Tag: ಜೆಸ್ಸಿ ಗಿಫ್ಟ್

  • ಸಿನಿಮಾ ರಂಗದ ‘ರೋಲೆಕ್ಸ್’ ಆದ ನಟ ಕೋಮಲ್

    ಸಿನಿಮಾ ರಂಗದ ‘ರೋಲೆಕ್ಸ್’ ಆದ ನಟ ಕೋಮಲ್

    ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ‘ಕಾಲಾಯ ನಮಃ’ ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ‘ಬಿಲ್ ಗೇಟ್ಸ್’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ‘ರೋಲೆಕ್ಸ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ. ಈ ಚಿತ್ರ ಕಟೆಂಟ್ ಬೆಸ್ಡ್ ಸಿನಿಮಾವಾಗಿದ್ದು ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ

     

    ಫೀನಿಕ್ಸ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್. ಸಿ. ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ ‘ರೋಲೆಕ್ಸ್ ‘ ಸಿನಿಮಾ ಸೆಟ್ಟೇರಲಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್. ಖುದ್ದು ಅಂಬರೀಶ್ ಅವರೇ ಮುಂದೆ ನಿಂತು, ಬಲು ಆಸ್ಥೆಯಿಂದ ಆರಂಭಿಸಿದ್ದ ಚಿತ್ರವಿದು. ಈಗ ಅಂಬಿ ಮರೆಯಾಗಿದ್ದರೂ ಅವರ ನೆನಪಿನ ನೆರಳಲ್ಲಿಯೇ ಅಚ್ಚುಕಟ್ಟಿನಿಂದ ಚಿತ್ರೀಕರಣ ಮುಗಿಸಿಕೊಳ್ಳುತ್ತಿರೋ ಅಮರ್ ಚಿತ್ರವೀಗ ಹಾಡುಗಳಿಂದ ಜನರನ್ನು ಸೆಳೆಯುತ್ತಿದೆ.

    ಈಗಾಗಲೇ ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿವೆ. ಅವೆಲ್ಲವೂ ಈಗ ಟ್ರೆಂಡ್ ಸೆಟ್ ಮಾಡಿವೆ. ಅದಾಗಲೇ ಮತ್ತೊಂದು ಹಾಡಿಗಾಗಿ ಚಿತ್ರತಂಡ ಭರ್ಜರಿಯಾಗೇ ಶ್ರಮ ಹಾಕಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಿರೂಪ್ ಭಂಡಾರಿ ಕೂಡಾ ಸಾಥ್ ನೀಡಿದ್ದಾರೆ.

    ಇದು ಎಲ್ಲ ರೀತಿಯಲ್ಲಿಯೂ ಸ್ಪೆಷಲ್ ಸಾಂಗು. ಇದನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಧ್ವನಿಯಾಗಿದ್ದಾರೆ. ಬಹುಕಾಲದ ನಂತರ ಕೊಡವ ಭಾಷೆಯ ಹಾಡೊಂದು ಈ ಮೂಲಕ ಅಣಿಗೊಂಡಿದೆ. ಈ ಹಾಡನ್ನು ಕೊಡವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮರ್ ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಈ ಕಾರಣದಿಂದಲೇ ಅಮರ್ ಬಗ್ಗೆ ದರ್ಶನ್ ಅಭಿಮಾನಿಗಳೂ ಆಕರ್ಷಿತರಾಗಿದ್ದರು. ಆದರೆ ದರ್ಶನ್ ಹಾಡೊಂದರಲ್ಲಿಯೂ ನಟಿಸಿದ್ದಾರೆಂಬ ವಿಚಾರ ಅಭಿಮಾನಿಗಳ ಪಾಪಿಗೆ ಡಬಲ್ ಸಂಭ್ರಮವನ್ನು ಕೊಡಮಾಡಿದೆ.

    ಅಂಬರೀಶ್ ಅವರು ನಂಬಿಕೆಯಿಟ್ಟು ಈ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ನಾಗಶೇಖರ್ ಅವರಿಗೆ ವಹಿಸಿದ್ದರು. ಆ ಜವಾಬ್ದಾರಿಯನ್ನು ಗಂಭೀರವಾಗಿಯೇ ವಹಿಸಿಕೊಂಡಿರೋ ನಾಗಶೇಖರ್ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಅಮರ್ ನನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ವಿಶೇಷ ಹಾಡು ರೆಡಿಯಾಗಿದೆ.