Tag: ಜೇಮ್ಸ್‌ ಕ್ಯಾಮೆರಾನ್‌

  • ‘ಅವತಾರ್’ ಚಿತ್ರದಲ್ಲಿ ಆಕ್ಟ್ ಮಾಡೋಕೆ 18 ಕೋಟಿ ಆಫರ್ ಬಂದಿತ್ತು: ನಟ ಗೋವಿಂದ

    ‘ಅವತಾರ್’ ಚಿತ್ರದಲ್ಲಿ ಆಕ್ಟ್ ಮಾಡೋಕೆ 18 ಕೋಟಿ ಆಫರ್ ಬಂದಿತ್ತು: ನಟ ಗೋವಿಂದ

    ಬಾಲಿವುಡ್ ನಟ ಗೋವಿಂದ (Actor Govinda) ಅವರು ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ವದಂತಿಯ ನಡುವೆ ಹಾಲಿವುಡ್ (Hollywood) ಸಿನಿಮಾದಲ್ಲಿ ನಟಿಸಲು 18 ಕೋಟಿ ರೂ. ಆಫರ್ ಮಾಡಿದ್ದರ ಬಗ್ಗೆ ನಟ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ದಕ್ಷಿಣದತ್ತ ‘ಸಪ್ತಸಾಗರದ’ ಚೆಲುವೆ- ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ರುಕ್ಮಿಣಿ ಬ್ಯುಸಿ

    ಸಂದರ್ಶನವೊಂದರಲ್ಲಿ ಗೋವಿಂದ ಮಾತನಾಡಿ ಈ ಹಿಂದೆ ನಾನು 21.5 ಕೋಟಿ ರೂ. ಆಫರ್ ಅನ್ನು ನಿರಾಕರಿಸಿದ್ದೆ, ಆ ಅವಕಾಶವನ್ನು ಕೈಬಿಟ್ಮೇಲೆ ನನಗೆ ಬೇಸರವಾಗಿತ್ತು. ಇನ್ನೂ ಹೀಗೆ ಒಮ್ಮೆ ಅಮೆರಿಕಗೆ ಭೇಟಿ ನೀಡಿದ್ದಾಗ ಸರ್ದಾರ್ ಸಿಕ್ಕಿದ್ದರು. ಅವರಿಗೆ ವ್ಯವಹಾರಿಕವಾಗಿ ಐಡಿಯಾವೊಂದನ್ನು ಕೊಟ್ಟಿದ್ದೆ, ಅದು ಅವರಿಗೆ ವರ್ಕೌಟ್ ಆಗಿತ್ತು. ಹೀಗೆ ಕೆಲ ವರ್ಷಗಳ ಬಳಿಕ ಅದೇ ಸರ್ದಾರ್ ಲಂಡನ್‌ನಲ್ಲಿ ಸಿಕ್ಕಿದ್ರು. ಅಂದು ಅವರೊಂದಿಗೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಕೂಡ ಇದ್ದರು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಸರ್ದಾರ್ ಹೇಳಿದ್ದರು.

    ಹಾಗಾಗಿ ಇದರ ಬಗ್ಗೆ ಚರ್ಚಿಸಲು ಊಟಕ್ಕೆ ಕರೆದಿದ್ದೆ, ಆ ವೇಳೆ ನಾನು ಅವರಿಗೆ ‘ಅವತಾರ್’ (Avatar) ಎನ್ನುವ ಟೈಟಲ್ ಕೊಟ್ಟಿದ್ದೆ. ಈ ಚಿತ್ರದಲ್ಲಿ ಅಂಗವಿಕಲನಾಗಿ ನಟಿಸಲು ಹೇಳಿದರು ಜೇಮ್ಸ್ ಕ್ಯಾಮೆರಾನ್, ಅದಕ್ಕೆ ನಾನು ನೋ ಎಂದು ಹೇಳಿದ್ದೆ. ಅದಕ್ಕೆ ಅವರು 18 ಕೋಟಿ ರೂ. ಸಂಭಾವನೆ ಕೊಡೋದಾಗಿ ಹೇಳಿದ್ದರು. ಆದರೆ 410 ದಿನಗಳ ಕಾಲ ಮೈಗೆ ಬಣ್ಣ ಹಚ್ಚಿಕೊಂಡು ಶೂಟಿಂಗ್ ಮಾಡಬೇಕೆಂದರು. ಅದಕ್ಕೆ ನಾನು ಮೈಗೆ ಬಣ್ಣ ಹಚ್ಚಿಕೊಂಡರೇ ಆಸ್ಪತ್ರೆಗೆ ಸೇರಬೇಕಾಗುತ್ತದೆ ಎಂದು ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾಗಿ ಗೋವಿಂದ ಹಂಚಿಕೊಂಡಿದ್ದಾರೆ.

