Tag: ಜೆ.ಡಿ.ಎಸ್

  • ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

    ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

    ನಿನ್ನೆಯಿಂದ ನಟ ಡಾಲಿ ಧನಂಜಯ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರಲ್ಲೂ ಅರಸಿಕೆರೆ ಶಿವಲಿಂಗೇಗೌಡರ ಬದಲಿಗೆ ಜೆ.ಡಿ.ಎಸ್ ಪಕ್ಷವು ಡಾಲಿ ಧನಂಜಯ್ ಅವರನ್ನು ಸ್ಪರ್ಧಾ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವಾಗ ಡಾಲಿಗೆ ರಾಜಕೀಯ ಬೇಕಿತ್ತಾ ಎಂದೂ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಈ ಎಲ್ಲದರ ಕುರಿತು ಡಾಲಿ ಧನಂಜಯ್ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ‘ನಾನು ರಾಜಕೀಯ ಸೇರುತ್ತೇನೆ ಎಂದು ಯಾರಿಗೂ ಹೇಳಿಲ್ಲ. ಯಾವತ್ತೂ ಯೋಚಿಸಿಲ್ಲ. ಹೀಗೆ ಗೆಳೆಯರು ಸುದ್ದಿಯನ್ನು ಕಳುಹಿಸಿದ ಮೇಲೆ ನನಗೂ ಗೊತ್ತಾಯಿತು. ನಾನು ಶೂಟಿಂಗ್ ನಲ್ಲಿ ಇದ್ದೇನೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಲಾವಿದನಾಗಿ ಜನರು, ಅಭಿಮಾನಿಗಳು ನನ್ನನ್ನು ಸ್ವೀಕರಿಸಿದ್ದಾರೆ. ಅಭಿಮಾನಿ ದೇವರುಗಳನ್ನು ರಂಜಿಸುವುದಷ್ಟೇ ನನ್ನ ಕೆಲಸ. ರಾಜಕೀಯಕ್ಕೆ ಸೇರುತ್ತೇನೆ ಎನ್ನುವುದು ಸುಳ್ಳು ಸುದ್ದಿ’ ಎಂದಿದ್ದಾರೆ ಡಾಲಿ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಈ ಕುರಿತು ಅವರು ಫೇಸ್ ಬುಕ್ ನಲ್ಲೂ ಬರೆದುಕೊಂಡಿದ್ದು, ‘ಸುಮ್ನೆ ಏನೇನೊ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು ಎಲ್ಲ ಬಿಟ್ಟು ನಡೀರಿ ಏನಾರ ಒಂದಿಷ್ಟು ಒಳ್ಳೆಯ ಕೆಲಸ ಮಾಡೋಣ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಮೊನ್ನೆಯಷ್ಟೇ ಜಮಾಲಿಗುಡ್ಡ ಸಿನಿಮಾದ ಶೂಟಿಂಗ್ ಮುಗಿಸಿರುವ ಡಾಲಿ, ಇದೀಗ ಹೊಯ್ಸಳ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ಇನ್ನೂ ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಹೀಗಾಗಿ ರಾಜಕೀಯ ಸೇರುವುದು ಕನಸಿನಲ್ಲೂ ಸಾಧ್ಯವಿಲ್ಲ ಎಂದಿದ್ದಾರೆ ಡಾಲಿ .

  • ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    – ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ
    – ಸಿಎಂ ಇಬ್ರಾಹಿಂ ವಿರುದ್ಧ ಕಿಡಿ

    ಬಾಗಲಕೋಟೆ: ಸಿದ್ದರಾಮಯ್ಯರಂತಹ ಲೀಡರ್‍ ನ ನಾನು ನೋಡಿಯೇ ಇಲ್ಲ, ಎಚ್.ಡಿ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

    ಖಾಸಗಿ ಕಾರ್ಯಕ್ರಮಕ್ಕಾಗಿ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಆಗಮಿಸಿದ ಜಮೀರ್ ಅಹ್ಮದ್ ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಬಾಗಲಕೋಟೆಯಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿದೆ ಎಂದರು.

    ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಉಪಸಭಾಪತಿ ಆಯ್ಕೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದೆ, ಸದ್ಯ ಜೆಡಿಎಸ್ ಪಕ್ಷದಿಂದ ಎಸ್ ಪದವನ್ನು ತೆಗೆಯಬೇಕು. ಇದು ಯಾವ ಜಾತ್ಯಾತೀತ ಪಕ್ಷ. ಜೆಡಿಎಸ್ ಪಕ್ಷ ಪ್ರಸ್ತುತ ಸತ್ತಿದೆ. 2006ರಲ್ಲಿ ಎಚ್‍ಡಿಕೆ ಸಿಎಂ ಆಗಿ ಒಳ್ಳೆಯ ಆಡಳಿತ ಕೊಟ್ಟಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ಜೆಡಿಎಸ್‍ನಲ್ಲಿದ್ದಾಗ 59 ಸೀಟು ಬಂದಿತ್ತು. ಈಗ ಕುಮಾರಸ್ವಾಮಿ ಲೀಡರ್ ಎನ್ನುತ್ತಾರಲ್ಲ. ಈಗ ಆ ನಂಬರ್ ರೀಚ್ ಮಾಡುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸೆಪ್ಟೆಂಬರ್ ಅಕ್ಟೋಬರ್‍ ನಲ್ಲಿ ಚುನಾವಣೆ ನಡೆಯುತ್ತದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿ ಪೂರ್ಣಗೊಳಿಸುತ್ತದೆ. ಬಿಜೆಪಿಗೆ ಪೂರ್ಣ ಬಹುಮತವಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

    ಇನ್ನು ಅಲ್ಪಸಂಖ್ಯಾತರ ಅನುದಾನ ಕಡಿತ ವಿಚಾರಕ್ಕೆ ಮಾತನಾಡಿದ ಜಮೀರ್, ಅಲ್ಪಸಂಖ್ಯಾತರ ಅನುದಾನ ನಮಗೆ ಕೊಟ್ಟಿದ್ದ ಅನುದಾನ ಕಡಿತ ಗೊಳಿಸಿದ್ದಾರೆ. ಅಲ್ಪಸಂಖ್ಯಾತರಿಗೆ 3150 ಕೋಟಿ ಇದ್ದ ಅನುದಾನವನ್ನು 600 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಶಾದಿ ಭಾಗ್ಯ ನಿಲ್ಲಿಸಿದ್ದಾರೆ. ಏನೇ ಮಾಡಲಿ ಅವರ ಸರ್ಕಾರವಿದೆ. ಆದರೆ ಮಕ್ಕಳಿಗೆ ಕೊಡುತ್ತಿದ್ದ ಸ್ಕಾಲರ್ ಶಿಪ್ 198 ಕೋಟಿ ಇದ್ದಿದ್ದು 100 ಕೋಟಿ ಮಾಡಿದ್ದಾರೆ. ಇದರಿಂದ ಉಳಿದ 98 ಕೋಟಿ ಯಾರು ಕೊಡುತ್ತಾರೆ? ಓದುವ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

    ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುವ ವಿಚಾರಕ್ಕೆ ಮಾತನಾಡಿದ ಜಮೀರ್, ಸಿಎಂ ಇಬ್ರಾಹಿಂ ಕಾಂಗ್ರೆಸ್‍ನ ಎಂಎಲ್‍ಸಿ ಆಗಿದ್ದಾರೆ. ಇನ್ನು ನಾಲ್ಕೂವರೆ ವರ್ಷ ಅವಧಿ ಇದೆ. ಹಾಗೇನಾದ್ರೂ ಕಾಂಗ್ರೆಸ್ ಬಿಡಬೇಕಿದ್ದರೆ ಎಂಎಲ್‍ಸಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಚುನಾವಣೆಗಳಲ್ಲಿ ಸೋತಮೇಲೂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದ ಚೇರ್ಮನ್ ಮಾಡಿದೆ. ಇದನ್ನು ಹೊರತು ಪಡಿಸಿ ಪಕ್ಷ ಇಬ್ರಾಹಿಂಗೆ ಮತ್ತೇನು ಮಾಡಬೇಕು? ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎನುವುದಾದರೆ ಸಿದ್ದರಾಮಯ್ಯ ಸಿಎಂ ಇದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಅನುದಾನವನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸಿದಾಗ ಕಾಂಗ್ರೆಸ್‍ನಲ್ಲೇ ಇದ್ದ ಇಬ್ರಾಹಿಂ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ ಎಂದು ವ್ಯಂಗವಾಡಿದರು.

  • ಜಿಟಿಡಿ ಎಲ್ಲಿಗೆ ಹೋಗಬೇಕು ಹೋಗಲಿ ಬಿಡಿ: ಹೆಚ್‍ಡಿಡಿ

    ಜಿಟಿಡಿ ಎಲ್ಲಿಗೆ ಹೋಗಬೇಕು ಹೋಗಲಿ ಬಿಡಿ: ಹೆಚ್‍ಡಿಡಿ

    ಮೈಸೂರು: ಮಾಜಿ ಸಚಿವ ಜಿಟಿ ದೇವೇಗೌಡ ಜೆಡಿಎಸ್ ಸಭೆಗಳಿಗೆ ಗೈರಾದ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಅವರು ಎಲ್ಲಿಗೆ ಹೋಗಬೇಕು ಹೋಗಲಿ ಬಿಡಿ. ಜಿಟಿಡಿಯನ್ನು ಯಾರು ಹಿಡಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಂಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೆಗೌಡರ ಬಗ್ಗೆ ನಾನೇನು ಮಾತನಾಡಲ್ಲ. ದೇವೆಗೌಡರು ನನ್ನ ಗುರುಗಳಲ್ಲ ಎಂದು ಅವರು ಹೇಳಿದ್ದಾರೆ. ವೈಯಕ್ತಿವಾಗಿ ನಾನು ಯಾರನ್ನು ಟೀಕೆ ಮಾಡಲ್ಲ ಎಂದು ತಿಳಿಸಿದರು.

    ಜಿಟಿಡಿ ಅವರ ಹೇಳಿಕೆಗಳನ್ನು ನಾನು ಕಿವಿಯಾರೆ ಕೇಳಿದ್ದೇನೆ. ನನಗೆ ಯಾರು ಗುರು ಇಲ್ಲ, ನನಗೆ ಕುಮಾರಸ್ವಾಮಿ ಗುರು ಅಲ್ಲ. ದೇವೇಗೌಡರು ಗುರುವಲ್ಲ. ರಾಜಕೀಯ ಕ್ಷೇತ್ರದಲ್ಲಿ ನಾನೇ ಸ್ವಂತ ಬೆಳೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಹೇಳಲಿ ಬಿಡಿ ಅದರ ಬಗ್ಗೆ ಯಾಕೆ ಕೇಳುತ್ತಿರಾ ಎಂದು ದೇವೇಗೌಡರು ಗರಂ ಆದರು.

    ಈ ವೇಳೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದಿಂದ ಡಿಕೆಶಿ ಪರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾನೂನಿಗು ಜಾತಿಗೂ ಹೊಂದಾಣಿಕೆ ಮಾಡಬಾರದು. ಮೋದಿಯವರ ಸರ್ಕಾರದಲ್ಲಿ ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಯಾರು ರಾಜಕೀಯವಾಗಿ ಪ್ರತಿಭಟಿಸುತ್ತಾರೆ ಅವರ ವಿರುದ್ಧ ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಅಂತಿಮವಾಗಿ ಈ ಬಗ್ಗೆ ಕೋರ್ಟ್ ತೀರ್ಮಾನ ಮಾಡುತ್ತೆ. ನಿನ್ನೆಯ ಪ್ರತಿಭಟನೆ ಕೋರ್ಟ್ ಪರವು ಅಲ್ಲ ವಿರುದ್ಧವು ಅಲ್ಲ ಎಂದು ಹೇಳಿದರು.

    ಡಿಕೆಶಿ ಪರ ನಿನ್ನೆಯ ಪ್ರತಿಭಟನೆಯಲ್ಲಿ ಜೆಡಿಎಸ್ ಪ್ರಮುಖರು ಭಾಗವಹಿಸದ ವಿಚಾರದ ಬಗ್ಗೆ ಮಾತನಾಡಿ, ಕುಮಾರಸ್ವಾಮಿಯವರು ಡಿಕೆಶಿ ಮನೆಗೆ ಹೋಗಿ ಅವರ ತಾಯಿಯನ್ನು ಮಾತನಾಡಿಸಿ ಬಂದಿದ್ದಾರೆ. ನಿನ್ನೆ ಬೇರೆ ಕಾರ್ಯಕ್ರಮದ ನಿಮಿತ್ ಕುಮಾರಸ್ವಾಮಿ ಮೈಸೂರಿಗೆ ಹೋಗಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ನನ್ನನ್ನು ಕರೆದರು. ಆದರೆ ನಾನು ಮಾಜಿ ಪ್ರಧಾನಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ಯೋಗ್ಯವಲ್ಲ ಎಂದು ಹೋಗಿಲ್ಲ. ಕೋರ್ಟ್ ನಲ್ಲಿ ಏನು ತೀರ್ಮಾನವಾಗುತ್ತೆ ನೋಡೋಣ ಎಂದು ಹೇಳಿದ್ದೆ. ನಮ್ಮ ಎಂಎಲ್‍ಎ ಗಳು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.