Tag: ಜೈಲು ಶಿಕ್ಷೆ

  • ಪಾಕ್ ಸೇನಾ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯ- ಕಂಪ್ಯೂಟರ್ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ

    ಪಾಕ್ ಸೇನಾ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯ- ಕಂಪ್ಯೂಟರ್ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ

    ಇಸ್ಲಮಾಬಾದ್: ಪಾಕ್ ಸೇನಾ ಮುಖ್ಯಸ್ಥರ ರಾಜೀನಾಮೆ ಆಗ್ರಹಿಸಿದ ಪಾಕಿಸ್ತಾನ ಸೇನಾಪಡೆಯ ನಿವೃತ್ತ ಮೇಜರ್ ಜನರಲ್ ಪುತ್ರನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಿಲಿಟರ್ ಕೋರ್ಟ್ ಆದೇಶ ಹೊರಡಿಸಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    JAIL

    ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರ ಸೇವಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದ ಹಸ್ಸನ್ ಅಸ್ಕರಿ ಪತ್ರ ಬರೆದಿದ್ದರು. ಪತ್ರದಲ್ಲಿ ಬಾಜ್ವಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

    ನಿವೃತ್ತ ಮೇಜರ್ ಜನರ ಜಾಫರ್ ಮೇಹದಿ ಅಸ್ಕರಿ ಅವರ ಪುತ್ರರಾಗಿರುವ ಕಂಪ್ಯೂಟರ್ ಇಂಜಿನಿಯರ್ ಹಸ್ಸನ್ ಅಸ್ಕರಿ ಅವರಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಅವರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

    PAK

    ಈ ವರ್ಷ ಜುಲೈನಲ್ಲಿ ನಡೆಸಿದ ವಿಚಾರಣೆಯಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ನಿಯೋಜಿಸಲಾಗಿದ್ದ ಅಧಿಕಾರಿಯೊಬ್ಬರು ಅಸ್ಕರಿಯನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ- 22 ದಿನಗಳ ನಂತರ ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ

    ಅರ್ಜಿಯಲ್ಲಿ ಮಗನ ಶಿಕ್ಷೆಯನ್ನು ತಂದೆ ಪ್ರಶ್ನಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ತನ್ನ ಮಗನಿಗೆ ತನ್ನ ಆಯ್ಕೆಯ ವಕೀಲರನ್ನು ಒದಗಿಸಲಾಗಿಲ್ಲ. ತನ್ನ ಮಗನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಯಾವಾಗ ನಡೆಸುತ್ತದೆ ಎಂಬುದು ತಿಳಿದಿಲ್ಲ.

  • ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಹಾನೊಯ್: ಕೋವಿಡ್-19 ನಿಯಮವನ್ನು ಉಲ್ಲಂಘಿಸಿವುದರ ಜೊತೆಗೆ ಆತನ ಸಂಪರ್ಕದಲ್ಲಿದ್ದವರಿಗೂ ವೈರಸ್ ಹರಡಿಸಿದ ವ್ಯಕ್ತಿಗೆ ವಿಯೆಟ್ನಾಂ ದೇಶದಲ್ಲಿ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಲೆ ವ್ಯಾನ್ ಟ್ರೈ(28)ರನ್ನು ಸಾರ್ವಜನಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ ಬಳಿಕ, ಕೊರೊನಾ ವೈರಸ್ ಹರಡಿಸಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಲೆ ವ್ಯಾನ್ ಟ್ರೈ ಹೋ ಚಿ ಮಿನ್ಹ್ ನಗರದಿಂದ ಕಾ ಮೌಗೆ ಹಿಂದಿರುಗುವ ಮೂಲಕ 21 ದಿನಗಳ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಮೇಯರ್ ಸ್ಥಾನಕ್ಕೆ 12 ಮಂದಿ ಅರ್ಹರು – ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಸದಸ್ಯರೇ ಇಲ್ಲ

    ಇದೇ ರೀತಿಯ ಆರೋಪದಡಿ ದೇಶವು ಮತ್ತಿಬ್ಬರು ವ್ಯಕ್ತಿಗಳಿಗೆ 18 ತಿಂಗಳ ಮತ್ತು 2 ವರ್ಷಗಳ ಅಮಾನತು ಹಾಗೂ ಜೈಲು ಶಿಕ್ಷೆಯನ್ನು ವಿಧಿಸಿದೆ. 2020ರಲ್ಲಿ ಕೋವಿಡ್ ಮೊದಲನೇ ಅಲೆಯ ಹರಡುವಿಕೆಯಿಂದ ಯಶಸ್ವಿಯಾದ ಬಳಿಕ ಇದೀಗ ವಿಯೆಟ್ನಾಂ ದೇಶ ಮತ್ತೆ ಕೋವಿಡ್-19 ಸೋಂಕಿನೊಂದಿಗೆ ಹೋರಾಡುತ್ತಿದೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

    ಕೊರೊನಾ ವೈರಸ್ ಮೊದಲ ಅಲೆಯನ್ನು ಗೆದ್ದ ಹಲವು ದೇಶಗಳಲ್ಲಿ ವಿಯೆಟ್ನಾಂ ಕೂಡ ಒಂದಾಗಿದ್ದು, ಸಾಮೂಹಿಕ ಪರೀಕ್ಷೆ, ಕೊರೊನಾ ಸೋಂಕಿತರ ಪತ್ತೆ ಹಚ್ಚುವಿಕೆ, ಗಡಿಯಲ್ಲಿ ಕಠಿಣ ನಿರ್ಬಂಧಗಳು ಮತ್ತು ಕಟ್ಟು ನಿಟ್ಟಾದ ಕ್ವಾರಂಟೈನ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆದರೆ ಏಪ್ರಿಲ್ ಅಂತ್ಯದಲ್ಲಿ ಹೊಸ ಸೋಂಕು ಪತ್ತೆಯಾಗಿದ್ದು, ವಿಯೆಟ್ನಾಂ ದೇಶದಲ್ಲಿ ಇದೀಗ ಮತ್ತೆ ಆತಂಕ ಸೃಷ್ಟಿಸಿದೆ.

  • ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ಬೀಜಿಂಗ್: ಕೊರೊನಾ ವೈರಸ್‍ನ ತವರು ಮನೆ ವುಹಾನ್‍ಲ್ಲಿರುವ ಸ್ಥಿತಿಯ ಬಗ್ಗೆ ಪ್ರಥಮ ಬಾರಿಗೆ ವರದಿ ಮಾಡಿ, ಅವ್ಯವಸ್ಥೆಯನ್ನು ಜಗಜ್ಜಾಹೀರು ಮಾಡಿದ್ದ ಮಹಿಳಾ ಪತ್ರಕರ್ತೆಗೆ ಚೀನಾ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ವಕೀಲ ವೃತ್ತಿ ಮಾಡುತ್ತಿದ್ದ 37 ವರ್ಷದ ಜಾಂಗ್ ಶಿಕ್ಷೆಗೆ ಗುರಿಯಾಗಿದ್ದಾರೆ. ವುಹಾನ್ ನಗರದಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಕೊರೊನಾದ ಭೀಕರತೆಯನ್ನು ವರದಿ ಮಾಡಿ ಬಿತ್ತರಿಸಿದ ಪರಿಣಾಮವಾಗಿ ಜನಗಳ ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಚೋದಿಸಿದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗ ಶಿಕ್ಷೆಯ ಪ್ರಮಾಣವನ್ನು ಶಾಂಘೈ ಕೋರ್ಟ್ ಪ್ರಕಟಿಸಿದೆ.

     ಕೊರೊನಾ ಪ್ರಾರಂಭದ ಹಂತದಲ್ಲಿ ಇದ್ದ ಸ್ಥಿತಿ, ಕಠಿಣ ಲಾಕ್‍ಡೌನ್ ನೀತಿ, ತುಂಬಿ ತುಳುಕುತ್ತಿದ್ದ ಆಸ್ಪತ್ರೆ ಇತ್ಯಾದಿಗಳ ಫೋಟೋ, ವಿಡಿಯೋ ತೆಗೆದು ಚೀನಾದ ಸಾಮಾಜಿಕ ಜಾಲತಾಣ ಮತ್ತು ವಿ ಚಾಟ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವಿಡಿಯೋಗಳು ವೈರಲ್ ಆಗಿ ಪ್ರಪಂಚದ ಗಮನ ಸೆಳೆದಿತ್ತು.

    ಮೇ ಮಧ್ಯದಲ್ಲಿ ಈಕೆಯ ಖಾತೆಯಿಂದ ಯಾವುದೇ ಪೋಸ್ಟ್‌ಗಳು ಪ್ರಕಟವಾಗಿರಲಿಲ್ಲ. ಬಳಿಕ ಪೊಲೀಸರು ಈಕೆಯನ್ನು ಬಲವಂತವಾಗಿ ವಶದಲ್ಲಿಟ್ಟಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಜಾಂಗ್ ಖಾತೆಯನ್ನು ಬ್ಲಾಕ್‌ ಮಾಡಲಾಗಿತ್ತು. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಈಕೆಯ ವಕೀಲರು ಪ್ರತಿಕ್ರಿಯಿಸಿ, ಸೋಮವಾರ ಜಾಂಗ್ ವೀಲ್ ಚೇರ್‌ನಲ್ಲಿ ಕೋರ್ಟ್‍ಗೆ ಹಾಜರಾಗಿದ್ದಳು. ವಿಚಾರಣೆ ಸಂದರ್ಭದಲ್ಲಿ ಈಕೆ ಆರೋಪ ಸಾಬೀತು ಪಡಿಸುವಂತಹ ಬಲವಾದ ಸಾಕ್ಷ್ಯಗಳು ಇರಲಿಲ್ಲ ಎಂದು ಹೇಳಿದ್ದಾರೆ.

    ಚೀನಾದಲ್ಲಿರುವ ಕಮ್ಯೂನಿಸ್ಟ್ ಸರ್ಕಾರದ ಪೊಲೀಸರು ಕೋವಿಡ್ 19 ಸಮಯದಲ್ಲಿ ವರದಿ ಮಾಡಿದ್ದಕ್ಕೆ ಜಾಂಗ್ ಮಾತ್ರವಲ್ಲದೇ ಹಲವು ಪತ್ರಕರ್ತಕರನ್ನು ವಶಕ್ಕೆ ಪಡೆದಿದ್ದರು.  ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್‌ ಪತ್ರಕರ್ತ

  • ಅಪ್ರಾಪ್ತೆ ಮೇಲೆ ಅತ್ಯಾಚಾರ – ಅರ್ಚಕನಿಗೆ 14 ವರ್ಷ ಜೈಲು

    ಅಪ್ರಾಪ್ತೆ ಮೇಲೆ ಅತ್ಯಾಚಾರ – ಅರ್ಚಕನಿಗೆ 14 ವರ್ಷ ಜೈಲು

    – 2016ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಪ್ರಕರಣ

    ಶಿವಮೊಗ್ಗ: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿ ಅರ್ಚಕನಿಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

    ನಗರದ ಜೈಲು ರಸ್ತೆಯ ದುರ್ಗಾ ಪರಮೇಶ್ವರಿ ದೇವಾಲಯದ ಅರ್ಚಕನಾಗಿದ್ದ ಶಿವಕುಮಾರ್ ಕಳೆದ 2016ರಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದ ಅಪ್ರಾಪ್ತೆ ಬಾಲಕಿಯನ್ನು ಆತ್ಯಾಚಾರ ಮಾಡಿದ್ದ. ನೀನು ಮಂಕಾಗಿದ್ದೀಯ, ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೆ ಪೂಜೆ ಮಾಡುತ್ತೇನೆಂದು ಆಮಿಷ ತೋರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.

    ಅಪ್ರಾಪ್ತೆ ಹಾಗೂ ಆಕೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ರಸಾದ್ ಅವರು ಶಿವಕುಮಾರ್‍ಗೆ 14 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ದಂಡದ ಹಣವನ್ನು ಸಂತ್ರಸ್ತೆ ಬಾಲಕಿಗೆ ನೀಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ಎಸ್.ಸತೀಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

  • 4 ಮಹಿಳೆಯರ ಮೇಲೆ ಅತ್ಯಾಚಾರ – ಯುಕೆ ರ‍್ಯಾಪರ್‌ಗೆ 24 ವರ್ಷ ಜೈಲು ಶಿಕ್ಷೆ

    4 ಮಹಿಳೆಯರ ಮೇಲೆ ಅತ್ಯಾಚಾರ – ಯುಕೆ ರ‍್ಯಾಪರ್‌ಗೆ 24 ವರ್ಷ ಜೈಲು ಶಿಕ್ಷೆ

    – ‘ಕ್ಯಾಚ್ ಮಿ ಆ್ಯಂಡ್ ರೇಪ್ ಮಿ’, ಆಟದ ಒಂದು ಭಾಗವೆಂದ ಸಿಂಗರ್

    ಲಂಡನ್: ನಾಲ್ಕು ಮಹಿಳೆಯರನ್ನು ಅತ್ಯಾಚಾರ ಮಾಡಿದಕ್ಕೆ ಇಂಗ್ಲೆಂಡ್‍ನ ರ‍್ಯಾಪ್ ಸಿಂಗರ್ ಗೆ ಬ್ರಿಟಿಷ್ ಕೋರ್ಟ್ 24 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಲಂಡನ್ ನಗರದಲ್ಲಿ ಸೋಲೋ-45 ಎಂಬ ರ‍್ಯಾಪ್ ಕಾರ್ಯಕ್ರಮದ ಮೂಲಕ ಸಾಕಷ್ಟು ಹೆಸರು ಮಾಡಿದ್ದ ರ‍್ಯಾಪ್ ಸಿಂಗರ್ 33 ವರ್ಷದ ಆಂಡಿ ಅನೋಕ್ಯೆ ಶಿಕ್ಷಗೆ ಒಳಗಾದ ಅಪರಾಧಿ. ಈತ 21 ರೇಪ್‍ಗಳನ್ನು ಮಾಡಿದ್ದು, ಇತ್ತೀಚೆಗೆ ನಾಲ್ಕು ಮಹಿಳೆಯರನ್ನು ರೇಪ್ ಮಾಡಿ ಅವರ ಮೇಲೆ ಹಲ್ಲೆ ಮಾಡಿ ವಿಚಿತ್ರವಾಗಿ ಆಡುತ್ತಿದ್ದ ಎಂದು ಹೇಳಲಾಗಿದೆ.

    ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಲಿಯಂ ಹಾರ್ಟ್ ಶಿಕ್ಷೆ ನೀಡುವ ಸಮಯದಲ್ಲಿ ರ‍್ಯಾಪರ್ ಅನೋಕ್ಯೆ “ವಿಕೃತ ಆನಂದಕ್ಕೆ” ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ. ಜೊತೆಗೆ ಈತ ನಮ್ಮ ದೇಶದಲ್ಲಿ ಜನಪ್ರಿಯವಾದ ಕಾರಣ ಇತರರು ಈತನನ್ನು ಅನುಸರಿಸುತ್ತಾರೆ. ಜೊತೆಗೆ ಈತ ಒಳ್ಳೆಯ ಸಾಧನೆಯನ್ನು ಮಾಡಿದ್ದಾನೆ. ಆತನ ಸಾಧನೆಯನ್ನು ಹೊರತು ಪಡಿಸಿ ಆತ ಖಾಸಗಿ ಜೀವನದಲ್ಲಿ ಮಾಡಿದ ಕೃತ್ಯಕ್ಕೆ 24 ವರ್ಷ ಶಿಕ್ಷೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

    ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಆತನ ನನ್ನ ಎಳೆದುಕೊಂಡು ಹೋಗಿ ಬೆಡ್ ಮೇಲೆ ಮಲಗಿಸಿ. ನನ್ನ ಮುಖದ ಮೇಲೆ ಗಾಜಿನ ಪ್ಯಾನೆಲ್ ಇಟ್ಟು ಅದರೊಳಗೆ ನೀರು ಹಾಕಿದ. ಆ ವೇಳೆ ನನಗೆ ನಾನು ನೀರಿನೊಳಗೆ ಮುಳುಗುತ್ತಿದ್ದೇನೆ ಎಂಬ ಭಾಸವಾಗುತ್ತಿತ್ತು. ನಂತರ ಆತ ನನ್ನ ಆತ್ಯಾಚಾರ ಮಾಡಿ ನನ್ನ ತೊಡಗೆ ಚಾಕುವಿನಿಂದ ಚುಚ್ಚಿದ. ನಂತರ ಇನ್ನೊಂದು ಬಾರಿ ಚಾಕುವನ್ನು ಹಿಡಿದು ನನ್ನ ಮೇಲೆ ಆತ್ಯಾಚಾರ ಮಾಡಿದ ಎಂದು ಹೇಳಿಕೆ ನೀಡಿದ್ದಾರೆ.

    ಕೋರ್ಟಿನಲ್ಲಿ ವಿಚಾರಣೆ ವೇಳೆ ಮಾತನಾಡಿರುವ ಆಂಡಿ ಅನೋಕ್ಯೆ ನಾನು ಇದನ್ನು ಬೇಕು ಎಂದು ಮಾಡಿಲ್ಲ. ಇದು ‘ಕ್ಯಾಚ್ ಮಿ ಆ?ಯಂಡ್ ರೇಪ್ ಮಿ’ ಎಂಬ ಆಟದ ಒಂದು ಭಾಗ. ಅದು ಆ ಮಹಿಳೆಯರಿಗೂ ಗೊತ್ತು ಎಂದಿದ್ದಾನೆ. ಅನೋಕ್ಯೆ ಈ ಎಲ್ಲ ಕೃತ್ಯಗಳನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಕೆಲ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು

    ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು

    ನವದೆಹಲಿ: ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಲಿದೆ.

    ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಇಲ್ಲಿಯವರೆಗಿದ್ದ 6 ತಿಂಗಳ ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಏರಿಸಿದೆ. ದೇಶದ ಹಲವೆಡೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

    ಈ ವಾರದಲ್ಲಿ ಬೆಂಗಳೂರಿನ ಪಾದರಾಯನಪುರ, ಮೈಸೂರಿನಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಕಳೆದ ವಾರ ಉತ್ತರ ಪ್ರದೇಶದಲ್ಲೂ ಹಲ್ಲೆ ನಡೆದಿತ್ತು. ಈಗ ಈ ಕೃತ್ಯಗಳಿಗೆ ಕಡಿವಾಣ ಹಾಕಲು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ.

  • ಲಾಕ್‍ಡೌನ್ ಉಲ್ಲಂಘಿಸಿದವರಿಗೆ 3 ದಿನ ಜೈಲು, 500 ರೂ. ದಂಡ

    ಲಾಕ್‍ಡೌನ್ ಉಲ್ಲಂಘಿಸಿದವರಿಗೆ 3 ದಿನ ಜೈಲು, 500 ರೂ. ದಂಡ

    – ಮೊದಲನೇ ಬಾರಿ ಲಾಕ್‍ಡೌನ್ ಪಾಲಿಸದ್ದಕ್ಕೆ ಶಿಕ್ಷೆ
    – ಮನೆಯಿಂದ ಹೊರಬಂದವರಿಗೆ ಶಿಕ್ಷೆ

    ಮುಂಬೈ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ವಿಧಿಸಿದ ಲಾಕ್‍ಡೌನ್‍ಅನ್ನು ಉಲ್ಲಂಘಿಸಿದ್ದಕ್ಕಾಗಿ ಮಹಾರಾಷ್ಟ್ರದ ಬಾರಾಮತಿ ನ್ಯಾಯಾಲಯವು ಮೂವರಿಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಜನರನ್ನು ಯಾರು ಹೊರಗೆ ಬರಬೇಡಿ ಎಂದು ಸೂಚಿಸಿದ್ದರೂ ಕೆಲವರು ಹೊರಗೆ ಬಂದು ಪೊಲೀಸರು ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊರಗೆ ಬಂದ ಮೂವರಿಗೆ ಬಾರಾಮತಿ ಕೋರ್ಟ್ ಇದೇ ಮೊದಲ ಬಾರಿಗೆ ಲಾಕ್‍ಡೌನ್ ನಿಯಮವನ್ನು ಪಾಲಿಸದೆ ಇದ್ದಕ್ಕೆ ಶಿಕ್ಷೆ ನೀಡಿದೆ.

    ಲಾಕ್‍ಡೌನ್ ಉಲ್ಲಂಘಿಸಿದಕ್ಕೆ ಆರೋಪಿಗಳಾದ ಅಫ್ಜಲ್ ಅತ್ತಾರ್ (39), ಚಂದ್ರಕುಮಾರ್ ಷಾ (38) ಮತ್ತು ಅಕ್ಷಯ್ ಷಾ (32)ಗೆ ಬಾರಾಮತಿ ನ್ಯಾಯಾಲಯದ ನ್ಯಾಯಾಧೀಶ ಜೆ.ಜೆ.ಬಚುಲ್ಕರ್ ಅವರು, ಮೂರು ದಿನಗಳ ಜೈಲು ಶಿಕ್ಷೆ ಮತ್ತು ತಲಾ 500 ರೂ.ಗಳ ದಂಡ ಪಾವತಿಸಬೇಕೆಂದು ಬುಧವಾರ ಆದೇಶಿಸಿದ್ದಾರೆ. ಈ ಮೂಲಕ ಲಾಕ್‍ಡೌನ್ ಪಾಲಿಸದವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಬಾರಾಮತಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಶಿರ್ಗಾಂವ್ಕರ್, ಈ ಮೂವರು ಆರೋಪಿಗಳನ್ನು ಯಾವುದೇ ಕಾರಣವಿಲ್ಲದೆ ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ಓಡಾಡುತ್ತಿದ್ದು ಕಂಡುಬಂದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ವಿರುದ್ಧ ಸಿಆರ್‍ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

  • ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಚಿಕ್ಕಮಗಳೂರು: ಪಾಸ್‍ಪೋರ್ಟ್ ಪರಿಶೀಲನೆಗೆ ಲಂಚ ಪಡೆದ ಪೇದೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಈ ತೀರ್ಪನ್ನ ಪ್ರಕಟಿಸಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಮಕ್ಕಿ ಗ್ರಾಮದ ಅಜಿತ್ ಎಂಬವರು ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ಗೋಣಿಬೀಡು ಠಾಣೆಗೆ ಕಳುಹಿಸಲಾಗಿತ್ತು. ಗೋಣಿಬೀಡು ಪೊಲೀಸ್ ಠಾಣಾ ಪೇದೆ ಗಿರೀಶ್ ಕುಮಾರ್ ವರದಿನೀಡಲು 3 ಸಾವಿರ ಲಂಚ ಕೊಡುವಂತೆ ಅರ್ಜಿದಾರ ಅಜಿತ್‍ಗೆ ಆಗ್ರಹಿಸಿ, ಕೊನೆಗೆ 2,500 ರೂ. ಹಣವನ್ನು ನೀಡಿ ಎಂದಿದ್ದರು.

    ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಮೇ 28 2013ರಂದು ಗೋಣಿಬೀಡಿನ ರಾಮೇಶ್ವರ ಬೇಕರಿ ಬಳಿ ಪೇದೆ ಗಿರೀಶ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಉಮೇಶ್.ಎಂ.ಅಡಿಗ ಆರೋಪಿ ಗಿರೀಶ್‍ಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್ ವಾದ ಮಂಡಿಸಿದರು.

  • ಮೂವರ ಕೊಲೆ ಯತ್ನ – ಅಪರಾಧಿಗೆ ಜೈಲು ಶಿಕ್ಷೆ

    ಮೂವರ ಕೊಲೆ ಯತ್ನ – ಅಪರಾಧಿಗೆ ಜೈಲು ಶಿಕ್ಷೆ

    ಹುಬ್ಬಳ್ಳಿ: ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಆರೋಪಿಗೆ ಎರಡೂವರೆ ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

    ಕೇಶ್ವಾಪುರದ ನಿವಾಸಿ ಮಂಜುನಾಥ ಮ್ಯಾಗೇರಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎಸ್ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

    ಏನಿದು ಪ್ರಕರಣ?
    ಅಪರಾಧಿ ಮಂಜುನಾಥ ಮ್ಯಾಗೇರಿ. 2015ರ ಆಗಸ್ಟ್ 7ರಂದು ವಿದ್ಯಾನಗರದ ಪಾಟೀಲ ಕಾಲೋನಿಯ ಬಳಿ ಮೂವರನ್ನು ಕೊಲೆ ಮಾಡುವ ಉದ್ದೇಶದಿಂದ ಸುಪ್ರೀತ ಶೆಟ್ಟಿ, ಬಸವರಾಜ ಮೊರಬದ ಮತ್ತು ಅಭಿಷೇಕ ಪರಾಂಜಪೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದನು. ಈ ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಅಪರಾಧಿಗೆ ಎರಡೂವರೆ ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in