Tag: ಜೈಶ್ರೀರಾಮ್

  • ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಗಾ ಟೀಕೆ

    ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಗಾ ಟೀಕೆ

    ಭೋಪಾಲ್:‌ ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಬಯಸುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಟೀಕಿಸಿದ್ದಾರೆ.

    ಜೈ ಶ್ರೀರಾಮ್ ಕೂಗಿದ ಬಿಜೆಪಿ ಕಾರ್ಯಕರ್ತರು: ಇಂದು ಮಧ್ಯಪ್ರದೇಶದ (Madhya Pradesh) ಸಾರಂಗ್‌ಪುರದಿಂದ ಪುನರಾರಂಭಗೊಂಡ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ (Bharat Jodo Nyay Yatre) ಮಾತನಾಡುತ್ತಾ, ದೇಶದಲ್ಲಿ ನಿರುದ್ಯೋಗದ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ರಾಹುಲ್‌ ಗಾಂಧಿಯನ್ನು ಬಿಜೆಪಿ ಕಾರ್ಯಕರ್ತರು ಮೋದಿ.. ಮೋದಿ.. ಮತ್ತು ಜೈ ಶ್ರೀರಾಮ್ (Jai Shree Ram) ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕನಿಗೆ ಆಲೂಗೆಡ್ಡೆಯನ್ನು ನೀಡಿ, ಬದಲಾಗಿ ಚಿನ್ನ ನೀಡುವಂತೆ ಕೇಳಿಕೊಂಡ ಪ್ರಸಂಗವೂ ನಡೆಯಿತು.

    ಬಿಜೆಪಿ ಕಾರ್ಯಕರ್ತರ ಘೋಷಣೆಗಳನ್ನು ಸ್ವಾಗತಿಸಿದ ರಾಹುಲ್ (Rahul Gandhi), ನಿರುದ್ಯೋಗದ ವಿರುದ್ಧ ಪ್ರಧಾನಿಯನ್ನು ಟೀಕಿಸಿದರು. ಯುವ ನಿರುದ್ಯೋಗಿಗಳು ಸೋಶಿಯಲ್‌ ಮೀಡಿಯಾದಲ್ಲಿ ದಿನವಿಡೀ ರೀಲ್‌ಗಳನ್ನು ನೋಡುತ್ತಿರುತ್ತಾರೆ ಎಂದು ಹೇಳಿದರು. ನೀವು ದಿನವಿಡೀ ನಿಮ್ಮ ಫೋನ್‌ಗಳನ್ನು ನೋಡಬೇಕು, ಜೈ ಶ್ರೀ ರಾಮ್ ಎಂದು ಜಪಿಸಬೇಕು. ಜೊತೆಗೆ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

    ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಕುರಿತು ಪ್ರತಿಕ್ರಿಯಿಸಿ, ಹಿಂದೆ ಸಶಸ್ತ್ರ ಪಡೆಗಳು ಯುವಕರಿಗೆ ಒಂದೆರಡು ಗ್ಯಾರಂಟಿಗಳನ್ನು ನೀಡುತ್ತಿದ್ದವು. ಮೊದಲನೆಯದಾಗಿ ಯುವಕರಿಗೆ ಪಿಂಚಣಿ ಹಾಗೂ ಎರಡನೆಯದಾಗಿ ಒಂದು ವೇಳೆ ಪ್ರಾಣ ಕಳೆದುಕೊಂಡರೂ ಗೌರವ ಸಿಗುತ್ತಿತ್ತು. ಆದರೆ ಈಗ ಅಗ್ನಿವೀರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ನಾಲ್ಕು ಜನರನ್ನು ಸೇರ್ಪಡೆಗೊಳಿಸಲಾಗುವುದು. ಈ ನಾಲ್ವರಲ್ಲಿ ಮೂವರು ರಿಲೀವ್ ಆಗುತ್ತಾರೆ. ಈ ಮೂರು ಜನರು SC, ST ಮತ್ತು OBC ಆಗಿರುತ್ತಾರೆ ಎಂದು ಅವರು ಹೇಳಿದರು.

    ಮೂರು ದಿನಗಳಲ್ಲಿ ಇದು ಎರಡನೇ ಬಾರಿಗೆ ರಾಹುಲ್ ಗಾಂಧಿ ನಿರುದ್ಯೋಗದ ಬಗ್ಗೆ ಪ್ರಧಾನಿಯನ್ನು ಟೀಕಿಸಿದ್ದಾರೆ. ಭಾನುವಾರ ಗ್ವಾಲಿಯರ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಗಾ, ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ದುಪ್ಪಟ್ಟು ಇದೆ. ದೇಶದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತಲೂ ಜಾಸ್ತಿ ಇದೆ. ಭಾರತದ ನಿರುದ್ಯೋಗವು ಕಳೆದ 40 ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಅವರು ಹೇಳಿದರು.

  • ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್‌ ಈಗ ಜೈ ಶ್ರೀರಾಮ್‌ ಜಪಿಸ್ತಿದೆ: ಮೋದಿ ವಾಗ್ದಾಳಿ

    ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್‌ ಈಗ ಜೈ ಶ್ರೀರಾಮ್‌ ಜಪಿಸ್ತಿದೆ: ಮೋದಿ ವಾಗ್ದಾಳಿ

    ಚಂಡೀಗಢ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಡ, ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ (Jai Siya Ram) ಅಂತಾ ಘೋಷಣೆ ಕೂಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹರ್ಯಾಣದ ರೇವಾರಿಯಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು AIIMS ಸಂಸ್ಥೆಯ ಅಡಿಪಾಯವನ್ನು ಹಾಕಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ನಾನು ಕೊಟ್ಟಿದ್ದ ಕೆಲವೊಂದು ಭರವಸೆಗಳನ್ನು ಈಡೇರಿಸಿದ್ದೇನೆ. ದೇಶವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು (Ram Mandir) ಬಯಸಿತ್ತು. ಅದು ಈಡೇರಿದೆ ಎಂದರು.

    ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಕಾಂಗ್ರೆಸ್ ದಶಕಗಳಿಂದ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಕಿಡಿಕಾರಿದರು. ಭಾರತವು ಇಂದು ವಿಶ್ವದಲ್ಲಿಯೇ ಎತ್ತರದ ಸ್ಥಾನವನ್ನು ಅಲಂಕರಿಸಿದೆ. ಇದು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

    ಇದೇ ವೇಳೆ ಈ ವಾರ ತಮ್ಮ ಯುಎಇ ಮತ್ತು ಕತಾರ್ ಭೇಟಿಯನ್ನು ಉಲ್ಲೇಖಿಸಿದ ಅವರು, ಭಾರತಕ್ಕೆ ಈಗ ಪ್ರತಿಯೊಂದು ಮೂಲೆಯಿಂದಲೂ ಗೌರವ ಸಿಗುತ್ತದೆ. ಕೇವಲ ಮೋದಿಯವರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಈ ಗೌರವ ಸಿಗುತ್ತದೆ ಎಂದು ಮೋದಿ ಹೇಳಿದರು.

    ಪ್ರಜಾಪ್ರಭುತ್ವದಲ್ಲಿ ಸೀಟುಗಳು ಮುಖ್ಯ, ಆದರೆ ನನಗೆ ಜನರ ಆಶೀರ್ವಾದವೇ ದೊಡ್ಡ ಆಸ್ತಿ ಎಂದು ಅವರು ಹೇಳಿದರು.

  • ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ

    ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ

    ಬೆಂಗಳೂರು: ರಾಜ್ಯದಲ್ಲಿ ಧ್ವಜ ದಂಗಲ್ ತೀವ್ರಗೊಂಡಿರುವ ಹೊತ್ತಲ್ಲಿಯೇ ವಿಧಾನಮಂಡಲ ಅಧಿವೇಶನ ಶುರುವಾಗಿದೆ.

    ಮೊದಲ ದಿನವಾದ ಇಂದು ಜಂಟಿ ಅಧಿವೇಶನದಲ್ಲಿ ಕೇಸರಿಧಾರಿ ಬಿಜೆಪಿಗರು ಜೈಶ್ರೀರಾಮ್ (Jai Shri Ram) ಘೋಷಣೆ ಮೊಳಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರು ಭಾರತ್ ಮಾತಾಕಿ ಜೈ, ಜೈ ಭೀಮ್ (Jai Bheem) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಭಾಷಣ ಮುಗಿಸುವಾಗ ಬೋಲೋ ಭಾರತ್ ಮಾತಾಕಿ ಜೈ ಅಂದ್ರು. ಆಗ ಎಲ್ರೂ ಭಾರತ್ ಮಾತಾಕಿ ಜೈ ಎಂದ್ರು.

    ಈ ಬೆನ್ನಲ್ಲೇ ಬಿಜೆಪಿ ಶಾಸಕರು ಜೈಶ್ರೀರಾಮ್ ಎಂದು ಮೂರ್ನಾಲ್ಕು ಬಾರಿ ಕೂಗಿದ್ರು. ಆಗ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು, ಭಾರತ್ ಮಾತಾಕಿ ಜೈ, ಜೈ ಭೀಮ್, ಜೈ ಬಸವಣ್ಣ ಎಂಬ ಘೋಷಣೆ ಮೊಳಗಿಸಿದ್ರು. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಸದನಕ್ಕೆ ಬಂದ್ರು. ಜೈಶ್ರೀರಾಮ್ ಎನ್ನುತ್ತಲೇ ಂದು ಘೋಷಣೆ ಮಾಡುತ್ತಲೇ ಮೊಗಸಾಲೆ ಪ್ರವೇಶಿಸಿದ್ರು.

    ಈ ವೇಳೆ ಅಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕ ಗಣಿಗ ರವಿಗೆ ಮಾಜಿ ಮಂತ್ರಿ ಮುನಿರತ್ನ (Muniratna) ಕೇಸರಿ ಶಾಲು ಹಾಕಿದ್ರು. ಇದಕ್ಕೆ ಗಣಿಗ ರವಿ ಆಕ್ಷೇಪಿಸಲಿಲ್ಲ. ಕೇಸರಿ ಶಾಲಿನೊಂದಿಗೆ ಮೊಗಸಾಲೆಗೆ ತೆರಳಿದ್ರು. ಆದ್ರೆ, ಎಸ್‍ಟಿ ಸೋಮಶೇಖರ್ ಮಾತ್ರ ಕೇಸರಿ ಶಾಲು ಹಾಕಿಕೊಳ್ಳಲಿಲ್ಲ.. ಇದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯ್ತು.ಬಿಜೆಪಿಗರ ಕೇಸರಿ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ ಕೌಂಟರ್ ನೀಡಿದ್ರು.

  • ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

    ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

    ಗಾಂಧಿನಗರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಕಾಲೇಜು ಪ್ರಾಂಶುಪಾಲರೊಬ್ಬರಿಗೆ (Principal) ಜೈಶ್ರೀರಾಮ್ (Jai Shri Ram) ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ಅಹಮದಾಬಾದ್‍ನ ಎಚ್‍ಎ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

    ಗುಜರಾತ್ ಲಾ ಸೊಸೈಟಿ (BLS) ವಿಶ್ವವಿದ್ಯಾಲಯದ ಎಚ್‍ಎ ಕಾಲೇಜಿನಲ್ಲಿ (Collage) ಕೆಲವು ದಿನಗಳ ಹಿಂದೆ ತರಗತಿ ನಡೆಯುತ್ತಿರುವಾಗ ಕೆಲ ವಿದ್ಯಾರ್ಥಿಗಳು (Students) ಜೈಶ್ರೀರಾಮ್ ಎಂದು ಘೋಷಣೆ ಕೋಗಿದ್ದರು. ಹೀಗಾಗಿ ತರಗತಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಸಂಜಯ್ ವಕೀಲರ ಬಳಿ ಕರೆದುಕೊಂಡು ಹೋಗಿ ವಿಚಾರಿಸಿದ್ದರು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾಹಿತಿ ಪಡೆದ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: KGF ಚಿನ್ನದ ಗಣಿಯಲ್ಲಿ ಮತ್ತೆ ಹೊಳೆಯುವ ಚಿನ್ನ – ಟೆಂಡರ್ ಕರೆದ ಕೇಂದ್ರ

    ಈ ಘಟನೆಯ ಹಿನ್ನೆಲೆಯಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರಾಂಶುಪಾಲರಿಗೆ ಎದುರಿಸಿ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಅಲ್ಲದೆ ತರಗತಿಯಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಳಿ ಕ್ಷಮಾಪಣಾ ಪತ್ರ ಬರೆಸಿದ್ದಾರೆ. ಈ ಘಟನೆಯ ಕುರಿತಾಗಿ ಪ್ರಾಂಶುಪಾಲರು ಕ್ಷಮೆ ಕೇಳಿ ನಾನು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸೀಗೆಹಟ್ಟಿಯ ಹಿಂದೂ ಕಾರ್ಯಕರ್ತ ಮೃತ ಹರ್ಷ (Harsha) ಕುಟುಂಬಸ್ಥರಿಗೆ ಬೆದರಿಕೆ ಬಂದಿದೆ.

    ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್‍ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಮುಸ್ಲಿಂ ಪರ ಘೋಷಣೆ ಕೂಗುತ್ತಾ, ಲಾಂಗ್ ಬೀಸಿದ್ದಾರೆ.

    ಮತ್ತೊಂದೆಡೆ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ನಿನ್ನೆಯಷ್ಟೇ ಆಜಾದ್ ನಗರದಲ್ಲಿ ಕಾರು ಜಖಂ ಪ್ರಕರಣಕ್ಕೆ ಸಂಬಂಧಿಸಿ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕಲ್ಲಪ್ಪನಕೇರಿಯಿಂದ ಅಜಾನ್ ನಗರಕ್ಕೆ ಬೈಕ್‍ನಲ್ಲಿ ಬಂದ 10 ರಿಂದ 15 ಜನರ ಗುಂಪು ಸಯ್ಯದ್ ಫರ್ವೀಜ್ ಎಂಬವರಿಗೆ ಸೇರಿದ್ದ ಇನ್ನೋವಾ ಕಾರನ್ನು ಜಖಂ ಮಾಡಿದ್ದರು. ಈ ವೇಳೆ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಹಾನಿಯಾಗಿತ್ತು. ಅಷ್ಟೇ ಅಲ್ಲದೇ ಆ ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡಿತ್ತು.

    ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ಮಸೀದಿ ಬಳಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದ MNS

    ಮಸೀದಿ ಬಳಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದ MNS

    ಮುಂಬೈ: ಮುಂಬೈನಲ್ಲಿರುವ ಮಸೀದಿಯೊಂದರ ಸ್ವಲ್ಪ ದೂರದಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇದರೊಂದಿಗೆ ಜೈ ಶ್ರೀರಾಮ್ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾ… ಜೈ ಸೋ’ ಎಂಬ ಘೋಷಣೆಗಳನ್ನೂ ಕೂಗಿದ್ದು, ತೀವ್ರ ವಿವಾದಕ್ಕೆ ತಿರುಗಿದೆ.

    MUMBAI

    ಎಂಎನ್‌ಎಸ್ ಮುಖ್ಯಸ್ಥ ರಾಜ್‌ಠಾಕ್ರೆ ನಿನ್ನೆ ತಮ್ಮ ಬೆಂಬಲಿಗರಿಗೆ ಹನುಮಾನ್ ಚಾಲೀಸಾ ಪಠಿಸುವಂತೆ ಕರೆ ನೀಡಿದ್ದರು. ಅದರಂತೆ ಹನುಮಾನ್ ಚಾಲೀಸಾ ಪಠಣ ಹಾಗೂ ಜೈ ಶ್ರೀರಾಮ್ ಘೋಷಣೆಗಳು ಮೊಳಗಿವೆ. ಬೆಳಿಗ್ಗೆ 5 ಗಂಟೆಯ ಆಜಾನ್ ಸಮಯದಲ್ಲಿ ಕಟ್ಟಡದ ಮೇಲಿಂದ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ಕೇಳುವಂತೆ ಮಾಡಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿರುವುದಾಗಿ ವರದಿಯಾಗಿದೆ.

    MUMBAI POLICE

    ಎರಡು ದಿನಗಳ ಹಿಂದೆಯೇ ಮಹಾರಾಷ್ಟçದ ಔರಂಗಾಬಾದ್‌ನಲ್ಲಿ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ, ಡಬಲ್ ಪವರ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಔರಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರು ಪರಸ್ಪರ ಧರ್ಮವನ್ನು ಗೌರವಿಸಬೇಕು: ನಿತೀಶ್ ಕುಮಾರ್

    ಪೊಲೀಸರಿಗೆ ತಲೆನೋವು: ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸಿದ್ದ ರಾಜ್ ಠಾಕ್ರೆ, ಅದಕ್ಕೆ ಮೇ 3 ಕೊನೆಯ ದಿನವೆಂದು ಗಡುವು ನೀಡಿದ್ದರು. ಅದು ಸಾಧ್ಯವಾಗದಿದ್ದರೆ, ಮಸೀದಿಗಳ ಎದುರೇ ಹನುಮಾನ್ ಚಾಲೀಸಾ ಪಠಣ ಆರಂಭಿಸುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ತಲೆಕಡೆಸಿಕೊಂಡಿದ್ದಾರೆ.

    ಈ ನಡುವೆ ರಾಜ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರ ಹಳೆಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    36 ಸೆಕೆಂಡ್‌ಗಳ ಈ ವೀಡಿಯೋನಲ್ಲಿ ಬಾಳಾ ಠಾಕ್ರೆ, ಧ್ವನಿವರ್ಧಕಗಳ ಬಳಕೆ ವಿರುದ್ಧ ಎಚ್ಚರಿಕೆ ನೀಡಿರುವುದು ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲಾಗುತ್ತದೆ ಎಂದಿದ್ದಾರೆ.

    ಜಾಮೀನು ರಹಿತ ವಾರೆಂಟ್: 14 ವರ್ಷಗಳ ಹಿಂದಿನ ಪ್ರಕರಣದ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನ್ಯಾಯಲಯವು ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮುಂಬೈ ಪೊಲೀಸರು ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಿಆರ್‌ಪಿಸಿ ಸೆಕ್ಷನ್ ಅಡಿಯಲ್ಲಿ ಠಾಕ್ರೆ ಹಾಗೂ ನೂರಾರು ಮಂದಿಗೆ ನೋಟಿಸ್ ನೀಡಿದ್ದಾರೆ. ಅದರ ಬೆನ್ನಲ್ಲೇ ರಾಜ್ ಠಾಕ್ರೆ ಅವರ ಮುಂಬೈ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.