Tag: ಜೈನ ಧರ್ಮ

  • ಧರ್ಮಸ್ಥಳ ಕೇಸ್‌| ಜೈನ ಧರ್ಮದ ಬಗ್ಗೆ ಅವಹೇಳನ – ಯುವಕ ಅರೆಸ್ಟ್‌

    ಧರ್ಮಸ್ಥಳ ಕೇಸ್‌| ಜೈನ ಧರ್ಮದ ಬಗ್ಗೆ ಅವಹೇಳನ – ಯುವಕ ಅರೆಸ್ಟ್‌

    ಚಿಕ್ಕಮಗಳೂರು: ಜೈನ (Jainism) ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದಕ್ಕೆ ಯುವಕನೊಬ್ಬ ಜೈಲುಪಾಲಾಗಿದ್ದಾನೆ.

    ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ಪರ, ವಿರೋಧ ಪೋಸ್ಟ್‌ಗಳು ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಪೋಸ್ಟ್‌ಗೆ ಅಜ್ಜಂಪುರ ತಾಲೂಕಿನ ಯುವಕ ಉಮೇಶ್ ಗೌಡ ಆಗಸ್ಟ್‌ 2 ರಂದು ಅಶ್ಲೀಲವಾಗಿ ಕಮೆಂಟ್ ಮಾಡಿದ್ದ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪೋಸ್ಟ್‌ ಹಾಕಿದ್ರೆ ಕೇಸ್‌ ದಾಖಲಾಗಲ್ಲ ಯಾಕೆ: ಅಶ್ವಥ್‌ನಾರಾಯಣ

     

    ಜೈನ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೆಟ್ಟ ಭಾಷೆಯಿಂದ ಕಾಮೆಂಟ್‌ ಮಾಡಿದ್ದ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಕಾಯ್ದೆ 196 (1) ಹಾಗೂ 353 (2) ಅಡಿ ಅಜ್ಜಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈಗ ಉಮೇಶ್ ಗೌಡನನ್ನು ಬಂಧಿಸಿದ್ದು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು

  • ಏ.10 ಮಹಾವೀರ ಜಯಂತಿ – ಏನಿದರ ಮಹತ್ವ? ಆಚರಣೆ ಹೇಗೆ?

    ಏ.10 ಮಹಾವೀರ ಜಯಂತಿ – ಏನಿದರ ಮಹತ್ವ? ಆಚರಣೆ ಹೇಗೆ?

    ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾದ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏ.10 ರಂದು ಆಚರಣೆ ಮಾಡಲಾಗುತ್ತದೆ. ಆಚರಣೆ ಹೇಗೆ? ಆಚರಣೆಯ ಮಹತ್ವ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದಲ್ಲಿ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. ಅವರು 30ನೇ ವಯಸ್ಸಿನಲ್ಲಿ, ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರು. ಇನ್ನೂ ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ.

    ಪ್ರಾಪಂಚಿಕ ಜೀವನ ತ್ಯಜಿಸಿದ್ದು ಭಗವಾನ್ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಆತಂರಿಕ ಶಾಂತಿ ಮತ್ತು ಜ್ಞಾನೋದಯವನ್ನು ಪಡೆಯಲು ರಾಜ್ಯ, ಕುಟುಂಬ ಹಾಗೂ ಲೌಕಿಕ ಕರ್ತವ್ಯಗಳನ್ನು ತೊರೆಯುತ್ತಾರೆ. ಅವರು ಅಶೋಕ ವೃಕ್ಷದ ಕೆಳಗೆ 12 ವರ್ಷಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯ ಪಡೆಯುತ್ತಾರೆ. ಇವರು ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದಾರೆ.

    ಈ ಹಬ್ಬದ ಮಹತ್ವ
    ಮಹಾವೀರ ಜಯಂತಿ ಜೈನರ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಭಗವಾನ್ ಮಹಾವೀರರ ಬೋಧನೆಗಳಾದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಸನ್ಯಾಸ ಜನರ ನೈತಿಕ ನಡವಳಿಕೆಯ ಅಡಿಪಾಯವನ್ನು ನಿರ್ಮಾಣ ಮಾಡುತ್ತದೆ.

    ಮಹಾವೀರ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ?
    ಈ ದಿನದಂದು ಜೈನರು ಪ್ರಾರ್ಥನೆ, ಧಾರ್ಮಿಕ ಮೆರವಣಿಗೆ,ದಾನ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗುತ್ತಾರೆ. ಜೈನ ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಿ, ಅನೇಕ ಸ್ಥಳಗಳಲ್ಲಿ ರಥಯಾತ್ರೆ ನಡೆಸಲಾಗುತ್ತದೆ. ರಥ ಅಥವಾ ಪಲ್ಲಕ್ಕಿಯಲ್ಲಿ ಭಗವಾನ್ ಮಹಾವೀರರ ವಿಗ್ರಹ ಅಥವಾ ಚಿತ್ರವನ್ನು ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

