Tag: ಜೇವಾರ್

  • ಮತ್ತೊಂದು ಐತಿಹಾಸಿಕ ಯೋಜನೆಗೆ ಪ್ರಧಾನಿ ಮೋದಿ ಅಡಿಗಲ್ಲು

    ಮತ್ತೊಂದು ಐತಿಹಾಸಿಕ ಯೋಜನೆಗೆ ಪ್ರಧಾನಿ ಮೋದಿ ಅಡಿಗಲ್ಲು

    ನವದೆಹಲಿ: ಸದಾ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಐತಿಹಾಸಿಕ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ನವೆಂಬರ್ 25 ರಂದು ನೊಯ್ಡಾದ ಬಳಿ ಇರುವ ಜೇವಾರ್‌ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

    ದೆಹಲಿಯ ಹೊರ ವಲಯ ನೊಯ್ಡಾದಲ್ಲಿ ನಿರ್ಮಾಣವಾಗುತ್ತಿರುವ ಈ ಅಂತರಾಷ್ಟ್ರೀಯ ವಿಮಾನ ದೇಶದಲ್ಲಿ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಿರ್ಮಿಸಲಾಗುತ್ತಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗೆ ಈಗ ಚಾಲನೆ ನೀಡಲಾಗಿತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

    ಮಾಹಿಗಳ ಪ್ರಕಾರ, ಏಳು ಕೋಟಿ ಪ್ರಯಾಣಿಕರ ಸಾಮರ್ಥ್ಯ ಈ ಬೃಹತ್ ವಿಮಾನ ನಿಲ್ದಾಣ ಹೊಂದಿರಲಿದ್ದು, ಏಕಕಾಲದಲ್ಲಿ 186 ವಿಮಾನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 10 ಲಕ್ಷ ಟನ್ ಕಾರ್ಗೋ ಟರ್ಮಿನಲ್ ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಿಂದ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ, ವಾರಣಾಸಿಯಿಂದ ಹೈಸ್ಪೀಡ್ ರೈಲಿನ ವ್ಯವಸ್ಥೆ ಮಾಡಲಾಗಿದೆ. ಇದು 10,000 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು 2024 ರ ವೇಳೆಗೆ ಜನರ ಬಳಕೆಗೆ ಮುಕ್ತಗೊಳಿಸಲಾಗಿದೆ.

    ವಿಮಾನ ನಿಲ್ದಾಣದಲ್ಲಿ ಹೈಟೆಕ್ ಹೋಟೆಲ್, ವಿವಿಐಪಿ ಟರ್ಮಿನಲ್, ತೆರೆದ ಪ್ರವೇಶ ಇಂಧನ ಫಾರ್ಮ್, ವಿಮಾನ ನಿಲ್ದಾಣದ ಪಾರುಗಾಣಿಕಾ ಮತ್ತು ಅಗ್ನಿಶಾಮಕ ಕಟ್ಟಡ ಮತ್ತು ದೊಡ್ಡ ಮಳೆ ಕೊಯ್ಲು ಕೊಳವನ್ನು ಸಹ ಯೋಜಿಸಲಾಗಿದೆ. ಅಲ್ಲದೇ ಏರ್ ಪೋರ್ಟ್ ಕಾಂಪ್ಲೆಕ್ಸ್‍ನಲ್ಲಿ 167 ಎಕರೆ ಪ್ರದೇಶವನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದನ್ನೂ ಓದಿ: 100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

    ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಮುನಾ ಇಂಟರ್‌ನ್ಯಾಷನಲ್‌ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ (YIAPL) ಅಭಿವೃದ್ಧಿಪಡಿಸುತ್ತಿದೆ, ಇದು ಜ್ಯೂರಿಚ್ ಏರ್ ಪೋರ್ಟ್ ಇಂಟರ್‌ನ್ಯಾಷನಲ್‍ನ ಅಂಗಸಂಸ್ಥೆಯಾಗಿದೆ. ಉತ್ತರ ಪ್ರದೇಶ ಸರ್ಕಾರವು ಅಕ್ಟೋಬರ್ 7, 2020 ರಂದು YIAPL ನೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದೆ.