Tag: ಜೇನು ದಾಳಿ

  • ಉತ್ತರ ಕನ್ನಡ ಜಿಲ್ಲೆಯ ಸಾತೋಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ

    ಉತ್ತರ ಕನ್ನಡ ಜಿಲ್ಲೆಯ ಸಾತೋಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ

    ಕಾರವಾರ: ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಮೇಲೆ ನಿರಂತರ ಜೇನು ದಾಳಿ (Bee Attack) ಮಾಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದ (Yellapur) ಪ್ರಸಿದ್ಧ ಸಾತೊಡ್ಡಿ (Sathoddi Falls) ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಜೇನು ದಾಳಿ ಮಾಡಿದ್ದು, ಇಂದು ಜೇನು ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೀರಲ್ಲಿ ಆಟವಾಡಲು ಸಾತೊಡ್ಡಿ ಫಾಲ್ಸ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತಿದ್ದು, ಜಲಪಾತದ ಬಳಿಯೇ ಪ್ರವಾಸಿಗರ ಮೇಲೆ ಜೇನುಹುಳಗಳು ನಿರಂತರ ದಾಳಿ ಮಾಡುತ್ತಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ

    ಜೇನುಹುಳುಗಳ ದಾಳಿ ಹಿನ್ನೆಲೆ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಬಿಸಗೋಡ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮೈಸೂರು ಬಿಜೆಪಿ ಘಟಕದಿಂದ ಮೋದಿಗಾಗಿ ರೆಡಿಯಾಗಿದೆ ವಿಶೇಷ ಉಡುಗೊರೆ

  • ಶಾಲೆಗೆ ಹೋಗ್ತಿದ್ದ 20ಕ್ಕೂ ಹೆಚ್ಚು ಮಕ್ಕಳ ಮೇಲೆ ಜೇನು ದಾಳಿ – 16 ಮಂದಿ ಗಂಭೀರ

    ಶಾಲೆಗೆ ಹೋಗ್ತಿದ್ದ 20ಕ್ಕೂ ಹೆಚ್ಚು ಮಕ್ಕಳ ಮೇಲೆ ಜೇನು ದಾಳಿ – 16 ಮಂದಿ ಗಂಭೀರ

    ಕಾರವಾರ: ಶಾಲೆಗೆ ಬರುತ್ತಿದ್ದ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ನೊಣ ಕಡಿದ ಘಟನೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್ ನಲ್ಲಿ ಇಂದು ನಡೆದಿದೆ.

    ಜೇನು ಕಡಿತದಿಂದ 16 ಜನ ಮಕ್ಕಳು ಗಂಭೀರ ಗಾಯಗೊಂಡು ಅಸ್ವಸ್ಥರಾಗಿದ್ದು, ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ ಶಾಲೆಗೆ ಮಕ್ಕಳು ಹೋಗುತ್ತಿರುವಾಗ ಏಕಾಏಕಿ ಶಾಲೆಯ ಪಕ್ಕದಲ್ಲೇ ಇರುವ ತೆಂಗಿನಮರದಲ್ಲಿ ಗೂಡುಕಟ್ಟಿದ್ದ ಜೇನುನೊಣ ದಾಳಿ ಮಾಡಿದೆ. ಇದನ್ನೂ ಓದಿ: ನನಗೆ ವಯಸ್ಸಾಗಿಲ್ಲ, ಕೈ ಹಿಡ್ಕೋಬೇಡಪ್ಪಾ: ಸಿದ್ದರಾಮಯ್ಯ

    ಈ ಪರಿಣಾಮ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿದಿದೆ. ತಕ್ಷಣಕ್ಕೆ 16 ಜನರು ಮಕ್ಕಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಲ್ಲದೇ ಗ್ರಾಮದ ಓರ್ವ ಪುರುಷ ಹಾಗೂ ಮಹಿಳೆಗೂ ಜೇನು ಕಚ್ಚಿದ್ದು, ಗಂಭೀರ ಗಾಯಗೊಂಡ ಇವರನ್ನು ಸಹ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಸ್ಪತ್ರೆಗೆ ಶಾಸಕಿ ಭೇಟಿ!
    ಘಟನೆ ನಡೆದ ವಿಷಯ ತಿಳಿದ ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸ್ಥಿತಿಗತಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಮೇಲೆ ಜೇನು ಕಚ್ಚಿ ಹೆಚ್ಚಿನ ಹಾನಿ ಮಾಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಅರಣ್ಯ ಇಲಾಖೆಗೂ ಸಹ ಸೂಚನೆ ನೀಡಲಾಗಿದ್ದು, ಶಾಲಾ ಆವರಣದಲ್ಲಿ ಇರುವ ಜೇನನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

    ಹೆಚ್ಚಿದ ಜೇನು ಹಾವಳಿ
    ಕಾರವಾರ ಮತ್ತು ಅಂಕೋಲ ಭಾಗದಲ್ಲಿ ದಿನದಿಂದ ದಿನಕ್ಕೆ ಜೇನು ಹಾವಳಿ ಮಿತಿಮೀರುತ್ತಿದೆ. ಡಿ.23 ರಂದು ಅಂಕೋಲದ ಅಜ್ಜಿಕಟ್ಟದ ನಿಲಂಪುರದಲ್ಲಿ ಹಸನ್ ಖಾನ್ ಕರೀಂ ಖಾನ್ ಎಂಬವವರು ಜೇನು ಕಡಿದು ಮೃತರಾಗಿದ್ದರು. ಇದನ್ನೂ ಓದಿ: ಪಕ್ಷದ ಆಂತರಿಕ ಸಮಸ್ಯೆಗಳ ಬಗ್ಗೆ ತಾರ್ಕಿಕ ಅಂತ್ಯ ಕಾಣಿಸಲಾಗೋದು: ಮಹಾಂತೇಶ್ ಕವಟಗಿಮಠ

    ಕಾರವಾರ ಅಂಕೊಲ ಭಾಗದಲ್ಲಿ ಕಳೆದ ಒಂದು ವಾರದಲ್ಲಿ 60ಕ್ಕೂ ಹೆಚ್ಚು ಜನರಿಗೆ ಜೇನು ಕಡಿದ ವರದಿಯಾಗಿದೆ.