ಓರ್ವ ಯುವತಿ ಜೆಪಿ ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದರು. ಆಟೋ ಲೋಕೇಶನ್‌ಗೆ ಬಂದ ತಕ್ಷಣ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದಿದ್ದನಂತೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಇದೀಯಾ ಎಂದು ಹಣೆ ಮುಟ್ಟಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಕೂಡಲೇ ಯುವತಿ ಆಟೋದಿಂದ ಜಿಗಿದು ಓಡಿಹೋಗಿದ್ದಾರೆ.
ಈ ಕುರಿತು ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ
ಬೆಂಗಳೂರು: ವೃದ್ಧಾಶ್ರಮಕ್ಕೆ (Old Age Home) ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.
ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. ಕೃಷ್ಣಮೂರ್ತಿ (81), ರಾಧ (74) ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ವಯಸ್ಸಾದ ತಂದೆ ತಾಯಿಯನ್ನು ಮಗ ಕಳೆದ ತಿಂಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಾವು ಬೆಳೆಗೆ ಬೆಂಬಲ ಬೆಲೆ ಕೊಡಿಸಿದ್ದು ಕುಮಾರಣ್ಣ, ಡಿಕೆ ಬ್ರದರ್ಸ್ ಏನ್ಮಾಡ್ತಿದ್ದಾರೆ: ನಿಖಿಲ್ ಕಿಡಿ
ಆನೇಕಲ್: ಅರೆಬೆಂದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣೆ(Bannerghatta Police Station) ವ್ಯಾಪ್ತಿಯ ಶಿಲೀಂದ್ರ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಧುಸೂದನ್ ಕ್ಯಾಬ್ ಡ್ರೈವರ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಬೈಕ್‌ನಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಮಧುಸೂದನ್ ವಾಪಾಸ್ ಮನೆಗೆ ಬಂದಿರಲಿಲ್ಲ. ಇಡೀ ರಾತ್ರಿ ಮನೆಯವರು ಮಧುಸೂದನ್‌ಗಾಗಿ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?
ಆದರೆ ಗುರುವಾರ ಬೆಳಗ್ಗೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಶಿಲೀಂದ್ರ ದೊಡ್ಡಿ ಸಮೀಪದ ನಿರ್ಜನ ಪ್ರದೇಶದಲ್ಲಿ ಮಧುಸೂದನ್ ಅವರ ಮೃತದೇಹವು ಅರೆಬರೆಯಾಗಿ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಬೈಕ್ ಪತ್ತೆಯಾಗಿದ್ದು, ಬೈಕ್‌ನ ನಂಬರ್ ಆಧಾರದ ಮೇಲೆ ಮಧುಸೂದನ್ ಅವರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇಡೀ ದೇಶವೇ ಮೆಚ್ಚುವ ಕೆಲಸ: ನಿಖಿಲ್ ಕುಮಾರಸ್ವಾಮಿ
ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಇದು ಕೊಲೆ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಅನಾರೋಗ್ಯದಿಂದ ನಟ ಕಿಚ್ಚ ಸುದೀಪ್ (Kiccha Sudeep) ಅವರ ತಾಯಿ ಭಾನುವಾರ ಬೆಳಗ್ಗೆ ವಿಧಿವಶರಾಗಿದ್ದು, ಜೆಪಿ ನಗರದ (JP Nagar) ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜಯನಗರದ ಅಪೋಲೋ ಆಸ್ಪತ್ರೆಯಿಂದ ಸರೋಜಾ ಅವರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಜೆಪಿ ನಗರದ ನಿವಾಸಕ್ಕೆ ತರಲಾಗಿದೆ. ಈ ವೇಳೆ ನಟ ಕಿಚ್ಚ ಸುದೀಪ್ ಅವರು ಕೂಡ ಅಂಬುಲೆನ್ಸ್‌ನಲ್ಲಿಯೇ ಮನೆಗೆ ತೆರಳಿದ್ದಾರೆ. ಮನೆ ಬಳಿ ಅಂತಿಮ ದರ್ಶನಕ್ಕೆ ಶಾಮಿಯಾನ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುದೀಪ್ ಮನೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದು, ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇದನ್ನೂ ಓದಿ: ನಟ ಕಿಚ್ಚ ಸುದೀಪ್ ತಾಯಿ ನಿಧನ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ (Kiccha Sudeep) ತಾಯಿ ಸರೋಜಾ ಭಾನುವಾರ ನಿಧನರಾಗಿದ್ದಾರೆ.
ಅನಾರೋಗದ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 07:04ಕ್ಕೆ ನಿಧನ ಆಗಿರೋ ಮಾಹಿತಿ ಲಭಿಸಿದೆ.
ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸಕ್ಕೆ ತರಲಿದ್ದಾರೆ.
– ಘಟನಾ ಸ್ಥಳದಲ್ಲಿ ಸುಟ್ಟ ವಯರ್ ಪತ್ತೆ – ಎನ್‌ಐಎ ಪರಿಶೀಲನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಂಗಳವಾರ ಶಂಕಾಸ್ಪದವಾಗಿ ಕುಕ್ಕರ್ ಸ್ಫೋಟಗೊಂಡ (Cooker Blast) ಪರಿಣಾಮ ಚಿಕಿತ್ಸೆ ಫಲಿಸದೆ ಓರ್ವ ಸಾವನ್ನಪ್ಪಿದ ಘಟನೆ ಜೆಪಿ ನಗರದಲ್ಲಿ (JP Nagar) ನಡೆದಿದೆ.
ಕುಕ್ಕರ್ ಸ್ಫೋಟದಲ್ಲಿ ಉತ್ತರ ಪ್ರದೇಶ ಮೂಲದ ಮೋಸಿನ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಾಳು ಸಮೀರ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸ್ಫೋಟದ ಹಿಂದೆ ಅನುಮಾನಗಳು ಶುರುವಾಗಿವೆ. ಜೆಪಿ ನಗರ 24ನೇ ಮುಖ್ಯರಸ್ತೆಯ ಉಡುಪಿ ಉಪಹಾರದ ಮನೆಯ ಬಳಿ ಈ ಘಟನೆ ನಡೆದಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ
ಈ ಸ್ಫೋಟವೂ ನಿಗೂಢವಾಗಿದೆ ಎನ್ನಲಾಗಿದ್ದು, ಈ ಹಿಂದೆ ನಡೆದ ರಾಮೇಶ್ವರಂ ಕೆಫೆಗೂ ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತು. ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಫೋಟವೂ ಕೂಡ ಅನುಮಾನಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಕುಕ್ಕರ್ ಸ್ಫೋಟ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಂಪನ್ಮೂಲದ ಗ್ಯಾರಂಟಿ ಇಲ್ಲದೇ ತಂದ ಗ್ಯಾರಂಟಿ ಯೋಜನೆಗಳನ್ನು ಶಾಸಕರೇ ಧಿಕ್ಕಾರ ಹಾಕುವ ಸ್ಥಿತಿ ಬರಲಿದೆ: ಅಶೋಕ್
ಸ್ಫೋಟದ ತೀವ್ರತೆಗೆ ರೂಂನಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕುಕ್ಕರ್ ಸ್ಫೋಟ ಎನ್ನಲಾಗಿದ್ದು, ಸುಟ್ಟ ವಯರ್‌ಗಳು ಕೂಡ ಪತ್ತೆಯಾಗಿದೆ. ಇನ್ನು ಇಂದು (ಬುಧವಾರ) ಬಾಂಬ್ ನಿಷ್ಕ್ರಿಯಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್ ನಡೆದಿದೆ. ಪಾರ್ಕ್‍ನಲ್ಲಿ ಇಬ್ಬರನ್ನು ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಬೆಂಗಳೂರಿನ ಜೆಪಿ ನಗರದ ಸಾರಕ್ಕಿ ಪಾರ್ಕ್‍ನಲ್ಲಿ (Sarakki Park JP Nagar) ಇಂದು ಸಂಜೆ 4:15 ರ ಸುಮಾರಿಗೆ ನಡೆದಿದೆ. ಮೃತರನ್ನು ಸುರೇಶ್ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಸುರೇಶ್ ಗೊರಗುಂಟೆಪಾಳ್ಯ ನಿವಾಸಿಯಾದರೆ ಅನುಷಾ ಜೆ.ಪಿ.ನಗರ ಬಳಿಯ ಶಾಂಕಾಬಾರಿ ನಗರ ನಿವಾಸಿ.
ಸುರೇಶ್ ಹಾಗೂ ಅನುಷಾ ಪಾರ್ಕ್ ನಲ್ಲಿ ಮಾತನಾಡ್ತಾ ಕುಳಿತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಗಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೂರನೇ ಹಂತದ ಮೆಟ್ರೋ (Metro) ಕಾಮಗಾರಿ ಕೈಗೆತ್ತಿಕೊಳ್ಳಲು ಇಂದಿನ ಸಚಿವ ಸಂಪುಟ (Cabinet of Ministers) ಒಪ್ಪಿಗೆ ನೀಡಿದೆ.
ಒಟ್ಟು 15,611 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2028 ರೊಳಗೆ ಮೂರನೆ ಹಂತದ ಕಾಮಗಾರಿ ಮುಗಿಸುವ ಲೆಕ್ಕಾಚಾರದಲ್ಲಿ ಸಂಪುಟ ಒಪ್ಪಿಗೆ ನೀಡಿದೆ. 80-85% ರಾಜ್ಯ ಸರ್ಕಾರ ಹಾಗೂ 15% ಅಂದಾಜು ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಒಟ್ಟು 44.65 ಕಿ.ಮೀನ ಮೂರನೇ ಹಂತದ ಮೆಟ್ರೋ ಕಾಮಗಾರಿ ಇದಾಗಿದೆ. ಇದನ್ನೂ ಓದಿ: ರಾಜಕೀಯಕ್ಕೆ ಬಂದಾಗ ಜಾಸ್ತಿ ಟೀಕೆ ಎದುರಿಸಬೇಕು: ಯದುವೀರ್ ಒಡೆಯರ್
ಹೆಬ್ಬಾಳದಿಂದ (Hebbala) ಶುರುವಾಗಿ ತುಮಕೂರು ರಸ್ತೆ ರಾಜ್‌ಕುಮಾರ್ ಸಮಾಧಿ ಆಸುಪಾಸು ಹಾಗೂ ಅಲ್ಲಿಂದ ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮೂಲಕ ಜೆಪಿ ನಗರ (JP Nagar) ತಲುಪುವ ಮೆಟ್ರೋ ಕಾಮಗಾರಿ ಇದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಚುನಾವಣಾ ಬಾಂಡ್ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೆಸಿ ನಗರದಲ್ಲಿ (JC Nagar) ಭೀಕರ ಕೊಲೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿನಿಮಾ ಸ್ಟೈಲ್‍ನಲ್ಲಿ ಸ್ಕಾರ್ಪಿಯೋ (Scorpio) ಹತ್ತಿಸಿ ಯುವಕನನ್ನು ಹತ್ಯೆ ಮಾಡಲಾಗಿದೆ.
ಮೃತನನ್ನು ಅಸ್ಗರ್ ಹಾಗೂ ಆರೋಪಿಯನ್ನು ಅಮ್ರಿನ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 20ರಂದು ನಡೆದ ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ 11 ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಸ್ಕಾರ್ಪಿಯೋ ಕಾರಿನಿಂದ ಕೊಲೆ ಮಾಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕೊಲೆಗೆ ಕಾರಣವೇನು..?: ಅಸ್ಗರ್ ಹಾಗೂ ಅಮ್ರಿನ್ ಪರಿಚಯಸ್ಥರು. ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದನು. ಅಂತೆಯೇ ಆರೋಪಿ, ಅಸ್ಗರ್ ಬಳಿ ಕಾರೊಂದನ್ನು ಖರೀದಿಸಿದ್ದರು. ಬಳಿಕ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಆರೋಪಿ ಹಾಗೂ ಅಸ್ಗರ್ ಮಧ್ಯೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಅಸ್ಗರ್ ಮೇಲೆ ಆರೋಪಿ ಹಲ್ಲೆ ಮಾಡಿದ್ದನು. ಇದನ್ನೂ ಓದಿ: ಮುಕೇಶ್ ಅಂಬಾನಿಗೆ 3ನೇ ಬಾರಿಗೆ ಕೊಲೆ ಬೆದರಿಕೆ – ಬೇಡಿಕೆ ಮೊತ್ತ 400 ಕೋಟಿಗೆ ಏರಿಕೆ
ಈ ಸಂಬಂಧ ಅಸ್ಗರ್, ಜೆಸಿ ನಗರ ಠಾಣೆಗೆ ದೂರು ನೀಡಿದ್ದ. ದೂರಿನ ಹಿನ್ನೆಲೆ ಜೆ.ಸಿ ನಗರ ಪೊಲೀಸರು ಆರೋಪಿ ವಿರುದ್ಧ 307 ಕೇಸ್ ಹಾಕಿದ್ದರು. ನಂತರ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಸ್ಗರ್‍ಗೆ ಆರೋಪಿ ಒತ್ತಡ ಹಾಕಿದ್ದ. ಈ ಸಂಬಂಧ ಫೋನ್ ಮಾಡಿ ಮಾತಾಡೋಣ ಅಂತಾ ಕರೆದಿದ್ದ. ಅಂತೆಯೇ ಮಾತನಾಡಲೆಂದು ಬಂದಿದ್ದ ಅಸ್ಗರ್ ಬಳಿಯೂ ಕೇಸ್ ವಾಪಸ್ ತಗೋ ಎಂದು ಅಮ್ರಿನ್ ಹೇಳಿದ್ದಾನೆ. ಈ ವೇಳೆ ಅಸ್ಗರ್, ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಅಂತಾ ಹೇಳಿ ಹೊರಟಿದ್ದ.
ಅಮ್ರಿನ್ ಜೊತೆ ಮಾತನಾಡಲು ಬರುವಾಗ ಅಸ್ಗರ್ ತನ್ನ ಗೆಳೆಯನನ್ನು ಕರೆದುಕೊಂಡು ಬಂದಿದೆ. ಅಂತೆಯೇ ಜೊತೆಗಿದ್ದ ಗೆಳೆಯನ ಡ್ರಾಪ್ ಮಾಡಲು ಅಸ್ಗರ್ ಪಾಟರಿ ರಸ್ತೆಗೆ ಬಂದಿದ್ದ. ಈ ವೇಳೆ ಅಮ್ರಿನ್ ಸ್ಕಾರ್ಪಿಯೋ ಕಾರಿನಿಂದ ಬೈಕ್‍ಗೆ ಡಿಕ್ಕಿ ಹೊಡೆಸಿದ್ದಾನೆ. ಸ್ಪೀಡಾಗಿ ಬಂದು ಬೈಕ್‍ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ಗಂಭೀರ ಗಾಯಗೊಂಡು ಅಸ್ಗರ್ ಸಾವನ್ನಪ್ಪಿದರೆ, ಆತನ ಸ್ನೇಹಿತನಿಗೆ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ.
ಮೊದಲು ಆಕ್ಸಿಡೆಂಟ್ ಅಂತಾ ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರಿ ಪೊಲೀಸರು, ಅಸ್ಗರ್ ಗೆಳೆಯನ ಹೇಳಿಕೆ ಬಳಿಕ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ಆರೋಪಿ ಅಮ್ರಿನ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಬೆಂಗಳೂರು: ತಾಯಿ ಮನೆಯಲ್ಲಿಯೇ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಮಗಳು ಕಳವು ಮಾಡಿರುವ ವಿಚಿತ್ರ ಘಟನೆಯೊಂದು ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ತಾಯಿ ವಿಜಯಲಕ್ಷ್ಮಿ ನನ್ನ ಮಗಳು ತೇಜವಂತಿ ನಾಲ್ಕು ಕೋಟಿ ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ತೇಜವಂತಿ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ನೀಡ್ಬೇಕು, ಕಂಗನಾ ಪದ್ಮಶ್ರೀ ವಾಪಸ್ ಪಡೀಬೇಕು: ಎಸ್.ಮನೋಹರ್
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಆಪರೇಶನ್ ಗೆ ಒಳಗಾಗಿದ್ದು, ಈ ವೇಳೆ ಮನೆಗೆ ಬಂದ ತೇಜವಂತಿ ತಾಯಿಗೆ ತಿಳಿಯದಂತೆ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾಳೆ. ನಂತರ ಚಿನ್ನಾಭರಣವನ್ನು ಲಾಕರ್ ನಲ್ಲಿ ಇಟ್ಟಿರುವುದಾಗಿ ನಂಬಿಸಿದ್ದಾಳೆ. ಆದರೆ ಈಗ ತೇಜವಂತಿ ಚಿನ್ನಾಭರಣಗಳ ಜೊತೆಗೆ ನಾಪತ್ತೆಯಾಗಿದ್ದು, ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ.
ಈ ಪರಿಣಾಮ ಜೆಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.