Tag: ಜೆರಾಕ್ಸ್

  • ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    – 6 ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ

    ಬೆಂಗಳೂರು: ನಿಷೇಧಗೊಂಡಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೊದಲಿಗೆ 35 ಲಕ್ಷ ಅಸಲಿ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1 ಸಾವಿರ 500 ಮುಖಬೆಲೆಯ 70 ಲಕ್ಷ ಅಸಲಿ ನೋಟುಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮತ್ತಷ್ಟು ಹಣ ಕಾಸರಗೋಡಿನಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕಾಸರಗೋಡಿಗೆ ಹೊರಟ ಪೊಲೀಸರಿಗೆ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ. ಜೊತೆಗೆ 16 ಮೂಟೆ ಪೇಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ಈ ಪ್ರಕರಣ ಕುರಿತಂತೆ ಮಂಜುನಾಥ್, ದಯಾನಂದ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿ ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಲ್ಲಿ ಮತ್ತೋರ್ವ ಆರೋಪಿ ವೆಂಕಟೇಶ್ ಬಿಬಿಎಂಪಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

  • ಯುವತಿಗೆ ದುಬಾರಿ ಬೆಲೆಯ ಬಂಗಾರ ಗಿಫ್ಟ್‌ ನೀಡಿದ್ದ ಜಾರಕಿಹೊಳಿ

    ಯುವತಿಗೆ ದುಬಾರಿ ಬೆಲೆಯ ಬಂಗಾರ ಗಿಫ್ಟ್‌ ನೀಡಿದ್ದ ಜಾರಕಿಹೊಳಿ

    ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಗೆ ಸಂಬಂಧಿಸಿದ 300 ಪುಟಗಳ ಚಾಟ್‌ ಹಿಸ್ಟರಿಯನ್ನು ಎಸ್‌ಐಟಿ ಪೊಲೀಸರಿಗೆ ನೀಡಲು ಯುವತಿ ಮುಂದಾಗಿದ್ದಾರೆ.

    ಹೌದು. 300 ಪುಟಗಳ ಚಾಟಿಂಗ್ ಜೆರಾಕ್ಸ್ ಪ್ರತಿಯನ್ನು ಯುವತಿ ಪರ ವಕೀಲರು ತೆಗೆದುಕೊಂಡಿದ್ದು, ಇಂದು ಈ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಯುವತಿ ನೀಡುವ ಸಾಧ್ಯತೆಯಿದೆ. ಯುವತಿಗೆ ಜಾರಕಿಹೊಳಿ ದುಬಾರಿ ಬೆಲೆಯ ಬಂಗಾರವನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಎಸ್‌ಐಟಿಗೆ ನೀಡಲು ಮುಂದಾಗಿದ್ದಾರೆ.

    ವಾಟ್ಸಪ್‌ ಚಾಟಿಂಗ್‌ ಲಿಸ್ಟ್‌ ನೀಡಿದರೂ ಯುವತಿ ಬಳಸುತ್ತಿದ್ದ ಮೊಬೈಲ್‌ನ್ನು ತನಿಖೆ ಸಂಬಂಧ ಎಸ್‌ಐಟಿ ಕೇಳಲಿದೆ. ಬಳಿಕ ಆ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

    ಜಾರಕಿಹೊಳಿ ಒಡನಾಟಕ್ಕೆ ಯುವತಿ ಪಶ್ಚಾತ್ತಾಪ ಪಟ್ಟಿದ್ದಾರೆ. ನಾನು ಕೆಲಸಕ್ಕೆ ಸೇರಿಕೊಳ್ಳುವ ಆಸೆಯಿಂದ ಸಹವಾಸ ಮಾಡಿದೆ. ನನ್ನ ಕುಟುಂಬದ ನಿರ್ವಹಣೆಯ ಸಲುವಾಗಿ ನನಗೆ ಕೆಲಸದ ಅವಶ್ಯಕತೆ ಇತ್ತು. ಹೀಗಾಗಿ ನಾನು ಸಹವಾಸೆ ಮಾಡಿದ್ದೆ ಎಂದು ಯುವತಿ ಎಸ್‌ಐಟಿ ಮುಂದೆ ಹೇಳಿರುವುದಾಗಿ ತಿಳಿದು ಬಂದಿದೆ.

  • ಮನೆಯಲ್ಲಿ ಗಲಾಟೆ ಮಾಡಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

    ಮನೆಯಲ್ಲಿ ಗಲಾಟೆ ಮಾಡಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

    ಕೊಪ್ಪಳ: ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಸಮೀಪದ ಹಿರೇಹಳ್ಳ ಬ್ರಿಡ್ಜ್ ಗೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಾಗೀಶ್ ಹಿರೇಮಠ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಕೊಪ್ಪಳ ತಾಲೂಕಿನ ಇರಕಲಗಡ ನಿವಾಸಿಯಾಗಿದ್ದು, ಗ್ರಾಮದಲ್ಲಿ ಜೆರಾಕ್ಸ್ ಅಂಗಡಿ ಹಾಕಿಕೊಂಡಿದ್ದಾನೆ.

    ವಾಗೀಶ್ ಕಳೆದ ಎರಡು ದಿನಗಳ ಹಿಂದೇ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದನು ಎನ್ನಲಾಗಿದೆ. ಮಂಗಳವಾರ ರಾತ್ರಿ ವ್ಯಕ್ತಯೊಬ್ಬರ ಶವ ಪತ್ತೆಯಾಗಿತ್ತು. ಈ ವಿಷಯ ತಿಳಿದ ಕೊಪ್ಪಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಡಿದಾಗ ಆತನ ಬಳಿ ಇದ್ದ ಗುರುತಿನ ಚೀಟಿಯಿಂದ ಪತ್ತೆಯಾಗಿದೆ.

    ಈ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಸಾಂರ್ದಭಿಕ ಚಿತ್ರ

    ಮೈಸೂರು: ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿ 8,800 ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

    ಮೈಸೂರಿನ ಜ್ಯೋತಿ ನಗರದ ನಿವಾಸಿಯಾ ಗೌರಮ್ಮ(40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ನಲ್ಲಿ ಬೀದಿಬದಿ ವ್ಯಾಪಾರಸ್ಥರ ಬಳಿ ನೋಟು ಚಲಾವಣೆ ಮಾಡುವ ವೇಳೆ ಗೌರಮ್ಮ ಸಿಕ್ಕಿಬಿದ್ದಿದ್ದಾಳೆ. ಆದರೆ ತಿಲಕ್ ನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಖಲೀಲ್ ನಾಪತ್ತೆಯಾಗಿದ್ದಾನೆ.

    ಬಂಧಿತಳಿದ್ದ 500 ಮುಖಬೆಲೆಯ 10 ನೋಟುಗಳು, 200 ಮುಖಬೆಲೆಯ 18 ನೋಟುಗಳು ಹಾಗೂ 100 ಮುಖಬೆಲೆಯ 2 ನೋಟುಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಯಂತ್ರವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಬೆಂಗಳೂರು: ಸಿಐಡಿ ಎಸ್‍ಪಿ ಕುಮಾರಸ್ವಾಮಿಯ ಸಣ್ಣತನದ ರೂಲ್ಸ್ ನಿಂದ ಅಧಿಕಾರಿಗಳಲ್ಲಿ ಅಸಮಾಧಾನವೊಂದು ಭುಗಿಲೆದ್ದಿದೆ.

    ಜೆರಾಕ್ಸ್ ಮಿಷಿನ್ ಆನ್ ಮಾಡೋಕೆ ಎಸ್‍ಪಿ ಅನುಮತಿ ಬೇಕು. ಒಂದೇ ಒಂದು ಶೀಟ್ ಜೆರಾಕ್ಸ್ ಮಾಡಿಸಬೇಕು ಅಂದ್ರೂ ಎಸ್ ಪಿ ಆರ್ಡರ್ ಬೇಕಂತೆ. ಸಿಐಡಿಯ ಅಡ್ಮಿನ್ ಎಸ್ ಪಿ ಕುಮಾರಸ್ವಾಮಿ ಸಹಿ ಇಲ್ಲದೇ ಜೆರಾಕ್ಸ್ ಮಾಡಿಸುವಂತಿಲ್ಲ.

    ಜೆರಾಕ್ಸ್ ಯಂತ್ರಗಳ ನಿರ್ವಹಣೆಗೆಂದೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರೆ ಎಸ್ ಪಿ ಕುಮಾರಸ್ವಾಮಿ ಸಹಿ ಮಾಡಿಸಿಕೊಂಡು ಬಂದ್ರೆ ಮಾತ್ರ ಇವರು ಜೆರಾಕ್ಸ್ ಮಾಡಿಕೊಡೋದು. ಒಂದು ವೇಳೆ ಅಡ್ಮಿನ್ ಎಸ್ ಪಿ ರಜೆ ಇದ್ದರೆ, ಅಡ್ಮಿನ್ ಡಿವೈಎಸ್ ಪಿ ಮತ್ತು ಇನ್ಸ್ ಪೆಕ್ಟರ್ ಸಹಿ ಪಡೆದು ಜೆರಾಕ್ಸ್ ಮಾಡಿಸಿಕೊಳ್ಳಬೇಕು.

    ಪ್ರತಿದಿನ ಸಾಕಷ್ಟು ಕೇಸ್ ಗಳು ಮತ್ತು ಆರ್ಡರ್ ಗಳು ಸಿಐಡಿಗೆ ಬರುತ್ತೆ. ಆದ್ರೆ ಒಂದು ಪೇಜ್ ಜೆರಾಕ್ಸ್ ಮಾಡಿಸೋಕು ಎಸ್ ಪಿ ಕುಮಾರಸ್ವಾಮಿ ಮುಂದೆ ಅಧಿಕಾರಿಗಳು ಹೋಗಬೇಕು. ಎಲ್ಲಾ ಕೇಸ್ ಗಳಲ್ಲಿ ಪೇಪರ್ ವರ್ಕ್ ಸಾಕಷ್ಟು ಇರೋದ್ರಿಂದ ಜೆರಾಕ್ಸ್ ಗಾಗಿ ಎಸ್ ಪಿ ಮುಂದೆ ನಿಲ್ಲೋದು ಇದೀಗ ಅಧಿಕಾರಿಗಳಲ್ಲಿ ಅಸಮಾಧಾನ ಉಂಟುಮಾಡಿದೆ.

    ಜೆರಾಕ್ಸ್ ಮಾಡಿಸಿ ಅಧಿಕಾರಿಗಳೇನು ಮನೆಗೆ ತೆಗೆದುಕೊಂಡು ಹೋಗಲ್ಲ. ಎಸ್ ಪಿ ಕುಮಾರಸ್ವಾಮಿಯರ ಈ ರೂಲ್ಸ್ ನಿಂದ ಸಾಕಷ್ಟು ಅಧಿಕಾಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲಸ ಮಾಡೋದು ಬಿಟ್ಟು ಕೇವಲ ಜೆರಾಕ್ಸ್ ಗಾಗಿ ಎಸ್ ಪಿ ಚೇಂಬರ್ ಬಾಗಿಲು ಕಾಯಬೇಕಾ ಅನ್ನೋ ಆಕ್ರೋಶವನ್ನು ಅಧಿಕಾರಿಗಳು ಹೊರಹಾಕಿದ್ದಾರೆ.