Tag: ಜೆನಿಲಿಯಾ ಡಿಸೋಜಾ

  • 13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

    13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

    ನ್ನಡದ ‘ಸತ್ಯ ಇನ್ ಲವ್’ (Satya In Love) ಸಿನಿಮಾದಲ್ಲಿ ಶಿವಣ್ಣಗೆ ನಾಯಕಿಯಾಗಿ ನಟಿಸಿದ್ದ ಜೆನಿಲಿಯಾ ಡಿಸೋಜಾ (Genelia D’souza) ಇದೀಗ 13 ವರ್ಷಗಳ ಬಳಿಕ ತೆಲುಗಿನತ್ತ ಮುಖ ಮಾಡಿದ್ದಾರೆ. ಈ ಮೂಲಕ ತೆಲುಗು ಸಿನಿಪ್ರೇಕ್ಷಕರಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ

    ತೆಲುಗಿನ ಸ್ಟಾರ್ ನಟನೊಬ್ಬನ ಸಿನಿಮಾದಲ್ಲಿ ಬಾಲಿವುಡ್ ನಟಿ ಜೆನಿಲಿಯಾ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆಯಂತೆ. ಯಾವ ಸ್ಟಾರ್ ನಟನ ಜೊತೆ ಜೆನಿಲಿಯಾ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡುವವರೆಗೂ ಕಾಯಬೇಕಿದೆ. ಇದನ್ನೂ ಓದಿ: ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ಜೆನಿಲಿಯಾಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸಿದ್ಧಾರ್ಥ್ ಜೊತೆ ‘ಬೊಮ್ಮರಿಲ್ಲು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ತೆಲುಗಿನ ನಾ ಇಷ್ಟಂ, ಹ್ಯಾಪಿ, ಸೈ, ಕಿಂಗ್, ರೆಡಿ, ರಾಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೆನಿಲಿಯಾ ನಟಿಸಿದ್ದರು.

    2012ರಲ್ಲಿ ‘ನಾ ಇಷ್ಟಂ’ ಸಿನಿಮಾದಲ್ಲಿ ಜೆನಿಲಿಯಾ ಕಡೆಯದಾಗಿ ನಟಿಸಿದ್ದರು. ಈಗ ಬರೋಬ್ಬರಿ 13 ವರ್ಷಗಳ ಬಳಿಕ ಅವರು ಟಾಲಿವುಡ್‌ಗೆ ಬರುತ್ತಿದ್ದಾರೆ.

  • ಸ್ಮೈಲ್, ಸ್ಮೈಲ್- ಬಾಲಿವುಡ್ ಬೆಡಗಿಗೆ ಕಿಚ್ಚನ ವಿಶ್

    ಸ್ಮೈಲ್, ಸ್ಮೈಲ್- ಬಾಲಿವುಡ್ ಬೆಡಗಿಗೆ ಕಿಚ್ಚನ ವಿಶ್

    ಬೆಂಗಳೂರು: ನಟಿಯರಾದ ಜೆನಿಲಿಯಾ ಡಿಸೋಜಾ ಮತ್ತು ಆಶಿಕಾ ರಂಗನಾಥ್ ಹುಟ್ಟುಹಬ್ಬಕ್ಕೆ ಚಂದನವನದ ಪೈಲ್ವಾನ್ ಸುದೀಪ್ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಅವರಿಗೆ ಶುಭ ಹಾರೈಸಿದ್ದಾರೆ. ಹ್ಯಾಪಿ ಬರ್ತ್ ಡೇ ಜನಿಲಿಯಾ ಡಿಸೋಜಾ, ಸ್ಮೈಲ್, ಸ್ಮೈಲ್, ಸ್ಮೈಲ್ ಆ್ಯಂಡ್ ಹ್ಯಾವ್ ಎ ಗ್ರೇಟ್ ಡೇ ಆ್ಯಂಡ್ ಇಯರ್, ಹ್ಯಾಪಿ ರಿಟರ್ನ್ಸ್. ವೆಗಾನ್ ಪಾರ್ಟಿ ಸೂನ್ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ನಟಿ ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶ್‍ಮುಖ್ ಹಾಗೂ ಕಿಚ್ಚ ಸುದೀಪ್ ಸಿಸಿಎಲ್‍ನಿಂದ ಪರಿಚಯ. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಬಳಿಕ ಕುಟುಂಬ ಸ್ನೇಹಿತರಾಗಿದ್ದಾರೆ. ಹೀಗಾಗಿ ಜೆನಿಲಿಯಾಗೆ ಕಿಚ್ಚ ಸುದೀಪ್ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಸ್ನೇಹವನ್ನು ನೆನೆದು ಗಮನ ಸೆಳೆದಿದ್ದಾರೆ.

