Tag: ಜೈನ್

  • ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ನವದೆಹಲಿ: ಕ್ರಾಂತಿಕಾರಿ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

    51 ವರ್ಷ ವಯಸ್ಸಿನ ಮುನಿ ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಾಂಡೀಸ್ ಹಾಗೂ ಇತರ ಕೆಲ ಕಾಯಿಲೆಗಳಿಂದ ಬಳುತ್ತಿದ್ದ ಸಾಗರ್ ಅವರು, ಕಳೆದ 3 ವಾರಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

    ಜೈನ ಸಮುದಾಯದಲ್ಲಿ ಅನುಯಾಯಿಗಳನ್ನು ಹೊಂದಿರುವ ಮುನಿ ತರುಣ್ ಸಾಗರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮುನಿಯ ಅಂತಿಮ ವಿಧಿ ವಿಧಾನಗಳು ಇಂದು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ. ಸದ್ಯ ಮುನಿಯವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವರು ಸೇರಿದಂತೆ ಗಣ್ಯರಿಂದ ಸಂತಾಪ ಸೂಚಿಸಿದ್ದಾರೆ.

    1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ಅಹಮದಾಬಾದ್: ಮುಂಬೈ ಮೂಲದ 24ರ ಹರೆಯದ ಯುವಕ ಮೋಕ್ಷೇಶ್ ಸೇಟ್ ಶುಕ್ರವಾರ ಬೆಳಗ್ಗೆ ಜೈನ ದೀಕ್ಷೆಯನ್ನು ಸ್ವೀಕರಿಸಿದರು.

    ಮೋಕ್ಷೇಶ್ ಕುಟುಂಬಕ್ಕೆ ಜೆ ಕೆ ಕಾರ್ಪೊರೇಷನ್ ಹೆಸರಿನ ವಜ್ರ ಲೋಹದ ಮತ್ತು ಸಕ್ಕರೆ ಉದ್ಯಮಗಳಿವೆ. ಸುಮಾರು ನೂರು ಕೋಟಿ ಆಸ್ತಿಯನ್ನು ತ್ಯಜಿಸಿದ್ದಾರೆ. ಚಾರ್ಟೇಡ್ ಅಕೌಂಟೆಂಟ್ ಆಗಿರುವ ಇವರು ಎಲ್ಲಾ ಆಸ್ತಿಪಾಸ್ತಿಯನ್ನು ಬಿಟ್ಟು ಗಾಂಧಿನಗರ-ಅಹಮದಾಬಾದ್ ರಸ್ತೆಯ ತಪೋವನ ಸರ್ಕಲ್‍ನಲ್ಲಿ ಇಂದು ಜೈನ ದೀಕ್ಷೆ ಸ್ವೀಕರಿಸಿದರು.

    ವಿದ್ಯಾಭ್ಯಾಸದಲ್ಲಿ ಮೊದಲಿಗನಾಗಿದ್ದ ನಾನು ಕಂಪನಿಯ ಲೆಕ್ಕ ಪರಿಶೋಧನೆಗಿಂತ ಧರ್ಮದ ಪರಿಶೋಧನೆಯ ವಿದ್ಯಾರ್ಥಿಯಾಗಲು ಬಯಸುತ್ತೇನೆ. 15 ವರ್ಷ ಇದ್ದಾಗಲೇ ಸನ್ಯಾಸಿಯಾಗಲು ಬಯಸಿದ್ದೆ. ಈ ಪ್ರಪಂಚದಿಂದ ನೆಮ್ಮದಿಯ ಜೀವನ ಸಿಗದ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನೊಬ್ಬನ ಸಂತೋಷಕ್ಕಿಂತ ಎಲ್ಲರ ಸಂತೋಷವನ್ನು ಬಯಸುತ್ತೇನೆ ಎಂದು ಮೋಕ್ಷೇಶ್ ಹೇಳಿದ್ದಾರೆ.

    ಮೋಕ್ಷೇಶ್ ಕುಟುಂಬದವರು ಉತ್ತರ ಗುಜರಾತ್ ನ ಡೀಸಾ ನಿಂದ ವಲಸೆ ಬಂದು ಮಂಬೈನಲ್ಲಿ ನೆಲೆಸಿ 60 ವರ್ಷ ಆಗಿದೆ. ತಂದೆ ಸಂದೀಪ್, ಚಿಕ್ಕಪ್ಪ ಗಿರೀಶ್ ಸೇಟ್ ಒಟ್ಟಿಗೆ ವಾಸಮಾಡುತ್ತಿದ್ದಾರೆ.

    ಮೂರು ಜನ ಅಣ್ಣ ತಮ್ಮಂದಿರಲ್ಲಿ ಮೋಕ್ಷೇಶ್ ಮೊದಲನೆಯವರು. ವಾಲೇಶ್ವರ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ್ದ ಮೋಕ್ಷೇಶ್ 10ನೇ ತರಗತಿಯಲ್ಲಿ 93.38%, 12 ನೇ ತರಗತಿಯಲ್ಲಿ 85% ಅಂಕವನ್ನು ಪಡೆದ್ದರು.

    ಹೆಚ್‍ಆರ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಓದುತ್ತಿದ್ದಾಗ ಸಿಎ ಆರ್ಹತಾ ಪರೀಕ್ಷೆ ಪಾಸ್ ಮಾಡಿದ್ದ ಮೋಕ್ಷೇಶ್ ನಂತರ ಕುಟುಂಬದ ಲೋಹದ ವ್ಯವಹಾರವನ್ನು ಸಾಂಗ್ಲಿಯಲ್ಲಿ ಮುಂದುವರಿಸಿದರು.

    ಮೋಕ್ಷೇಶ್ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಸನ್ಯಾಸಿಯಾಗುವ ಬಯಕೆಯನ್ನು 8 ವರ್ಷದ ಕೆಳಗೆ ವ್ಯಕ್ತಪಡಿಸಿದ್ದರು. ಮೊದಲಿಗೆ ವಿದ್ಯಾಭ್ಯಾಸ ಮುಗಿಸಿ ಒಮ್ಮೆ ಪ್ರಪಂಚವನ್ನು ನೋಡಿ ಬಾ ಎಂದಿದ್ದೆವು. 200 ವರ್ಷ ಇತಿಹಾಸ ಇರುವ ನಮ್ಮ ಕುಟುಂಬದ ಪುರುಷ ಸದಸ್ಯರ ಪೈಕಿ ಸನ್ಯಾಸಿ ಆಗುತ್ತಿರುವುದು ಇವನೇ ಮೊದಲನೆಯವನು. ಮಹಿಳೆಯರ ಪೈಕಿ 5 ಜನ ಸಾಧ್ವಿಗಳಾಗಿದ್ದಾರೆ ಎಂದು ಗಿರೀಶ್ ಸೇಟ್ ತಿಳಿಸಿದ್ದಾರೆ.