Tag: ಜೈನ ಮುನಿ

  • ಬೆಳಗಾವಿ ಜೈನಮುನಿ ಕೊಲೆ ಪ್ರಕರಣ- ಸಿಬಿಐ ತನಿಖೆಗೆ ಒಪ್ಪದ ಸರ್ಕಾರ

    ಬೆಳಗಾವಿ ಜೈನಮುನಿ ಕೊಲೆ ಪ್ರಕರಣ- ಸಿಬಿಐ ತನಿಖೆಗೆ ಒಪ್ಪದ ಸರ್ಕಾರ

    – ಪೊಲೀಸರಿಂದ ತನಿಖೆ ಎಚ್.ಕೆ. ಪಾಟೀಲ್

    ಬೆಂಗಳೂರು: ಬೆಳಗಾವಿ ಜೈನಮುನಿ (Belagavi Jain Monk) ಕೊಲೆ ಪ್ರಕರಣ ವಿಧಾನ ಪರಿಷತ್‍ನಲ್ಲಿ  (Vidhana Parishad) ಸದ್ದು ಮಾಡಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಂತ ವಿಪಕ್ಷ ಬಿಜೆಪಿ ಪಟ್ಟು ಹಿಡೀತು. ಆದರೆ ಸರ್ಕಾರ ಮಾತ್ರ ಸಿಬಿಐ ತನಿಖೆ (CBI Investigation) ಇಲ್ಲ ಅಂತ ಹೇಳಿ ಪೊಲೀಸರ ತನಿಖೆ ಮಾಡಿಸಲಾಗುತ್ತೆ ಅಂತ ತಿಳಿಸಿತು.

    ಬೆಳಗ್ಗೆ ಅಧಿವೇಶನ ಪ್ರಾರಂಭ ಆದ ಕೂಡಲೇ ಬಿಜೆಪಿ (BJP) ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ನಿಲುವಳಿ ಸೂಚನೆಗೆ ಮುಂದಾದರು. ಕೂಡಲೇ ಸಭಾಪತಿಗಳು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕೊಡೋದಾಗಿ ಹೇಳಿದ್ರು. ಬಳಿಕ ಪ್ರಶ್ನೋತ್ತರ ಕಲಾಪದ ವೇಳೆ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಯ್ತು.

    ಈ ವೇಳೆ ಮಾತನಾಡಿದ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ಜೈನ ಮುನಿ ಕೊಲೆ ಪ್ರಕರಣ ತಲ್ಲಣಗೊಳಿಸಿದೆ. ಅಹಿಂಸೆ ಧರ್ಮ ಅನ್ನೋರ ಕೊಲೆ ಆಗಿದೆ.ವಿದ್ಯುತ್ ಶಾಕ್ ಕೊಟ್ಟು, 9 ತುಂಡು ಮಾಡಿದ್ದಾರೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆಯವರೆಗೂ ಸಿಎಂ, ಗೃಹ ಸಚಿವರು ಸ್ಥಳಕ್ಕೆ ಹೋಗಿಲ್ಲ. ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಅಂತ ಒತ್ತಾಯ ಮಾಡಿದರು.

    ಬಿಜೆಪಿ ರವಿಕುಮಾರ್ (Ravi kumar) ಮಾತನಾಡಿ, ಅತ್ಯಂತ ಸರಳ ಸ್ವಾಮಿಗಳು ಇವರು. ಇಂತಹ ಜೈನಮುನಿ ಬರ್ಬರ ಹತ್ಯೆ ಆಗಿದೆ. 6 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಆಗಿದೆ ಅಂತ ಪೊಲೀಸ್ ಹೇಳಿದ್ದಾರೆ. ಇದನ್ನ ನಾವು ಒಪ್ಪಲ್ಲ. ತನಿಖೆ ಆಗದೇ ಹೀಗೆ ಪೊಲೀಸರು ಹೇಳೋದು ಎಷ್ಟು ಸರಿ. ಪೊಲೀಸರ ಈ ಹೇಳಿಕೆ ಎಷ್ಟು ಸರಿ? ಸ್ನೇಹಿತರು ಕೊಲೆಗೆ ಸಹಾಯ ಮಾಡಿದ್ದಾರೆ ಅಂತ ಆರೋಪಿ ಹೇಳಿದ್ದಾನೆ. ಅವರ ಬಂಧನ ಕೂಡಾ ಆಗಬೇಕು ಎಂದರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ

    ತೆಲಂಗಾಣ ಸಿಎಂ ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಕೇಸ್ ನಲ್ಲಿ ಕ್ರಮ ತೆಗೆದುಕೊಂಡಿದ್ರು. ಯಾರು ಕೊಲೆ ಮಾಡಿದ್ದಾರೆ ಅವರನ್ನ ಹ್ಯಾಂಗ್ ಮಾಡಬೇಕು. ಸಿಎಂ ಸ್ಥಳಕ್ಕೆ ಹೋಗಬೇಕು. ಕೇವಲ 6 ಲಕ್ಷ ಕೇಳಿದ್ದಕ್ಕೆ ಈ ಕೊಲೆ ಆಗಿಲ್ಲ. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ರಾಜಕೀಯ ಬಿಟ್ಟು ಸರ್ಕಾರ ಕ್ರಮವಹಿಸಬೇಕು. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದ್ರೆ ಸಿಬಿಐ ತನಿಖೆ ಆಗಬೇಕು ಆಗ್ರಹಿಸಿದರು.

    ಬಳಿಕ ಬಿಜೆಪಿಯ ವೈಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಹನುಮಂತ ನಿರಾಣಿ, ಸೇರಿ ಹಲವರು ಮಾತನಾಡಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಜೆಡಿಎಸ್ ನ ಶರವಣ, ಮರಿತಿಬ್ಬೇಗೌಡ, ಭೋಜೇಗೌಡ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು. ಕಾಂಗ್ರೆಸ್ ನ ಜಗದೀಶ್ ಶೆಟ್ಟರ್, ಪ್ರಕಾಶ್ ಹುಕ್ಕೇರಿ ಪ್ರಕರಣದಲ್ಲಿ ರಾಜಕೀಯ ಬೇಡ ಅಂತ ಪೊಲೀಸರಿಂದಲೇ ತನಿಖೆ ನಡೆಸಿ ಅಂತ ಸರ್ಕಾರದ ಪರ ಮಾತನಾಡಿದ್ರು.

    ಚರ್ಚೆಗೆ ಸರ್ಕಾರದ ಪರ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ (H. K Patil), ಇದೊಂದು ಹೇಯಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸೋ ಘಟನೆ. 6 ಲಕ್ಷ ಸಾಲದ ವಿಚಾರ ಆರೋಪಿ ಪೊಲೀಸರಿಗೆ ಹೇಳಿದ್ದು. ಅದನ್ನ ಪೊಲೀಸರು ಹೇಳಿದ್ದಾರೆ. ತನಿಖೆ ಸರ್ಕಾರ ಮಾಡಿಸುತ್ತಿದೆ. ಇದನ್ನ ಗಂಭೀರ, ವಿಶೇಷ ಪ್ರಕರಣ ಅಂತ ಡಿಎಸ್‍ಪಿ ನೇತೃತ್ವದ ತನಿಖೆ ಮಾಡಿಸಲಾಗ್ತಿದೆ ಅಂತ ತಿಳಿಸಿದರು.

    ಈ ಕೃತ್ಯ ಮಾಡಿದ ವ್ಯಕ್ತಿಗೆ ವಿಕೃತ ಮನಸು. ಮೃತ ದೇಹವನ್ನ ಕಟ್ ಮಾಡ್ತಾರೆ ಅಂದರೆ ಅವರಿಗೆ ಮನುಷ್ಯತ್ವದ ಗುಣ ಇಲ್ಲ. ಸಿಬಿಐಗೆ ಕೊಡಬೇಕು ಅಂತ ಹೇಳಿದ್ರು. ಯಾವ ಕಾರಣಕ್ಕೆ ಸಿಬಿಐಗೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ರು. ನಾವು ಯಾರ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಇದ್ದ ಅಧಿಕಾರಿಗಳೇ ತನಿಖೆ ಮಾಡ್ತಿದ್ದಾರೆ. ರಾಜಕೀಯ ಬೆರೆಸದೇ ಪ್ರಕರಣವನ್ನ ಖಂಡಸಬೇಕು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೆ. ಟೆಕ್ನಾಲಜಿ ಬಳಸಿಕೊಂಡು, ನಿಷ್ಠಾವಂತ ಅಧಿಕಾರಿ ನೇಮಕ ಮಾಡಿ ಪ್ರಕರಣ ತನಿಖೆ ಮಾಡಿಸುತ್ತೇವೆ. ಯಾರನ್ನೂ ನಮ್ಮ ಸರ್ಕಾರ ರಕ್ಷಣೆ ಮಾಡಲ್ಲ. ಯಾರೇ ವ್ಯಕ್ತಿಗಳು ಇದ್ದರೂ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಿಸ್ತೀವಿ ಅಂತ ಸಿಬಿಐ ತನಿಖೆ ನಿರಾಕರಿಸಿದರು. ಬಳಿಕ ನಾಳೆ ಗೃಹ ಸಚಿವರು ಸ್ಪಷ್ಟ ಉತ್ತರ ಕೊಡೋದಾಗಿ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸನ್ಯಾಸತ್ವ ಸ್ವೀಕರಿಸಿದ ರಿಲಯನ್ಸ್ ಇಂಡಸ್ಟ್ರಿಯ ಮಾಜಿ ಉಪಾಧ್ಯಕ್ಷ

    ಸನ್ಯಾಸತ್ವ ಸ್ವೀಕರಿಸಿದ ರಿಲಯನ್ಸ್ ಇಂಡಸ್ಟ್ರಿಯ ಮಾಜಿ ಉಪಾಧ್ಯಕ್ಷ

    ಮುಂಬೈ: ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕಳೆದ ವರ್ಷ ಪ್ರಕಾಶ್ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು.

    ಒಂದು ವಾರದ ಹಿಂದೆ ಪ್ರಕಾಶ್ ಅವರ ಪತ್ನಿ ನೈನಾ ಶಾ ಸಹ ಜೈನ ಮುನಿಗಳಿಂದ ದೀಕ್ಷೆ ಪಡೆದಿದ್ದರು. ಒಂದು ದಶಕಕ್ಕೂ ಅಧಿಕ ಕಾಲ ರಿಲಯನ್ಸ್ ಇಂಡಸ್ಟ್ರಿಯ ಮಹತ್ವದ ಹುದ್ದೆಗಳನ್ನ ಒಪ್ರಕಾಶ್ ಶಾ ನಿರ್ವಹಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದ ಶಾ ಒಳ್ಳೆಯ ಸಂಬಳವನ್ನ ಪಡೆಯುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಓರ್ವ ಸನ್ಯಾಸಿಯಾಗಿ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

    ಫೋಟೋ ವೈರಲ್: ಸದಾ ಸೂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಕಾಶ್ ಶಾ, ಜೈನ ಸನ್ಯಾಸಿಯಾಗಿದ್ದು, ಶ್ವೇತ ವಸ್ತ್ರ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು. ರಿಲಯನ್ಸ್ ಕಂಪನಿಯ ಜಾಮ್‍ನಗರ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜಕ್ಟ್ ನಲ್ಲಿ ಆರಂಭಿಸುವಲ್ಲಿ ಶಾ ಅವರು ಮಹತ್ವದ ಪಾತ್ರವಿದೆ.  ಅವರ ಪತ್ನಿ ನೈನಾ ವಾಣಿಜ್ಯ ಪದವಿ ಓದಿದ್ದಾರೆ.

    ಕಳೆದ ವರ್ಷವೇ ಶಾ ವರು ದೀಕ್ಷೆಗೆ ಮುಂದಾಗಿದ್ದರು. ಆದ್ರೆ ಕೊರೊನಾದಿಂದ ದೀಕ್ಷೆ ಪಡೆಯುವುದು ಮುಂದೂಡಿಕೆಯಾಗುತ್ತಾ ಬಂದಿತ್ತು. ಏಳು ವರ್ಷಗಳ ಹಿಂದೆ ಶಾ ಪುತ್ರ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರು ಸಹ ಬಾಂಬೆ ಐಐಟಿಯಲ್ಲಿ ಪದವಿ ಪಡೆದಿದ್ದರು. ಮತ್ತೋರ್ವ ಮಗ ಗೃಹಸ್ಥ ಜೀವನ ನಡೆಸುತ್ತಿದ್ದು, ಒಬ್ಬ ಮಗನಿದ್ದಾನೆ.

