ಬೆಂಗಳೂರು: ಜೈನ ಮಂದಿರಗಳ (Jain Temples) ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರಿಗೆ (Priests) ವೇತನ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯದ 1,043 ಜೈನ ಮಂದಿರಗಳ ಪ್ರಧಾನ ಅರ್ಚಕರಿಗೆ ತಲಾ 6 ಸಾವಿರ ರೂ., ಸಹಾಯಕ ಅರ್ಚಕರಿಗೆ ತಲಾ 5 ಸಾವಿರ ರೂ. ವೇತನ ನೀಡಲಾಗುವುದು. ಇದನ್ನೂ ಓದಿ: ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

ಇದೇ ಮೊದಲ ಬಾರಿಗೆ ಜೈನ ಮಂದಿರಗಳ ವೇತನ ನಿಗದಿ ಸಂಬಂಧ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ವೇತನಕ್ಕಾಗಿ ಇದುವರೆಗೂ ಜಿಲ್ಲೆಗಳಿಂದ 1,043 ಪ್ರಸ್ತಾವನೆ ಬಂದಿದ್ದು, ಸಚಿವ ಜಮೀರ್ ಅಹಮದ್ ಖಾನ್ ಅವರು ಎಲ್ಲ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ
ಇದೇ ಸಂದರ್ಭದಲ್ಲಿ ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿ ಅಭಿವೃದ್ಧಿ ಗೆ ಒಂದು ಕೋಟಿ ರೂ. ಬಿಡುಗಡೆ ಮಾಡಲು ಸಚಿವರು ಆದೇಶ ಹೊರಡಿಸಿದರು. ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ




