Tag: ಜೇಬು ಕಳ್ಳತನ

  • ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

    ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

    – 13ಕ್ಕೂ ಅಧಿಕ ಜನರ ಜೇಬಿಗೆ ಕತ್ತರಿ

    ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತವರು ಜಿಲ್ಲೆಗೆ ಆಗಮಿಸಿದ್ದು, ಕಾರ್ಯಕ್ರಮದ ವೇಳೆ 13ಕ್ಕೂ ಅಧಿಕ ಜನರ ಜೇಬಿಗೆ ಖದೀಮರು ಕತ್ತರಿ ಹಾಕಿ, ಒಂದೂವರೆ ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೊನ್ನಪ್ಪ ಅವರ ಜೇಬಿನಲ್ಲಿದ್ದ 50 ಸಾವಿರ ರೂ.ಗಳಲ್ಲಿ 49 ಸಾವಿರ ರೂ. ದೋಚಿದ್ದಾರೆ. ಹೊನ್ನಪ್ಪ ಮಾತ್ರವಲ್ಲದೆ 13 ಜನರ ಜೇಬಿಗೆ ಕತ್ತರಿ ಹಾಕಿ, ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಸಿಎಂ ಬೊಮ್ಮಾಯಿ ಆಗಮಿಸಿದ್ದ ವೇಳೆ ಕೃತ್ಯ ಎಸಗಿದ್ದಾರೆ. ಹಿರೇಕೆರೂರು ಪಟ್ಟಣದಲ್ಲೂ ಕೆಲವರ ಜೇಬಿಗೆ ಕತ್ತರಿ ಹಾಕಿದ್ದಾರೆ. ಕಳ್ಳರ ಕೈಚಳಕಕ್ಕೆ ಜನರು ಹಾಗೂ ಸಿಎಂ ಅಭಿಮಾನಿಗಳು ಕಂಗಾಲಾಗಿದ್ದಾರೆ.

  • ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ

    ಕೇಂದ್ರ ಸಚಿವ ನಾರಾಯಣಸ್ವಾಮಿ ಕಾರ್ಯಕ್ರಮಲ್ಲಿ ಮೂವರ ಜೇಬಿಗೆ ಕತ್ತರಿ, 20 ಸಾವಿರ ಕಳ್ಳತನ

    ಹಾವೇರಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗಮನದ ವೇಳೆ ಕಳ್ಳರು ಮೂವರು ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಿದ್ದು, ಒಟ್ಟು 20 ಸಾವಿರ ರೂ.ಕಳ್ಳತನ ಮಾಡಿರುವ ಘಟನೆ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ನಡೆದಿದೆ.

    ಮೂವರು ಕಾರ್ಯಕರ್ತರ ಜೇಬು ಕತ್ತರಿಸಿದ್ದು, ಪುಷ್ಪಾರ್ಪಣೆ ಮಾಡುವ ವೇಳೆಯಲ್ಲಿ ಜೇಬಿನಲ್ಲಿದ್ದ 20 ಸಾವಿರಕ್ಕೂ ಅಧಿಕ ಹಣವನ್ನ ಖದೀಮರು ಎಗರಿಸಿದ್ದಾರೆ. ಖದೀಮರ ಕೈಚಳಕಕ್ಕೆ ಹಣ ಕಳೆದುಕೊಂಡ ಮೂವರು ಕಂಗಾಲಾಗಿದ್ದಾರೆ.