    ಜೆನಿಲಿಯಾ ಡಿಸೋಜಾ ಅವರು ಕನ್ನಡದಲ್ಲಿ ಸತ್ಯ ಇನ್ ಲವ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟಿಯಾಗಿರುವ ಜೆನಿಲಿಯಾ, ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್ ಪಟಾಕಿ ಪೋರಿ ಆಶಿಕಾ ರಂಗನಾಥ್ ಅವರಿಗೆ ಸಹ ಅವರದ್ದೇ ಶೈಲಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಪಟಾಕಿ ಪೋರಿಯೋ ಹಾಡಿನ ಪಟಾಕಿ ಆಶಿಕಾ ರಂಗನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹ್ಯಾವ್ ಎ ಗ್ರೇಟ್ ಒನ್ ಎಂದು ಶುಭ ಹಾರೈಸಿದ್ದಾರೆ. ಪಟಾಕಿ ಪೋರಿಯೋ ಹಾಡು ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾದ್ದಾಗಿದ್ದು, ಹಾಡು ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಇದೇ ಶೈಲಿಯಲ್ಲಿ ಸುದೀಪ್ ವಿಶ್ ಮಾಡಿದ್ದಾರೆ.

    ಆಶಿಕಾ ರಂಗನಾಥ್ ಸದ್ಯ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದರಲ್ಲಿ ಜಗಪತಿ ಬಾಬು ಹಾಗೂ ಚಿಕ್ಕಣ್ಣ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಕೋಟಿಗೊಬ್ಬ 3 ಸಿನಿಮಾದ ಡಬ್ಬಿಂಗ್ ಕೆಲಸ ಮುಗಿದಿದ್ದು, ಅಂತಿಮ ಹಂತದ ಕೆಲಸಗಳಷ್ಟೇ ಬಾಕಿ ಉಳಿದಿವೆ. ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಬಿಡುಗಡೆ ತಡವಾಗಿದೆ.

  • ಲಸಿಕೆ ಪಡೆಯಿರಿ, ದೈತ್ಯನ ಜೊತೆ ಒಟ್ಟಿಗೆ ಹೋರಾಡೋಣ – ರಿತೇಶ್ ದೇಶ್‍ಮುಖ್

    ಲಸಿಕೆ ಪಡೆಯಿರಿ, ದೈತ್ಯನ ಜೊತೆ ಒಟ್ಟಿಗೆ ಹೋರಾಡೋಣ – ರಿತೇಶ್ ದೇಶ್‍ಮುಖ್

    ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ರಿತೇಶ್ ದೇಶ್‍ಮುಖ್ ಹಾಗೂ ಜೆನೆಲಿಯಾ ಡಿಸೋಜಾ ಸೋಮವಾರ ಕೋವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆ.