    ಮನೆ ಅಥವಾ ಬಸದಿಗಳಲ್ಲಿ ಮಹಾವೀರ ಸ್ವಾಮಿಯ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡುತ್ತಾರೆ. ಈ ಸಮಯದಲ್ಲಿ, ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಬೋಧನೆಗಳನ್ನು ವಿವರಿಸುತ್ತಾರೆ. ಈ ದಿನ, ದೇಶಾದ್ಯಂತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

    ಈ ಶುಭ ದಿನದಲ್ಲಿ ತಯಾರಿಸಲಾಗುವ ಭಕ್ಷ್ಯಗಳು
    ಮಹಾವೀರ ಜಯಂತಿಯಂದು , ಜೈನರು ಜೈನ ಧರ್ಮದ ತತ್ವಗಳಿಗೆ ಹೊಂದಿಕೆಯಾಗುವ ವಿವಿಧ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ. ದಾಲ್ ಬಾತಿ ಚುರ್ಮಾ , ಧೋಕ್ಲಾ , ಸಾಬುದಾನ ಖಿಚಡಿ, ಕಚೋರಿ, ಪುರಿ ಮತ್ತು ಸಬ್ಜಿ , ಜೈನ್ ಪುಲಾವ್ , ಮತ್ತು ಜೈನ್ ಭಿಂಡಿ ಮಸಾಲಾ ಸೇರಿದಂತೆ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಹಬ್ಬದ ದಿನ ಉಪವಾಸ ಆಚರಿಸುವವರು ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ.

    ತೀರ್ಥಂಕರರು ಎಂದರೆ ಯಾರು?
    ಪೌರಾಣಿಕ ಕಥೆಗಳ ಪ್ರಕಾರ, ಮಹಾವೀರರನ್ನು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದಾರೆ. ಕಠಿಣ ತಪಸ್ಸು ಮಾಡಿ ಇಂದ್ರಿಯಗಳು ಮತ್ತು ಮನಸ್ಸಿನ ಭಾವನೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರನ್ನು ತೀರ್ಥಂಕರರು ಎಂದು ಹೇಳಲಾಗುತ್ತದೆ.

    ಭಗವಾನ್ ಮಹಾವೀರರ ಐದು ತತ್ವಗಳು:
    ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡ ಭಗವಾನ್ ಮಹಾವೀರರು ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿಸಿದರು. ಮಹಾವೀರರು 5 ಮುಖ್ಯ ತತ್ವಗಳನ್ನು ನೀಡಿದ್ದರು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ.

    ಸತ್ಯ, ಅಹಿಂಸೆ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ವಿಷಯ ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದು), ಬ್ರಹ್ಮಚರ್ಯವನ್ನು ಅನುಸರಿಸುವುದು. ಭಗವಾನ್ ಮಹಾವೀರರ ಈ ಐದು ತತ್ವಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಮೋಕ್ಷ ಪಡೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

    ಜೈನ ಧರ್ಮದ ಪ್ರಮುಖ ಕ್ಷೇತ್ರಗಳು
    ಕುಂದಲ್ಪುರ: ಇದು ಬಿಹಾರದ ನಳಂದಾ ಜಿಲ್ಲೆಯಲ್ಲಿದೆ. ಈ ಸ್ಥಳವು ಪಾಟ್ನಾದಿಂದ 100 ಕಿಮೀ ಮತ್ತು ಬಿಹಾರ ಷರೀಫ್‌ನಿಂದ ಕೇವಲ 15 ಕಿಮೀ ದೂರದಲ್ಲಿದೆ. ಇದು ಮಹಾವೀರರ ಜನ್ಮಸ್ಥಳವಾಗಿದ್ದು, ಈ ಸ್ಥಳವನ್ನು ಜೈನ ಧರ್ಮದಲ್ಲಿ ಕಲ್ಯಾಣ ಕ್ಷೇತ್ರವೆಂದು ಪರಿಗಣಿಸಲಾಗಿದೆ.

    ಪಾರ್ಶ್ವನಾಥ ಪರ್ವತ: ಸಮ್ಮೇದ್ ಶಿಖರ್ಜಿಯನ್ನು ಜೈನ ಧರ್ಮದ ಅತಿದೊಡ್ಡ ಯಾತ್ರಾ ಕೇಂದ್ರವೆಂದು ಪರಿಗಣಿಸಲಾಗಿದೆ. ಇದು ಭಾರತದ ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ಚೋಟಾ ನಾಗ್ಪುರ ಪ್ರಸ್ಥಭೂಮಿಯ ಪರ್ವತದ ಮೇಲಿದೆ. ಈ ಪರ್ವತವನ್ನು ಪಾರ್ಶ್ವನಾಥ ಪರ್ವತ ಎಂದು ಕೂಡ ಕರೆಯಲಾಗುತ್ತದೆ.

    ಶ್ರವಣಬೆಳಗೊಳ: ಶ್ರವಣ ಬೆಳಗೊಳ ಕರ್ನಾಟಕದಲ್ಲಿದೆ ಇಲ್ಲಿ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣವಾಗಿ ಒಂದೇ ಕಲ್ಲಿನಿಂದ ಕೆತ್ತಲಾಗಿದೆ.