    ಇನ್ನೂ 2009ರಲ್ಲಿ ‘ಅವತಾರ್’ ಚಿತ್ರವು ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಬಳಿಕ 2022ರಲ್ಲಿ ‘ಅವತಾರ್ ದಿ ವೇ ಆಫ್ ವಾಟರ್’ ಸಿನಿಮಾ ಯಶಸ್ಸು ಕಂಡಿತ್ತು.

  • ಒಟಿಟಿಗೆ ಬರಲಿದೆ `ಅವತಾರ್ 2′ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಒಟಿಟಿಗೆ ಬರಲಿದೆ `ಅವತಾರ್ 2′ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ `ಅವತಾರ್ 2′ (Avatar 2)ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ರಿಲೀಸ್ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಿರುವಾಗ ಸಿನಿಪ್ರೇಮಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರಮಂದಿರಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಮನೆಯಲ್ಲಿಯೇ ಕುಳಿತು ನೋಡುವ ಚಾನ್ಸ್ ಸಿಕ್ಕಿದೆ. ಒಟಿಟಿಗೆ `ಅವತಾರ್ 2′ ಅಬ್ಬರಿಸಲು ರೆಡಿಯಾಗಿದೆ.

    ಕಳೆದ ವರ್ಷ ಡಿ.22ರಂದು `ಅವತಾರ್ 2′ ಸಿನಿಮಾ ವಿಶ್ವದೆಲ್ಲೆಡೆ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಒಟಿಟಿ ಮೂಲಕ ʻಅವತಾರ್ 2ʼ ಚಿತ್ರ ಲಗ್ಗೆ ಇಡುತ್ತಿದೆ. ಮಾ.28ರಂದು ವಿವಿಧ ಒಟಿಟಿಯಲ್ಲಿ (Ott) ತೆರೆ ಕಾಣುತ್ತಿದೆ. ಇದನ್ನೂ ಓದಿ: ಅವಳಿ ಮಕ್ಕಳೊಂದಿಗೆ ರಸ್ತೆಗಿಳಿದ ನಯನತಾರಾ ದಂಪತಿ

    ಅದ್ಭುತ ದೃಶ್ಯ ವೈಭವ ಇರುವಂತಹ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಿದರೆ ಅದರ ಅನುಭವವೇ ಬೇರೆ. ಅಂಥ ಪ್ರಕಾರಕ್ಕೆ ಸೇರುವ ಸಿನಿಮಾ `ಅವತಾರ್ 2′ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಮೂಲಕ ನೋಡಬಹುದು. ಅಮೇಜಾನ್ ಪ್ರೈಂ (Amazon Prime) ಸೇರಿದಂತೆ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ.

    ಜೇಮ್ಸ್ ಕ್ಯಾಮೆರಾನ್ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ. ಹಾಗಾಗಿ ʻಅವತಾರ್ 2ʼ ಚಿತ್ರ ಒಟಿಟಿ ಎಂಟ್ರಿಗೆ ಫ್ಯಾನ್ಸ್ ಕಾಯ್ತಿದ್ದಾರೆ.