    ಈ ಕುರಿತಂತೆ ನಟ ರಿತೇಶ್ ದೇಶ್‍ಮುಖ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ಲಸಿಕೆ ಪಡೆಯಿರಿ. ಈ ದೈತ್ಯನ ಜೊತೆ ಒಟ್ಟಿಗೆ ಹೋರಾಡೋಣ ಎಂದು ಕ್ಯಾಪ್ಷನ್ ಹಾಕಿಕೊಳ್ಳುವುದರ ಜೊತೆಗೆ ಲಸಿಕೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತ್ನಿ ಜೆನಿಲಿಯಾ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋ ಹಾಕಿಕೊಂಡಿದ್ದು, ರಿತೇಶ್ ದೇಶ್‍ಮುಖ್ ಹಾಕಿಕೊಂಡಿರುವ ಕ್ಯಾಪ್ಷನ್‍ನನ್ನೇ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Riteish Deshmukh (@riteishd)

    ಈ ಮುನ್ನ ಅಮಿತಾಬ್ ಬಚ್ಚನ್, ಸಲ್ಮಾನ್ ಕಾನ್, ಸಂಜಯ್ ದತ್, ಹೇಮಾ ಮಾಲಿನಿ, ಮೋಹನ್ ಲಾಲ್, ಜೇತೆಂದ್ರ, ಕಮಲ್ ಹಾಸನ್, ನಾಗಾರ್ಜುನ್ ಸೇರಿದಂತೆ ಮುಂತಾದ ಸೆಲೆಬ್ರೆಟಿಗಳು ಲಸಿಕೆ ಸ್ವೀಕರಿಸಿದ್ದರು. ಇದೀಗ ಈ ಸಾಲಿಗೆ ರಿತೇಶ್ ದೇಶ್‍ಮುಖ್ ದಂಪತಿ ಕೂಡ ಸೇರ್ಪಡೆಯಾಗಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ಇತ್ತೀಚೆಗೆ ನಟಿ ಕಂಗನಾ ರನೌತ್, ಅರ್ಜುನ್ ರಾಂಪಾಲ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ರಾಂಪಾಲ್ , ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವಾರು ಬಾಲಿವುಡ್ ಮಂದಿಗೆ ಕೊರೊನಾ ಸೋಂಕು ತಗುಲಿತ್ತು.

  • ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ರಿತೇಶ್ ದಂಪತಿ

    ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ ರಿತೇಶ್ ದಂಪತಿ

    ಮುಂಬೈ: ಬಾಲಿವುಡ್ ಸ್ಟಾರ್ ಜೋಡಿ ನಟ ರಿತೇಶ್ ದೇಶ್‍ಮುಖ್ ಹಾಗೂ ನಟಿ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರಿನಲ್ಲಿ ರಿತೇಶ್ ಹಾಗೂ ಜೆನಿಲಿಯಾ ಚೆಕ್ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

    ಹಲವು ಕಲಾವಿದರು ಮಹಾರಾಷ್ಟ್ರ ಪ್ರವಾಹ ಪೀಡಿತರಿಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದರೆ ರಿತೇಶ್ ಹಾಗೂ ಜೆನಿಲಿಯಾ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸರ್ಕಾರ ಪ್ರವಾಹ ಪೀಡಿತ ಸಾಂಗ್ಲಿ, ಕೊಲ್ಹಾಪುರ ಹಾಗೂ ಸತಾರಾ ಜಿಲ್ಲೆಗಳಲ್ಲಿ ಸ್ಥಾಪಿಸಿರುವ 432 ಪರಿಹಾರ ಕೇಂದ್ರಗಳಿಗೆ ಒಟ್ಟು 3.78 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋಲ್ಹಾಪುರ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ.

    ಇತ್ತ ಕರ್ನಾಟಕದ ಬಹುತೇಕ ಜಿಲ್ಲೆಗಳು ನದಿಗಳ ಅಬ್ಬರಕ್ಕೆ ಬೆಚ್ಚಿ ಬೀಳುತ್ತಿವೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮಗಳು ಜಲಾವೃತಗೊಂಡಿವೆ. ನಿರಾಶ್ರಿತರಿಗಾಗಿ ಸ್ಥಳೀಯ ಸುರಕ್ಷಿತ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.