  • ಪ್ರಸಿದ್ಧ ಜೈನ ಕ್ಷೇತ್ರ ಕನಕಗಿರಿಯ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ

    ಪ್ರಸಿದ್ಧ ಜೈನ ಕ್ಷೇತ್ರ ಕನಕಗಿರಿಯ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ

    ಚಾಮರಾಜನಗರ: ಜೈನಧರ್ಮದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಕನಕಗಿರಿಯ ಬಾಹುಬಲಿ ಮೂರ್ತಿಗೆ ಇಂದು ಮಸ್ತಕಾಭಿಷೇಕ ನೆರವೇರಿತು. ದೆಹಲಿ, ಮುಂಬೈ, ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

    ಕನಕಗಿರಿ ಕ್ಷೇತ್ರ, ಚಾಮರಾಜನಗರ ತಾಲೂಕಿನಲ್ಲಿರುವ ಜೈನರ ಧರ್ಮ ಕ್ಷೇತ್ರ ಶ್ರವಣಬೆಳಗೊಳ ಬಾಹುಬಲಿ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನಡೆಯುತ್ತೆ. ಆದರೆ ಇಲ್ಲಿನ ಬಾಹುಬಲಿಗೆ 6 ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನಡೆಯುತ್ತದೆ. ಮೊದಲ ಕಳಸವನ್ನು ಅನಿಲ್ ಸೇಠ್ ಅವರು ಬಾಹುಬಲಿಗೆ ಮಜ್ಜನ ಮಾಡಿಸುವ ಮೂಲಕ ಮಸ್ತಕಾಭಿಷೇಕ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಕನಕಗಿರಿ ಮಠದ ತೀರ್ಥಂಕರ ಸ್ವಾಮೀಜಿ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಿದ್ರು. ಈ ಕ್ಷೇತ್ರದಲ್ಲಿ ಅಭಿಷೇಕಕ್ಕೆ ಜೇನುತುಪ್ಪ ಬಳಸದೇ ಇರುವುದು ವಿಶೇಷ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ 

    ಏಕೆಂದರೆ ಜೇನುನೊಣಗಳು ತುಪ್ಪವನ್ನು ತಮಗೆಂದು ಸಂಗ್ರಹಿಸುತ್ತವೆ. ಇದನ್ನು ದೇವರಿಗೆ ಅಭಿಷೇಕ ಮಾಡುವುದು ಜೈನಧರ್ಮದಲ್ಲಿ ನಿಷಿದ್ಧ. ಹೀಗಾಗಿ ಮಸ್ತಕಾಭಿಷೇಕದಲ್ಲಿ ಬಾಹುಬಲಿಗೆ ಜೇನುತುಪ್ಪದಿಂದ ಅಭಿಷೇಕ ಮಾಡುವುದಿಲ್ಲ. ಅಷ್ಟ ದ್ರವ್ಯಗಳೊಂದಿಗೆ ಬಾಹುಬಲಿಗೆ ಮಜ್ಜನ ನೆರವೇರುತ್ತದೆ. ಇದನ್ನೂ ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.

    ಜಲಾಭಿಷೇಕದ ನಂತರ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ, ಅರಿಶಿನ, ಕುಂಕುಮ, ಗಂಧ, ಕಬ್ಬಿನ ಹಾಲು, ಸುಗಂಧ ದ್ರವ್ಯ ಸೇರಿದಂತೆ 8 ರೀತಿಯ ವಿವಿಧ ಅಭಿಷೇಕ ನಡೆಸಲಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಬಾಹುಬಲಿಯ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡು ಪುನೀತರಾದರು. ಮಸ್ತಕಾಭಿಷೇಕದ ವೇಳೆ ಭಕ್ತಿ ಪರಕಾಷ್ಠೇಯಿಂದ ಭಕ್ತರು ನೃತ್ಯ ಮಾಡಿ ಬಾಹುಬಲಿಯ ಕೃಪೆಯನ್ನು ಕೋರಿದರು.

    ಕನಕಗಿರಿಯ ಮಸ್ತಕಾಭಿಷೇಕವನ್ನು ಜಾತಿ ಮತ ಭೇದವಿಲ್ಲದೇ ಸಾವಿರಾರು ಮಂದಿ ಕಣ್ತುಂಬಿಕೊಂಡ್ರು. ಚಾಮರಾಜನಗರ ಜಿಲ್ಲೆಯ ಧಾರ್ಮಿಕ ಪರಂಪರೆಯ ಭಾಗವಾಗಿರುವ ಕನಕಗಿರಿ ಬಾಹುಬಲಿ ಮಸ್ತಕಾಭಿಷೇಕಕ್ಕೆ ಆರು ವರ್ಷದವರೆಗೆ ಕಾಯಬೇಕು. ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಯಾಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ: ಉಮೇಶ್ ಕತ್ತಿ