  • ದೇಹತ್ಯಾಗ ಮಾಡಿದ ಜೈನ ಮುನಿ ಚಿನ್ಮಯಸಾಗರ ಮಹಾರಾಜ

    ದೇಹತ್ಯಾಗ ಮಾಡಿದ ಜೈನ ಮುನಿ ಚಿನ್ಮಯಸಾಗರ ಮಹಾರಾಜ

    ಚಿಕ್ಕೋಡಿ (ಬೆಳಗಾವಿ): ಯಮಸಲ್ಲೇಖನ ವ್ರತ ಕೈಗೊಂಡಿದ್ದ ರಾಷ್ಟ್ರಸಂತ, ಜೈನ ಮುನಿ ಚಿನ್ಮಯಸಾಗರ ಮಹಾರಾಜರು ದೇಹತ್ಯಾಗ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಚಿನ್ಮಯಸಾಗರ ಮಹಾರಾಜರು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 12 ರವರೆಗೆ ಊಟ ತ್ಯಜಿಸಿ ನೀರು ಮಾತ್ರ ಸೇವಿಸುತ್ತಿದ್ದರು. ವಿಜಯದಶಮಿ ದಿನದಂದು ಕೊನೆಯ ಉಪದೇಶ ನೀಡಿದ್ದ ಚಿನ್ಮಯಸಾಗರ ಮಹಾರಾಜರು, ‘ಮನುಷ್ಯ ಜೀವಿಯು ತನ್ನ ದುರಾಚಾರಗಳೊಂದಿಗೆ ಹೋರಾಡಿ ವಿಜಯ ಸಾಧಿಸಿ ಭಗವಂತನಾಗಲು ಪ್ರಯತ್ನಿಸಬೇಕು’ ಎಂದು ತಮ್ಮ ಕೊನೆಯ ಉಪದೇಶ ನೀಡಿದ್ದರು.

    ಚಿನ್ಮಯಸಾಗರ ಮಹಾರಾಜರು ಅಕ್ಟೋಬರ್ 12ರಿಂದ ನೀರು ಸೇವನೆಯನ್ನು ನಿಲ್ಲಿಸಿ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. ರಾಷ್ಟ್ರಸಂತ ಚಿನ್ಮಯಸಾಗರ ಮಹಾರಾಜರು ದೇಹತ್ಯಾಗ ಮಾಡಿದ ಸುದ್ದಿ ಕೇಳಿ ಅಪಾರ ಸಂಖ್ಯೆಯ ಭಕ್ತ ಸಮೂಹ ದರ್ಶನಕ್ಕೆ ಜುಗೂಳ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

    ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಜುಗುಳ ಗ್ರಾಮಕ್ಕೆ ಭೇಟಿ ನೀಡಿ, ಚಿನ್ಮಯಸಾಗರ ಮಹಾರಾಜರ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿ, ಮುನಿ ಮಹಾರಾಜರು ತಮ್ಮ ಜೀವನದುದ್ದಕ್ಕೂ ಅಹಿಂಸಾ ತತ್ವಗಳನ್ನು ಸಾರಿ ಹೇಳುತ್ತಾ ದುಷ್ಟ ಚಟಗಳಿಗೆ ಅಂಟಿಕೊಂಡ ಅನೇಕರಿಗೆ ಬೋಧನೆ ಮಾಡಿ, ಅದರಿಂದ ಮುಕ್ತಗೊಳಿಸಿದ್ದಾರೆ. ಸರ್ಕಾರ ಈ ಸೇವೆ ಕಂಡು ಡಾಕ್ಟರೇಟ್ ಪದವಿ ನೀಡಿದೆ. ಅವರು ಒಬ್ಬ ಮಹಾನ್ ಸಂತ. ಚಿನ್ಮಯಸಾಗರ ಮಹಾರಾಜರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಸವದಿ ಹೇಳಿದ್ದರು.

  • ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಝುಂಜುರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹಕ್ಕೆ ಹೆದರಿ ಮನೆಗಳಿಗೆ ಬೀಗ ಜಡಿದು ಊರಿಗೆ ಊರೇ ಖಾಲಿಯಾಗಿದ್ದರೂ ಜೈನ ಮಹಾಮುನಿ ಮಾತ್ರ ಗ್ರಾಮ ಬಿಟ್ಟು ಕದಲುತ್ತಿಲ್ಲ.

    ಸಮುದ್ರ ಸೇನ ಮಾಹಾಮುನಿಗಳು ಚಾತುರ್ಮಾಸ್ಯ ಆಚರಣೆಗಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಗ್ರಾಮದ ಬಸ್ತಿಯಲ್ಲಿ ಮುನಿಗಳ ಚಾತುರ್ಮಾಸ್ಯ ಆಚರಣೆ ಮಾಡುತ್ತಿದ್ದು, ಚಾತುರ್ಮಾಸ್ಯ ವ್ರತ ಬಿಟ್ಟು ಗ್ರಾಮದಿಂದ ತೆರಳಲು ಮುನಿಗಳು ಮುಂದಾಗುತ್ತಿಲ್ಲ.

    ಮುನಿಗಳನ್ನು ಬಿಟ್ಟು ಸಂಪೂರ್ಣ ಗ್ರಾಮಸ್ಥರನ್ನು ಪೊಲೀಸರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಮುನಿಗಳ ನಿಲುವಿನಿಂದ ಜೈನ ಭಕ್ತರು ಕಂಗೆಟ್ಟಿದ್ದಾರೆ. ಬೇರೆ ಕಡೆಗೆ ತೆರಳಿ ಎಂದು ಭಕ್ತರು ಪರಿ ಪರಿಯಾಗಿ ಕೇಳಿಕೊಂಡರೂ ಜೈನ ಮುನಿ ಮಾತ್ರ ಸ್ಥಳ ಬಿಟ್ಟು ಕದಲುತ್ತಿಲ್ಲ.

  • ಅಪರಾಧ ಘಟನೆಗಳಲ್ಲಿ ಶೇ.95 ರಷ್ಟು ಮಹಿಳೆಯರ ತಪ್ಪಿದೆ: ಜೈನ ಮುನಿ

    ಅಪರಾಧ ಘಟನೆಗಳಲ್ಲಿ ಶೇ.95 ರಷ್ಟು ಮಹಿಳೆಯರ ತಪ್ಪಿದೆ: ಜೈನ ಮುನಿ

    ಭೋಪಾಲ್: ಇಂದು ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಘಟನೆಗಳಲ್ಲಿ ಶೇ.95 ರಷ್ಟು ಮಹಿಳೆಯರ ತಪ್ಪಿದೆ ಎಂದು ಜೈನ ಮುನಿಗಳಾದ ವಿಶ್ರಾಂತ್ ಸಾಗರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಜೈನ ಮುನಿಗಳಾದ ಮಧ್ಯ ಪ್ರದೇಶ ರಾಜ್ಯದ ಸಿಕಾರ ಜಿಲ್ಲೆಯ ಮುಖ್ಯಾಲಯದಲ್ಲಿ ಚತುರ್ಮಾಸ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಹುಡುಗಿಯರು ಸಮಾಜದಲ್ಲಿ ಅತ್ಯಂತ ಎಚ್ಚರಿಕೆಯಿಂದಿರಬೇಕು. ಹೆತ್ತ ಮನೆ ಮತ್ತು ಕೊಟ್ಟ ಮನೆಗೆ ಗೌರವ ತರುವ ಜವಾಬ್ದಾರಿ ಅವರ ಮೇಲಿದ್ದು, ಸುಸಂಸ್ಕೃತರಾಗಿ ಜೀವನ ನಡೆಸಬೇಕಿದೆ.

    ಇಂದು ದೇಶದಲ್ಲಿ ನಡೆಯುತ್ತಿರುವ ಹೆಚ್ಚಿನ ಅಹಿತಕರ ಘಟನೆಗಳಿಗೆ ಶೇ.95 ರಷ್ಟು ಮಹಿಳೆಯರೇ ಕಾರಣ. ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿಯೇ ಅಹಿತಕರ ಘಟನೆಗಳು ನಡೆಯುತ್ತಿವೆ. ಇಂದಿನ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ, ದೇಶದ ಪರಂಪರೆಯನ್ನು ಮರೆಯುತ್ತಿದ್ದಾರೆ. ಈ ಕಾರಣದಿಂದಲೇ ದೇಶದಲ್ಲಿ ಶಾಂತಿ ಕದಡುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೊಂದು ಜೈನ ಮುನಿಗಳು ನಾಂದಿ ಹಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv