶಫಿ ಎಂಬ ಮೂವರು ಉಗ್ರರನ್ನ ಹತ್ಯೆಗೈಯಲಾಗಿತ್ತು. ಇದನ್ನೂ ಓದಿ: ಚೀನಿ ಏರ್‌ ಡಿಫೆನ್ಸ್‌ ಜಾಮ್‌ ಮಾಡಿ 23 ನಿಮಿಷದಲ್ಲಿ ಮುಗಿಯಿತು ಕಾರ್ಯಾಚರಣೆ – ಭಾರತದ ದಾಳಿಯ ರೋಚಕ ಕಥೆ ಓದಿ

    ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಭಯೋತ್ಪಾದಕರು ಪ್ರತಿದಾಳಿ ನಡೆಸಿದ್ದರು. ಇದು ಪರಸ್ಪರರ ನಡುವೆ ಗುಂಡಿನ ಚಕಮಕಿಗೆ ಕಾರಣವಾಗಿತ್ತು. ಇದನ್ನೂ ಓದಿ: ಉಗ್ರರ ವಿರುದ್ಧ ಸಿಡಿದೆದ್ದ ಭಾರತ – ‘ಆಪರೇಷನ್‌ ಸಿಂಧೂರ’ಗೆ ಜೈ ಎಂದ ಬ್ರಿಟಿಷ್‌ ಸಂಸದ

    ಇಂದು ಮತ್ತೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಜೈಶ್‌ ಉಗ್ರರನ್ನ ಹತ್ಯೆಗೈಯಲಾಗಿದೆ. ಇದನ್ನೂ ಓದಿ: ಮೇಲುಕೋಟೆ | ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ – ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

  • ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್, ಜೈಶ್‍ನ ‘ಬಾಂಬ್ ಎಕ್ಸ್ ಪರ್ಟ್’ ಎನ್‍ಕೌಂಟರ್

    ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್, ಜೈಶ್‍ನ ‘ಬಾಂಬ್ ಎಕ್ಸ್ ಪರ್ಟ್’ ಎನ್‍ಕೌಂಟರ್

    – ಉಗ್ರ ರಿಯಾಜ್ ಹತ್ಯೆ ಬಳಿಕ ಮತ್ತೊಂದು ಯಶಸ್ವಿ ಕಾರ್ಯಾಚರಣೆ
    – ಕಾರ್ ಬಾಂಬ್ ಮಿಸ್ಸಿಂಗ್

    ಶ್ರೀನಗರ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಾಂಬ್ ತಯಾರಿಕ ಎಕ್ಸ್ ಪರ್ಟ್ ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಬಾಯ್ ಸೇರಿದಂತೆ ಮೂವರು ಉಗ್ರರು ಇಂದು ನಡೆದ ಎನ್‍ಕೌಂಟರಿನಲ್ಲಿ ಸಾವನ್ನಪ್ಪಿದ್ದಾರೆ. ಉಗ್ರ ರಿಯಾಜ್ ನೈಕೋ ಎನ್‍ಕೌಂಟರ್ ಬಳಿಕ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

    ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಹಳ್ಳಿಯೊಂದರಲ್ಲಿ ಭಾರತೀಯ ಸೇನೆ, ಕಾಶ್ಮೀರ ಪೊಲೀಸ್ ಹಾಗೂ ಸಿಆರ್ ಪಿಎಫ್ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರರನ್ನು ಎನ್‍ಕೌಂಟರ್ ಮಾಡಲಾಗಿದೆ. ಘಟನೆಯಲ್ಲಿ ಸೇನೆಯ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮೃತ ಫೌಜಿ ಬಾಯ್ ಪಾಕಿಸ್ತಾನಿ ಪ್ರಜೆಯಾಗಿದ್ದು, ದೇಶದಲ್ಲಿ ರಕ್ಷಣಾ ಪಡೆಗಳಿಗೆ ಬಹುದೊಡ್ಡ ಸಮಸ್ಯೆಯಾಗಿದ್ದ. ಐಇಡಿ ಬಾಂಬ್ ತಯಾರಿಕೆಯಲ್ಲಿ ಎಕ್ಸ್ ಪರ್ಟ್, ಜೆಇಎಂ ಉಗ್ರ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಎಂದು ಕಾಶ್ಮೀರಿ ರೇಂಜ್‍ನ ಐಜಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ. ಫೌಜಿ ಎನ್‍ಕೌಂಟರ್, ರಿಯಾಜ್ ನೈಕೋ ಸಾವಿನ ಬಳಿಕ ಭಾರತ ಸೇನೆಗೆ ಉಗ್ರರ ವಿರುದ್ಧ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.