    ಸಚಿವ ನಾರಾಯಣಸ್ವಾಮಿ ಆಗಮನದ ಹಿನ್ನೆಲೆ ಹೆಚ್ಚು ಜನ ಜಮಾಯಿಸಿದ್ದ ವೇಳೆ ಮೂವರು ಬಿಜೆಪಿ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಲಾಗಿದೆ. ಸಚಿವರ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಕಳ್ಳರು ಕೈಚಳಕ ತೋರಿಸಿದ್ದು, ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿತ್ತು. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. Watch PUBLiC TV LIVE

  • ರೈಲು ಹತ್ತೋ ವೇಳೆ 1.20 ಲಕ್ಷ ರೂ. ಎಗರಿಸಿದ ಖದೀಮರು

    ರೈಲು ಹತ್ತೋ ವೇಳೆ 1.20 ಲಕ್ಷ ರೂ. ಎಗರಿಸಿದ ಖದೀಮರು

    ಮಂಡ್ಯ: ವ್ಯಕ್ತಿಯೊಬ್ಬ ಜೇಬಿನಲ್ಲಿ 1.20 ಲಕ್ಷ ರೂ. ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ರೈಲು ಹತ್ತುವ ವೇಳೆ ಜೇಬಿನಲ್ಲಿ ಇದ್ದ ಹಣ ಕಳವಾಗಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ.

    ಬೊಮ್ಮನಹಳ್ಳಿಯ ರಾಮು ಅವರು 1.20 ಲಕ್ಷ ರೂ.ಗಳನ್ನು ತಮ್ಮ ಬೇಬಿನಲ್ಲಿ ಇಟ್ಟುಕೊಂಡು ರಾಮನಗರಕ್ಕೆ ತೆರಳಲು ಮಂಡ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮೆಮೋ ರೈಲು ಆಗಮಿಸಿದ್ದು, ಈ ವೇಳೆ ರಾಮು ರೈಲು ಹತ್ತಲು ಮುಂದಾಗಿದ್ದರು.

    ರೈಲು ಹತ್ತಿದ ಬಳಿಕ ರಾಮು ಅವರು ಜೇಬನ್ನು ನೋಡಿಕೊಂಡಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೈಲು ಹತ್ತುವ ವೇಳೆ ಜನ ಸಂದಣಿಯಲ್ಲಿ ಖದೀಮರು ರಾಮು ಅವರ ಜೇಬಿನಿಂದ ಹಣ ಎಗರಿಸಿದ್ದಾರೆ. ಸದ್ಯ ಈ ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜೆಡಿಎಸ್ ಸ್ವಾಭಿಮಾನ ಯಾತ್ರೆಯಲ್ಲಿ 50 ಸಾವಿರ ರೂ. ಎಗರಿಸಿದ ಕಳ್ಳನಿಗೆ ಬಿತ್ತು ಭರ್ಜರಿ ಗೂಸಾ

    ಜೆಡಿಎಸ್ ಸ್ವಾಭಿಮಾನ ಯಾತ್ರೆಯಲ್ಲಿ 50 ಸಾವಿರ ರೂ. ಎಗರಿಸಿದ ಕಳ್ಳನಿಗೆ ಬಿತ್ತು ಭರ್ಜರಿ ಗೂಸಾ

    ವಿಜಯಪುರ: ಜೆಡಿಎಸ್ ಆಯೋಜಿಸಿರುವ ಉತ್ತರ ಕರ್ನಾಟಕ ಕನ್ನಡಿಗರ ಸ್ವಾಭಿಮಾನ ಯಾತ್ರೆ ಸಮಾವೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜೆಡಿಎಸ್ ಕಾರ್ಯಕರ್ತನ ಕಿಸೆ ಕತ್ತರಿಸಿ ಹಣ ಕದಿಯಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.

    ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದ ಯಾತ್ರೆಯ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನೇ ಅವಕಾಶವಾಗಿ ಬಳಸಿಕೊಂಡಿರುವ ಕಳ್ಳನೊಬ್ಬ ಸಾರ್ವಜನಿಕರೊಬ್ಬರ ಜೇಬಿನಲ್ಲಿದ್ದ 50 ಸಾವಿರ ರೂ. ಹಣವನ್ನು ಕದಿಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಕಳ್ಳನ ಕೈಚಳಕವನ್ನು ಗಮನಿಸಿದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ.

    ತಕ್ಷಣ ಸ್ಥಳದಲ್ಲಿದ್ದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.