    ಸೇನೆಗೆ ಸೋಮವಾರ ಬೆಳಗ್ಗೆ ಮೂವರು ಪಾಕಿಸ್ತಾನಿ ಶಸ್ತ್ರಸಜ್ಜಿತ ಉಗ್ರರು ಎನ್‍ಕೌಂಟರ್ ನಡೆದಿತ್ತು. ಕಳೆದ ತಿಂಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಾಹೀದ್ದಿನ್ ಮುಖ್ಯಸ್ಥ ರಿಯಾಜ್ ನೈಕೂನನ್ನು ಸೇನೆ ಹೊಡೆದುರುಳಿಸಿತ್ತು. ಇತ್ತೀಚೆಗೆ ಭದ್ರತಾ ಪಡೆಗಳು ಫೌಜಿ ಬಾಯ್ ತಯಾರಿಸಿದ್ದ ಮೂರು ಕಾರು ಬಾಂಬ್‍ಗಳಲ್ಲಿ ಒಂದನ್ನು ಪತ್ತೆ ಮಾಡಿ ಸ್ಫೋಟಿಸಿದ್ದರು. ಆದರೆ ಮತ್ತೆರಡು ಕಾರ್ ಬಾಂಬ್‍ಗಳು ಪತ್ತೆಯಾಗಬೇಕಿದೆ. ಬುಡ್ಗಾಮ್ ಮತ್ತು ಕುಲ್ಗಮ್ ಪ್ರದೇಶಗಳಲ್ಲಿ ಮತ್ತೆರಡು ಬಾಂಬ್ ಕಾರುಗಳು ಇರುವ ಬಗ್ಗೆ ಭದ್ರತಾ ಪಡೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಉಗ್ರ ಮಸೂದ್ ಅಜರ್‍ನ ಸಹೋದರ ಫೌಜಿ ಬಾಯ್ ಎಂಬ ಮಾಹಿತಿ ಲಭಿಸಿದೆ.

    ಮಸೂದ್ ಅಜರ್ ನನ್ನು 1991 ಭಾರತ ಸೇನೆ ಜಮ್ಮು ಕಾಶ್ಮೀರದಲ್ಲಿ ಬಂಧಿಸಿತ್ತು. ಆದರೆ 1999ರಲ್ಲಿ ವಿಮಾನ ಅಪಹರಿಸಿ ಅಜರ್ ಮಸೂದ್‍ನನ್ನು ಬಿಡುಗಡೆಗೊಳಿಸುವಲ್ಲಿ ಉಗ್ರರು ಯಶಸ್ವಿಯಾಗಿದ್ದರು. ಆ ಬಳಿಕ ಭಾರತದಲ್ಲಿ ನಡೆದಿದ್ದ ಪ್ರಮುಖ ದಾಳಿಗಳಲ್ಲಿ ಮಸೂದ್ ಕಾರಣನಾಗಿದ್ದ. ಇನ್ನು ಉಗ್ರ ಫೌಜಿ ಭಾಯ್‍ನನ್ನು ಲಂಬೂ, ಅದ್ನಾನ್ ಹಾಗೂ ಜಬ್ಬಾರ್ ಎಂದೂ ಕರೆಯಲಾಗುತ್ತದೆ. ಪುಲ್ವಾಮಾ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್‍ಗಳಲ್ಲಿ ಫೌಜಿ ಬಾಯ್ ಕೂಡ ಒಬ್ಬ.

  • ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

    ನವದೆಹಲಿ: ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಉಗ್ರರು ಸಂಚು ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಏಳು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ಕಾಶ್ಮೀರ ಕಣಿವೆಯಲ್ಲಿ ಮತ್ತು ಭಾರತದ ಏಳು ರಾಜ್ಯಗಳಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ತಿಳಿಸಿದೆ.

    ಈ ಮಾಹಿತಿಯ ಪ್ರಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ) ಭಯೋತ್ಪಾದಕ ಸಂಘಟನೆಗೆ ದಾಳಿ ನಡೆಸಲು ಸಹಾಯ ಮಾಡುತ್ತಿದೆ. 2019 ರ ಫೆಬ್ರವರಿಯ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸೇನೆ, ಪೊಲೀಸ್ ಮತ್ತು ಇತರ ಕಾನೂನು ಜಾರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ವರದಿಯಾಗಿದೆ.

    ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ತನ್ನ ದುಷ್ಕೃತ್ಯದ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದ್ದರಿಂದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಆಗಸ್ಟ್ 15ರ ವರೆಗೆ ದೇಶದಲ್ಲಿ ಇರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಎಚ್ಚರಿಕೆ ನೀಡಿದೆ. ಆಗಸ್ಟ್ 10 ರಿಂದ 20 ರವರೆಗೆ ಬೋರ್ಡಿಂಗ್ ಪಾಸ್ ಇರುವ ಪ್ರಯಾಣಿಕರನ್ನು ಮಾತ್ರ ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಪ್ರಯಾಣಿಕರ ಜೊತೆ ಬರುವ ಇತರರ ಪ್ರವೇಶವನ್ನು ನಿರ್ಬಂಧ ಮಾಡಲಾಗುತ್ತದೆ.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಂಡಿದೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

  • ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಕಣಿವೆ ಪ್ರದೇಶಕ್ಕೆ ಐದು ಜನ ಉಗ್ರರು ನುಸುಳಿದ್ದಾರೆ. ಈ ಉಗ್ರರು ಕಣಿವೆಯಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿ.ಆರ್‍.ಪಿ.ಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ದೇವಾಲಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯಿಂದಾಗಿ ಪ್ರಾರ್ಥನ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆಯಿಂದ ಅಮರನಾಥ ಯಾತ್ರೆಯ ಕೆಲವು ಊಟದ ಗೃಹಗಳನ್ನು ಸಹ ಮುಚ್ಚಲಾಗಿದೆ. ಈ ಕಾರ್ಯಾಚರಣೆ ನಡೆಸಲು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯಗಳನ್ನು ಬಲಪಡಿಸುವ ಸಲುವಾಗಿ ಸುಮಾರು 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ನಿಯೋಜಿಸಿತ್ತು. ಈ ನಿರ್ಧಾರದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 25,000 ಅರೆಸೈನಿಕ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿದೆ.

  • ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ನವದೆಹಲಿ: ಬಾಲಕೋಟ್ ನಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರು ಭಾರತದ ಒಳಗೆ ನುಸುಳಲು ಪಾಕ್ ಆಕ್ರಮಿತ ಕಾಶ್ಮೀರದಿಂದ ನಾಲ್ಕು ಮಾರ್ಗಗಳನ್ನು ಬಳಸುತ್ತಿದ್ದರು ಎಂಬುದನ್ನು ಸೇನೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಬಾಲಕೋಟ್-ಕೆಲ್-ದುಢ್‍ನಿಯಾಲ್, ಬಾಲಕೋಟ್-ಕೆಲ್-ಕೈಂತಾವಾಲಿ, ಬಾಲಕೋಟ್-ಕೆಲ್-ಲೋಲಾಬ್ ಮತ್ತು ಬಾಲಕೋಟ್-ಕೆಲ್-ಕಚಾಮಾ-ಕ್ರಾಲ್‍ಪೋರಾ ಎಂಬ ನಾಲ್ಕು ಮಾರ್ಗಗಳನ್ನು ಭಾರತದೊಳಗೆ ಬರಲು ಉಗ್ರರು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

    ಬಾಲ್‍ಕೋಟ್- ಕೆಲ್ ಪಿಓಕೆಯಲ್ಲಿದ್ದರೆ, ದುಢ್‍ನಿಯಾಲ್ ಕಾಶ್ಮೀರದ ಕುಪ್ವಾರದಲ್ಲಿದೆ. ಕೈಂತಾವಾಲಿ, ಕಚಾಮಾ, ಕ್ರಾಲ್‍ಪೋರಾ ಮತ್ತು ಲೋಲಾಬ್ ಕುಪ್ವಾರದ ಮಗಂ ಅರಣ್ಯದಲ್ಲಿದೆ. ಬಾಲಕೋಟ್ ನಲ್ಲಿ ಮೂರು ತಿಂಗಳು ತರಬೇತಿ ಪಡೆದುಕೊಂಡ ಉಗ್ರರು ಈ ಮಾರ್ಗಗಳ ಮೂಲಕ ಭಾರತ ಪ್ರವೇಶಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.

    ಗನ್ ಹಿಡಿಯೋದು ಸೇರಿದಂತೆ ಪ್ರಾಥಮಿಕ ತರಬೇತಿ ಪಡೆದ ಉಗ್ರರನ್ನು ಬಾಲಕೋಟ್ ಗೆ ರವಾನಿಸಲಾಗುತ್ತಿತ್ತು ಬಾಲಕೋಟ್ ನಲ್ಲಿ ಉಗ್ರರಿಗೆ ಎಕೆ-47, ಪಿಕಾ, ಎಲ್‍ಎಂಜಿ, ರಾಕೆಟ್ ಉಡಾವಣೆ, ಯುಬಿಜಿಎಲ್ ಮತ್ತು ಗ್ರೆನೆಡ್ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಇದೇ ವೇಳೆ ಸ್ವಿಮಿಂಗ್, ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಸಲಾಗುತ್ತಿತ್ತು. ಈ ಉಗ್ರರ ತರಬೇತಿ ಶಿಬಿರವನ್ನು ‘ಮದ್ರಸಾ ಆಯೇಷಾ ಸಾದಿಕ್’ ಹೆಸರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.

    ಬಾಲಕೋಟ್ ಶಿಬಿರದಲ್ಲಿ 25ರಿಂದ 27 ಜನರ ಮೇಲ್ವಿಚಾರಣೆಯಲ್ಲಿ ಸುಮಾರು 325 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದರು. ಫೆಬ್ರವರಿ 14ರದಂದು ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಗಡಿರೇಖೆಯನ್ನು ದಾಟಿ ಮೂರು ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು.

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv